ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Weekly Women Horoscope: ಮತ್ತೊಬ್ಬರ ಮಾತನ್ನು ಕೇಳಿ ಪತಿಯೊಂದಿಗೆ ಮನಸ್ತಾಪ ಮಾಡಿಕೊಳ್ಳದಿರಿ, ತಾಳ್ಮೆ ಇರಲಿ; ಸ್ತ್ರೀ ವಾರ ಭವಿಷ್ಯ

Weekly Women Horoscope: ಮತ್ತೊಬ್ಬರ ಮಾತನ್ನು ಕೇಳಿ ಪತಿಯೊಂದಿಗೆ ಮನಸ್ತಾಪ ಮಾಡಿಕೊಳ್ಳದಿರಿ, ತಾಳ್ಮೆ ಇರಲಿ; ಸ್ತ್ರೀ ವಾರ ಭವಿಷ್ಯ

Weekly Women horoscope: ಸ್ತ್ರೀ ವಾರ ಭವಿಷ್ಯ (ಮೇ 3 ರಿಂದ ಮೇ 9ವರೆಗೆ) ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಈ ವಾರದ ಸ್ತ್ರೀ ಭವಿಷ್ಯ ಇಲ್ಲಿದೆ.

ಸ್ತ್ರೀ ವಾರ ಭವಿಷ್ಯ
ಸ್ತ್ರೀ ವಾರ ಭವಿಷ್ಯ

ಸ್ತ್ರೀ ವಾರ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (Women Horoscope 3rd May to 9th May 2024).

ಮೇಷ

ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೋರುವಿರಿ. ನಿಮ್ಮ ಮುಗ್ದ ಮನಸ್ಸು ಎಲ್ಲರನ್ನೂ ಗೆಲ್ಲುತ್ತದೆ. ಬುದ್ಧಿವಂತಿಯಿಂದ ಕಷ್ಟದ ಕೆಲಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ಪತಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ಸದಾ ಕಾಲ ಯಾವುದೋ ಒಂದು ಕೆಲಸದಲ್ಲಿ ಮಗ್ನರಾಗುವಿರಿ. ಕುಟುಂಬದ ಸಂತೋಷ ನೆಮ್ಮದಿಗೆ ಕಾರಣರಾಗುವಿರಿ. ತಪ್ಪು ಮಾಡಿ ಪಶ್ಚಾತಾಪ ಪಡುವಿರಿ. ಪತಿಯ ಜೊತೆಯಲ್ಲಿ ತವರು ಮನೆಗೆ ತೆರಳುವಿರಿ. ತಲೆ ನೋವು ಅಥವ ತಲೆಗೆ ಪೆಟ್ಟು ಬೀಳುವ ಸಾಧ್ಯತೆಗಳಿವೆ. ಆತ್ಮೀಯರನ್ನು ಭೇಟಿ ಮಾಡುವಿರಿ. ಅನಿರೀಕ್ಷಿತ ಧನಲಾಭ ಇರುತ್ತದೆ.

ವೃಷಭ

ನೀರಿನಿಂದ ತೊಂದರೆ ಉಂಟಾಗಬಹುದು ಎಚ್ಚರಿಕೆ ಇರಲಿ. ಹಣಕಾಸಿನ ವ್ಯವಹಾರದಲ್ಲಿ ಉತ್ತಮ ಪರಿಜ್ಞಾನ ಇರುತ್ತದೆ, ಬೇರೆಯವರ ಮಾತನ್ನೂ ನಂಬದೆ ಸ್ವಂತ ನಿರ್ಧಾರ ತೆಗೆದುಕೊಳ್ಳು. ಯಾರನ್ನೂ ನೋಯಿಸದಂತೆ ಪ್ರೀತಿಯಿಂದ ಮಾತನಾಡುವಿರಿ. ನಿಮ್ಮ ಸ್ವಂತ ಕೆಲಸವನ್ನು ಮೊದಲು ಪೂರ್ಣಗೊಳಿಸುವಿರಿ. ಹಣದ ಕೊರತೆ ಇರುವುದಿಲ್ಲ. ದುಬಾರಿ ವಸ್ತ್ರಕ್ಕಾಗಿ ಹಣ ಖರ್ಚು ಮಾಡುವಿರಿ. ಆತ್ಮೀಯರ ಸಹಕಾರದಿಂದ ಉದ್ಯೋಗ ದೊರೆಯುತ್ತದೆ. ತಾಯಿಯಿಂದ ಹಣದ ಸಹಾಯ ದೊರೆಯುತ್ತದೆ. ಉದ್ಯೋಗದಲ್ಲಿ ಸಾಕಷ್ಟು ಅನುಕೂಲಕರ ಬದಲಾವಣೆಗಳು ಕಂಡುಬರುತ್ತದೆ.

ಮಿಥುನ

ದೃಢವಾದ ನಿರ್ಧಾರವನ್ನು ತೆಗೆದುಕೊಳ್ಳಲಾರಿರಿ. ಆತ್ಮೀಯರೊಬ್ಬರು ಉಡುಗೊರೆಯೊಂದನ್ನು ನೀಡಲಿದ್ದಾರೆ. ಹಣಕಾಸಿನ ವ್ಯವಹಾರದಲ್ಲಿ ಲಾಭ ಗಳಿಸುವಿರಿ. ವಾಹನ ಲಾಭವಿದೆ. ತವರಿನಿಂದ ಶುಭ ವರ್ತಮಾನವೊಂದು ಬರಲಿದೆ. ಕುಟುಂಬದ ಸಂಪೂರ್ಣ ಜವಾಬ್ದಾರಿ ನಿಮ್ಮದಾಗುವುದು. ಕುಟುಂಬದ ಒಳಗೂ ಹೊರಗೂ ಬಿಡುವಿಲ್ಲದ ದುಡಿಮೆ ಇರುತ್ತದೆ. ಸಹನೆಯಿಂದ ಎಲ್ಲವನ್ನೂ ಗೆಲ್ಲುವಿರಿ. ವಾಸಸ್ಥಳ ಬದಲಾಯಿಸಲು ಕಾರಣರಾಗುವಿರಿ. ವೈಭೋಗದ ಜೀವನವನ್ನು ನಡೆಸುವಿರಿ. ಅನಿರೀಕ್ಷಿತ ಧನಲಾಭವಿದೆ. ಸಂತಾನ ಲಾಭವಿದೆ. ಅನಾವಶ್ಯಕವಾದ ಖರ್ಚು ವೆಚ್ಚಗಳು ಬೇಸರ ಮೂಡಿಸುತ್ತದೆ. ಪತಿ ಮತ್ತು ಮಕ್ಕಳ ಜೊತೆಯಲ್ಲಿ ತವರಿಗೆ ತೆರಳುವಿರಿ.

ಕಟಕ

ಅನುಕೂಲತೆಗಳ ಕೊರತೆಗಳ ಬೇಸರದಿಂದ ಉದ್ಯೋಗ ಬದಲಿಸುವಿರಿ. ಸಂಗಾತಿ ಜೊತೆಯಲ್ಲಿ ಕಿರುಪ್ರವಾಸ ಕೈಗೊಳ್ಳುವಿರಿ. ಉಡುಗೊರೆಯಾಗಿ ತವರಿನಿಂದ ಹಣ ದೊರೆಯಲಿದೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆಯಿಂದ ವರ್ತಿಸುವಿರಿ. ಸಂತಾನ ಲಾಭವಿದೆ. ವಿದ್ಯಾರ್ಥಿಗಳು ವಿದೇಶದಲ್ಲಿ ಅಧ್ಯಯನಕ್ಕೆ ಅವಕಾಶವೊಂದು ದೊರೆಯಲಿದೆ. ಗಾಳಿ ಮಾತನ್ನು ನಂಬಿ ನಿಮ್ಮ ಪತಿಯ ಜೊತೆ ಜಗಳವಾಡುವಿರಿ. ಅಪರೂಪದ ಪ್ರತಿಭೆಯ ಕಾರಣದಿಂದಾಗಿ ಸಮಾಜದ ಕೇಂದ್ರ ಬಿಂದುವಾಗುವಿರಿ. ಪತಿಯ ಕೆಲಸ ಕಾರ್ಯಗಳಲ್ಲಿ ಸಹಕರಿಸುವಿರಿ. ಅವಿವಾಹಿತರಿಗೆ ವಿವಾಹ ಯೋಗವಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ.

ಸಿಂಹ

ಹಟದ ಸ್ವಭಾವದಿಂದ ಜನರಲ್ಲಿ ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯ ಉಂಟಾಗಲಿದೆ. ಅವಿರತ ಪ್ರಯತ್ನದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಬೇಸರದಿಂದ ಹೊರ ಬರಲು ಏಕಾಂತವನ್ನು ಬಯಸುವಿರಿ. ದುಡುಕಿನ ಮಾತು ವಿವಾದವನ್ನು ಉಂಟು ಮಾಡುತ್ತದೆ. ಸಂಘ ಸಂಸ್ಥೆಯ ಮುಖ್ಯ ಸ್ಥಾನವನ್ನು ಅಲಂಕರಿಸುವಿರಿ. ರಾಜಕೀಯ ಪ್ರವೇಶಿಸುವ ಆಸೆ ಮೂಡುತ್ತದೆ. ಮಾನಸಿಕವಾಗಿ ಸಹಜತೆಗೆ ಮರಳುವ ಕಾರಣ ಕುಟುಂಬದಲ್ಲಿ ನೆಮ್ಮದಿ ಉಂಟಾಗಲಿದೆ. ಉತ್ತಮ ಆರೋಗ್ಯಕ್ಕಾಗಿ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವಿರಿ. ಗಣ್ಯವ್ಯಕ್ತಿಯೊಬ್ಬರ ಪರಿಚಯ ಜೀವನಕ್ಕೆ ಹೊಸ ತಿರುವು ನೀಡುತ್ತದೆ.

ಕನ್ಯಾ

ತಡವಾದರೂ ಕಷ್ಟಪಟ್ಟು ದೂರವಾಗಿದ್ದ ಅವಕಾಶವನ್ನು ನಿಮ್ಮದಾಗಿಸಿಕೊಳ್ಳುವಿರಿ. ನಿಮ್ಮ ಬುದ್ದಿಶಕ್ತಿಯ ಫಲವಾಗಿ ಹಣದ ಕೊರತೆ ಕಡಿಮೆ ಆಗುತ್ತದೆ. ಬಿಡುವಿನ ವೇಳೆ ಗುಡಿ ಕೈಗಾರಿಕೆ ಆರಂಭಿಸುವಿರಿ. ನಿಮ್ಮ ಸಹಾಯದಿಂದ ಸೋದರನ ವಿವಾಹ ನಡೆಯುತ್ತದೆ. ಅನಿರೀಕ್ಷಿತ ಧನಲಾಭವಿದೆ. ಮಾನಸಿಕ ಆರೋಗ್ಯದ ಬಗ್ಗೆ ಗಮನ ಹರಿಸಿ. ಉನ್ನತ ಅಧ್ಯಯನಕ್ಕಾಗಿ ವಿದೇಶಕ್ಕೆ ತೆರಳುವಿರಿ. ಮಕ್ಕಳ ಸಲುವಾಗಿ ಹೆಚ್ಚಿನ ಹಣ ಬೇಕಾಗುತ್ತದೆ. ವಿನಾಕಾರಣ ಪತಿಯನ್ನು ಟೀಕಿಸದಿರಿ. ತಪ್ಪಿಲ್ಲದೆ ಹೋದರೂ ವಿವಾದಕ್ಕೆ ಒಳಗಾಗುವಿರಿ. ಪತಿಯೊಂದಿಗೆ ತವರಿಗೆ ತೆರಳುವಿರಿ. ಅವಿವಾಹಿತರಿಗೆ ವಿವಾಹ ನಿಶ್ಚಯವಾಗುತ್ತದೆ. ಸಾಲದ ವ್ಯವಹಾರ ಒಳ್ಳೆಯದಲ್ಲ.

ತುಲಾ

ಕಾನೂನಿನ ಸಹಾಯದಿಂದ ಕಳೆದುಕೊಂಡ ನೌಕರಿಯನ್ನು ಮರಳಿ ಪಡೆಯುವಿರಿ. ತವರಿನಿಂದ ನಿಮಗೆ ಭೂಮಿಯು ಉದುಗೊರೆಯಾಗಿ ದೊರೆಯಲಿದೆ. ಹೆಚ್ಚಿನ ನಿರೀಕ್ಷೆಯಿಂದಾಗಿ ಉದ್ಯೋಗ ಬದಲಿಸುವಿರಿ. ಅನಾವಶ್ಯಕ ಖರ್ಚು ವೆಚ್ಚಗಳು ಇರುತ್ತವೆ. ಷೇರು ವ್ಯಾಪಾರದಲ್ಲಿ ಲಾಭ ದೊರೆವ ಸಾಧ್ಯತೆ ಇದೆ. ಹೊಸ ವಾಹನವನ್ನು ಕೊಳ್ಳುವಿರಿ. ಚಿನ್ನದ ಒಡವೆಗಳಿಗೆ ಹಣ ಖರ್ಚು ಮಾಡುವಿರಿ. ಕಷ್ಟವಾದರೂ ಹಣವನ್ನು ಉಳಿಸುವಿರಿ. ಚುರುಕುತನದಿಂದ ಸಮಯಕ್ಕೆ ತಕ್ಕಂತೆ ವರ್ತಿಸುವಿರಿ. ಸಮಾಜದಲ್ಲಿ ಮುಖ್ಯಸ್ಥಾನ ದೊರೆಯುತ್ತದೆ.

ವೃಶ್ಚಿಕ

ಸಿಡುಕುತನದಿಂದ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಪ್ರತಿ ವಿಚಾರದಿಂದಲೂ ವಿವಾದಗಳಿಗೆ ಕಾರಣರಾಗುವಿರಿ. ದಾಂಪತ್ಯ ಜೀವನ ಸಾಮಾನ್ಯವಾಗಿರುತ್ತವೆ. ಉದ್ಯೋಗ ಹುಡುಕಿ ವಿದೇಶಕ್ಕೆ ತೆರಳುವಿರಿ. ಆರೋಗ್ಯದಲ್ಲಿ ತೊಂದರೆ ಇರುವುದಿಲ್ಲ. ಭೂವಿವಾದದಿಂದ ನಿಮಗೆ ಶತೃತ್ವ ಉಂಟಾಗಬಹುದು. ತಂದೆಯ ವೃತ್ತಿಯನ್ನು ಅನುಸರಿಸುವಿರಿ. ವಿವಾಹದ ಬಗ್ಗೆ ಮಾತುಕತೆ ನಡೆಯುತ್ತದೆ. ಪರಿಚಯದವರ ಜೊತೆ ವಿವಾಹ ನಿಶ್ಚಯವಾಗುತ್ತದೆ. ಪತಿಯ ಜೊತೆ ಅನ್ಯೋನ್ಯತೆ ಹೆಚ್ಚುತ್ತದೆ. ಅಜೀರ್ಣದ ತೊಂದರೆ ಕಂಡುಬರುತ್ತದೆ. ವಾಹನ ಚಾಲನೆ ಮಾಡುವವೇಳೆ ಎಚ್ಚರಿಕೆ ಇರಲಿ.

ಧನಸ್ಸು

ಗೆಲ್ಲಲೇ ಬೇಕೆಂಬ ಹಟ ಯಶಸ್ಸನ್ನು ನೀಡುತ್ತದೆ. ಖರ್ಚು ಮಾಡಿ ಉಳಿಸಲು ಸಾಕಾಗುವಷ್ಟು ಆದಾಯ ನಿಮಗಿರುತ್ತದೆ. ಮನೆಯನ್ನು ಕೊಳ್ಳಲು ನಿಮ್ಮ ತಂದೆಗೆ ಹಣದ ಸಹಾಯ ಮಾಡುವಿರಿ. ಹೆಚ್ಚಿನ ಹಣ ಗಳಿಕೆ ಇರುವ ಕಾರಣ ಸ್ವಂತ ವ್ಯಾಪಾರವನ್ನು ಆರಂಭಿಸುವಿರಿ. ದಾಂಪತ್ಯದಲ್ಲಿ ಶುಭ ಸುದ್ಧಿಯೊಂದು ಕಾದಿದೆ. ಅವಶ್ಯಕತೆ ಇದ್ದಲ್ಲಿ ಪತಿಗೆ ಹಣದ ಸಹಾಯ ಮಾಡುವಿರಿ. ಬೇಗ ಕೋಪ ಬರುತ್ತದೆ. ಶಾಂತಿ ಸಂಯಮದಿಂದ ಬಾಳಿದಲ್ಲಿ ಕುಟುಂಬದಲ್ಲಿ ಸಂತಸ ಮನೆ ಮಾಡುತ್ತದೆ. ತೆಗೆದುಕೊಂಡ ನಿರ್ಧಾರಕ್ಕೆ ಸದಾ ಬದ್ದರಾಗುವಿರಿ.

ಮಕರ

ಕೈ ಹಿಡಿದ ಪತಿಗಾಗಿ ಯಾವುದೇ ತ್ಯಾಗ ಮಾಡುವಿರಿ. ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವವರೆಗೂ ವಿಶ್ರಾಂತಿ ಪಡೆಯುವುದಿಲ್ಲ. ವಿದ್ಯಾರ್ಥಿಗಳಿಗಾಗಿ ಹೆಚ್ಚಿನ ಹಣದ ಅವಶ್ಯಕತೆ ಇದೆ. ಬಡ ಮಕ್ಕಳಿಗಾಗಿ ಕಲಿಕೆಗೆ ಸಹಾಯ ಮಾಡುವಿರಿ. ದಂಪತಿಗಳ ಸಂಧಾನ ಕೇಂದ್ರವನ್ನು ಆರಂಭಿಸುವಿರಿ. ಸಮಾಜದ ಪ್ರತಿಷ್ಠಿತ ಪ್ರಶಸ್ತಿಯೊಂದು ನಿಮಗೆ ದೊರೆಯಬಹುದು. ಬರವಣಿಗೆಯ ಉದ್ಯೋಗದಲ್ಲಿ ಲಾಭವಿದೆ. ಮಾತನ್ನು ಕಡಿಮೆ ಮಾಡಿದಲ್ಲಿ ಜನರ ಸಂಪರ್ಕ ಹೆಚ್ಚುತ್ತದೆ. ರಾಜಕೀಯ ಸೇರುವ ಆಸೆ ನೆರವೇರಲಿದೆ. ಪತಿ ಮತ್ತು ಮಕ್ಕಳೊಂದಿಗೆ ತೀರ್ಥಯಾತ್ರೆ ಮಾಡುವಿರಿ. ಸಂತಾನ ಲಾಭವಿದೆ. ತಾಯಿ ಅಥವಾ ಅತ್ತೆಯ ಆರೋಗ್ಯದಲ್ಲಿ ತೊಂದರೆ ಇದೆ.

ಕುಂಭ

ಯಾರೊಂದಿಗೂ ಮನಬಿಚ್ಚಿ ಮಾತನಾಡುವುದಿಲ್ಲ. ರಹಸ್ಯ ಕಾಪಾಡುವಿರಿ. ನಿಮ್ಮ ಕಷ್ಟ ನಷ್ಟಗಳಿಗೆ ಯಾರನ್ನೂ ಹೊಣೆ ಮಾಡುವುದಿಲ್ಲ. ನೋವನ್ನು ಮನದಲ್ಲಿಯೇ ಉಳಿಸಿಕೊಂಡು ಒಬ್ಬರೇ ಕೊರಗುವಿರಿ. ಹಣಕಾಸಿನ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ಶಾಲಾ ಕಾಲೇಜನ್ನು ಆರಂಭಿಸುವ ಕನಸನ್ನು ನನಸು ಮಾಡಿಕೊಳ್ಳುವಿರಿ. ಕುಟುಂಬದವರ ಸಹಾಯ ದೊರೆಯುತ್ತದೆ. ಸಮಾಜದಲ್ಲಿ ದೊಡ್ಡ ಹೆಸರು ದೊರೆಯುತ್ತದೆ. ಯಾರೂ ಸಾಧಿಸಲಾಗದ ಕೆಲಸವನ್ನು ನೀವು ಮಾಡಿ ಜನ ಮೆಚ್ಚುಗೆ ಗಳಿಸುವಿರಿ. ಯಾರು ಬೇಕಾದರೂ ನಿಮ್ಮನ್ನು ಸುಲಭವಾಗಿ ವಂಚಿಸಬಹುದು ಎಚ್ಚರಿಕೆಯಿಂದ ಇರಿ.

ಮೀನ

ನಿಮ್ಮ ಮಾತಿಗೆ ಕುಟುಂಬದ ಒಳಗೂ ಹೊರಗೂ ಗೌರವ ಇರುತ್ತದೆ. ನಿಮ್ಮ ಮನಸ್ಸಿನ ಒಳಗಿನ ಆಂತರಕ ನೀರಿನಂತೆ ಪರಿಶುದ್ದವಾಗಿರುತ್ತದೆ. ಆದರೆ ದುಡುಕಿನ ಮಾತಿನ ಕಾರಣ ವಿವಾದವನ್ನು ಎದುರಿಸಬೇಕಾಗುತ್ತದೆ. ಸಾಕುಪ್ರಾಣಿಗಳನ್ನು ಕಾಪಾಡುವಿರಿ. ಪಾಲುದಾರಿಕೆಯ ಮಾರಾಟದಲ್ಲಿ ಹೇರಳ ಹಣ ಸಂಪಾದಿಸುವಿರಿ. ಯಾರನ್ನೂ ಸುಲಭವಾಗಿ ನಂಬುವುದಿಲ್ಲ. ಗುಡಿ ಕೈಗಾರಿಕೆಯನ್ನು ಆರಂಭಿಸಿ ಹಲವರಿಗೆ ಉದ್ಯೋಗವನ್ನು ನೀಡುವಿರಿ. ಪದೇ ಪದೇ ಮನಸ್ಸು ಬದಲಾಯಿಸುವ ಕಾರಣ ಅವಕಾಶ ವಂಚಿತರಾಗುವಿರಿ. ಪತಿಯ ಜೊತೆ ಉತ್ತಮ ಹೊಂದಾಣಿಕೆ ಇರುತ್ತದೆ. ವಿದ್ಯಾರ್ಥಿಗಳು ಏಕಾಗ್ರಚಿತ್ತತೆ ಬೆಳೆಸಿಕೊಳ್ಳಬೇಕು.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).