ಅನಿವಾರ್ಯದಿಂದ ಉದ್ಯೋಗಕ್ಕೆ ಸೇರುವಿರಿ, ಸಂಬಂಧದಲ್ಲಿ ಮದುವೆ ನಿಶ್ಚಯವಾಗಲಿದೆ; ಸ್ತ್ರೀ ವಾರ ಭವಿಷ್ಯ
Weekly Women horoscope: ಸ್ತ್ರೀ ವಾರ ಭವಿಷ್ಯ (ಜುಲೈ 19 ರಿಂದ ಜುಲೈ 25) ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಈ ವಾರದ ಸ್ತ್ರೀ ಭವಿಷ್ಯ ಇಲ್ಲಿದೆ.
ಸ್ತ್ರೀ ವಾರ ರಾಶಿ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲಾ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (Weekly Women horoscope in Kannada).
ಮೇಷ
ನಿಮ್ಮ ಆಶಯದಂತೆ ಜೀವನದಲ್ಲಿ ಶುಭ ಫಲಿತಾಂಶಗಳು ದೊರೆಯಲಿವೆ. ನಿಮ್ಮ ಕೆಲಸ ಕಾರ್ಯಗಳಿಗೆ ಕುಟುಂಬದರ ಸಹಕಾರ ದೊರೆಯುತ್ತದೆ. ಮಕ್ಕಳ ಒಳ್ಳೆಯ ಕೆಲಸ ಕಾರ್ಯಗಳಿಗೆ ಉತ್ತೇಜನ ನೀಡುವಿರಿ. ಪತಿಯೊಡನೆ ಹೊಂದಾಣಿಕೆ ಇರುತ್ತದೆ. ವೈವಾಹಿಕ ಜೀವನದಲ್ಲಿನ ವಿರಸ ಮರೆಯಾಗುತ್ತದೆ. ಆತ್ಮೀಯರೊಂದಿಗೆ ಅನಾವಶ್ಯಕವಾದ ವಿವಾದ ಉಂಟಾಗಲಿವೆ. ದುಡಿಮೆ ನಡುವೆ ನಿಮ್ಮ ಆರೋಗ್ಯದ ಕಡೆ ಗಮನ ನೀಡಿ. ಉದ್ಯೋಗಸ್ಥರಿಗೆ ಯಾವುದೇ ತೊಂದರೆ ಬಾರದು. ಬಹುದಿನದ ನಂತರ ಕುಟುಂಬದವರ ಜೊತೆ ಪ್ರವಾಸವನ್ನು ಆಯೋಜಿಸುವಿರಿ. ಸಮಾಜದಲ್ಲಿ ಉನ್ನತ ಗೌರವ ಪಡೆಯುವಿರಿ. ಕಲಾವಿದರಿಗೆ ಉತ್ತಮ ಅವಕಾಶ ದೊರೆಯುತ್ತದೆ.
ವೃಷಭ
ಸಮಾಜದಲ್ಲಿ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಇರುತ್ತದೆ. ಬಂಧು ಮಿತ್ರರ ನಡುವೆ ವಿಶೇಷ ಸ್ಥಾನ ಮಾನ ದೊರೆಯುತ್ತದೆ. ಕಲಾವಿದರಾದಲ್ಲಿ ಅತ್ಖಂತ ಬೇಡಿಕೆಯ ವ್ಯಕ್ತಿಯಾಗುವಿರಿ. ಕುಟುಂಬದಲ್ಲಿ ಮಾನಸಿಕ ಒತ್ತಡ ಇರುತ್ತದೆ. ನಿಮ್ಮ ಹಟದ ಗುಣ ಕುಟುಂಬದ ಕಿರಿಕಿರಿಗೆ ಕಾರಣವಾಗುತ್ತದೆ. ಶಾಂತಿ ಸಂಯಮದಿಂದ ವರ್ತಿಸಿದಲ್ಲಿ ತೊಂದರೆ ಇರದು. ಕುಟುಂಬದ ಎಲ್ಲರ ಮನಸ್ಸನ್ನು ಗೆಲ್ಲುವಿರಿ. ಪತಿಯೊಂದಿಗೆ ವಾರಾಂತ್ಯದಲ್ಲಿ ತವರು ಮನೆಗೆ ತೆರಳುವಿರಿ. ತಿಳುವಳಿಕೆ ಇದ್ದರೂ ಪ್ರಯೋಜನವಿಲ್ಲದ ವಿಚಾರಗಳಿಗೆ ಹಣ ಖರ್ಚು ಮಾಡಬೇಕಾಗುತ್ತದೆ. ಶಾಸ್ತ್ರ ಸಂಪ್ರದಾಯಗಳ ಬಗ್ಗೆ ಹೆಚ್ಚಿನ ಒಲವು ತೋರುವಿರಿ.
ಮಿಥುನ
ಹೊಗಳಿಕೆಗೆ ಮರುಳಾಗದೆ ಗಂಭೀರದಿಂದ ವರ್ತಿಸುವಿರಿ. ಸಂಬಂಧದಲ್ಲಿ ಅಥವ ಮೆಚ್ಚಿದವರೊಂದಿಗೆ ವಿವಾಹವಾಗುತ್ತದೆ. ಎಲ್ಲರ ಬಗ್ಗೆ ಒಳ್ಳೆಯ ಭಾವನೆ ಇರುತ್ತದೆ. ಯಾರನ್ನೂ ಕೀಳರಿಮೆಯಿಂದ ನೋಡುವುದಿಲ್ಲ. ಕುಟುಂಬದ ಹಣಕಾಸಿನ ವಿಚಾರದಲ್ಲಿ ದಿಟ್ಟ ನಿಲುವು ತಾಳುವಿರಿ. ಭೂವಿವಾದವೊಂದನ್ನು ಮಾತುಕತೆಯಿಂದ ಬಗೆಹರಿಸುವಿರಿ. ಹಾರ್ಮೋನ್ ಸ್ರವಿಕೆಯಲ್ಲಿ ಏರುಪೇರು ಉಂಟಾಗಬಹುದು. ವೇಳೆ ಕಳೆಯಲು ಉದ್ಯೋಗಕ್ಕೆ ಸೇರುವಿರಿ. ಪತಿಯ ಸಹಕಾರದಿಂದ ವ್ಯಾಪಾರವೊಂದನ್ನು ಆರಂಭಿಸಬಹುದು. ನಿಮಗೆ ಅಸಾಧ್ಯವೆನಿಸದ ಕೆಲಸ ಯಾವುದೂ ಇರುವುದಿಲ್ಲ. ತವರಿಂದ ಅನಿರೀಕ್ಷಿತ ಧನ ಸಹಾಯವಿದೆ. ಸರಳ ದೈಹಿಕ ವ್ಯಾಯಾಮದಿಂದ ಉತ್ತಮ ಆರೋಗ್ಯ ಗಳಿಸುವಿರಿ.
ಕಟಕ
ಆಂತರಿಕ ಶತ್ರುಗಳ ಬಗ್ಗೆ ಎಚ್ಚರಿಕೆ ಇರಲಿ. ಮೆಚ್ಚಿದವರೊಂದಿಗೆ ವಿವಾಹದ ಮಾತುಕತೆ ನಡೆಯುತ್ತದೆ. ತಪ್ಪಾಗಿ ಅರ್ಥಮಾಡಿಕೊಂದು ಆತ್ಮೀಯರನ್ನು ದ್ವೇಷಿಸುವಿರಿ. ಕುಟುಂಬದ ಹಣಕಾಸಿನ ವಿಚಾರದಲ್ಲಿ ಒತ್ತಡಕ್ಕೆ ಒಳಗಾಗುವಿರಿ. ಹಾರ್ಮೋನ್ ತೊಂದರೆ ಇದ್ದವರು ಉತ್ತಮ ಚಿಕಿತ್ಸೆ ಪಡೆಯಬೇಕು. ಬಿಡುವಿಲ್ಲದ ಕೆಲಸದಿಂದ ಬೇಸರ ಉಂಟಾಗಲಿದೆ. ಅನಿವಾರ್ಯವಾಗಿ ಉದ್ಯೋಗಕ್ಕೆ ಸೇರುವ ನಿರ್ಧಾರಕ್ಕೆ ಬರುವಿರಿ. ಪ್ರತಿ ವಿಚಾರದಲ್ಲಿಯೂ ಪತಿಯ ಸಹಕಾರ ಸಹಾಯ ನಿಮಗಿರುತ್ತದೆ. ಪೂರ್ವ ನಿಯೋಜನೆಯಂತೆ ದೂರದ ಊರಿಗೆ ಪ್ರವಾಸಕ್ಕೆ ತೆರಳುವಿರಿ. ಸರಳ ದೈಹಿಕ ವ್ಯಾಯಾಮ ಮತ್ತು ಉತ್ತಮ ಆಹಾರ ಪದ್ಧತಿಯಿಂದ ಆರೋಗ್ಯ ಕಾಪಾಡಿಕೊಳ್ಳುವಿರಿ.
ಸಿಂಹ
ದಾಂಪತ್ಯ ಜೀವನ ಸುಖ ಸಂತೋಷದಿಂದ ಕೂಡಿರುತ್ತದೆ. ಕುಟುಂಬದ ಶ್ರೇಯೋಭಿವೃದ್ಧಿಗಾಗಿ ಎದುರಾಗುವ ತೊಂದರೆಯನ್ನು ಎದುರಿಸುವಿರಿ. ಕುಟುಂಬದ ಒಳಿತಿಗಾಗಿ ಧಾರ್ಮಿಕ ಕೆಲಸವೊದನ್ನು ಮಾಡುವಿರಿ. ಹಣದ ಕೊರತೆ ಎದುರಾಗಬಹುದು. ಎಲ್ಲಾ ತಿಳಿದಿದೆ ಎಂಬ ಭಾವನೆ ಬಿಡುವುದು ಒಳ್ಳೆಯದು. ಮಕ್ಕಳ ವಿದ್ಯಾಭ್ಯಾಸ ಮತ್ತು ಇತರ ಚಟುವಟಿಕೆಗಳ ಬಗ್ಗೆ ಸಂತಸವಿರುತ್ತದೆ. ಸಮಾಜದ ಗಣ್ಯ ವ್ಯಕ್ತಿಯ ಭೇಟಿ ಮಾಡಲು ಸಾಧ್ಯವಾಗುತ್ತದೆ. ಕೈ ಕಾಲುಗಳಲ್ಲಿ ಶಕ್ತಿಯ ಕೊರತೆ ಕಂಡುಬರುತ್ತದೆ. ಬೇರೆಯವರ ಮನಸ್ಸಿಗೆ ನೋವಾಗದಂತೆ ವ್ಯವಹರಿಸುವಿರಿ. ಪ್ರಯೋಜನವಲ್ಲದ ಕೆಲಸ ಕಾರ್ಯಗಳಿಂದ ಬೇಸರಗೊಳ್ಳುವಿರಿ.
ಕನ್ಯಾ
ರಾಜಕೀಯದಲ್ಲಿ ನಿಮಗೆ ವಿಶೇಷವಾದ ಅವಕಾಶಗಳು ದೊರೆಯಲಿವೆ. ಗಲಿಬಿಲಿಯ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡು ವ್ಯವಹರಿಸುವುರು ಒಳ್ಳೆಯದು. ತವರು ಮನೆಯಿಂದ ತಂದೆಯಿಂದ ಕಿರು ಕಾಣಿಕೆ ದೊರೆಯಲಿದೆ. ರಕ್ತದ ದೋಷವಿದ್ದಲ್ಲಿ ವೈದ್ಯರನ್ನು ಭೇಟಿ ಮಾಡಿರಿ. ಉದ್ಯೋಗದಲ್ಲಿ ಉನ್ನತ ಮಟ್ಟವನ್ನು ತಲುಪುವಿರಿ. ಮುಖ್ಯವಾದ ಕೆಲಸಗಳು ಅರ್ಧಕ್ಕೆ ನಿಲ್ಲಲಿದೆ. ದಾಂಪತ್ಯ ಜೀವನದಲ್ಲಿ ನಿಮ್ಮ ಮಾತೇ ಮೇಲುಗೈ ಆಗುತ್ತದೆ. ಸಹನೆಯಿಂದ ಇದ್ದಷ್ಟು ಪ್ರೀತಿ ವಿಶ್ವಾಸ ಹೆಚ್ಚುತ್ತದೆ. ಬೇರೆಯವರನ್ನು ನಿಮ್ಮ ತಪ್ಪಿಗೆ ಕಾರಣರೆಂಬಂತೆ ಬಿಂಬಿಸುವಿರಿ. ಮಕ್ಕಳ ಜೊತೆ ಸಂತೋಷದಿಂದ ಸಮಯ ಕಳೆಯುವಿರಿ.
ತುಲಾ
ಐಷಾರಾಮಿ ಜೀವನ ನಡೆಸುವಿರಿ. ವಿದ್ಯಾರ್ಥಿಗಳು ಉನ್ನತ ವಿದ್ಯೆಗಾಗಿ ಆಪ್ತರ ಸಹಕಾರದಿಂದ ವಿದೇಶಕ್ಕೆ ತೆರಳುವರು. ಉದ್ಯೋಗಸ್ಥರಿಗೆ ಯಾವುದೇ ತೊಂದರೆ ಇರದು. ಕುಟುಂಬದ ಸ್ನೇಹ ಸೌಹಾರ್ದಕ್ಕೆ ಶ್ರಮ ವಹಿಸಿ ಯಶಸ್ವಿಯಾಗುವಿರಿ. ಅನಿವಾರ್ಯವಾಗಿ ಸಾಲ ಪಡೆಯುವಿರಿ. ಉದ್ಯೋಗದಲ್ಲಿ ವಿಶೇಷ ಫಲಗಳು ದೊರೆಯುತ್ತದೆ . ನಿಮ್ಮನ್ನು ನೀವೇ ಹೊಗಳಿಕೊಳ್ಳುವುದು ತಪ್ಪಾಗುತ್ತದೆ. ಸೋದರಿ ಜೊತೆ ಹಣದ ವಿಚಾರದಲ್ಲಿ ಕಲಹ ಉಂಟಾಗುತ್ತದೆ. ಸೋಲಲು ಒಪ್ಪದೆ ಗೆಲ್ಲುವವರೆಗೂ ಹೋರಾಟ ನಡೆಸುವಿರಿ. ದಂಪತಿ ನಡುವೆ ಉತ್ತಮ ಹೊಂದಾಣಿಕೆ ಇರುತ್ತದೆ. ಪತಿ ಮತ್ತು ಮಕ್ಕಳ ಜೊತೆಯಲ್ಲಿ ಕಿರುಪ್ರವಾಸ ಕೈಗೊಳ್ಳುವಿರಿ.
ವೃಶ್ಚಿಕ
ಮನಸ್ಸಿನಲ್ಲಿ ದೊಡ್ಡ ದೊಡ್ಡ ಆಸೆ ಆಕಾಂಕ್ಷೆಗಳು ಇರಲಿವೆ. ದೊರೆವ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಹೊಂದಾಣಿಕೆಯ ಗುಣದ ಕೊರತೆ ಕಾಡುತ್ತದೆ. ಆರೋಗ್ಯದಲ್ಲಿ ಸಮಸ್ಯೆ ನಿವಾರಣೆ ಆಗಲಿದೆ. ಉನ್ನತ ಶಿಕ್ಷಣಕ್ಕಾಗಿ ಪರಸ್ಪಳಕ್ಕೆ ತೆರಳುವಿರಿ. ಐಷಾರಾಮಿ ಜೀವನ ನಡೆಸುವಿರಿ. ಪತಿಯೊಂದಿಗೆ ಸಂತೋಷದಿಂದ ವೇಳೆ ಕಳೆಯುವಿರಿ. ಉದ್ಯೋಗಸ್ಥರಾದರೂ ಕುಟುಂಬದ ಜವಾಬ್ದಾರಿ ವಹಿಸಿಕೊಳ್ಳುವಿರಿ. ಖರ್ಚು ವೆಚ್ಚಗಳನ್ನು ಕಡಿಮೆ ಮಾಡಿ ಆಪತ್ಕಾಲಕ್ಕೆ ಹಣ ಉಳಿಸುವಿರಿ. ಮನಸ್ಸು ಎಷ್ಟೇ ಒಳ್ಳೆಯದಾದರೂ ದುಡುಕು ಮಾತಿನಿಂದ ವಿರೋಧಿಗಳನ್ನು ಹೆಚ್ಚಿಸಿಕೊಳ್ಳುವಿರಿ.
ಧನಸ್ಸು
ಹೊಗಳಿಕೆಗೆ ಮರುಳಾಗಿ ತಪ್ಪು ಮಾಡುವಿರಿ. ಮಕ್ಕಳ ಮತ್ತು ಮಹಿಳೆಯರ ಸಮಸ್ಯೆಗಳನ್ನು ಬಗೆಹರಿಸಲು ಸಂಸ್ಥೆಯೊಂದನ್ನು ಆರಂಭಿಸುವಿರಿ. ಆಮದು ರಫ್ತಿನ ವ್ಯಾಪಾರದಲ್ಲಿ ಹೆಚ್ಚಿನ ಲಾಭ ಗಳಿಸುವಿರಿ. ಪತಿ ಮತ್ತು ಮಕ್ಕಳ ಜೊತೆ ಸಂತಸದಿಂದ ಇರಲು ಪ್ರಯತ್ನಿಸುವಿರಿ. ಬೇಸರದಿಂದ ಹೊರ ಬರಲು ದೂರದ ಊರಿಗೆ ಪ್ರವಾಸ ಹೋಗುವಿರಿ. ಉದ್ಯೋಗದಲ್ಲಿ ಅಧಿಕಾರಿಯಾಗಿ ಬಡ್ತಿ ದೊರೆಯುತ್ತದೆ. ಅನಾವಶ್ಯಕ ಟಿಕೆ ಟಿಪ್ಪಣಿಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಸೋಲನ್ನು ಒಪ್ಪದೆ ಸತತ ಪ್ರಯತ್ನದಿಂದ ಜಯಶೀಲರಾಗುತ್ತಾರೆ. ನೆರೆಹೊರೆಯವರೊಂದಿಗೆ ಸ್ನೇಹ ಪ್ರೀತಿಯಿಂದ ಬಾಳುವಿರಿ. ಆರೋಗ್ಯದಲ್ಲಿ ಚೇತರಿಕೆ ಇರುತ್ತದೆ. ಹಿರಿಯರ ಸಲಹೆಯಂತೆ ನಡೆದುಕೊಂಡರೆ ತೊಂದರೆಯಿಂದ ಪಾರಾಗುವಿರಿ.
ಮಕರ
ನಿಮ್ಮಲ್ಲಿನ ಕ್ರಿಯಾಶೀಲ ಗುಣ ಬೇರೆಯವರಲ್ಲಿ ಅಸೂಯೆ ಮೂಡಿಸುತ್ತದೆ. ಕುಟುಂಬದ ಗಂಭೀರವಾದ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸುವಿರಿ. ಸಂಗೀತ ನಾಟ್ಯದಂತಹ ಸಾಂಪ್ರದಾಯಿಕ ಕಲೆಗಳನ್ನು ಬಲ್ಲವರು ಸಮಾಜದ ಜನಪ್ರಿಯತೆಯನ್ನು ಗಳಿಸುವಿರಿ. ಪತಿಯ ಜೊತೆಯ ಅನಾವಶ್ಯಕ ವಾದ ವಿವಾದಗಳಿದ್ದರೂ ಕ್ರಮಣವಾಗಿ ಸುಖ ಶಾಂತಿ ನೆಲೆಸುತ್ತದೆ. ವಿಶ್ರಾಂತಿ ಇಲ್ಲದ ದುಡಿಮೆ ಇರುವ ಕಾರಣ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಸ್ವಂತ ಬಳಕೆಗಾಗಿ ಐಷಾರಾಮಿ ವಾಹನ ಒಂದನ್ನು ಕೊಳ್ಳುವಿರಿ. ದುಡುಕುತನದಿಂದ ವ್ಯಾಪಾರವನ್ನು ಆರಂಭಿಸಿದರೂ ನಷ್ಟವಾಗದು. ವಿದ್ಯಾರ್ಥಿಗಳಿಗೆ ಉನ್ನತ ಅಭ್ಯಾಸಕ್ಕೆ ಅವಕಾಶ ದೊರೆಯುತ್ತದೆ.
ಕುಂಭ
ಉದ್ಯೋಗದಲ್ಲಿ ವಿರೋಧಗಳಿದ್ದರೂ ನಿಮ್ಮ ಪ್ರಗತಿಗೆ ಯಾವುದೇ ಧಕ್ಕೆ ಬಾರದು. ವೃತ್ತಿ ಜೀವನದಲ್ಲಿ ಹೋರಾಟದ ಮನೋಭಾವನೆ ತೋರುವಿರಿ. ಸ್ವಂತ ಹಣದಿಂದ ಪತಿಯೊಂದಿಗೆ ಪಾಲುಗಾರಿಕೆ ವ್ಯಾಪಾರ ಆರಂಭಿಸುವಿರಿ. ಚಾಡಿ ಮಾತನ್ನು ಕೇಳಿದರೆ ದಂಪತಿಗಳಲ್ಲಿ ಜಗಳವಾಗಬಹುದು. ಉದ್ಯೋಗದಲ್ಲಿನ ನಿಮ್ಮ ಸಮರ್ಪಣಾ ಮನೋಭಾವನೆ ಎಲ್ಲರಿಗೂ ಮಾದರಿಯಾಗುತ್ತದೆ. ಅನಿರೀಕ್ಷಿತ ಖರ್ಚು ವೆಚ್ಚಗಳು ಬೇಸರಕ್ಕೆ ಕಾರಣವಾಗುತ್ತದೆ. ಆರೋಗ್ಯ ಸ್ಥಿರವಾಗಿರಿಸಿಕೊಳ್ಳಲು ಪ್ರಯತ್ನಿಸುವಿರಿ. ಮಕ್ಕಳನ್ನು ಪ್ರೀತಿಯಿಂದ ಗಮನಿಸಿ ಅವರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುವಿರಿ. ನೂತನ ವಾಹನ ಕೊಳ್ಳುವಿರಿ.
ಮೀನ
ಸತತ ಪ್ರಯತ್ನದಿಂದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಲಿದೆ. ನಯವಾದ ಮಾತಿನಿಂದ ಕುಟುಂಬದಲ್ಲಿ ಪ್ರೀತಿಯ ಸ್ಥಾನಮಾನ ಗಳಿಸುವಿರಿ. ಅನಿರೀಕ್ಷಿತ ಧನಲಾಭವಿದೆ. ಅತಿಯಾದ ಜ್ವರ ನಿಮ್ಮನ್ನು ಕಾಡಬಹುದು. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆಯಿಂದ ಇರಿ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ನಿಮಗೆ ಹಣದ ಅವಶ್ಯಕತೆ ಇದ್ದಲ್ಲಿ ಪತಿಯ ಸಹಾಯ ದೊರೆಯುತ್ತದೆ. ವಾರಾಂತ್ಯದಲ್ಲಿ ಖ್ಯಾತ ಸಂಸ್ಥೆಯಿಂದ ಉದ್ಯೋಗದ ಅವಕಾಶ ಲಭಿಸುತ್ತದೆ. ಸಂಸಾರದಲ್ಲಿ ದೊಡ್ಡ ಮನರಂಜನಾ ಕಾರ್ಯಕ್ರಮ ನಡೆಸಲು ಅನುವಾಗುವಿರಿ. ತಂದೆ ಅಥವಾ ತಾಯಿಯೊಂದಿಗೆ ಹಣಕಾಸಿನ ವಿಚಾರಕ್ಕೆ ಬೇಸರ ವಿರುತ್ತದೆ
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).