ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಉದ್ಯೋಗ ತೊರೆದು ಕುಟುಂಬದ ಕಾಳಜಿ ಮಾಡುವಿರಿ, ಅವಿವಾಹಿತರಿಗೆ ಮದುವೆ ನಿಶ್ಚಯ; ಸ್ತ್ರೀ ವಾರ ಭವಿಷ್ಯ

ಉದ್ಯೋಗ ತೊರೆದು ಕುಟುಂಬದ ಕಾಳಜಿ ಮಾಡುವಿರಿ, ಅವಿವಾಹಿತರಿಗೆ ಮದುವೆ ನಿಶ್ಚಯ; ಸ್ತ್ರೀ ವಾರ ಭವಿಷ್ಯ

Weekly Women horoscope: ಸ್ತ್ರೀ ವಾರ ಭವಿಷ್ಯ (ಮೇ 24 ರಿಂದ ಮೇ 30ವರೆಗೆ) ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಈ ವಾರದ ಸ್ತ್ರೀ ಭವಿಷ್ಯ ಇಲ್ಲಿದೆ.

ಸ್ತ್ರೀ ವಾರ ಭವಿಷ್ಯ
ಸ್ತ್ರೀ ವಾರ ಭವಿಷ್ಯ

ಸ್ತ್ರೀ ವಾರ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (Women Horoscope 24th May to 30th May 2024).

ಮೇಷ

ಕುಟುಂಬದ ಬಗ್ಗೆ ವಿಶೇಷ ಪ್ರೀತಿ ಮತ್ತು ನಂಬಿಕೆ ಇರುತ್ತದೆ. ಕೆಲಸದ ನಡುವೆ ವಿಶ್ರಾಂತಿಗೆ ಕೊರತೆ ಇರುವುದಿಲ್ಲ. ನೆರೆಹೊರೆಯವರ ಪ್ರೀತಿ ಮತ್ತು ವಿಶ್ವಾಸ ದೊರೆಯುತ್ತದೆ. ನಿಮ್ಮ ಪ್ರಯತ್ನದಿಂದ ಕುಟುಂಬದ ಸಮಸ್ಯೆಗಳು ಕಡಿಮೆ ಆಗುತ್ತದೆ. ತಂದೆ ತಾಯಿಯ ಜವಾಬ್ದಾರಿ ನಿಮ್ಮದಾಗುತ್ತದೆ. ಮಕ್ಕಳ ಆಗಮನ ಕುಟುಂಬದಲ್ಲಿ ಸಂತೋಷ ಉಂಟುಮಾಡುತ್ತದೆ. ಹಣಕಾಸಿನ ನಿರ್ವಹಣೆಯ ಜವಾಬ್ದಾರಿ ನಿಮ್ಮದಾಗುತ್ತದೆ. ಸಾಕ್ಷಿ ಇಲ್ಲದೆ ಯಾರ ಮಾತುಗಳನ್ನು ಕೇಳುವುದಿಲ್ಲ. ಉದ್ಯೋಗಿಗಳಿಗೆ ಒತ್ತಡದ ಸನ್ನಿವೇಶವೊಂದು ಎದುರಾಗುತ್ತದೆ. ಪತಿಯ ಸಾಲವನ್ನು ಮರುಪಾವತಿ ಮಾಡಲು ಸಹಾಯ ಮಾಡುವಿರಿ.

ವೃಷಭ

ಸೋದರರ ಜೀವನವನ್ನು ಸರಿ ದಾರಿಗೆ ತರುವಲ್ಲಿ ನಿಮ್ಮ ಪಾತ್ರ ಮುಖ್ಯವಾಗುತ್ತವೆ. ಸ್ಥಿರವಾದ ಮನಸ್ಸಿನಿಂದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಮಕ್ಕಳ ಭವಿಷ್ಯವು ನಿಮ್ಮನ್ನು ಆಧರಿಸುತ್ತದೆ. ಉದ್ಯೋಗವನ್ನು ತೊರೆದು ಕುಟುಂಬದ ನಿರ್ವಹಣೆ ಮಾಡುವಿರಿ. ನಿತ್ಯಜೀವನದಲ್ಲಿ ಯಾವುದೇ ಬದಲಾವಣೆ ಕಾಣದು. ಮಹಿಳೆಯರಿಗೆ ಸಂಬಂಧಿಸಿದ ಬಟ್ಟೆ ಅಥವಾ ಇನ್ನಿತರ ವಸ್ತುಗಳ ವ್ಯಾಪಾರವನ್ನು ಆರಂಭಿಸುವಿರಿ. ಅನಾವಶ್ಯಕ ಖರ್ಚು ವೆಚ್ಚಗಳನ್ನು ನಿಯಂತ್ರಿಸಲು ವಿಫಲರಾಗುವಿರಿ. ಶಾಂತಿ ನೆಮ್ಮದಿಗಾಗಿ ಯಾತ್ರಾಸ್ಥಳಕ್ಕೆ ಬೇಟಿ ನೀಡುವಿರಿ. ಅನಿರೀಕ್ಷಿತ ಧನಲಾಭವಿದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಮಿಥುನ

ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುವಿರಿ. ಸ್ಥಿರವಾದ ನಡೆ ಜೀವನದಲ್ಲಿ ಸಂತೋಷವನ್ನು ಉಂಟುಮಾಡುತ್ತದೆ. ಆಡುವ ಮಾತು ಜನರ ಸಹಾಯವನ್ನು ಗಳಿಸುವಂತೆ ಮಾಡುತ್ತದೆ. ನಿಮ್ಮ ಮೃದುವಾದ ನುಡಿಗಳು ಜೀವನದ ತೊಂದರೆಯನ್ನು ದೂರ ಮಾಡುತ್ತವೆ. ಅನಿರೀಕ್ಷಿತ ಧನ ಲಾಭವಿರುತ್ತದೆ. ಉದ್ಯೋಗ ಬದಲಿಸಲು ಒಳ್ಳೆಯ ಅವಕಾಶ ದೊರೆಯುತ್ತದೆ. ಹಣಕಾಸಿನ ತೊಂದರೆ ಕಾಣದು. ಅನಗತ್ಯ ವಾದಗಳನ್ನು ಮಾಡದಿರಿ. ಖರ್ಚು ವೆಚ್ಚಗಳು ಹೆಚ್ಚಲಿವೆ. ನಿಮ್ಮ ನೇತೃತ್ವದಲ್ಲಿ ಮಂಗಳ ಕಾರ್ಯಗಳು ನಡೆಯಲಿವೆ. ಆರೋಗ್ಯದಲ್ಲಿ ತೊಂದರೆ ಕಂಡುಬರುತ್ತದೆ. ಹೆತ್ತವರನ್ನು ಭೇಟಿಯಾಗಲು ತವರಿಗೆ ತೆರಳುವಿರಿ.

ಕಟಕ

ಸುಖ ದು:ಖಗಳನ್ನು ಕ್ರೀಡಾ ಮನೋಭಾವನೆಯಿಂದ ಸ್ವೀಕರಿಸುವಿರಿ. ಕುಟುಂಬದಲ್ಲಿನ ಪರಸ್ಪರ ಪ್ರೀತಿ ವಿಶ್ವಾಸ ಮಾನಸಿಕ ಒತ್ತಡವನ್ನು ದೂರ ಮಾಡುತ್ತದೆ. ತಂದೆಯ ಆಸ್ತಿಯಲ್ಲಿ ನಿಮಗೆ ಪಾಲು ದೊರೆಯುತ್ತದೆ. ವೃತ್ತಿಯಲ್ಲಿ ಉನ್ನತ ಸ್ಥಾನ ಗಳಿಸುವಿರಿ. ಹಣಕಾಸಿನ ವ್ಯವಹಾರವನ್ನು ಬುದ್ಧಿವಂತಿಕೆಯಿಂದ ನಿರ್ವಹಿಸುವಿರಿ. ಗುಡಿ ಕೈಗಾರಿಕೆಯಲ್ಲಿ ಲಾಭ ಇರುತ್ತದೆ. ಸ್ವಂತ ಉದ್ಯಮ ಇದ್ದಲ್ಲಿ ಆದಾಯದ ಕೊರತೆ ಬಾರದು. ದಂಪತಿ ನಡುವೆ ಉತ್ತಮ ಸಾಮರಸ್ಯ ಇರುತ್ತದೆ. ಮಕ್ಕಳ ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡುವಿರಿ. ಅವಿವಾಹಿತರಿಗೆ ವಿವಾಹ ಸಂಬಂಧ ಕೂಡಿಬರುತ್ತದೆ. ಲಾಭವಿಲ್ಲದ ಓಡಾಟ ಬೇಸರ ಉಂಟು ಮಾಡುತ್ತದೆ.

ಸಿಂಹ

ಮಕ್ಕಳಿಗೆ ಆತ್ಮೀಯರ ಸಹಾಯದಿಂದ ಉದ್ಯೋಗ ದೊರೆಯುತ್ತದೆ. ಚಿನ್ನ ಬೆಳ್ಳಿ ಒಡವೆ ಕೊಳ್ಳುವ ಸಲುವಾಗಿ ಕೂಡಿಟ್ಟ ಹಣ ಖರ್ಚಾಗುವ ಸಾಧ್ಯತೆಗಳಿವೆ. ಸಮಾಜದ ಗಣ್ಯವ್ಯಕ್ತಿಗಳ ಸಹಾಕಾರ ದೊರೆಯುತ್ತದೆ. ಕುಟುಂಬದ ಆಸ್ತಿ ವಿಚಾರದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳುವಿರಿ. ಅನಿರೀಕ್ಷಿತ ಹಣದ ಸಹಾಯ ಜೀವನದ ಹಾದಿಯನ್ನೇ ಬದಲಾಯಿಸುತ್ತದೆ. ತವರಿನ ಕಾರ್ಯಕ್ರಮ ಆಯೋಜಿಸುವಲ್ಲಿ ಯಶಸ್ವಿಯಾಗುವಿರಿ. ಕುಟುಂಬದಲ್ಲಿ ಮಂಗಳಕಾರ್ಯವೊಂದು ನಡೆಯಲಿದೆ. ಮನಸ್ಸಿನ ಆಸೆಯಂತೆ ರಾಜಕೀಯ ಸೇರಲು ಅವಕಾಶವೊಂದು ಲಭಿಸಲಿದೆ. ಯಾವುದೇ ಕೆಲಸವನ್ನು ಅಸಡ್ಡೆಯಿಂದ ನೋಡದಿರಿ. ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಇರಲಿ.

ಕನ್ಯಾ

ಯಶಸ್ಸಿನ ಹಾದಿಯಲ್ಲಿ ನಡೆಯುವಿರಿ. ನಿಮ್ಮ ನೆರೆಹೊರೆಯವ ಪ್ರೀತಿ ವಿಶ್ವಾಸ ಗಳಿಸುವಿರಿ. ತಪ್ಪನ್ನು ಒಪ್ಪದೆ ಎಲ್ಲರನ್ನೂ ಟೀಕಿಸುವಿರಿ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಒಮ್ಮೆ ತೆಗೆದುಕೊಂಡ ನಿರ್ಧಾರಗಳನ್ನು ಎಂದಿಗೂ ಬದಲಿಸುವುದಿಲ್ಲ. ಕಡಿಮೆ ಬಂಡವಾಳದ ವ್ಯಾಪಾರವನ್ನು ಆರಂಭಿಸುವಿರಿ. ಸಮಯವನ್ನು ವ್ಯರ್ಥ ಮಾಡದ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡುತ್ತಾರೆ. ಉದ್ಯೋಗದಲ್ಲಿ ಉನ್ನತ ಅಧಿಕಾರ ಪಡೆಯುವಿರಿ. ಕೌಟುಂಬಿಕ ಜೀವನದಲ್ಲಿ ಬದಲಾವಣೆ ಕಾಣದು. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಪತಿಯ ಉದ್ಯೋಗದಲ್ಲಿ ಆತಂಕದ ಕ್ಷಣಗಳು ಎದುರಾಗಲಿವೆ. ಪತಿಗೆ ಪೂರ್ಣ ಸಹಕಾರ ನೀಡುವಿರಿ. ಸ್ವಂತ ಬಳಕೆಗಾಗಿ ಹೊಸ ವಾಹನ ಕೊಳ್ಳುವಿರಿ.

ತುಲಾ

ಸದಾ ಕಾಲ ಚುರುಕುತನದಿಂದ ಕುಟುಂಬವನ್ನು ಮುನ್ನಡೆಸುವಿರಿ. ಜೀವನದಲ್ಲಿ ನಿಮ್ಮ ನಿರೀಕ್ಷೆಯಂತೆ ಧನಾತ್ಮಕ ಬದಲಾವಣೆಗಳು ಉಂಟಾಗಲಿವೆ. ಹಣದ ತೊಂದರೆ ಕಾಡದಂತೆ ಸಂಸಾರ ನಡೆಸುವಿರಿ. ಆತ್ಮೀಯ ಸ್ನೇಹಿತರೊಬ್ಬರ ಜೊತೆಗೂಡಿ ಹೊಸ ವ್ಯಾಪಾರವನ್ನು ಆರಂಭಿಸುವಿರಿ. ಸಮಾಜದಲ್ಲಿ ಗೌರವಯುತ ಸ್ಥಾನಮಾನ ಲಭಿಸುತ್ತದೆ. ಪತಿಯ ಮನೆ ಕೊಳ್ಳುವ ಆಸೆಗೆ ಬೆನ್ನುಲುಬಾಗಿ ನಿಲ್ಲುವಿರಿ. ಮಕ್ಕಳೊಂದಿಗೆ ದೂರದ ಊರಿಗೆ ಪ್ರವಾಸ ಮಾಡುವಿರಿ. ಹಣಕಾಸಿನ ವ್ಯವಹಾರದಲ್ಲಿ ಲಾಭವಿರುತ್ತದೆ. ದುಡುಕದೆ ಶಾಂತಿ ಸೌಹಾರ್ದದಿಂದ ಎಲ್ಲರ ಮನಸ್ಸನ್ನೂ ಗೆಲ್ಲುವಿರಿ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ.

ವೃಶ್ಚಿಕ

ಕೋಪವನ್ನು ಹತೋಟಿಯಲ್ಲಿಟ್ಟು ಪ್ರೀತಿಯಿಂದ ವರ್ತಿಸಿದರೆ ಒಳ್ಳೆಯದು. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಮಾಡುವಿರಿ. ಪುಟ್ಟ ಮಕ್ಕಳು ನಾಟ್ಯ ಸಂಗೀತದ ಅಭ್ಯಾಸದಲ್ಲಿ ತೊಡಗುವವರು. ಆತಿಯಾದ ಕೋಪ ಕುಟುಂಬದ ನೆಮ್ಮದಿಯನ್ನು ಹಾಳು ಮಾಡುತ್ತದೆ. ಹಣಕಾಸಿನ ಸಂಸ್ಥೆಯಲ್ಲಿ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ನಿಮ್ಮಲ್ಲಿನ ಕ್ರೀಡಾ ಸ್ಪೂರ್ತಿ ಉತ್ತಮ ಅವಕಾಶಗಳನ್ನು ನೀಡುತ್ತವೆ. ಕುಟುಂಬದ ಸಂಪೂರ್ಣ ಜವಾಬ್ದಾರಿ ನಿಮ್ಮದಾಗುತ್ತದೆ. ವಿಶ್ರಾಂತಿ ಇಲ್ಲದ ದುಡಿಮೆ ನಿಮದಾಗುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಕೆಲಸದ ನಡುವೆ ವಿಶ್ರಾಂತಿ ಪಡೆಯಿರಿ. ದೈಹಿಕ ದೌರ್ಬಲ್ಯ ನಿಮ್ಮನ್ನು ಕಾಡುತ್ತದೆ.

ಧನಸ್ಸು

ನಿಮಗೆ ಸೇರಿದ ಸ್ಥಿರಾಸ್ತಿಯಲ್ಲಿ ತೊಂದರೆಯೊಂದು ಎದುರಾಗಲಿದೆ. ಕೌಟುಂಬಿಕ ಕಲಹವೊಂದನ್ನು ಸುಲಭದಲ್ಲಿ ಬಗೆ ಹರಿಸುವಿರಿ. ಉತ್ತಮ ಆದಾಯವಿರುವ ಕೆಲಸಗಳನ್ನು ಆಯ್ಕೆ ಮಾಡುವಿರಿ. ದಿಢೀರನೆ ಕೋಪ ಬಂದರೂ ಮಾತುಕತೆಯಿಂದ ಶಾಂತರಾಗುವಿರಿ. ಸಹನೆಯಿಂದ ಪ್ರತಿಯೊಂದು ವಿಚಾರವನ್ನು ಅರ್ಥ ಮಾಡಿಕೊಳ್ಳಬಲ್ಲಿರಿ. ತಂದೆಯವರಿಂದ ಹಣದ ಸಹಾಯ ದೊರೆಯುತ್ತದೆ. ಇಷ್ಟವಾಗುವ ಒಡವೆ ವಸ್ತ್ರಗಳನ್ನು ಕೊಳ್ಳುವಿರಿ. ಆರೋಗ್ಯದಲ್ಲಿ ತೊಂದರೆ ಉಂಟಾಗಲಿದೆ. ಪ್ರಕೃತಿ ಚಿಕಿತ್ಸೆಯ ಮೊರೆ ಹೋಗುವಿರಿ. ತಂದೆ ತಾಯಿಯ ಜೊತೆಯಲ್ಲಿ ಪ್ರವಾಸ ಕೈಗೊಳ್ಳುವಿರಿ.

ಮಕರ

ಗೆಲುವಿನ ಆಸೆಯಿಂದ ಕಷ್ಟಪಟ್ಟು ಕೆಲಸ ಮಾಡುವಿರಿ. ಮನಸ್ಸು ಒಳ್ಳೆಯದಾದರೂ ಮಿತಿಯಿಲ್ಲದ ಮಾತಿನಿಂದ ವಿವಾದಕ್ಕೆ ಒಳಗಾಗುವಿರಿ. ಸಾಲವಾಗಿ ಯಾರಿಗೂ ಹಣವನ್ನು ನೀಡದಿರಿ. ಉದ್ಯೋಗ ಮಾಡುವ ಆಸೆ ಕೈಗೂಡಲಿದೆ. ವಾಸಸ್ಥಳವನ್ನು ಬದಲಾಯಿಸುವಿರಿ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲಸುತ್ತದೆ. ಕುಟುಂಬದ ಜವಾಬ್ದಾರಿಯಿಂದ ದೂರ ಉಳಿಯುವಿರಿ. ಪತಿ ಮತ್ತು ಮಕ್ಕಳ ಜೊತೆ ವಿದೇಶಕ್ಕೆ ತೆರಳುವಿರಿ. ಆರೋಗ್ಯದ ಕಡೆ ಗಮನ ಕೊಡಿ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ನಂಬಿಕೆ ಇರದು. ಗಂಟಲಿಗೆ ಸಂಬಂಧಿಸಿದ ತೊಂದರೆ ಉಂಟಾಗುತ್ತದೆ. ವಿಶ್ರಾಂತಿಯಿಂದ ದೈಹಿಕ ಶಕ್ತಿಯನ್ನು ಮರಳಿ ಗಳಿಸುವಿರಿ.

ಕುಂಭ

ಮನದಲ್ಲಿ ಯಾವುದಾದರೊಂದು ಯೋಚನೆ ಇರುತ್ತದೆ. ಕೆಲಸ ಕಾರ್ಯಗಳಲ್ಲಿ ಸುಲಭವಾಗಿ ಜಯ ಗಳಿಸುವಿರಿ. ನಿಮ್ಮ ತಾಯಿ ಅಥವ ಅತ್ತೆಯ ಆರೊಗ್ಯದಲ್ಲಿ ಏರಿಳಿತ ಇರಲಿದೆ. ನಿಮ್ಮನ್ನು ನೋಡಿ ಅಸೂಯೆ ಪಡುವ ಜನರಿರುತ್ತಾರೆ. ಕುಟುಂಬದ ಹಣಕಾಸಿನ ವಿಚಾರಗಳನ್ನು ರಹಸ್ಯವಾಗಿಡುವಿರಿ. ಆತ್ಮವಿಶ್ವಾಸದಿಂದ ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಕಾಣುವಿರಿ. ಎಲ್ಲರನ್ನೂ ಅನುಮಾನ ದೃಷ್ಟಿಯಿಂದ ನೋಡುವಿರಿ. ಕುಟುಂಬದ ಆದಾಯ ಹೆಚ್ಚಿಸುವ ಸಲುವಾಗಿ ವ್ಯಾಪಾರವೊಂದನ್ನು ಆರಂಭಿಸುವಿರಿ. ಬರಿಮಾತಿನಿಂದ ತಾಯಿಯವರ ಮನೆತನದ ಆಸ್ತಿಯಲ್ಲಿ ಪಾಲು ಪಡೆಯುವಿರಿ. ವಾಹನದಿಂದ ತೊಂದರೆ ಉಂಟಾಗಬಹುದು.

ಮೀನ

ಶಾಂತಿ ಸಂಯಮದಿಂದ ಕಂಡರೂ ಮಾತಿನಲ್ಲಿ ನಿಮ್ಮನ್ನು ಯಾರೂ ಗೆಲ್ಲಲಾಗುವುದಿಲ್ಲ. ಕುಟುಂಬದ ಆದಾಯದಲ್ಲಿ ತೊಂದರೆ ಬಾರದು. ನಿಮ್ಮ ಮಾತಿನ ಮೇಲೆ ಎಲ್ಲರಿಗೂ ನಂಬಿಕೆ ಇರುತ್ತದೆ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಅನಿರೀಕ್ಷಿತ ಧನಲಾಭವಿರುತ್ತದೆ. ನಿಮ್ಮಿಂದ ಕುಟುಂಬದಲ್ಲಿ ಶಾಂತಿ ನೆಮ್ಮದಿ ಉಂಟಾಗುತ್ತದೆ. ಉದ್ಯೋಗದಲ್ಲಿ ನಿರೀಕ್ಷಿತ ಮಟ್ಟ ತಲುಪುವಿರಿ. ಕುಟುಂಬದ ಸೌಖ್ಯಕ್ಕಾಗಿ ಸ್ವಂತ ಸುಖ ಸಂತೋಷವನ್ನು ಮರೆಯುವಿರಿ. ಮಹಿಳೆಯರ ಸ್ವಾಸ್ಥ್ಯ ಕಾಪಾಡಲು ಅಗತ್ಯವಾದ ಸಲಹಾ ಕೇಂದ್ರವನ್ನು ಆರಂಭಿಸುವಿರಿ. ಒಮ್ಮೆ ತೆಗೆದುಕೊಂಡ ತೀರ್ಮಾನವನ್ನು ಬದಲಿಸುವುದಿಲ್ಲ. ಸೋದರರ ಸಹಾಯ ದೊರೆಯುತ್ತದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)