ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸ್ವಂತ ಬಳಕೆಗೆ ಹೊಸ ವಾಹನ ಕೊಳ್ಳುವಿರಿ, ಕುಟುಂಬದ ಸದಸ್ಯರೊಂದಿಗೆ ಧಾರ್ಮಿಕ ಪ್ರವಾಸಕ್ಕೆ ತೆರಳುವಿರಿ; ಸ್ತ್ರೀ ವಾರ ಭವಿಷ್ಯ

ಸ್ವಂತ ಬಳಕೆಗೆ ಹೊಸ ವಾಹನ ಕೊಳ್ಳುವಿರಿ, ಕುಟುಂಬದ ಸದಸ್ಯರೊಂದಿಗೆ ಧಾರ್ಮಿಕ ಪ್ರವಾಸಕ್ಕೆ ತೆರಳುವಿರಿ; ಸ್ತ್ರೀ ವಾರ ಭವಿಷ್ಯ

Women horoscope: ಸ್ತ್ರೀ ವಾರ ಭವಿಷ್ಯ (ಜುಲೈ 5 ರಿಂದ ಜುಲೈ 11ವರೆಗೆ) ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಈ ವಾರದ ಸ್ತ್ರೀ ಭವಿಷ್ಯ ಇಲ್ಲಿದೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ಸ್ವಂತ ಬಳಕೆಗೆ ಹೊಸ ವಾಹನ ಕೊಳ್ಳುವಿರಿ, ಕುಟುಂಬದ ಸದಸ್ಯರೊಂದಿಗೆ ಧಾರ್ಮಿಕ ಪ್ರವಾಸಕ್ಕೆ ತೆರಳುವಿರಿ; ಸ್ತ್ರೀ ವಾರ ಭವಿಷ್ಯ
ಸ್ವಂತ ಬಳಕೆಗೆ ಹೊಸ ವಾಹನ ಕೊಳ್ಳುವಿರಿ, ಕುಟುಂಬದ ಸದಸ್ಯರೊಂದಿಗೆ ಧಾರ್ಮಿಕ ಪ್ರವಾಸಕ್ಕೆ ತೆರಳುವಿರಿ; ಸ್ತ್ರೀ ವಾರ ಭವಿಷ್ಯ

ಸ್ತ್ರೀ ವಾರ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (Women Horoscope 5th July to 11th July 2024).

ಮೇಷ

ಮನದಲ್ಲಿರುವ ಆಸೆಗಳು ಈಡೇರಲಿವೆ. ಉದ್ಯೋಗಿಗಳಿಗೆ ಉನ್ನತ ಮೂಲಗಳಿಂದ ಶುಭವರ್ತಮಾನವೊಂದು ಬರಲಿದೆ. ಯಾರೊಬ್ಬರ ಮೇಲೂ ಅವಲಂಬಿತರಾಗದೆ ಸ್ವಂತ ನಿರ್ಣಯವನ್ನು ತೆಗೆದುಕೊಳ್ಳಬಲ್ಲಿರಿ. ಕುಟುಂಬದ ಹಣಕಾಸಿನ ಜವಾಬ್ದಾರಿ ನಿಮ್ಮದಾಗುತ್ತದೆ. ಪತಿಯೊಂದಿಗೆ ಉತ್ತಮ ಪ್ರೀತಿ ಬಾಂಧವ್ಯ ಇರುತ್ತದೆ. ತವರು ಮನೆಯಲ್ಲಿನ ಭೂ ವಿವಾದವು ನಿಮ್ಮ ಮಧ್ಯಸ್ಥಿಕೆಯಿಂದ ಕೊನೆಯಾಗಲಿದೆ. ಮಕ್ಕಳ ವಿಚಾರದಲ್ಲಿ ನಿಮ್ಮ ನಿಲುವು ಮತ್ತು ತೀರ್ಮಾನಗಳೇ ಅಂತಿಮವಾಗುತ್ತದೆ. ಕೋಪಕ್ಕೆ ಒಳಗಾಗದೆ ಸದಾಕಾಲ ಶಾಂತಿ ಸಂಯಮದಿಂದ ವರ್ತಿಸುವಿರಿ. ಖರ್ಚು ವೆಚ್ಚದ ಮೇಲೆ ಹಿಡಿತಾ ಸಾಧಿಸುವಲ್ಲಿ ಯಶಸ್ವಿಯಾಗುವಿರಿ. ಕುಟುಂಬದ ದೊಡ್ಡ ಜವಾಬ್ದಾರಿಯು ನಿಮ್ಮ ಹೇಗಲೇರುತ್ತದೆ.

ವೃಷಭ

ಉದ್ಯೋಗದಲ್ಲಿ ಉತ್ತಮ ಸುಧಾರಣೆ ಕಂಡುಬರುತ್ತದೆ. ಹಿರಿಯ ಅಧಿಕಾರಿಗಳು ನಿಮ್ಮ ಪರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಹಟದ ಸ್ವಭಾವ ತೊರೆದರೆ ಜೀವನದಲ್ಲಿ ಶಾಂತಿ ನೆಮ್ಮದಿ ಇರುತ್ತದೆ. ಕೃಷಿ ಆಧಾರಿತ ಸೇವೆಗಳಲ್ಲಿ ತೊಡಗುವಿರಿ. ಕುಟುಂಬದ ಹಿರಿಯರ ಜವಾಬ್ದಾರಿಯಿಂದ ಸ್ವಂತ ಆಸೆ ಆಕಾಂಕ್ಷೆಗಳನ್ನು ಮರೆಯಬೇಕಾಗುತ್ತದೆ. ನಿಮ್ಮ ಮನಸ್ಸಿಗೆ ಸರಿ ಎನಿಸುವ ಕೆಲಸ ಕಾರ್ಯಗಳನ್ನು ಮಾತ್ರ ಮಾಡಲು ಇಚ್ಚಿಸುವಿರಿ. ಪತಿಯಿಂದ ನಿಮಗೆ ಇಷ್ಟವಾಗುವಂತಹ ಒಡವೆ ವಸ್ತ್ರಗಳು ಉಡುಗೊರೆಯಾಗಿ ದೊರೆಯಲಿವೆ. ಮಕ್ಕಳ ಜೊತೆ ಹುಟ್ಟೂರಿಗೆ ತೆರಳುವಿರಿ. ಸ್ವಂತ ಬಳಕೆಗೆ ಹೊಸ ವಾಹನಕೊಳ್ಳುವ ಕನಸು ನನಸಾಗಲಿದೆ.

ಮಿಥುನ

ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಧೈರ್ಯದಿಂದ ಗೆಲ್ಲುವಿರಿ. ಕ್ರೀಡಾಸ್ಪರ್ಧಿಗಳಿಗೆ ವಿಶೇಷ ಅವಕಾಶಗಳು ದೊರೆಯಲಿವೆ. ಪ್ರಾಮಾಣಿಕೆಯಿಂದ ನಡೆದುಕೊಳ್ಳುವ ಕಾರಣ ಎಲ್ಲರ ಬೆಂಬಲ ಗಳಿಸುವಿರಿ. ಮಹಿಳೆಯರ ಸಮಸ್ಯೆಗಳನ್ನು ಬಗೆಹರಿಸಲು ಸಂಘ ಸಂಸ್ಥೆಗಳನ್ನು ಆರಂಭಿಸುವಿರಿ. ಆರೋಗ್ಯದಲ್ಲಿ ಏರಿಳಿತ ಕಂಡು ಬರುತ್ತದೆ. ಹಣಕಾಸಿನ ವ್ಯವಹಾರದಲ್ಲಿ ವಿಶೇಷವಾದ ಬುದ್ಧಿ ಚಾತುರ್ಯ ಇರುತ್ತದೆ. ನಿಮ್ಮಿಂದಾಗಿ ಮನೆಯಲ್ಲಿ ಸಂತೋಷದ ವಾತಾವರಣವಿರುತ್ತದೆ. ಹಣಕಾಸು ಸಂಸ್ಥೆಯಲ್ಲಿ ಉದ್ಯೋಗ ದೊರೆಯಲಿದೆ. ಅನಾವಶ್ಯಕ ಖರ್ಚು ವೆಚ್ಚಗಳು ಬೇಸರ ಮೂಡಿಸುತ್ತದೆ. ಅನಿವಾರ್ಯವಾಗಿ ಸೋದರ ಅಥವಾ ಸೋದರಿಗೆ ಹಣದ ಸಹಾಯ ಮಾಡುವಿರಿ. ವೃಥಾ ಕಾಲಹರಣ ಮಾಡುವವರ ಸ್ನೇಹ ಬೆಳೆಸುವುದಿಲ್ಲ.

ಕಟಕ

ಕೆಲಸ ಕಾರ್ಯಗಳಲ್ಲಿ ಸುಲಭವಾಗಿ ಯಶಸ್ಸನ್ನು ಗಳಿಸುವಿರಿ. ನಂಬಲು ಅನರ್ಹವಾದ ಮೂಲಗಳಿಂದ ನಿಮಗೆ ಹಣದ ಸಹಾಯ ದೊರೆಯುತ್ತದೆ. ಉದ್ಯೋಗದಲ್ಲಿನ ಲೋಪ ದೋಷಗಳು ಮರೆಯಾಗಿ ಪ್ರಗತಿಯ ಕಡೆ ಸಾಗುವಿರಿ. ಅನಿರೀಕ್ಷಿತ ಹಣಕಾಸಿನ ಸಹಾಯದಿಂದ ನೆಮ್ಮದಿ ಕಾಣುವಿರಿ. ನಂಬಿ ಬಂದ ಜನರಿಗೆ ನಿರಾಸೆ ಮಾಡುವುದಿಲ್ಲ. ದಾಂಪತ್ಯ ಜೀವನದಲ್ಲಿ ನಿಮ್ಮಿಂದಾಗಿ ಉತ್ತಮ ಅನ್ಯೋನ್ಯತೆ ಮೂಡುತ್ತದೆ. ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಕುಟುಂಬದ ಹಿರಿಯರ ಮನಸ್ಸನ್ನು ಗೆಲ್ಲಲು ವಿಫಲರಾಗುವಿರಿ. ಕುಟುಂಬದ ಆಸ್ತಿ ಹಂಚಿಕೆಯ ವಿಚಾರದಲ್ಲಿ ಇದ್ದ ವಿವಾದವನ್ನು ಬಗೆಹರಿಸುವಿರಿ. ಆರೋಗ್ಯದ ಬಗ್ಗೆ ಗಮನಹರಿಸುವುದು ಒಳ್ಳೆಯದು.

ಸಿಂಹ

ಆರಂಭದಲ್ಲಿ ಕಷ್ಟವೆನಿಸಿದರೂ ಸ್ವಂತ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಜೀವನದಲ್ಲಿ ಉತ್ತಮ ಮುನ್ನಡೆ ಕಾಯ್ದುಕೊಳ್ಳುವಿರಿ. ಉದ್ಯೋಗಿಗಳಿಗೆ ಉನ್ನತ ಅಧಿಕಾರ ದೊರೆಯುತ್ತದೆ. ಜವಾಬ್ದಾರಿಯು ಹೆಚ್ಚುವ ಕಾರಣ ಬಿಡುವಿಲ್ಲದೆ ಕಾರ್ಯ ನಿರ್ವಹಿಸುವಿರಿ. ಕುಟುಂಬದ ಆಗುಹೋಗುಗಳ ಬಗ್ಗೆ ಗಮನ ಹರಿಸಲು ಸಾಧ್ಯ ವಾಗುವುದಿಲ್ಲ. ಪತಿಯ ಸಹಾಯ ಸಹಕಾರ ಇರುವ ಕಾರಣ ಯಾವುದೇ ತೊಂದರೆ ಎದುರಾಗದು. ಸಾಕು ಪ್ರಾಣಿಗಳನ್ನು ಆರೈಕೆ ಮಾಡುವಲ್ಲಿ ಸಮಯ ಕಳೆಯುವಿರಿ. ನಿಮಗೆ ಇಷ್ಟ ಎನಿಸುವ ಚಿನ್ನ ಬೆಳ್ಳಿಯ ಆಭರಣಗಳನ್ನು ಕೊಳ್ಳುವಿರಿ. ಸೋದರಿಯಿಂದ ನಿಮಗೆ ಹಣದ ಸಹಾಯ ದೊರೆಯುತ್ತದೆ.

ಕನ್ಯಾ

ಕುಟುಂಬದ ಹಿರಿಯರ ಜೊತೆ ಧಾರ್ಮಿಕ ಕೇಂದ್ರಕ್ಕೆ ಪ್ರವಾಸಕ್ಕೆ ತೆರಳುವಿರಿ. ಉದ್ಯೋಗ ಬದಲಾಯಿಸುವ ಯೋಚನೆ ಕೈಗೂಡಲಿದೆ. ಆತ್ಮೀಯರ ಸಹಾಯದಿಂದ ಹೊಸ ಉದ್ಯೋಗ ದೊರೆಯುತ್ತದೆ. ನಿಮ್ಮಲ್ಲಿರುವ ಪ್ರತಿಭೆಗೆ ತಕ್ಕಂತಹ ಗೌರವ ಲಭಿಸುತ್ತದೆ. ಸ್ವಂತ ಉದ್ದಿಮೆ ಇದ್ದಲ್ಲಿ ನಿಮ್ಮ ಪರಿಶ್ರಮಕ್ಕೆ ತಕ್ಕಷ್ಟು ವರಮಾನ ದೊರೆಯುತ್ತದೆ. ಸಮಾಜದಲ್ಲಿ ಗೌರವಯು ಸ್ಥಾನಮಾನ ದೊರೆಯಲಿದೆ. ಪತಿಯಿಂದ ಉತ್ತಮ ಸಹಾಯ ಸಹಕಾರ ದೊರೆಯುತ್ತದೆ. ಯಾರಿಂದಲೂ ಹಣದ ಸಹಾಯ ನಿರೀಕ್ಷಿಸುವುದಿಲ್ಲ. ಸ್ವಂತ ವಾಹನ ಕೊಳ್ಳುವಿರಿ. ವಿಶೇಷ ತಾಂತ್ರಿಕ ತರಬೇತಿ ಹೊಂದಿರುವವರಿಗೆ ಉತ್ತಮ ಉದ್ಯೋಗ ದೊರೆಯುತ್ತದೆ. ಸಣ್ಣ ಪುಟ್ಟ ತಪ್ಪುಗಳನ್ನು ಟೀಕಿಸುವುದರಿಂದ ಆತ್ಮೀಯರ ಸ್ನೇಹವನ್ನು ಕಳೆದುಕೊಳ್ಳಬೇಕಾಗುತ್ತದೆ.

ತುಲಾ

ಕುಟುಂಬದ ಕೆಲಸ ಕಾರ್ಯಗಳ ನಡುವೆ ವಿಶ್ರಾಂತಿಯ ಕೊರತೆ ಕಂಡುಬರುತ್ತದೆ. ಉದ್ಯೋಗಸ್ಥರು ತಮ್ಮ ಕಾರ್ಯ ಕ್ಷೇತ್ರದಲ್ಲಿ ಉನ್ನತ ಮಟ್ಟ ತಲುಪುತ್ತಾರೆ. ಸಮಾಜದಲ್ಲಿ ಗೌರವಯುತ ಸ್ಥಾನಮಾನ ದೊರೆಯುತ್ತದೆ. ಗುರು ಹಿರಿಯರ ಭೇಟಿಯಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಯಾತ್ರಾ ಸ್ಥಳಕ್ಕೆ ಮಕ್ಕಳೊಂದಿಗೆ ಭೇಟಿ ನೀಡುವಿರಿ. ಪತಿಯ ಒಡನಾಟವು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ದಾಂಪತ್ಯ ಜೀವನವು ಸುಖಮಯವಾಗಿರುತ್ತದೆ. ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಆತುರದಿಂದ ತೆಗೆದುಕೊಳ್ಳುವ ನಿರ್ಧಾರದಿಂದ ವಿವಾದಕ್ಕೆ ಸಿಲುಕುವಿರಿ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಎಲ್ಲರನ್ನೂ ತೊರೆದು ಪರಸ್ಥಳದಲ್ಲಿ ನೆಲೆಸಲಿದ್ದೀರಿ.

ವೃಶ್ಚಿಕ

ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ಆತ್ಮೀಯರ ಸಹಾಯದಿಂದ ಪಾಲುದಾರಿಕೆ ವ್ಯಾಪಾರವನ್ನು ಆರಂಭಿಸುವಿರಿ. ಕುಟುಂಬದ ಜವಾಬ್ದಾರಿ ಒಪ್ಪಿಕೊಳ್ಳುವುದಿಲ್ಲ. ಶಾಂತಿ ನೆಮ್ಮದಿಯ ಜೀವನ ಇರುತ್ತದೆ. ಸರ್ಕಾರದ ಅಧೀನದಲ್ಲಿ ಸಣ್ಣಪುಟ್ಟ ವ್ಯಾಪಾರವನ್ನು ಆರಂಭಿಸುವಿರಿ. ಸ್ವಂತ ಜಮೀನು ಅಥವಾ ಮನೆಯನ್ನು ಕೊಳ್ಳಲು ಹಿರಿಯ ಸೋದರಿಯಿಂದ ಸಹಾಯ ಪಡೆಯುವಿರಿ. ತಾಯಿಯವರ ಆರೋಗ್ಯದಲ್ಲಿ ಏರಿಳಿತ ಕಂಡು ಬರಲಿದೆ. ಮಹಿಳೆಯರ ಸ್ವಾವಲಂಬನಿಗಾಗಿ ಸಂಘ ಸಂಸ್ಥೆಯನ್ನು ಆರಂಭಿಸುವಿರಿ. ಹೊಸ ಹಣಕಾಸಿನ ಯೋಜನೆಯಿಂದ ಪತಿಗೆ ನೆರವಾಗುವಿರಿ. ಮಕ್ಕಳು ನಿಮ್ಮ ಆಸೆ ಆಕಾಂಕ್ಷೆಯನ್ನು ಪೂರೈಸುವ ಹಾದಿಯಲ್ಲಿ ಸಾಗುತ್ತಾರೆ. ಕೋಪವನ್ನು ಕಡಿಮೆ ಮಾಡಿಕೊಂಡರೆ ಎದುರಾಗುವ ವಿವಾದವನ್ನು ತಪ್ಪಿಸಬಹುದು.

ಧನಸ್ಸು

ಕುಟುಂಬದಲ್ಲಿ ಹಣದ ಕೊರತೆ ಇರಲಿದೆ. ನೀವು ತೆಗೆದುಕೊಳ್ಳುವ ಕಠಿಣ ನಿರ್ಧಾರಗಳು ಕುಟುಂಬದಲ್ಲಿ ಬೇಸರವನ್ನು ಉಂಟುಮಾಡುತ್ತದೆ. ಉದ್ಯೋಗಿಗಳಿಗೆ ಸಹೋದ್ಯೋಗಿಗಳಿಂದ ಸಂಪೂರ್ಣ ಸಹಾಯ ಸಹಕಾರ ದೊರೆಯುತ್ತದೆ. ಕುಟುಂಬದ ಗೌರವವನ್ನು ಕಾಪಾಡುವ ಕೆಲಸ ಮಾಡುವಿರಿ. ಆತ್ಮೀಯರಿಂದ ಸಣ್ಣಪ್ರಮಾಣದ ಉದ್ಧಿಮೆ ಆರಂಭಿಸಲು ಸಹಾಯ ದೊರೆಯಲಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಯಾವುದೇ ವಿಚಾರದಲ್ಲಿ ಸ್ಥಿರವಾದ ನಿಲುವು ತಾಳುವುದಿಲ್ಲ. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ ವ್ಯಾಯಾಮವನ್ನು ಅವಲಂಬಿಸುವಿರಿ. ದಾಂಪತ್ಯದಲ್ಲಿ ಪರಸ್ಪರ ಹೊಂದಾಣಿಕೆ ಇರುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷೆಗೂ ಮೀರಿದ ಯಶಸ್ಸು ದೊರೆಯುತ್ತದೆ.

ಮಕರ

ಉದ್ಯೋಗದಲ್ಲಿ ಉಂಟಾಗುವ ಹೊಸತನಕ್ಕೆ ಹೊಂದಿಕೊಂಡು ನಡೆಯುವಿರಿ. ನಿಮ್ಮ ಚುರುಕುತನಕ್ಕೆ ಎಲ್ಲರ ಮೆಚ್ಚುಗೆ ವ್ಯಕ್ತವಾಗುತ್ತದೆ. ದುಡುಕಿನ ಮಾತಿನಿಂದ ಹೆತ್ತವರೊಂದಿಗೆ ಮನಸ್ತಾಪ ಉಂಟಾಗುತ್ತದೆ. ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಲಿದ್ದಾರೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಬಹುದು. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ದೊರೆಯುತ್ತದೆ. ವಿದ್ಯಾಭ್ಯಾಸ ಮುಗಿಯುವ ಮುನ್ನವೇ ಉದ್ಯೋಗ ಲಭಿಸುತ್ತದೆ. ದಾಂಪತ್ಯ ಜೀವನದಲ್ಲಿ ಪರಸ್ಪರ ಅರ್ಥ ಮಾಡಿಕೊಂಡು ನಡೆಯಬೇಕು. ಸ್ವಂತ ಬಳಕೆಗಾಗಿ ವಾಹನವೊಂದನ್ನು ಕೊಳ್ಳುವಿರಿ. ಪತಿಯ ಮಧ್ಯಸ್ಥಿಕೆಯಿಂದ ವಿವಾದವೊಂದು ಬಗೆಹರಿಯಲಿದೆ. ಶೀತದ ತೊಂದರೆಯಿಂದ ಬಳಲುವಿರಿ.

ಕುಂಭ

ಕೆಲಸ ಕಾರ್ಯಗಳು ಅತಿ ನಿಧಾನಗತಿಯಲ್ಲಿ ಸಾಗಲಿವೆ. ಆದರೆ ಹಟದ ಬುದ್ಧಿಯಿಂದಾಗಿ ಯಶಸ್ಸನ್ನು ಕಾಣುವಿರಿ. ನಿಮ್ಮ ಮನಸ್ಸಿನ ನೋವನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಕುಟುಂಬದ ಎಲ್ಲರ ಜೊತೆ ಸಂತೋಷದಿಂದ ಬಾಳ್ವೆ ನಡೆಸುವಿರಿ. ಹೊಸ ಕೆಲಸ ಕಾರ್ಯಗಳಿಂದ ಪರಿಸ್ಥಿತಿ ತಿಳಿಗೊಳ್ಳುತ್ತದೆ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಹಣದ ಕೊರತೆ ಉಂಟಾಗುತ್ತದೆ. ಬಹು ಪ್ರಯಾಸದಿಂದ ಮನೆಯನ್ನು ಕೊಳ್ಳುವ ವಿಚಾರಕ್ಕೆ ಚಾಲನೆ ದೊರೆಯುತ್ತದೆ. ತಾಯಿಯವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ. ಸೋದರದ ನಡುವೆ ಇದ್ದ ಬಿನ್ನಾಭಿಪ್ರಾಯಕ್ಕೆ ಅಂತ್ಯ ಹಾಡುವಿರಿ. ಪತಿಯ ಹಣಕಾಸಿನ ವ್ಯವಹಾರದಲ್ಲಿ ಸಲಹೆ ನೀಡುವಿರಿ.

ಮೀನ

ಮನಸ್ಸಿನಲ್ಲಿ ಕುಟುಂಬದ ವಿಚಾರಗಳ ಬಗ್ಗೆ ಮಾನಸಿಕ ಒತ್ತಡವಿರುತ್ತದೆ. ಉದ್ಯೋಗಿಗಳಿಗೆ ಕೆಲಸ ಕಾರ್ಯಗಳ ಒತ್ತಡ ಇರುತ್ತದೆ. ಇದರೊಂದಿಗೆ ಮಕ್ಕಳ ಜವಾಬ್ದಾರಿಯು ನಿಮ್ಮದಾಗುತ್ತದೆ. ನಿಮ್ಮಲ್ಲಿರುವ ಆತ್ಮವಿಶ್ವಾಸವು ಯಶಸ್ಸಿನ ಹಾದಿಯಲ್ಲಿ ನಡೆಸುತ್ತದೆ. ಪ್ರತಿಯೊಂದಿಗೆ ಪ್ರೀತಿ ವಿಶ್ವಾಸದಿಂದ ಬಾಳುವಿರಿ. ನಿಮ್ಮ ಮನಸ್ಸಿನ ಆಸೆ ಆಕಾಂಕ್ಷೆಗಳನ್ನು ಸುಲಭವಾಗಿ ಈಡೇರಿಸಿಕೊಳ್ಳುವಿರಿ. ಅನಿರೀಕ್ಷಿತವಾಗಿ ಆತ್ಮೀಯರ ಆಗಮನ ಸಂತೋಷವನ್ನು ಹೆಚ್ಚಿಸುತ್ತದೆ. ಖ್ಯಾತ ಸಂಸ್ಥೆಯಿಂದ ಉದ್ಯೋಗಾವಕಾಶ ದೊರೆಯುತ್ತದೆ. ಕೃಷಿ ಸಂಬಂಧಿತ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಮೂಡುತ್ತದೆ. ನೀರಿರುವ ಪ್ರದೇಶಗಳಿಗೆ ಕುಟುಂಬದ ಸದಸ್ಯರ ಜೊತೆ ವಿಹಾರಾರ್ಥವಾಗಿ ತೆರಳುವಿರಿ. ಆರೋಗ್ಯ ಸಮಸ್ಯೆ ದೂರವಾಗುತ್ತದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.