ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ದಾಂಪತ್ಯ ಸಮಾಲೋಚನಾ ಕೇಂದ್ರವನ್ನು ಆರಂಭಿಸಿ ಯಶಸ್ಸು ಗಳಿಸುವಿರಿ; ಮೇ 10 ರಿಂದ 16ವರೆಗಿನ ಸ್ತ್ರೀ ವಾರ ಭವಿಷ್ಯ

ದಾಂಪತ್ಯ ಸಮಾಲೋಚನಾ ಕೇಂದ್ರವನ್ನು ಆರಂಭಿಸಿ ಯಶಸ್ಸು ಗಳಿಸುವಿರಿ; ಮೇ 10 ರಿಂದ 16ವರೆಗಿನ ಸ್ತ್ರೀ ವಾರ ಭವಿಷ್ಯ

Weekly Women horoscope: ಸ್ತ್ರೀ ವಾರ ಭವಿಷ್ಯ (ಮೇ 10 ರಿಂದ ಮೇ 16ವರೆಗೆ) ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಈ ವಾರದ ಸ್ತ್ರೀ ಭವಿಷ್ಯ ಇಲ್ಲಿದೆ.

ಮೇ 10 ರಿಂದ 16ವರೆಗಿನ ಸ್ತ್ರೀ ವಾರ ಭವಿಷ್ಯ
ಮೇ 10 ರಿಂದ 16ವರೆಗಿನ ಸ್ತ್ರೀ ವಾರ ಭವಿಷ್ಯ

ಸ್ತ್ರೀ ವಾರ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (Women Horoscope 10 May to 16th May 2024).

ಮೇಷ

ನಿಮ್ಮ ಪ್ರೀತಿಯ ಮಾತಿನಿಂದ ಎಲ್ಲರೂ ನಿಮ್ಮತ್ತ ಆಕರ್ಷಿತರಾಗುತ್ತಾರೆ. ಮನಸ್ಸಿಗೆ ಇಷ್ಟ ಎನಿಸುವ ಕೆಲಸಗಳಿಗೆ ಮೊದಲ ಆದ್ಯತೆ ನೀಡುವಿರಿ. ಕುಟುಂಬದ ಹಣಕಾಸಿನ ವ್ಯವಸ್ಥೆಯನ್ನು ಸರಿ ದಾರಿಯಲ್ಲಿ ನಡೆಸುವಿರಿ. ಸ್ಥಿರವಾದ ತೀರ್ಮಾನಗಳು ಜೀವನದಲ್ಲಿನ ಕಷ್ಟ ನಷ್ಟಗಳನ್ನು ದೂರ ಮಾಡುತ್ತದೆ. ನಿಮ್ಮ ಮಾತಿಗೆ ಎದುರಾಡಿದರೆ ಕೋಪಕ್ಕೆ ಒಳಗಾಗುವಿರಿ. ಯೋಚನೆಗೆ ಆಸ್ಪದ ನೀಡದೆ ಬಾಳುವಿರಿ. ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ನಿಮ್ಮದಾಗುತ್ತದೆ. ಆತ್ಮೀಯರ ಸಹಾಯವನ್ನು ನಯವಾಗಿ ತಿರಸ್ಕರಿಸುವಿರಿ. ಉದ್ಯೋಗಸ್ಥರು ಹಿರಿ ಅಧಿಕಾರಿಗಳಿಂದ ಮೆಚ್ಚುಗೆ ಗಳಿಸುತ್ತಾರೆ. ಆರೋಗ್ಯದ್ದಲ್ಲಿ ಯಾವುದೇ ತೊಂದರೆ ಬಾರದು.

ವೃಷಭ

ತಪ್ಪನ್ನು ಗ್ರಹಿಸಿ ನಿಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳುವಿರಿ. ತಂದೆ ಮಾಡುತ್ತಿರುವ ವ್ಯಾಪಾರವನ್ನು ಮುಂದುವರೆಸುವ ಅವಕಾಶ ದೊರೆಯುತ್ತದೆ. ಕುಟುಂಬದಲ್ಲಿ ನಿಮ್ಮ ಪ್ರೀತಿ ವಿಶ್ವಾಸದಿಂದ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಪತಿಯ ಆರೋಗ್ಯದ ಸಮಸ್ಯೆ ನಿವಾರಣೆ ಮಾಡುವಿರಿ. ನುರಿತ ಜನಗಳ ಸಹಾಯದಿಂದ ಉದ್ಯೋಗದಲ್ಲಿನ ವಿವಾದವೊಂದು ದೂರವಾಗುವುದು. ಮಕ್ಕಳ ಭವಿಷ್ಯಕ್ಕಾಗಿ ಹಣ ಉಳಿಸಲು ಯೋಜನೆಯನ್ನು ರೂಪಿಸುವಿರಿ. ಕುಟುಂಬದ ಜವಾಬ್ದಾರಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವಿರಿ. ಹೊಸ ಒಡವೆ ವಸ್ತ್ರಗಳನ್ನು ಕೊಳ್ಳುವಿರಿ. ಸ್ವಾಭಿಮಾನದ ಕಾರಣ ಸಣ್ಣ ಪುಟ್ಟ ಖರ್ಚನ್ನು ಭರಿಸಲು ವ್ಯಾಪಾರ ಆರಂಭಿಸುವಿರಿ.

ಮಿಥುನ

ನಿಮ್ಮೆಲ್ಲಾ ಕೆಲಸದಲ್ಲಿ ಪತಿಯ ಸಹಕಾರ ಇರುತ್ತದೆ. ಬದಲಾಯಿಸುವ ಮನಸ್ಸಿನಿಂದ ಕೆಲಸ ಕಾರ್ಯಗಳು ಅಪೂರ್ಣಗೊಳ್ಳುತ್ತವೆ. ಅನಿರೀಕ್ಷಿತ ಖರ್ಚು ವೆಚ್ಚಗಳು ಇರಲಿವೆ. ಉದ್ಯೋಗಸ್ಥರಾದಲ್ಲಿ ಅನಾವಶ್ಯಕ ವಿವಾದ ಎದುರಾಗುತ್ತವೆ. ನಿಮ್ಮ ಮಕ್ಕಳ ಬದುಕಿಗೆ ಸ್ಪೂರ್ತಿಯಾಗಿ ಬಾಳುವಿರಿ. ಕೆಟ್ಟದರ ಮಧ್ಯೆ ಒಳ್ಳೆಯದನ್ನು ಹುಡುಕುವ ನೀವು ನೆಮ್ಮದಿಯಿಂದ ಬಾಳುವಿರಿ. ಸಮಾಜದಲ್ಲಿ ನಾಯಕನ ಸ್ಥಾನ ಮಾನ ಲಭಿಸುತ್ತದೆ. ಸಮಯ ದೊರೆತಾಗ ಜನಸೇವೆಯಲ್ಲಿ ತೊಡಗುವಿರಿ. ಸಣ್ಣ ಮಟ್ಟದ ವ್ಯಾಪಾರವೊಂದನ್ನು ಆರಂಭಿಸುವಿರಿ. ಸಂಸಾರದಲ್ಲಿ ಸದಾಕಾಲ ಸಂತಸ ನೆಲೆಸಿರುತ್ತದೆ. ಕಣ್ಣಿನ ದೋಷ ಇರುತ್ತದೆ.

ಕಟಕ

ತವರು ಮನೆಯಿಂದ ಉಡುಗೊರೆಯೊಂದು ಬರಲಿದೆ. ಕುಟುಂಬದ ಹಿರಿಯರ ಬಗ್ಗೆ ವಿಶೇಷ ಪ್ರೀತಿ ಕನಿಕರ ಇರುತ್ತದೆ. ಮಕ್ಕಳು ದೊರೆವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವರು. ಉದ್ಯೋಗದಲ್ಲಿ ಏರಿಳಿತ ಇದ್ದರೂ ಸರಿಯಾದ ಮಾರ್ಗವನ್ನು ಆಯ್ದುಕೊಳ್ಳುವಿರಿ. ಮಾಡುವ ಕೆಲಸ ಕಾರ್ಯಗಳ ಬಗ್ಗೆ ಕೀಳರಿಮೆ ಇರುವುದಿಲ್ಲ. ಸೋಲಲು ಒಪ್ಪದೆ ಗೆಲ್ಲಲು ಪ್ರಯತ್ನಿಸುವಿರಿ. ದಂಪತಿ ನಡುವೆ ಮಧುರವಾದ ಸಂಬಂಧ ಇರುತ್ತದೆ. ಆರೋಗ್ಯದ ಕಡೆ ಗಮನ ಇರಲಿ. ಹಣಕಾಸಿನ ವ್ಯವಹಾರದಲ್ಲಿ ಹಿನ್ನೆಡೆ ಉಂಟಾಗಬಹುದು ಎಚ್ಚರಿಕೆ ಇರಲಿ. ಗೃಹಿಣಿಯರಿಗೆ ಶುಭವರ್ತಮಾನವೊಂದು ಬರಲಿದೆ.

ಸಿಂಹ

ಒಡ ಹುಟ್ಟಿದವರಿಂದ ಉಡುಗೊರೆ ಜೊತೆಯಲ್ಲಿ ಶುಭ ಸಮಾಚಾರವೊಂದು ಬರಲಿದೆ. ಹೆಚ್ಚಿನ ಜವಾಬ್ದಾರಿಯ ಕಾರಣ ವಿಶ್ರಾಂತಿ ಕನಸಿನ ಮಾತಾಗುತ್ತದೆ. ಕುಟುಂಬದಲ್ಲಿನ ಅನ್ಯೋನ್ಯತೆ ಸಂತಸ ಮೂಡಿಸುತ್ತದೆ. ಸುಲಭವಾಗಿ ನಿಮ್ಮ ಮನದ ಅಭಿಪ್ರಾಯಗಳನ್ನು ಯಾರಿಗೂ ಹೇಳುವುದಿಲ್ಲ. ಕುಟುಂಬದ ಕೆಲಸ ಕಾರ್ಯಗಳು ನಿಮ್ಮಿಚ್ಚೆಯಂತೆ ನಡೆಯುತ್ತವೆ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ದೊರೆಯುತ್ತದೆ. ಸಿಡುಕುತನದ ಬದಲು ಶಾಂತಿಯಿಂದ ವರ್ತಿಸಿ. ಅವಶ್ಯಕತೆ ಇದ್ದಲ್ಲಿ ತೆಗೆದುಕೊಂಡ ತೀರ್ಮಾನವನ್ನು ಬದಲಾಯಿಸಲು ಹಿಂಜರಿಯುವುದಿಲ್ಲ. ಉತ್ತಮ ಆರೋಗ್ಯ ಇರುತ್ತದೆ. ಮನೆಯ ಹೊರಗೂ ಒಳಗೂ ಅಧಿಕಾರವನ್ನು ಬಯಸುವಿರಿ.

ಕನ್ಯಾ

ಮನಸ್ಸಿಗೆ ಹತ್ತಿರವಾದವರೊಂದಿಗೆ ಪ್ರೀತಿ ವಿಶ್ವಾಸದಿಂದ ಇರಲು ಬಯಸುವಿರಿ. ಅಪರೂಪವೆಂಬಂತೆ ಪತಿಯ ಜೊತೆಯಲ್ಲಿ ಹೆತ್ತವರವನ್ನು ನೋಡಲು ತವರಿಗೆ ತೆರಳುವಿರಿ. ಮಕ್ಕಳ ಆಟ ಪಾಠಗಳು ಸಂತೋಷವನ್ನು ನೀಡುತ್ತದೆ. ಉತ್ತಮ ಭಾಷಾಜ್ಞಾನದ ಕಾರಣ ಬರವಣಿಗೆಯಲ್ಲಿ ತೊಡಗುವಿರಿ. ಬಾಷಾಂತರದ ಉದ್ಯೋಗ ದೊರೆಯುವ ಸೂಚನೆಗಳಿವೆ. ಪತಿಯನ್ನು ಟೀಕಿಸದೇ ಹೋದಲ್ಲಿ ಶಾಂತಿ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ. ಹಣದ ಕೊರತೆ ನೀಗಿಸಲು ಉದ್ಯೋಗವನ್ನು ಮಾಡಲೇಬೇಕಾದ ಅನಿವಾರ್ಯತೆ ಇರುತ್ತದೆ. ಆರೋಗ್ಯದ ಬಗ್ಗೆ ಗಮನ ಇರಲಿ. ಗಣ್ಯವ್ಯಕ್ತಿಗಳ ಸ್ನೇಹ ದೊರೆಯುತ್ತದೆ. ಸ್ವಂತ ವ್ಯಾಪಾರದಲ್ಲಿ ಹಿನ್ನೆಡೆ ಉಂಟಾಗುತ್ತದೆ.

ತುಲಾ

ಆತ್ಮೀಯರ ಸಹಾಯ ದೊರೆವ ಕಾರಣ ಯಾವುದೇ ತೊಂದರೆ ಕಾಣದು. ಅದೃಷ್ಟದಿಂದ ನಿರೀಕ್ಷಿಸಿದ ಯಶಸ್ಸು ನಿಮ್ಮದಾಗಲಿದೆ. ಕುಟುಂಬದ ಸಂತೋಷದ ವಾತಾವರಣಕ್ಕೆ ಕಾರಣರಾಗುವಿರಿ. ಅತಿಥಿಗಳ ಆಗಮನದಿಂದ ವಿಶ್ರಾಂತಿಯಿಲ್ಲದೆ ಕೆಲಸ ಮಾಡಬೇಕಾಗುತ್ತದೆ. ಚುರುಕುತನದಿಂದ ಗುರಿ ಸಾಧಿಸುವಿರಿ. ನಿಮ್ಮ ಕಾರ್ಯ ನಿರ್ವಹಣೆಗೆ ಎಲ್ಲರೂ ತಲೆದೂಗುತ್ತಾರೆ. ಅನಗತ್ಯ ಖರ್ಚನ್ನು ನಿಯಂತ್ರಿಸಲು ಪ್ರಯತ್ನಿಸಿ. ಮನೆಯವರ ವಿರೋಧಕ್ಕೆ ಗುರಿಯಾಗುವಿರಿ. ತವರು ಮನೆಯಿಂದ ಹಣವು ಕಾಣಿಕೆಯ ರೂಪದಲ್ಲಿ ದೊರೆಯತ್ತದೆ. ಯಾರನ್ನೂ ಸುಲಭವಾಗಿ ನಂಬುವುದಿಲ್ಲ. ದಾಂಪತ್ಯ ಜೀವನದಲ್ಲಿ ಒಮ್ಮತದ ಬಲವಿರುತ್ತದೆ. ಕುಟುಂದಲ್ಲಿ ನಿಮ್ಮ ಸಹಾಯದಿಂದ ಮಂಗಳ ಕಾರ್ಯವೊಂದು ಯಶಸ್ವಿಯಾಗುತ್ತದೆ.

ವೃಶ್ಚಿಕ

ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಅತಿಯಾದ ಕೋಪದಿಂದ ತೊಂದರೆ ಅನುಭವಿಸುವಿರಿ. ಶಾಂತಿ ಸಂಯಮದಿಂದ ವರ್ತಿಸಿದಲ್ಲಿ ಸಂತಸದ ಜೀವನ ನಿಮ್ಮದಾಗುತ್ತದೆ. ದೂರದ ಸಂಬಂಧಿಯೊಬ್ಬರಿಂದ ಶುಭ ವರ್ತಮಾನವೊಂದು ಬರಲಿದೆ. ಹಣಕಾಸಿನ ಕೊರತೆ ಕಡಿಮೆ ಆಗಲಿದೆ. ವೃತ್ತಿಕ್ಷೇತ್ರದಲ್ಲಿ ಉನ್ನತ ಸ್ಥಾನ ಲಭಿಸುತ್ತದೆ. ನೇರ ನಿಷ್ಠುರದ ಮಾತಿನಿಂದಾಗಿ ಆತ್ಮೀಯರು ದೂರವಾಗುತ್ತಾರೆ. ಮಕ್ಕಳೊಂದಿಗೆ ಅನ್ಯೋನ್ಯತೆ ಇರುತ್ತದೆ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯವಿರುತ್ತದೆ. ಬೇರೆಯವರ ಹಣದ ವ್ಯವಹಾರದಲ್ಲಿ ಮಧ್ಯಸ್ಥಿಕೆ ವಹಿಸಿದರೆ ತೊಂದರೆ ಅನುಭವಿಸುವಿರಿ. ಸಾಲದ ವ್ಯವಹಾರ ಬೇಡ.

ಧನಸ್ಸು

ಬೇಸರದಿಂದಾಗಿ ಮನದಲ್ಲಿ ವೈರಾಗ್ಯದ ಭಾವನೆ ಮೂಡುತ್ತದೆ. ಆದರೆ ಪತಿಯ ಸಹಕಾರದಿಂದ ಸಹಜ ಸ್ಥಿತಿಗೆ ಮರಳುವಿರಿ. ಪ್ರಯೋಜನವಿಲ್ಲದ ವಿಚಾರಗಳಿಗೆ ಯೋಚನೆ ಮಾಡುವಿರಿ. ಹಣಕಾಸಿನ ವಿಚಾರದಲ್ಲಿ ಯಾವುದೇ ತೊಂದರೆ ಇಲ್ಲದು. ವಿದ್ಯಾರ್ಥಿಗಳು ಉನ್ನತ ಸ್ಥಾನವನ್ನು ಗಳಿಸುತ್ತಾರೆ. ಎದುರಾಗುವ ವಾದ ವಿವಾದಗಳನ್ನು ಬುದ್ಧಿವಂತಿಕೆಯಿಂದ ದೂರ ಮಾಡುವಿರಿ. ದಾಂಪತ್ಯ ಸಮಾಲೋಚನಾ ಕೇಂದ್ರವನ್ನು ಆರಂಭಿಸಿ ಯಶಸ್ಸನ್ನು ಗಳಿಸುವಿರಿ. ಉದ್ಯೋಗಸ್ಥರಾದಲ್ಲಿ ಬಡ್ತಿ ದೊರೆಯುತ್ತದೆ. ಪಾಲುದಾರಿಕೆಯ ವ್ಯವಹಾರದಲ್ಲಿ ತೊಂದರೆ ಇರುತ್ತದೆ. ಪತಿಯ ಜೊತೆ ವಿದೇಶ ಪ್ರಯಾಣ ಮಾಡುವಿರಿ. ನಿಮಗಿಷ್ಟವಾದ ಒಡವೆ ವಸ್ತ್ರವನ್ನು ಕೊಳ್ಳುವಿರಿ.

ಮಕರ

ಬೇಸರದ ಸನ್ನಿವೇಶವನ್ನು ಎದುರಿಸುವಿರಿ. ಎಲ್ಲರ ಮನದಲ್ಲಿ ನಂಬಿಕೆ ಬರುವಂತೆ ಮಾತನಾಡುವಿರಿ. ನಿಮ್ಮ ಮನಸ್ಸಿನ ಭಾವನೆಗಳನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ವೃತ್ತಿಜೀವನದಲ್ಲಿ ಯಾವುದೇ ತೊಂದರೆ ಬಾರದು. ಅನಾವ್ಯಶಕ ವಿಚಾರಗಳಿಗೆ ವಿವಾದ ಉಂಟುಮಾಡುವಿರಿ. ಉಪವೃತಿಯೊಂದನ್ನು ಆರಂಭಿಸುವಿರಿ. ಸಂಗೀತ ಬಲ್ಲವರಿಗೆ ಅಪರಿಮಿತ ಅವಕಾಶ ದೊರೆಯುತ್ತದೆ. ಪತಿಯ ಜೊತೆ ಹೊಸ ವ್ಯಾಪಾರವನ್ನು ಆರಂಭಿಸಲು ಪ್ರಯತ್ನಿಸುವಿರಿ. ಭೂವ್ಯವಹಾರದಲ್ಲಿ ಉತ್ತಮ ಆದಾಯ ಇರುತ್ತದೆ. ಏಕಾಂಗಿತನವನ್ನು ಇಷ್ಟ ಪಡುವಿರಿ. ಹೆಚ್ಚಿನ ಪ್ರಯತ್ನದಿಂದ ವಿದೇಶದಲ್ಲಿ ಉದ್ಯೋಗ ಗಳಿಸುವಿರಿ.

ಕುಂಭ

ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಂಡಲ್ಲಿ ಆರೋಗ್ಯದಲ್ಲಿ ಸ್ಥಿರತೆ ಇರುತ್ತದೆ. ಖರ್ಚು ವೆಚ್ಚಗಳನ್ನು ನಿಯಂತ್ರಿಸಲು ಪ್ರಯತ್ನಿಸುವಿರಿ. ಮಕ್ಕಳನ್ನು ಅಜೀರ್ಣದ ತೊಂದರೆ ಬಹುವಾಗಿ ಕಾಡುತ್ತದೆ. ಯೋಗ ಪ್ರಾಣಾಯಾಮವನ್ನು ಆರಂಭಿಸುವಿರಿ. ಪತಿಯ ಆಮದು ರಪ್ತು ವ್ಯಾಪಾರದಲ್ಲಿ ಲಾಭ ದೊರೆಯಲು ನಿಮ್ಮ ಶ್ರಮವಿರುತ್ತದೆ. ಹಣಕಾಸಿನ ವ್ಯವಹಾರ ಮಧ್ಯಮಗತಿಯಲ್ಲಿ ನಡೆಯುತ್ತದೆ. ಧಾರ್ಮಿಕ ಕೇಂದ್ರಗಳ ನಿರ್ವಹಣೆಯ ಜವಾಬ್ದಾರಿ ನಿಮ್ಮದಾಗಲಿದೆ. ಮನ:ಶಾಸ್ತ್ರವನ್ನು ಅಭ್ಯಾಸ ಮಾಡುವ ಆಸೆ ಉಂಟಾಗಲಿದೆ. ವಿದ್ಯಾರ್ಥಿಗಳಿಗೆ ವಿದೇಶದಲ್ಲಿಅಧ್ಯಯನ ನಡೆಸುವ ಅವಕಾಶ ದೊರೆಯುತ್ತದೆ.

ಮೀನ

ದೃಢವಾದ ಮಾತಿನಿಂದ ನಿಮ್ಮ ಆಶೋತ್ತರಗಳನ್ನು ಈಡೇರಿಸಿಕೊಳ್ಳುವಿರಿ. ನಿಮ್ಮ ಪ್ರಯತ್ನಕ್ಕೆ ತಕ್ಕಂತ ವರಮಾನ ದೊರೆಯುತ್ತದೆ. ಉದ್ಯೋಗದಲ್ಲಿ ತೊಂದರೆ ಉಂಟಾಗದು. ಸಂದರ್ಭಕ್ಕೆ ಹೊಂದಿಕೊಂಡು ನಡೆಯುವ ಕಾರಣ ಕೆಲಸ ಕಾರ್ಯದಲ್ಲಿ ಯಶಸ್ಸು ದೊರೆಯುತ್ತದೆ. ಕುಟುಂಬದಲ್ಲಿ ನೆಮ್ಮದಿಯ ಕೊರತೆ ಇರುತ್ತದೆ. ವಿದ್ಯಾರ್ಥಿಗಳಿಗೆ ಶುಭಫ ಲಗಳು ಲಭಿಸುತ್ತವೆ. ಪಾಲುಗಾರಿಕೆಯ ವ್ಯಾಪಾರ ವ್ಯವಹಾರಗಳಲ್ಲಿ ಲಾಭವಿರುತ್ತದೆ. ಮನ ಮೆಚ್ಚಿದ ಚಿನ್ನಾಭರಣಗಳನ್ನು ಕೊಳ್ಳುವಿರಿ. ಖರ್ಚು ವೆಚ್ಚಗಳನ್ನು ಕಡಿಮೆ ಮಾಡುವ ನಿರ್ಧಾರ ಮಾಡುವಿರಿ. ತವರಿನಿಂದ ಶುಭ ವರ್ತಮಾನವೊಂದು ಬರಲಿದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).