ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಆತುರದ ನಿರ್ಧಾರಗಳಿಂದ ಸಮಸ್ಯೆಗೆ ಸಿಲುಕುವಿರಿ, ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡುತ್ತಾರೆ; ಸ್ತ್ರೀ ವಾರ ಭವಿಷ್ಯ

ಆತುರದ ನಿರ್ಧಾರಗಳಿಂದ ಸಮಸ್ಯೆಗೆ ಸಿಲುಕುವಿರಿ, ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡುತ್ತಾರೆ; ಸ್ತ್ರೀ ವಾರ ಭವಿಷ್ಯ

Weekly Women horoscope: ಸ್ತ್ರೀ ವಾರ ಭವಿಷ್ಯ (ಮೇ 10 ರಿಂದ ಮೇ 16ವರೆಗೆ) ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಈ ವಾರದ ಸ್ತ್ರೀ ಭವಿಷ್ಯ ಇಲ್ಲಿದೆ.

ಸ್ತ್ರೀ ವಾರ ಭವಿಷ್ಯ
ಸ್ತ್ರೀ ವಾರ ಭವಿಷ್ಯ

ಸ್ತ್ರೀ ವಾರ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ.

ಮೇಷ

ಆತ್ಮವಿಶ್ವಾಸದಿಂದ ಕುಟುಂಬವನ್ನು ಮುನ್ನಡೆಸುವಿರಿ. ಬಿಡುವಿಲ್ಲದ ಕೆಲಸದ ನಡುವೆಯೂ ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವಿರಿ. ವಿಶ್ರಾಂತಿ ಇಲ್ಲದೆ ನಿಮ್ಮ ಕರ್ತವ್ಯವನ್ನು ನಿರ್ವಹಿಸುವಿರಿ. ಆತ್ಮೀಯತೆಯಿಂದ ಎಲ್ಲರ ಮನಸ್ಸನ್ನು ಗೆಲ್ಲುವಿರಿ. ಎಲ್ಲರನ್ನೂ ನಂಬಿ ಸಂದಿಗ್ಧತೆಗೆ ಸಿಲುಕುವಿರಿ. ಉದ್ಯೋಗದಲ್ಲಿ ಉನ್ನತ ಮಟ್ಟ ತಲುಪುವಿರಿ. ಸ್ವಂತ ವ್ಯಾಪಾರ ವ್ಯವಹಾರದಿಂದ ಹಣದ ಕೊರತೆಯನ್ನು ಕಡಿಮೆ ಮಾಡುವಿರಿ. ಗುರು ಹಿರಿಯರನ್ನು ಗೌರವಿಸುವ ಗುಣ ಎಲ್ಲರ ಮನ ಗೆಲ್ಲುವಿರಿ. ಮಗಳ ಕುಟುಂಬದಲ್ಲಿ ಸುಖ ಸಂತೋಷ ನೆಲೆಸಿರುತ್ತದೆ. ಪತಿಯ ಜೊತೆ ಕಿರು ಪ್ರವಾಸ ಕೈಗೊಳ್ಳುವಿರಿ.

ವೃಷಭ

ಹಣದ ವಿಚಾರದಲ್ಲಿ ತವರು ಮನೆಗೆ ಆಸರೆ ಆಗುವಿರಿ. ಕುಟುಂಬದ ಆಸ್ತಿ ವಿವಾದಕ್ಕೆ ಪರಿಹಾರ ಸೂಚಿಸುವಿರಿ. ಸಂತಾನ ಲಾಭವಿದೆ. ಪತಿಯ ಜೊತೆಯಲ್ಲಿ ಉತ್ತಮ ಹೊಂದಾಣಿಕೆ ಏರ್ಪಡುತ್ತದೆ. ಕುಟುಂಬದ ಹಣದ ಸ್ಥಿತಿಯನ್ನು ಉತ್ತಮಗೊಳಿಸಲು ನೌಕರಿಗೆ ಸೇರುವಿರಿ. ಉತ್ತಮ ಭವಿಷ್ಯಕ್ಕಾಗಿ ಪತಿಯ ಜೊತೆಯಲ್ಲಿ ಹಣ ಉಳಿತಾಯದ ಯೋಜನೆ ರೂಪಿಸುವಿರಿ. ಚಿಕ್ಕ ಮಕ್ಕಳಿಗೆ ಸಂಗೀತ ನಾಟ್ಯದಲ್ಲಿ ಆಸಕ್ತಿ ಇರುತ್ತದೆ. ಸಮಾಜದಲ್ಲಿ ವಿಶೇಷ ಸ್ಥಾನ ದೊರೆಯುತ್ತದೆ. ಬಹುತೇಕ ಮನೆಯಲ್ಲಿಯೇ ವೇಳೆ ಕಳೆಯಲು ಬಯಸುವಿರಿ. ಪತಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ವಾದ ವಿವಾದಗಳಿಂದ ಮಾನಸಿಕ ಒತ್ತದ ಹೆಚ್ಚುತ್ತದೆ.

ಮಿಥುನ

ಸಂಬಂಧಿಕರ ಜೊತೆಯಲ್ಲಿ ಉತ್ತಮ ಬಾಂಧವ್ಯ ಇರುತ್ತದೆ. ವಾದ ವಿವಾದಗಳಲ್ಲಿ ಆಸಕ್ತಿ ಇರುವುದಿಲ್ಲ. ವಿವಾಹದ ಬಗ್ಗೆ ಅಸಡ್ಡೆ ತೋರುವಿರಿ. ವಿದ್ಯಾರ್ಥಿನಿಯರು ವಿದ್ಯಾಭ್ಯಾಸದಲ್ಲಿ ಮುಂಚೂಣಿಯಲ್ಲಿ ಇರುತ್ತಾರೆ. ಮಕ್ಕಳು ಸಹಪಾಠಿಗಳ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ತೆಗೆದುಕೊಂಡ ನಿರ್ಧಾರಗಳನ್ನು ಬದಲಿಸದೆ ಯಶಸ್ಸನ್ನು ಗಳಿಸುವಿರಿ. ಹಣಕಾಸಿನ ವಿಚಾರದಲ್ಲಿ ವಿವಾದ ಎದುರಾಗಲಿದೆ. ಆಡುವ ಮಾತಿಗೆ ಬದ್ದರಾಗಿ ಪತಿಯ ಜೊತೆ ತವರುಮನೆಗೆ ತೆರಳುವಿರಿ. ಸಾಕು ಪ್ರಾಣಿಗಳಿಂದ ತೊಂದರೆ ಉಂಟಾಗುತ್ತದೆ. ಸೋದರ ಮಾವನೊಂದಿಗೆ ವಿವಾದ ಎದುರಾಗಲಿದೆ.

ಕಟಕ

ಹಣಕಾಸಿನ ವ್ಯವಹಾರದಲ್ಲಿ ಕುಟುಂಬದ ಕಲಹ ಉಂಟಾಗುತ್ತದೆ. ಯಾರನ್ನೂ ದ್ವೇಷಿಸದೆ ಎಲ್ಲರ ಜೊತೆ ಆತ್ಮೀಯತೆಯಿಂದ ಬೆರೆಯುವಿರಿ. ಮಕ್ಕಳ ಸಂತೋಷಕ್ಕಾಗಿ ಅವರೊಡನೆ ಪ್ರವಾಸಕ್ಕೆ ತೆರಳುವಿರಿ. ಹೆಚ್ಚಿನ ವೇತನದ ದೃಷ್ಠಿಯಿಂದ ಉದ್ಯೋಗ ಬದಲಾಯಿಸುವಿರಿ. ಪತಿಯ ನಡುವೆ ಅನಾವಶ್ಯಕ ಕಿರಿಕಿರಿ ಇರುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಜನೋಪಕಾರಿ ಕಾರ್ಯಕ್ರಮಗಳ ನಾಯಕತ್ವ ವಹಿಸುವಿರಿ. ಆತುರದ ನಿರ್ಧಾರಗಳಿಂದ ಸಮಸ್ಯೆಗೆ ಸಿಲುಕುವಿರಿ. ಹೆತ್ತವರ ಆಗಮನ ಸಂತೋಷಕ್ಕೆ ಕಾರಣವಾಗುತ್ತದೆ. ಅತಿಯಾದ ಆತ್ಮವಿಶ್ವಾಸದಿಂದ ತಪ್ಪು ಹಾದಿಯಲ್ಲಿ ನಡೆಯುವಿರಿ, ಮುಖದ ಸೌಂದರ್ಯ ಕಾಪಾಡಿಕೊಳ್ಳಲು ಪ್ರಯತ್ನಿಸುವಿರಿ.

ಸಿಂಹ

ಕೈ ಹಿಡಿದ ಕೆಲಸ ಕಾರ್ಯಗಳಲ್ಲಿ ಹಟದಿಂದ ಯಶಸ್ವಿಯಾಗುವಿರಿ. ಉದ್ಯೋಗದಲ್ಲಿನ ತೊಂದರೆ ಬಗೆಹರಿಯುತ್ತದೆ. ವಿಶ್ರಾಂತಿ ಇಲ್ಲದ ದುಡಿಮೆಯಿಂದ ಬೇಸರಕ್ಕೆ ಒಳಗಾಗುವಿರಿ. ಅರಿಯದೆ ಮಾಡಿದ ತಪ್ಪಿಗೆ ದಂಡ ತೆರುವಿರಿ. ಉನ್ನತ ಅಧ್ಯಯನದಲ್ಲಿ ಉತ್ತಮ ಸಲಹೆ ದೊರೆಯುತ್ತದೆ. ವಿಚಾರ ಮಾಡದೆ ಯಾವುದೇ ವಿಚಾರವನ್ನು ಒಪ್ಪುವುದಿಲ್ಲ. ತಂದೆಗೆ ಹಣದ ಸಹಾಯ ಮಾಡುವಿರಿ. ದೈನಂದಿನ ಕೆಲಸದಲ್ಲಿ ಪತಿಯ ಸಹಕಾರ ದೊರೆಯುತ್ತದೆ. ತವರು ಮನೆ ಮತ್ತು ಗಂಡನ ಮನೆಯಲ್ಲಿ ನಿಮ್ಮ ಗೌರವದ ಹೆಚ್ಚಲಿದೆ. ಎಲ್ಲರ ಮಾತನ್ನು ಕೇಳಿದರೂ ನಿಮ್ಮದೇ ಆದ ತೀರ್ಮಾನಕ್ಕೆ ಬದ್ಧರಾಗುವಿರಿ. ಪತಿಯೊಂದಿಗೆ ನೆಮ್ಮದಿಯಿಂದ ಬಾಳುವಿರಿ.

ಕನ್ಯಾ

ಕುಟುಂಬದಲ್ಲಿನ ಮಂಗಳ ಕಾರ್ಯದ ಜವಾಬ್ದಾರಿ ನಿಮ್ಮದಾಗಲಿದೆ. ಸಮಯಕ್ಕೆ ತಕ್ಕ ನಿರ್ಧಾರ ತೆಗೆದುಕೊಳ್ಳುವಿರಿ. ಪರಸ್ಪರ ಹೊಂದಾಣಿಕೆ ಇರುವ ಕಾರಣ ಕುಟುಂಬದಲ್ಲಿ ನೆಮ್ಮದಿ ಇರುತ್ತದೆ. ಬೇರೆಯವರ ಕೆಲಸ ಕಾರ್ಯಗಳಲ್ಲಿನ ತಪ್ಪನ್ನು ಟೀಕಿಸುವಲ್ಲಿ ನಿರತರಾಗುವಿರಿ. ಆದಾಯದಲ್ಲಿ ಏರಿಕೆ ಕಂಡುಬರಲಿದೆ. ಖರ್ಚು ವೆಚ್ಚಗಳನ್ನು ನಿಯಂತ್ರಿಸಿ ಹಣ ಉಳಿಸುವಿರಿ. ಸೋದರ ಮಾವನ ಸಹಾಯ ಇರುತ್ತದೆ. ಉದ್ಯೋಗಸ್ಥರಿಗೆ ಕಾರ್ಯದ ಒತ್ತಡ ಹೆಚ್ಚಾಗಿಯೇ ಇರುತ್ತದೆ. ಆರೋಗ್ಯದ ಬಗ್ಗೆ ಗಮನ ಇರಲಿ. ತವರು ಮನೆಯಿಂದ ನಿಮಗೆ ಸೇರಿದ ಹಣದ ಪಾಲು ದೊರೆಯುತ್ತದೆ. ಅತಿಯಾದ ಆಸೆಯಿಂದ ತಪ್ಪು ದಾರಿಯಲ್ಲಿ ನಡೆಯುವಿರಿ.

ತುಲಾ

ಪತಿಯ ವಿಚಾರದಲ್ಲಿ ತಪ್ಪು ನಿರ್ಧಾರ ತೆಗೆದುಕೊಳ್ಳುವಿರಿ. ಎಲ್ಲರಿಗೂ ನಿಮ್ಮ ಕಾರ್ಯ ವೈಖರಿ ಸಂತಸ ಉಂಟುಮಾಡುತ್ತದೆ. ಆಶ್ಚರ್ಯವೆನ್ನುವಂತಹ ವರ್ತಮಾನ ದೊರೆಯುತ್ತದೆ. ಕುಟುಂಬ ಸಮಸ್ಯೆಯೊಂದನ್ನು ದೂರ ಮಾಡುವಿರಿ. ತಾಯಿಯ ಆಗಮನದಿಂದ ಕುಟುಂಬದಲ್ಲಿ ಸಂತಸ ಇರುತ್ತದೆ. ಆಕಸ್ಮಿಕ ಧನ ಲಾಭವಿದೆ. ಸ್ವಂತ ಬಳಕೆಗಾಗಿ ಹೊಸ ವಾಹನವನ್ನು ಕೊಳ್ಳುವಿರಿ. ಉಡುಗೊರೆಯಾಗಿ ಬಂದ ಜಮೀನಿನಲ್ಲಿ ಮನೆ ಕಟ್ಟುವ ಯೋಜನೆ ರೂಪಿಸುವಿರಿ. ಉದ್ಯಮಿಗಳಿಗೆ ಹೆಚ್ಚಿನ ಲಾಭ ದೊರೆಯುತ್ತದೆ. ಉತ್ತಮ ಆರೋಗ್ಯಕ್ಕಾಗಿ ಶ್ರಮಪಡಬೇಕಾಗುತ್ತದೆ. ಪತಿಯೊಂದಿಗೆ ದೀರ್ಘಕಾಲದ ಪ್ರವಾಸ ಕೈಗೊಳ್ಳುವಿರಿ.

ವೃಶ್ಚಿಕ

ಯೋಚನೆ ಮಾಡದೆ, ಆತುರದಿಂದ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ. ನೇರವಾದ ನಡೆ ನುಡಿಯಿಂದ ವಿವಾದವೊಂದನ್ನು ಎದುರಿಸುವಿರಿ. ಉತ್ತಮ ಆರೋಗ್ಯಇರುತ್ತದೆ. ನಿಮ್ಮ ರೀತಿ ನೀತಿಯನ್ನು ಕುಟುಂಬದವರೇ ವಿರೋಧಿಸುತ್ತಾರೆ. ಬಿಡುವಿಲ್ಲದ ಕೆಲಸದ ಕಾರಣ ವಿಶ್ರಾಂತಿ ಇರದು. ವೇಳೆಗೆ ಸರಿಯಾಗಿ ಆಹಾರ ಸೇವಿಸಲು ಸಾಧ್ಯವಿಲ್ಲ. ಮನದಲ್ಲಿ ಬೇಸರದ ಭಾವನೆ ಮನೆ ಮಾಡಿರುತ್ತದೆ. ತಾಯಿಯವರ ಅನಾರೋಗ್ಯದ ಕಾರಣ ತವರಿಗೆ ತೆರಳುವಿರಿ. ಪತಿಗೆ ಹಣದ ಸಹಾಯ ಮಾಡುವಿರಿ. ಸ್ವಂತ ವ್ಯಾಪಾರ ವ್ಯವಹಾರ ಇದ್ದಲ್ಲಿ ಅನಿರೀಕ್ಷಿತ ಧನ ಲಾಭ ಇರುತ್ತದೆ. ಉದ್ಯೋಗಸ್ಥರು ವೃತ್ತಿ ಬದಲಾಯಿಸುವರು.

ಧನಸ್ಸು

ಹಣಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡುವಿರಿ. ನಿಮ್ಮ ಮಕ್ಕಳು ವಿದ್ಯೆ ಮತ್ತು ಬುದ್ಧಿಯಲ್ಲಿ ಮುಂದಿರುತ್ತಾರೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಹಣದ ಅಗತ್ಯತೆ ಇರುತ್ತದೆ. ಪತಿಯ ಜೊತೆ ಉತ್ತಮ ಹೊಂದಾಣಿಕೆ ಇರುತ್ತದೆ. ಹಣಕಾಸಿನ ತೊಂದರೆ ಇರುವುದಿಲ್ಲ. ಉದ್ಯೋಗದಲ್ಲಿ ಅಧಿಕಾರಿಗಳ ಹಿರಿತನದಿಂದ ನಿಮ್ಮ ನಿರೀಕ್ಷೆಗಳು ಕೈಗೂಡಲಿವೆ. ಪ್ರೀತಿ ವಿಶ್ವಾಸದಿಂದ ಮಕ್ಕಳ ಮನಸ್ಸನ್ನು ಗೆಲ್ಲುವಿರಿ. ಮನಸ್ಸಿಗೆ ಒಲ್ಲದ ಕೆಲಸವನ್ನು ಮಾಡುವುದಿಲ್ಲ. ವಾದ ಮಾಡುವುದರಲ್ಲಿ ಸೋಲೆಂಬುದೇ ಇರುರುವುದಿಲ್ಲ. ಆದರೆ ಅತಿಯಾದ ಆತ್ಮವಿಶ್ವಾಸದಿಂದ ತೊಂದರೆ ಅನುಭವಿಸುವಿರಿ. ಪತಿ ಮತ್ತು ಮಕ್ಕಳ ಜೊತೆ ಯಾತ್ರಾ ಸ್ಥಳಕ್ಕೆ ಭೇಟಿ ನೀಡುವಿರಿ.

ಮಕರ

ಪತಿಗೆ ಸಂಬಧಿಸಿದ ಭೂವಿವಾದಕ್ಕೆ ಪರಿಹಾರ ಕಂಡು ಹಿಡಿಯುವಿರಿ. ಸಮಯ ವ್ಯರ್ಥಗೊಳಿಸದೆ ಕಷ್ಟಪಟ್ಟು ಕೆಲಸ ಕಾರ್ಯಗಳಲ್ಲಿ ತೊಡಗುವಿರಿ. ಎಲ್ಲರ ಜೊತೆ ವಿಶಾಲವಾದ ಮನೆಗೆ ತೆರಳುವಿರಿ. ಹಣಕಾಸಿನ ವಿಚಾರದಲ್ಲಿ ವಾದ ವಿವಾದ ಎದುರಾಗಲಿದೆ. ಆಯಾಸದ ಕಾರಣ ವಿಶ್ರಾಂತಿಗೆ ಹೆಚ್ಚು ಒತ್ತು ನೀಡುವಿರಿ. ರುಚಿಕರ ಆಹಾರ ತಯಾರಿಸುವಲ್ಲಿ ಸಂತಸ ಕಾಣುವಿರಿ. ಮಕ್ಕಳ ಮುಗ್ದ ಮನಸ್ಸನ್ನು ಇಷ್ಟಪಡುವಿರಿ. ಅನಿರೀಕ್ಷಿತ ಬದಲಾವಣೆಗಳು ಫಲಕಾರಿಯಾಗಿರುತ್ತದೆ. ತಾಯಿಯ ಮೇಲೆ ಹೆಚ್ಚಿನ ಪ್ರೀತಿ ಇರುತ್ತದೆ. ಸಂತಾನ ಲಾಭವಿದೆ. ಕೈ ಕಾಲುಗಳಲ್ಲಿ ನಿಶ್ಯಕ್ತಿ ಇರುತ್ತದೆ. ಸ್ವಂತ ಬಳಕೆಗಾಗಿ ವಾಹನ ಕೊಳ್ಳುವಿರಿ.

ಕುಂಭ

ವಾದಗಳನ್ನು ಬದಿಗೊತ್ತಿ ಸಾಧ್ಯವಾದಷ್ಟೂ ಮೌನವಾಗಿ ವರ್ತಿಸುವಿರಿ. ಮನಸ್ಸಿನಲ್ಲಿರುವ ವಿಚಾರಗಳನ್ನು ಯಾರಲ್ಲಿಯೂ ಹಂಚಿಕೊಳ್ಳುವುದಿಲ್ಲ. ಯಾರ ನಿರ್ಧಾರವನ್ನು ಗೌರವಿಸುವುದಿಲ್ಲ. ಮಕ್ಕಳ ಮಾತನ್ನು ಹಗುರವಾಗಿ ಪರಿಗಣಿಸುವುದಿಲ್ಲ. ಖರ್ಚು ವೆಚ್ಚಗಳು ನಿಮ್ಮದೇ ಆದ ಚೌಕಟ್ಟಿನಲ್ಲಿ ವಿದ್ಯಾರ್ಥಿನಿಯರು ವಿದ್ಯೆಯಲ್ಲಿ ಹೆಚ್ಚಿನ ಸಾಧನೆ ಮಾಡುತ್ತಾರೆ. ನಿಮ್ಮಲ್ಲಿನ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಳ್ಳುವ ಜನರಿಂದ ದೂರವಿರುವಿರಿ. ವಿವಾಹದಂತಹ ಶುಭ ಕಾರ್ಯಕ್ರಮಗಳ ಆಯೋಜಕರಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಅನಾವಶ್ಯಕವಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಪತಿಯ ಜೊತೆಯಲ್ಲಿ ತವರಿಗೆ ತೆರಳುವಿರಿ.

ಮೀನ

ಆಡುವ ಮಾತಿನ ಮೇಲೆ ಬುದ್ಧಿವಂತಿಕೆಯಿಂದ ಹತೋಟಿ ಸಾಧಿಸುವಿರಿ. ಉದ್ಯೋಗ ಉನ್ನತ ಅಧಿಕಾರ ನಿಮ್ಮದಾಗಲಿದೆ. ಕುಟುಂಬದ ಆಳ್ವಿಕೆ ದೊರೆಯುತ್ತದೆ. ಯೋಗ ಪ್ರಾಣಾಯಾಮದಲ್ಲಿ ಆಸಕ್ತಿ ಉಂಟಾಗುತ್ತದೆ. ರಾಜಕೀಯ ಪ್ರವೇಶಿಸುವ ಆಸೆ ಈಡೇರಲಿದೆ. ದುಬಾರಿ ಬೆಲೆಯ ಒಡವೆ ವಸ್ತ್ರಗಳನ್ನು ಕೊಳ್ಳುವಿರಿ. ವಿದ್ಯಾರ್ಥಿಗಳು ವಿಶೇಷವಾದ ಅಧ್ಯಯನದಲ್ಲಿ ನಿರತರಾಗುತ್ತಾರೆ. ಸುಲಭವಾಗಿ ಯಾವುದೇ ವಿಚಾರದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳರಾರಿರಿ. ಸಮಯ ಕಳೆಯಲು ಆರಂಭಿಸಿದ ವ್ಯಾಪಾರವೊಂದು ಜೀವನಕ್ಕೆ ಆಧಾರವಾಗಲಿದೆ. ಪತಿಯ ಜೊತೆ ಅನಾವಶ್ಯಕ ವಾದ ವಿವಾದಗಳು ಎದುರಾಗುತ್ತವೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.