ಕನ್ನಡ ಸುದ್ದಿ  /  Astrology  /  Weekly Women Horoscope Women Astrological Prediction For May 19th 2023 To May 25th 2023 Friday Women Horoscope Mnk

Weekly Women Horoscope: ಸ್ತೀ ಜ್ಯೋತಿಷ್ಯ; ಪತಿಯ ಉದ್ಯೋಗದಲ್ಲಿ ಆತಂಕದ ಕ್ಷಣಗಳು, ಈ ರಾಶಿಯ ಮಹಿಳೆಯರಿಗೆ ತವರಿನಿಂದ ಹಣದ ಸಹಾಯ

ಶುಕ್ರವಾರ ಎಂದರೆ ಲಕ್ಷ್ಮಿಯ ವಾರ. ನಮ್ಮ ಮನೆಯ ಹೆಣ್ಣು ಮಕ್ಕಳೂ ದೇವಿ ಲಕ್ಷ್ಮಿಗೆ ಸಮ. ಮನಸ್ಸು ಮಾಡಿದರೆ ಹೆಣ್ಣಾದವಳು ಜಗತ್ತನ್ನೇ ಆಳಬಲ್ಲಳು. ಇಂಥಹ ಸ್ತ್ರೀಶಕ್ತಿಗೆ ಗೌರವ ಪೂರ್ವಕ ಜೋತಿಷ್ಯವೇ ಈ ದ್ವಾದಶ ಸ್ತ್ರೀ ವಾರಭವಿಷ್ಯ (Weekly Women Horoscope) (ಮೇ 19 ರಿಂದ ಮೇ 26). ಖ್ಯಾತ ಜ್ಯೋತಿಷಿ ಹೆಚ್‌. ಸತೀಶ್‌ ಈ ಜೋತಿಷ್ಯವನ್ನು ಪ್ರಸ್ತುತಪಡಿಸಿದ್ದಾರೆ.

ಸ್ತೀ ಜ್ಯೋತಿಷ್ಯ; ಪತಿಯ ಉದ್ಯೋಗದಲ್ಲಿ ಆತಂಕದ ಕ್ಷಣಗಳು, ಈ ರಾಶಿಯ ಮಹಿಳೆಯರಿಗೆ ತವರಿನಿಂದ ಹಣದ ಸಹಾಯ (Photo\Pixabay)
ಸ್ತೀ ಜ್ಯೋತಿಷ್ಯ; ಪತಿಯ ಉದ್ಯೋಗದಲ್ಲಿ ಆತಂಕದ ಕ್ಷಣಗಳು, ಈ ರಾಶಿಯ ಮಹಿಳೆಯರಿಗೆ ತವರಿನಿಂದ ಹಣದ ಸಹಾಯ (Photo\Pixabay)

ಮೇಷ

ಕುಟುಂಬದ ಬಗ್ಗೆ ಕಾಳಜಿ ಇರುತ್ತದೆ. ವಿಶ್ರಾಂತಿ ಎಲ್ಲರ ಪ್ರೀತಿ ಮತ್ತು ಕನಿಕರ ನಿಮಗೆ ದೊರೆಯುತ್ತದೆ. ಕುಟುಂಬದ ದೊಡ್ಡ ಸಮಸ್ಯೆಯೊಂದನ್ನು ಮಾತು ಕತೆಯ ಮೂಲಕ ಪರಿಹರಿಸುವಿರಿ. ತಂದೆ ತಾಯಿಯ ಆಗಮನ ಸಂತೋಷವನ್ನು ಉಂಟುಮಾಡುತ್ತದೆ. ಹಣಕಾಸಿನ ನಿರ್ವಹಣೆಯ ಜವಾಬ್ದಾರಿ ನಿಮ್ಮದಾಗುತ್ತದೆ. ಚಾಡಿ ಮಾತುಗಳನ್ನು ಕೇಳದಿರಿ. ಉದ್ಯೋಗಿಗಳಿಗೆ ಒತ್ತಡದ ಸನ್ನಿವೇಶವೊಂದು ಎದುರಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

ವೃಷಭ

ಸೋದರರ ಜೀವನದಲ್ಲಿ ನಿಮ್ಮ ಪಾತ್ರ ಮುಖ್ಯವಾಗುತ್ತವೆ. ಸ್ಥಿರವಾದ ಮನಸ್ಸಿನಿಂದ ಯಾವುದೇ ಕೆಲಸ ಸಾಧಿಸಬಲ್ಲಿರಿ. ಉದ್ಯೋಗದಲ್ಲಿ ಯಾವುದೇ ಬದಲಾವಣೆ ಕಾಣದು. ಮಹಿಳೆಯರಿಗೆ ಸಂಬಂಧಿಸಿದ ಬಟ್ಟೆ ಅಥವಾ ಇನ್ನಿತರ ವಸ್ತುಗಳ ವ್ಯಾಪಾರದಲ್ಲಿ ಆದಾಯ ಇರುತ್ತದೆ. ಅನಾವಶ್ಯಕ ಖರ್ಚು ವೆಚ್ಚಗಳು ನೆಮ್ಮದಿ ಕೆಡಿಸುತ್ತವೆ. ಅನಿರೀಕ್ಷಿತ ಧನಲಾಭವಿದೆ. ತವರಿನಿಂದ ಹಣದ ಸಹಾಯ ದೊರೆಯುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಮಿಥುನ

ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುವಿರಿ. ಸ್ಥಿರವಾದ ನಡೆ ನುಡಿಗಳು ಜೀವನದ ತೊಂದರೆಯನ್ನು ಕಡಿಮೆ ಮಾಡುತ್ತವೆ. ಅನಿರೀಕ್ಷಿತ ಧನ ಲಾಭವಿರುತ್ತದೆ. ಉದ್ಯೋಗ ಬದಲಿಸಲು ಒಳ್ಳೆಯ ಅವಕಾಶ ದೊರೆಯುತ್ತದೆ. ಉದ್ಯೋಗವನ್ನು ಬದಲಾಯಿಸುವ ನಿರ್ಧಾರ ಮಾಡುವಿರಿ. ಹಣಕಾಸಿನ ವಿಚಾರದಲ್ಲಿ ಯವುದೇ ತೊಂದರೆ ಕಾಣದು. ಅನಗತ್ಯ ವಾದಗಳನ್ನು ಮಾಡದಿರಿ. ಆಹಾರದ ಏಜೆನ್ಸಿಯನ್ನು ಪಡೆಯುವಿರಿ.

ಕಟಕ

ಕ್ರೀಡಾಮನೋಭಾವನೆ ಮಾನಸಿಕ ಒತ್ತಡದಿಂದ ದೂರ ಮಾಡುತ್ತದೆ. ತಂದೆಗೆ ಸಂಬಂಧಿಸಿದ ಆಸ್ತಿಯಲ್ಲಿ ದೊಡ್ಡಮೊತ್ತದ ಪಾಲು ದೊರೆಯುತ್ತದೆ. ವೃತ್ತಿಯಲ್ಲಿ ಉನ್ನತ ಸ್ಥಾನ ದೊರೆಯುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಲಾಭ ಇರುತ್ತದೆ. ಸ್ವಂತ ಉದ್ಯಮ ಇದ್ದಲ್ಲಿ ಆದಾಯದ ಕೊರತೆ ಬಾರದು ಕೌಟುಂಬಿಕ ಜೀವನದಲ್ಲಿ ಸಾಮರಸ್ಯ ಇರುತ್ತದೆ. ಭವಿಷ್ಯಕ್ಕಾಗಿ ಹಣದ ಉಳಿತಾಯ ಮಾಡುವಿರಿ

ಸಿಂಹ

ಮಕ್ಕಳ ಸಲುವಾಗಿ ಕೂಡಿಟ್ಟ ಹಣವೆಲ್ಲ ಖರ್ಚಾಗುವ ಸಾಧ್ಯತೆಗಳಿವೆ. ಸಮಾಜದ ಗಣ್ಯವ್ಯಕ್ತಿಗಳ ಸಹಕಾರ ದೊರೆಯುತ್ತದೆ. ತೆಗೆದುಕೊಳ್ಳುವ ದಿಟ್ಟ ನಿರ್ಧಾರ ಕುಟುಂಬದ ಹಾದಿಯನ್ನೇ ಬದಲಾಯಿಸುತ್ತದೆ. ಆದಾಯ ಹೆಚ್ಚಿಸಿಕೊಳ್ಳಲು ಕಾರ್ಯಕ್ರಮ ಆಯೋಜಿಸುವ ಸೇವೆಯನ್ನು ಆಯೋಜಿಸುವಿರಿ. ಕುಟುಂಬದಲ್ಲಿ ಮಂಗಳಕಾರ್ಯವೊಂದನ್ನು ಯಶಸ್ವಿಯಾಗಿ ನಡೆಸಿಕೊಡುವಿರಿ. ಮನಸ್ಸಿದ್ದಲ್ಲಿ ರಾಜಕೀಯ ಸೇರಲು ಅವಕಾಶವೊಂದು ಲಭಿಸಲಿದೆ.

ಕನ್ಯಾ

ತಪ್ಪೋ ಒಪ್ಪೋ ಪ್ರತಿ ವಿಚಾರವನ್ನು ಟೀಕಿಸುವುದರಲ್ಲಿ ನಿರತರಾಗುವಿರಿ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ತೆಗೆದುಕೊಂಡ ನಿರ್ಧಾರಗಳನ್ನು ಬದಲಿಸದಿರಿ. ಕಡಿಮೆ ಬಂಡವಾಳದಿಂದ ವ್ಯಾಪಾರವನ್ನು ಆರಂಭಿಸುವಿರಿ. ವಿದ್ಯಾರ್ಥಿಗಳಿಗೆ ಶುಭವಿದೆ. ಉದ್ಯೋಗದಲ್ಲಿ ಬದಲಾವಣೆ ಕಾಣದು. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಪತಿಯ ಉದ್ಯೋಗದಲ್ಲಿ ಆತಂಕದ ಕ್ಷಣಗಳು ಎದುರಾಗಲಿವೆ. ಓಡಾಟಕ್ಕಾಗಿ ಹೊಸ ವಾಹನ ಕೊಳ್ಳುವಿರಿ.

ತುಲಾ

ಸದಾ ಕಾಲ ಚುರುಕುತನದಿಂದ ಜೀವನದಲ್ಲಿ ಮುಂದುವರಿಯುವಿರಿ. ಹಣದ ತೊಂದರೆ ಕಾಣದು. ಆತ್ಮೀಯ ಸ್ನೇಹಿತರೊಬ್ಬರು ನಿಮ್ಮ ಸಹಕಾರದಿಂದ ಹೊಸ ವ್ಯಾಪಾರವನ್ನು ಆರಂಭಿಸುವರು. ಸಮಾಜದಲ್ಲಿ ಉನ್ನತ ಸ್ಥಾನಮಾನ ಲಭಿಸುತ್ತದೆ. ಮನೆಯನ್ನು ಕೊಳ್ಳುವ ಆಸೆ ಈಡೇರಲಿದೆ. ಮಕ್ಕಳೊಂದಿಗೆ ದೂರದ ಊರಿಗೆ ಪ್ರವಾಸ ಮಾಡುವಿರಿ. ಹಣಕಾಸಿನ ವ್ಯವಹಾರದಲ್ಲಿ ಲಾಭವಿರುತ್ತದೆ. ಮೌನದಿಂದ ಎಲ್ಲವನ್ನೂ ಗೆಲ್ಲುವಿರಿ.

ವೃಶ್ಚಿಕ

ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಪ್ರಾಣಾಯಾಮದ ಅಭ್ಯಾಸದಲ್ಲಿ ತೊಡಗುವಿರಿ. ಅತಿಯಾದ ಕೋಪ ಕುಟುಂಬದ ನೆಮ್ಮದಿಯನ್ನು ಹಾಳುಮಾಡುತ್ತದೆ. ರಕ್ಷಣಾ ಇಲಾಖೆಯಲ್ಲಿ ಕೆಲಸ ದೊರೆವ ಸಾಧ್ಯತೆ ಇದೆ. ನಿಮ್ಮಲ್ಲಿನ ಕ್ರೀಡಾ ಸ್ಪೂರ್ತಿ ನೆಮ್ಮದಿಯನ್ನು ನೀಡುತ್ತದೆ. ಕುಟುಂಬದ ಸಂಪೂರ್ಣವಾಗಿ ನಿಮ್ಮದಾಗುತ್ತದೆ. ಇದರಿಂದ ವಿಶ್ರಾಂತಿ ಇಲ್ಲದ ದುಡಿಮೆ ನಿಮ್ಮದಾಗುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ.

ಧನಸ್ಸು

ನಿಮಗೆ ಸೇರಿದ ಸ್ಥಿರಾಸ್ಥಿಯಲ್ಲಿ ತೊಂದರೆಯೊಂದು ಎದುರಾಗಲಿದೆ. ಕೌಟುಂಬಿಕ ಕಲಹವೊಂದು ಸುಲಭದಲ್ಲಿ ಬಗೆ ಹರಿಯಲಿದೆ. ಉತ್ತಮ ಆದಾಯವಿರುವ ಕೆಲಸಗಳನ್ನು ಮಾತ್ರ ಮಾಡುವಿರಿ. ಧಿಡೀರನೆ ಕೋಪ ಬರುತ್ತದೆ. ವಾದ ಬಿಟ್ಟು ಸಹನೆಯಿಂದ ವರ್ತಿಸಿದಲ್ಲಿ ಅಸಾಧ್ಯವಾದ ವಿಚಾರವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಲ್ಲಿರಿ. ತಂದೆಯವರಿಂದ ಹಣದ ಸಹಾಯ ದೊರೆಯುತ್ತದೆ. ಇಷ್ಟವೆನಿಸುವ ಒಡವೆ ವಸ್ತ್ರಗಳನ್ನು ಕೊಳ್ಳುವಿರಿ

ಮಕರ

ಕಷ್ಟಪಟ್ಟು ಕೆಲಸ ಮಾಡುವಿರಿ. ಮನಸ್ಸು ಒಳ್ಳೆಯದಾದರೂ ಮಾತಿನಿಂದ ವಿವಾದಕ್ಕೆ ತೊಡಗುವಿರಿ. ಸಾಲವಾಗಿ ಯಾರಿಗೂ ಹಣವನ್ನು ನೀಡದಿರಿ. ಉದ್ಯೋಗವನ್ನು ಬದಲಾಯಿಸುವಿರಿ. ಕುಟುಂಬದಲ್ಲಿ ನಿಮ್ಮಿಂದ ಶಾಂತಿ ನೆಮ್ಮದಿ ನೆಲಸಿರುತ್ತದೆ. ಹೆಚ್ಚಿನ ಜವಾಬ್ದಾರಿಯಿಂದ ನೆಮ್ಮದಿ ವಿಶ್ರಾಂತಿ ಮರೆಯಾಗುತ್ತವೆ. ಉದ್ಯೋಗವನ್ನರಸಿ ವಿದೇಶಕ್ಕೆ ತೆರಳುವಿರಿ. ಆರೋಗ್ಯದ ಕಡೆ ಗಮನ ಕೊಡಿ. ಸ್ವಂತ ವ್ಯಾಪಾರ ಆರಂಭಿಸದಿರಿ

ಕುಂಭ

ಮನದಲ್ಲಿ ಯಾವುದೋ ಯೋಚನೆ ಇರುತ್ತದೆ. ಕೆಲಸ ಕಾರ್ಯಗಳಲ್ಲಿ ಸುಲಭವಾಗಿ ಜಯ ಗಳಿಸುವಿರಿ. ನಿಮ್ಮ ಜಯವನ್ನು ನೋಡಿ ಹೊಟ್ಟಿಕಿಚ್ಚುಪಡುವ ಜನರಿರುತ್ತಾರೆ. ಕುಟುಂಬದ ಮುಖ್ಯ ವಿಚಾರಗಳನ್ನು ರಹಸ್ಯವಾಗಿಡುವಿರಿ. ಆತ್ಮವಿಶ್ವಾಸದ ಕೊರತೆ ಕೆಲಸ ಕಾರ್ಯಗಳಲ್ಲಿ ಹಿನ್ನೆಡೆ ಉಂಟುಮಾಡುತ್ತದೆ. ಎಲ್ಲರನ್ನೂ ಅನುಮಾನ ದೃಷ್ಠಿಯಿಂದ ನೋಡುವಿರಿ. ಹಣವನ್ನು ಉಳಿಸುವ ಯೋಚನೆ ಮಾಡಿರಿ.

ಮೀನ

ಆದಾಯದಲ್ಲಿ ತೊಂದರೆ ಬಾರದು. ನಿಮ್ಮ ಮಾತಿನ ಮೇಲೆ ನಂಬಿಕೆ ಇರುತ್ತದೆ. ಅನಿರೀಕ್ಷಿತ ಧನಲಾಭವಿರುತ್ತದೆ. ನಿಮ್ಮಿಂದ ಕುಟುಂಬದಲ್ಲಿ ಶಾಂತಿ ನೆಮ್ಮದಿ ಉಂಟಾಗುತ್ತದೆ. ಉದ್ಯೋಗದಲ್ಲಿ ನಿರೀಕ್ಷಿತ ಮಟ್ಟ ತಲುಪುವಿರಿ. ಕುಟುಂಬದ ಸೌಖ್ಯಕ್ಕಾಗಿ ಪುಟ್ಟ ವ್ಯಾಪಾರವನ್ನು ಆರಂಭಿಸುವಿರಿ. ಮಹಿಳೆಯರ ಸ್ವಾಸ್ಥ್ಯ ಕಾಪಾಡಲು ಅಗತ್ಯವಾದ ಸಲಹಾಕೇಂದ್ರವನ್ನು ಆರಂಭಿಸುವಿರಿ. ಒಮ್ಮೆ ತೆಗೆದುಕೊಂಡ ತೀರ್ಮಾನವನ್ನು ಬದಲಿಸದಿರಿ.

ವಿಭಾಗ