ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಹಾವಿಷ್ಣು ಯೋಗನಿದ್ರೆಗೆ ಜಾರುವ ಚಾತುರ್ಮಾಸ 2024 ಯಾವಾಗ ಪ್ರಾರಂಭ? 4 ತಿಂಗಳಲ್ಲಿ ಬರುವ ಪ್ರಮುಖ ಹಬ್ಬಗಳು ಯಾವುವು?

ಮಹಾವಿಷ್ಣು ಯೋಗನಿದ್ರೆಗೆ ಜಾರುವ ಚಾತುರ್ಮಾಸ 2024 ಯಾವಾಗ ಪ್ರಾರಂಭ? 4 ತಿಂಗಳಲ್ಲಿ ಬರುವ ಪ್ರಮುಖ ಹಬ್ಬಗಳು ಯಾವುವು?

ಚಾತುರ್ಮಾಸಕ್ಕೆ ವಿಶೇಷವಾದ ಮಹತ್ವವಿದೆ. ಈ ಸಮಯದಲ್ಲಿ ಮಹಾವಿಷ್ಣವು ಕ್ಷೀರಸಾಗರದಲ್ಲಿ ಮಲಗಿರುತ್ತಾನೆ ಎಂದು ಗ್ರಂಥಗಳಲ್ಲಿ ಉಲ್ಲೇಖೀಸಲಾಗಿದೆ. ಚಾತುರ್ಮಾಸದಲ್ಲಿ ಅನೇಕ ಹಬ್ಬ, ವ್ರತಗಳನ್ನು ಆಚರಿಸಲಾಗುತ್ತದೆ. (ಬರಹ: ಅರ್ಚನಾ ವಿ ಭಟ್‌)

ಮಹಾವಿಷ್ಣು ಯೋಗನಿದ್ರೆಗೆ ಜಾರುವ ಚಾತುರ್ಮಾಸ 2024 ಯಾವಾಗ ಪ್ರಾರಂಭ? 4 ತಿಂಗಳಲ್ಲಿ ಬರುವ ಪ್ರಮುಖ ಹಬ್ಬಗಳಿವು
ಮಹಾವಿಷ್ಣು ಯೋಗನಿದ್ರೆಗೆ ಜಾರುವ ಚಾತುರ್ಮಾಸ 2024 ಯಾವಾಗ ಪ್ರಾರಂಭ? 4 ತಿಂಗಳಲ್ಲಿ ಬರುವ ಪ್ರಮುಖ ಹಬ್ಬಗಳಿವು

ಹಿಂದೂ ಧರ್ಮದಲ್ಲಿ ಆಚರಿಸುವ ಚಾತುರ್ಮಾಸಕ್ಕೆ ವಿಶೇಷವಾದ ಮಹತ್ವವಿದೆ. ಚಾತುರ್ಮಾಸವೆಂದರೆ ನಾಲ್ಕು ತಿಂಗಳುಗಳ ಪುಣ್ಯದ ಕಾಲ ಎಂದು ಹೇಳಲಾಗುತ್ತದೆ. ಜೂನ್‌ ಅಥವಾ ಜುಲೈ ತಿಂಗಳಿನಲ್ಲಿ ಬರುವ ಶಯನಿ ಏಕಾದಶಿ ತಿಥಿಯಿಂದ ಅಕ್ಟೋಬರ್‌–ನವೆಂಬರ್‌ನಲ್ಲಿ ಬರುವ ಪ್ರಬೊಧಿನಿ ಏಕಾದಶಿ ಅಥವಾ ಉತ್ಥಾನ ಏಕಾದಶಿಯವರೆಗೆ ಚಾತುರ್ಮಾಸ ಆಚರಿಸಲಾಗುತ್ತದೆ.

ಭಾರತದಲ್ಲಿ ಮುಂಗಾರು ಮಳೆ ಬೀಳುವ ತಿಂಗಳುಗಳಲ್ಲಿ ಚಾತುರ್ಮಾಸವನ್ನು ಭಕ್ತಿ–ಶೃದ್ಧೆಯಿಂದ ಆಚರಿಸಲಾಗುತ್ತದೆ. ವ್ರತ, ಉಪವಾಸ, ಪುಣ್ಯ ನದಿಗಳ ಸ್ನಾನ ಮುಂತಾದ ಧಾರ್ಮಿಕ ಆಚರಣೆಗಳನ್ನು ಈ ಸಮಯದಲ್ಲಿ ಮಾಡಲಾಗುತ್ತದೆ. ಕೆಲವು ಭಕ್ತರು ಮೌನವ್ರತ , ತಮಗಿಷ್ಟವಾದ ಆಹಾರಗಳ ತ್ಯಾಗ ಮತ್ತು ದಿನಕ್ಕೆ ಒಂದು ಹೊತ್ತು ಮಾತ್ರ ಊಟ ಹೀಗೆ ಅನೇಕ ರೀತಿಯ ಪದ್ಧತಿಗಳನ್ನು ಪಾಲಿಸುತ್ತಾರೆ.

ಮಹಾವಿಷ್ಣುವು ಯೋಗನಿದ್ರೆಗೆ ಜಾರುವ ಸಮಯ

ಸನಾತನ ಧರ್ಮದಲ್ಲಿ ಚಾತುರ್ಮಾಸಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ಈ ನಾಲ್ಕು ತಿಂಗಳು ಮಹಾವಿಷ್ಣುವು ಕ್ಷೀರ ಸಾಗರದಲ್ಲಿ ಯೋಗ ನಿದ್ರೆಗೆ ಜಾರುತ್ತಾನೆ ಎಂಬ ನಂಬಿಕೆಯಿದೆ. ಹಾಗಾಗಿ ಈ ಸಮಯದಲ್ಲಿ ಮಹಾ ವಿಷ್ಣುವನ್ನು ಆರಾಧಿಸುವುದರಿಂದ ಅವನ ಕೃಪೆಗೆ ಪಾತ್ರರಾಗಬಹುದ ಎಂದು ನಂಬಲಾಗಿದೆ.

ಪಂಚಾಂಗದ ಪ್ರಕಾರ ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿ ತಿಥಿ ಅಂದರೆ ಜೂನ್‌ 17 ರಿಂದ ಚಾತುರ್ಮಾಸ ಪ್ರಾರಂಭವಾಗಿ, ನವೆಂಬರ್‌ 12 ರಂದು ಕೊನೆಗೊಳ್ಳಲಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಈ ಸಮಯದಲ್ಲಿ ಮದುವೆ, ಉಪನಯನ, ಗೃಹಪ್ರವೇಶಗಳಂತಹ ಯಾವುದೇ ಶುಭಕಾರ್ಯಗಳನ್ನು ನಡೆಸಲಾಗುವುದಿಲ್ಲ. ಚಾತುರ್ಮಾಸದಲ್ಲಿ ದೇವರ ಕೃಪೆಗೆ ಪಾತ್ರರಾಗಬಹುದಾದ ವ್ರತ, ಉಪವಾಸ, ಹಬ್ಬಗಳನ್ನು ಆಚರಿಸಲಾಗುತ್ತದೆ.

ಜೊತೆಗೆ ಬಡವರಿಗೆ ಊಟ, ಬಟ್ಟೆಗಳಂತಹ ಅಗತ್ಯ ವಸ್ತುಗಳ ದಾನ ಮಾಡಲಾಗುತ್ತದೆ. ಈ ಸಮಯದಲ್ಲಿ ಕೆಲವು ನಿಯಮಗಳನ್ನು ಪಾಲಿಸುತ್ತಾರೆ. ನೆಲದ ಮೇಲೆ ಮಲಗುವುದು, ಉಪವಾಸ, ದಿನದಲ್ಲಿ ಒಂದು ಬಾರಿ ಊಟ ಮಾಡುವುದು ಮುಂತಾದವುಗಳನ್ನು ಪಾಲಿಸುತ್ತಾರೆ. ಈ ಸಮಯದಲ್ಲಿ ಹೆಚ್ಚಾಗಿ ತುಳಸಿ ಮಾತೆಯನ್ನು ಪೂಜಿಸುತ್ತಾರೆ. ಅದರಿಂದ ಜೀವನದಲ್ಲಿರುವ ತೊಂದರೆಗಳಲ್ಲೆವೂ ದೂರವಾಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.

ಈ ಮಾಸದಲ್ಲಿ ಬರುವ ಹಬ್ಬಗಳು

ಚಾತುರ್ಮಾಸದಲ್ಲಿ ಪ್ರಮುಖ ಹಬ್ಬಗಳು ಬರುತ್ತವೆ. ದೇಶಾದ್ಯಂತ ಅವುಗಳನ್ನು ಬಹಳ ಶ್ರದ್ಧಾ–ಭಕ್ತಿಯಿಂದ ಆಚರಿಸಲಾಗುತ್ತದೆ. ಗಣೇಶ, ಕೃಷ್ಣ, ಲಕ್ಷ್ಮೀ, ಪಾರ್ವತಿ ಮೊದಲಾದ ದೇವರುಗಳನ್ನು ಪೂಜಿಸಲಾಗುತ್ತದೆ.

ಗುರು ಪೂರ್ಣಿಮೆ

ನಾಗರ ಪಂಚಮಿ

ವರಮಹಾಲಕ್ಷ್ಮೀ ವ್ರತ

ಕೃಷ್ಣ ಜನ್ಮಾಷ್ಟಮಿ

ರಕ್ಷಾ ಬಂಧನ

ಗಣೇಶ ಚತುರ್ಥಿ

ನವರಾತ್ರಿ (ದುರ್ಗಾ ಪೂಜೆ, ವಿಜಯದಶಮಿ, ದಸರಾ)

ದೀಪಾವಳಿ

ಚಂಪಾ ಷಷ್ಠಿ

ಬರಹ: ಅರ್ಚನಾ ವಿ ಭಟ್‌

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.