ನಿಮಗೆ ಆಗಾಗ ಶನಿ ದೇವರ ಕನಸು ಬೀಳುತ್ತಿದೆಯಾ: ಶನಿ ದೇವರು ಹೇಗೆ ಕಾಣಿಸಿದರೆ ಶುಭ ಮತ್ತು ಹೇಗೆ ಕಾಣಿಸಿದರೆ ಅಶುಭ
ನಾವು ಮಲಗಿದಾಗ, ನಮಗೆ ಅನೇಕ ಕನಸುಗಳು ಬೀಳುತ್ತವೆ. ಸ್ವಪ್ನ ಶಾಸ್ತ್ರದ ಪ್ರಕಾರ, ನಾವು ಕಾಣುವ ಕನಸುಗಳ ಆಧಾರದ ಮೇಲೆ, ಅವುಗಳ ಹಿಂದಿನ ಅರ್ಥವನ್ನು ಕಂಡುಕೊಳ್ಳಬಹುದು. ಮತ್ತು ಅದಕ್ಕೆ ಅನುಗುಣವಾಗಿ ಪರಿಹಾರಗಳನ್ನು ಕಂಡುಕೊಳ್ಳಬಹುದು. ನಿಮ್ಮ ಕನಸಿನಲ್ಲಿ ಶನಿ ದೇವರು ಕಾಣಿಸಿಕೊಳ್ಳುವುದು ಶುಭವೋ ಅಥವಾ ಅಶುಭವೋ ಎಂದು ನೋಡೋಣ.

ನಾವು ನಿದ್ರಿಸುವಾಗ, ನಮಗೆ ಅನೇಕ ಕನಸುಗಳು ಬೀಳುತ್ತವೆ. ಅವುಗಳಲ್ಲಿ ಕೆಲವು ಕನಸುಗಳು ಮನಸ್ಸಿಗೆ ಸಂತೋಷ ನೀಡುವಂತಿದ್ದರೆ, ಇನ್ನು ಕೆಲವು ಕನಸುಗಳು ನಿದ್ದೆಯಿಂದ ಎಚ್ಚರಗೊಳ್ಳುವಂತೆ ಮಾಡಿ, ಭಯವನ್ನು ಹುಟ್ಟಿಸುತ್ತವೆ. ಪ್ರತಿ ಕನಸುಗಳ ಹಿಂದೆ ಏನಾದರೊಂದು ಸಂಕೇತವಿರುತ್ತದೆ ಎಂದು ಸ್ವಪ್ನ ಶಾಸ್ತ್ರ ಹೇಳುತ್ತದೆ. ಹಾಗೆ ಬೀಳುವ ಕೆಲವು ಕನಸುಗಳು ಒಳ್ಳೆಯ ಫಲಿತಾಂಶಗಳನ್ನು ನೀಡಬಹುದು. ಕೆಲವು ಕೆಟ್ಟ ಫಲಿತಾಂಶಗಳನ್ನು ನೀಡಬಹುದು. ಕೆಲವೊಮ್ಮೆ ಕಾಣವು ದುಃಸ್ವಪ್ನಗಳು ನಮ್ಮನ್ನು ಬಹಳ ಸಮಯದವರೆಗೆ ಕಾಡಲೂಬಹುದು. ಸ್ವಪ್ನ ಶಾಸ್ತ್ರದ ಪ್ರಕಾರ ನಾವು ಕಾಣುವ ಕನಸುಗಳ ಆಧಾರದ ಮೇಲೆ ಅದರ ಅರ್ಥವನ್ನು ಗ್ರಹಿಸಬಹುದಾಗಿದೆ. ಆ ಅರ್ಥಕ್ಕೆ ಅನುಗುಣವಾಗಿ ಪರಿಹಾರ, ಸಮಾಧಾನಗಳನ್ನು ಕಂಡುಕೊಳ್ಳಬಹುದಾಗಿದೆ. ಎಂದಾದರೂ ನಿಮ್ಮ ಕನಸಿನಲ್ಲಿ ಶನಿ ದೇವರನ್ನು ನೀವು ಕಂಡಿದ್ದೀರಾ? ನ್ಯಾಯದ ದೇವರು ಎಂದು ಕರೆಯುವ ಶನಿ ದೇವರು ಕನಸಿನಲ್ಲಿ ಬರುವುದರಿಂದ ಏನಾಗುತ್ತದೆ? ಅದು ಶುಭವೋ, ಅಶುಭವೋ? ಶನಿ ದೇವರು ಹೇಗೆ ಕಾಣಿಸಿದರೆ ಶುಭ ಮತ್ತು ಹೇಗೆ ಕಾಣಿಸಿದರೆ ಅಶುಭ? ಅದಕ್ಕೆ ಪರಿಹಾರವೇನು ಎಂಬುದನ್ನು ಇಂದು ತಿಳಿಯೋಣ.
ಕನಸಿನಲ್ಲಿ ಶನಿ ದೇವನನ್ನು ನೋಡುವುದು ಶುಭವೋ ಅಶುಭವೋ?
ನೀವು ನಿದ್ದೆ ಮಾಡುವಾಗ ಕನಸಿನಲ್ಲಿ ಶನಿದೇವನನ್ನು ನೋಡಿದರೆ ಅದರ ಅರ್ಥವೇನು? ಅದು ಒಳ್ಳೆಯ ಫಲಿತಾಂಶಗಳನ್ನು ತರುತ್ತದೆಯೇ ಅಥವಾ ಕೆಟ್ಟ ಫಲಿತಾಂಶಗಳನ್ನು ತರುತ್ತದೆಯೇ? ಈಗಾಗಲೇ ಶನಿ ಸಾಡೇ ಸತಿಯ ಪ್ರಭಾವಕ್ಕೆ ಒಳಗಾಗಿದ್ದವರಿಗೆ ಈ ಪ್ರಶ್ನೆ ಕಾಡಬಹುದು. ಈ ಸಮಯದಲ್ಲಿ ಅವರು ತಮ್ಮ ಕನಸಿನಲ್ಲಿ ಶನಿದೇವನನ್ನು ನೋಡಿದರೆ, ಶನಿದೇವನ ವಕ್ರ ದೃಷ್ಟಿಯ ಪ್ರಭಾವ ಕಡಿಮೆಯಾಗುತ್ತದೆ. ಇದಲ್ಲದೆ, ಆ ವ್ಯಕ್ತಿಯ ದುಃಖವೂ ದೂರವಾಗುತ್ತದೆ. ಈ ಕನಸು ಶುಭ ಫಲಿತಾಂಶಗಳನ್ನು ಸಹ ನೀಡುತ್ತದೆ. ಆದರೆ ಶನಿ ದೇವರು ಯಾವ ರೀತಿ ಕಾಣಿಸಿದರೆ ನಿಮಗೆ ಶುಭವಾಗುತ್ತದೆ ಎಂದು ತಿಳಿಯೋಣ.
ನವಿಲಿನೊಂದಿಗೆ ಶನಿದೇವ
ನಿಮ್ಮ ಕನಸಿನಲ್ಲಿ ಶನಿದೇವನು ನವಿಲಿನೊಂದಿಗೆ ಕಾಣಿಸಿಕೊಂಡರೆ, ಅದನ್ನು ಒಳ್ಳೆಯ ಸಂಕೇತವೆಂದು ಪರಿಗಣಿಸಬೇಕು. ಅದರಿಂದ ಸಂತೋಷ ಹೆಚ್ಚಾಗುತ್ತದೆ. ಜೀವನದಲ್ಲಿ ಉತ್ತಮ ಫಲಿತಾಂಶಗಳು ದೊರೆಯುತ್ತವೆ. ನೀವು ಆರ್ಥಿಕ ಲಾಭಗಳನ್ನು ಸಹ ಪಡೆಯಬಹುದು.
ಕಾಗೆಯೊಂದಿಗೆ ಶನಿ ದೇವರು
ಶನಿ ದೇವರು ಕಾಗೆಯ ಮೇಲೆ ಸವಾರಿ ಮಾಡುತ್ತಿರುವ ಕನಸು ಕಂಡರೆ ಅದು ಅಶುಭವೆಂದು ಪರಿಗಣಿಸಲಾಗುತ್ತದೆ. ಶನಿಯ ವಾಹನ ಕಾಗೆ. ಆದರೆ, ಶನಿ ದೇವರು ಕಾಗೆಯ ಮೇಲೆ ಸವಾರಿ ಮಾಡುತ್ತಿರುವ ಕನಸು ಕಂಡರೆ ಅದು ಒಳ್ಳೆಯದಲ್ಲ. ಆ ವ್ಯಕ್ತಿಯು ತನ್ನ ಜೀವನದಲ್ಲಿ ಅನೇಕ ಏರಿಳಿತಗಳನ್ನು ಅನುಭವಿಸುತ್ತಾನೆ. ಜೊತೆಗೆ ತನ್ನ ಗೌರವವನ್ನು ಕಳೆದುಕೊಳ್ಳುತ್ತಾನೆ.
ಆನೆಯೊಂದಿಗೆ ಶನಿ ದೇವರು
ನಿಮ್ಮ ಕನಸಿನಲ್ಲಿ ಶನಿಯು ಆನೆಯ ಜೊತೆಗೆ ಕಾಣಿಸಿಕೊಂಡರೆ, ಅದು ಒಳ್ಳೆಯ ಫಲಿತಾಂಶಗಳನ್ನು ನೀಡುತ್ತದೆ. ಶನಿಯು ಆನೆಯ ಮೇಲೆ ಇರುವಂತೆ ಕನಸು ಕಂಡರೆ, ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ ಮತ್ತು ನೀವು ಸಮೃದ್ದಿಯನ್ನು ಪಡೆಯುತ್ತೀರಿ. ಶನಿಯ ಪ್ರಭಾವದಲ್ಲಿರುವ ವ್ಯಕ್ತಿ ಅಂತಹ ಕನಸು ಕಾಣುವುದರಿಂದ ಅವನ ತೊಂದರೆಗಳು ನಿವಾರಣೆಯಾಗುತ್ತದೆ.
ಹದ್ದಿನೊಂದಿಗೆ ಶನಿ ದೇವರು
ನಿಮ್ಮ ಕನಸಿನಲ್ಲಿ ಶನಿದೇವನು ಹದ್ದಿನ ಜೊತೆ ಕಾಣಿಸಿಕೊಂಡರೆ, ಅದನ್ನು ಅಶುಭವೆಂದು ಪರಿಗಣಿಸಬೇಕು. ಅಂತಹ ಕನಸುಗಳು ಬಿದ್ದರೆ, ನೀವು ಅವುಗಳ ಮಾತನ್ನು ಕೇಳಬೇಕು. ಅಂತಹ ಸಂದರ್ಭದಲ್ಲಿ ಸ್ವಲ್ಪ ಜಾಗರೂಕರಾಗಿರುವುದು ಉತ್ತಮ.
ಶನಿ ದೇವರ ಆರಾಧನೆ
ನೀವು ಶನಿ ದೇವರನ್ನು ಪೂಜಿಸುತ್ತಿರುವಂತೆ ಕನಸು ಕಂಡರೆ, ಶನಿಯು ನಿಮ್ಮ ಬಗ್ಗೆ ಸಂತೋಷವಾಗಿದ್ದಾನೆ ಎಂದರ್ಥ. ಅಂತಹ ಕನಸುಗಳು ಶುಭ ಫಲಿತಾಂಶಗಳನ್ನು ನೀಡಬಹುದು. ಕೆಲವೊಮ್ಮೆ ಅಶುಭ ಫಲಿತಾಂಶಗಳನ್ನು ನೀಡಬಹುದು.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟಿಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)