ದೇವರ ಮೊಸಳೆ ಬಬಿಯಾ ಇದ್ದ ಅನಂತಪುರದ ಲೇಕ್‌ ಟೆಂಪಲ್‌ ಎಲ್ಲಿದೆ ಎಷ್ಟು ಹಳೆಯದು? ಇತಿಹಾಸ ಮತ್ತು ವಿಶೇಷತೆ ಏನು?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ದೇವರ ಮೊಸಳೆ ಬಬಿಯಾ ಇದ್ದ ಅನಂತಪುರದ ಲೇಕ್‌ ಟೆಂಪಲ್‌ ಎಲ್ಲಿದೆ ಎಷ್ಟು ಹಳೆಯದು? ಇತಿಹಾಸ ಮತ್ತು ವಿಶೇಷತೆ ಏನು?

ದೇವರ ಮೊಸಳೆ ಬಬಿಯಾ ಇದ್ದ ಅನಂತಪುರದ ಲೇಕ್‌ ಟೆಂಪಲ್‌ ಎಲ್ಲಿದೆ ಎಷ್ಟು ಹಳೆಯದು? ಇತಿಹಾಸ ಮತ್ತು ವಿಶೇಷತೆ ಏನು?

Which temple in Kerala has crocodile?: ಕೇರಳದ ಏಕೈಕ ಸರೋವರ ಕ್ಷೇತ್ರ ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಅನಂತಪುರದಲ್ಲಿರುವ ಶ್ರೀ ಅನಂತಪದ್ಮನಾಭ ಸ್ವಾಮಿ ದೇಗುಲ. ಇದನ್ನು ಅನಂತಪುರ ಲೇಕ್‌ ಟೆಂಪಲ್‌ (Ananthapura Lake Temple) ಎಂದೂ ಗುರುತಿಸುತ್ತಾರೆ. ಇದು ವಿಶಿಷ್ಟ ದೇವಾಲಯ. ಇದರ ವಿವರ ಇಲ್ಲಿದೆ ಗಮನಿಸಿ.

<p>ಕೇರಳದ ಏಕೈಕ ಸರೋವರ ಕ್ಷೇತ್ರ ಅನಂತಪುರದಲ್ಲಿರುವ ಶ್ರೀ ಅನಂತಪದ್ಮನಾಭ ಸ್ವಾಮಿ ದೇಗುಲ.</p>
ಕೇರಳದ ಏಕೈಕ ಸರೋವರ ಕ್ಷೇತ್ರ ಅನಂತಪುರದಲ್ಲಿರುವ ಶ್ರೀ ಅನಂತಪದ್ಮನಾಭ ಸ್ವಾಮಿ ದೇಗುಲ. ( Ananthapura Lake Temple)

ಕೇರಳದ ಏಕೈಕ ದ್ವೀಪ ದೇಗುಲ ಇದು. ಸುತ್ತಲೂ ನೀರು ತುಂಬಿಕೊಂಡಿರುವ ಕಾರಣ ಇದಕ್ಕೆ ಸರೋವರ ಕ್ಷೇತ್ರ ಎಂದೂ ಹೇಳುತ್ತಾರೆ. ಸಸ್ಯಾಹಾರ ಸ್ವೀಕರಿಸುವ ಏಕೈಕ ಮೊಸಳೆ ಇರುವ ಕ್ಷೇತ್ರ ಎಂದೂ ಇದು ಜನಪ್ರಿಯ. ಆ ಮೊಸಳೆಯೇ ನಿನ್ನೆ ತಡರಾತ್ರಿ ವಿಧಿವಶವಾದ ಬಬಿಯಾ.

ಈ ಕ್ಷೇತ್ರ ಬಹಳ ವಿಶಿಷ್ಟವಾದುದು. ದೇವರ ವಿಗ್ರಹದಿಂದ ಹಿಡಿದು ಸುತ್ತಲಿನ ಆವರಣ ರಚನೆಯ ತನಕ ಎಲ್ಲವೂ ವಿಶಿಷ್ಟ ಶೈಲಿಯಲ್ಲಿವೆ. ಅವುಗಳ ಕಾರಣಕ್ಕಾಗಿಯೇ ಈ ಕ್ಷೇತ್ರದಲ್ಲಿ ಶಕ್ತಿ ಸಂಚಾರ ಬಲವಾಗಿದೆ. ಸುತ್ತಮುತ್ತ ಬಯಲು ಪ್ರದೇಶದಂತಿದ್ದರೂ, ಮರಗಿಡಗಳು ಹಚ್ಚ ಹಸಿರಿನ ವಾತಾವರಣ ಇಲ್ಲದೇ ಇದ್ದರೂ, ದೇವಾಲಯದ ಸುತ್ತಲಿನ ಶುದ್ಧ ನೀರಿನ ಸರೋವರದ ನೀರಿನ ಮಟ್ಟ ಸದಾ ಒಂದೇ ಮಟ್ಟದಲ್ಲಿರುತ್ತದೆ.

ಉದಾತ್ತವಾದ ದೈವೀಕ ಪ್ರಚೋದನೆ ಮನದಾಳದಲ್ಲಿ ಸ್ಪುರಿಸುವಂತಹ ಅವ್ಯಕ್ತ ಅನುಭವವು ಭಕ್ತರ ಮನಸ್ಸಿನಲ್ಲಿ ಮೂಡುತ್ತದೆ. ನಾಲ್ಕು ಕಡೆಯಲ್ಲಿ, ಗುಡ್ಡಗಳಿಂದ ಆವೃತವಾಗಿರುವ ಭೂ ಪ್ರದೇಶ! ಬಟ್ಟಲನ್ನು ಹೋಲುವ ಪ್ರದೇಶ! ವಿಶಾಲವಾದ ಗೋವುಗಳು ಮೇಯುತ್ತಿರುವ ಮೈದಾನ. ದೇವಸ್ಥಾನದ ಯಾವುದೇ ಕುರುಹು ಮೊದಲ ನೋಟಕ್ಕೆ ದೃಶ್ಯವಲ್ಲ ಎಂದು ದೇವಸ್ಥಾನದ ವೆಬ್‌ತಾಣದ ಮಾಹಿತಿ ವಿವರಿಸುತ್ತದೆ. ಈ ದೇಗುಲದ ಒಂದೊಂದೇ ವಿಶೇಷಗಳನ್ನು ಗಮನಿಸೋಣ.

ಇದನ್ನೂ ಓದಿ- Who is Babiya crocodile?: ಬಬಿಯಾ ಮೊಸಳೆಯ ಹಿನ್ನೆಲೆ; ಎಲ್ಲಿಂದ ಬಂತು ಈ ದೇವರ ಮೊಸಳೆ?

ʻಸರ್ಪಕಟ್ಟುʼ ದೇವಾಲಯದ ಆವರಣ

ಅನಂತಪುರ ಅನಂತ ಪದ್ಮನಾಭ ದೇವಾಲಯದ ಆವರಣ ಗೋಡೆ 3 ಮೀಟರ್ ಎತ್ತರ ಇದೆ. ಇದು ‘ಸರ್ಪಕಟ್ಟು’ ಶೈಲಿಯ ಕೆಂಪುಕಲ್ಲಿನಿಂದ ಕಟ್ಟಿದ ವಿಶೇಷ ರಚನೆ. ಕೇರಳದ ಕೆಲವು ದೇವಾಲಯಗಳಲ್ಲಿ ಮಾತ್ರ ಈ ಪುರಾತನ ಸರಪಕಟ್ಟು ಶೈಲಿಯ ಆವರಣಗೋಡೆಯನ್ನು ಕಾಣಬಹುದು.

ಯಾವುದೇ ಕಲ್ಲಿನ ಕಟ್ಟಕ್ಕೆ ಸರ್ಪವು ಏರಬಲ್ಲುದು. ಆದರೆ ಈ ರೀತಿಯ ರಚನೆಗೆ ಸರ್ಪಕ್ಕೂ ಏರಲು ಸಾಧ್ಯವಿಲ್ಲ. ಆದುದರಿಂದಲೇ ಈ ರಚನೆಗೆ ‘ಸರ್ಪಕಟ್ಟು’ ಎಂಬ ಹೆಸರು. ಈ ರಚನೆಯು ಒಂದೊಮ್ಮೆ ಮಹಾಕ್ಷೇತ್ರದ ಕುರುಹಾಗಿತ್ತು ಎಂಬುದನ್ನು ಶ್ರೀ ಕ್ಷೇತ್ರದ ವಾಸ್ತುಶಿಲ್ಪಿ ದಿವಂಗತ ಪರಮೇಶ್ವರನ್ ನಂಬೂದಿರಿ ಉಲ್ಲೇಖಿಸಿದ್ದಕ್ಕೆ ದಾಖಲೆ ಇದೆ.

ಆಳದಲ್ಲಿರುವಂತೆ ಭಾಸವಾಗುವ ದೇವಾಲಯ

ಸರ್ಪಕಟ್ಟು ಶೈಲಿಯ ಹೊರಗೋಡೆ ದಾಟಿದಾಗ ಕಪ್ಪು ಕಲ್ಲಿನ ಗುಡ್ದವು (ಪಾರೆಕಲ್ಲು) ರಕ್ಷಾ ಕವಚದಂತೆ ಗೋಚರವಾಗುವುದು. ಸರ್ಪಕಟ್ಟು ಆವರಣ ಗೋಡೆಗೆ ತಲುಪಿದವರಿಗೆ ದೇವಸ್ಥಾನವು ಬಹಳ ಆಳದಲ್ಲಿರುವಂತೆ ಭಾಸವಾಗುತ್ತದೆ. ಮಹಾದ್ವಾರವನ್ನು ದಾಟಿದ ಬಳಿ ವಿಶಾಲ ದೇವರ ಅಂಗಣ ಕಾಣುವುದು. ಅಲ್ಲಲ್ಲಿ ಕಟ್ಟಡಗಳು, ಕಪ್ಪು ಕಲ್ಲಿನ ಪ್ರಕೃತಿದತ್ತವಾದ ಪ್ರದಕ್ಷಿಣಾ ಪಥ! ಮುಂದಕ್ಕೆ ‘ಬಲಿಕಲ್ಲ’ ಎಂಬ ಪುರಾತನ ರಚನೆ ಇದೆ. ಇದನ್ನು ದಾಟಿ ಮೆಟ್ಟಿಲುಗಳ ಮೂಲಕ ಕೆಳಕ್ಕೆ ಇಳಿದರೆ, ತಲಪುವುದೇ ದೇವಗೊಪುರಕ್ಕೆ. ದೇವಗೊಪುರದಿಂದ ಮುಂದಕ್ಕೆ ನೋಡಿದಾಗ, ವೈಕುಂಟ ಸದೃಶನಾದ ಮಹಾ ಕ್ಷೇತ್ರದ ದರ್ಶನ! ವಿಶಾಲವಾದ ಕೆರೆಯ ಮಧ್ಯದಲ್ಲಿ ದೇವಾಲಯ! ಎನ್ನುವ ವಿವರಣೆ ಕೊಟ್ಟಿದೆ ದೇವಾಲಯದ ಮಾಹಿತಿ ತಾಣ.

ಇದನ್ನೂ ಓದಿ- Ananthapura Temple Crocodile Babiya is no more: ಅನಂತ ಸಾನ್ನಿಧ್ಯ ಸೇರಿದ ಬಬಿಯಾ; ಸರೋವರ ದೇಗುಲ ಅನಂತಪುರದ ʻದೇವರ ಮೊಸಳೆʼ ಇನ್ನಿಲ್ಲ

ಕಡುಶರ್ಕರ ಪಾಕದ ವಿಗ್ರಹ

ಶಿಲ್ಪಶಾಸ್ತ್ರ ವಿಧಿಯಂತೆ ಇಲ್ಲಿನ ದೇವರ ವಿಗ್ರಹವು ‘ಕಡುಶರ್ಕರ ಪಾಕʼದ್ದು. ಇದು ಪುರಾತನ ವಿಗ್ರಹ ಶೈಲಿ ಮತ್ತು ಅತಿ ವಿರಳ. ಸುಮಾರು 1200 ವರ್ಷಗಳಿಗೂ ಅಧಿಕ ಇತಿಹಾಸ ಈ ವಿಗ್ರಹಗಳದ್ದು. ಮುನಿಶ್ರೇಷ್ಠರ ತಪೋಬಲದಿಂದಲೂ, ದೇವರ ಅಸ್ಥಿತ್ವವನ್ನು ಅವರ ಸಿದ್ಧಾಂತಕ್ಕೆ ಪರಿವರ್ತಿಸಿದಾಗ ಉಂಟಾದ ವಿಧಾನವೇ ಈ ಕಡುಶರ್ಕರ ಪಾಕ. ಅವರ ಆಶಯವೂ ಮೂರ್ತ ಸ್ವರೂಪವನ್ನು ತಾಳಿದುದು ಈ ಕಡುಶರ್ಕರ ಪಾಕ ವಿಧಾನದಿಂದ. ಹೆಸರೇ ಸೂಚಿಸುವಂತೆ, ಕಠಿಣವಾದ ಪಾಕವೇ ಈ ವಿಗ್ರಹ ನಿರ್ಮಾಣದಮೂಲ. ಎಂದರೆ, ಶರ್ಕರೋಪಾದಿಯಲ್ಲಿರುವ ಹತ್ತು ಹಲವು ವಸ್ತುಗಳ ಮಿಶ್ರಣವೇ ಇದರ ಪ್ರಧಾನ ಕಚ್ಛಾವಸ್ತು!

ಸರೋವರ ಕ್ಷೇತ್ರ, ಅನಂತಪುರದ ಚರಿತ್ರ ವಿವರ ಓದಲು - Sri Ananthapadmanabha Swamy Temple ಚರಿತ್ರೆ 

ವಿಶೇಷತೆಗಳನ್ನು ದೃಶ್ಯದೊಂದಿಗೆ ವೀಕ್ಷಿಸಲು ಕೆಳಗಿನ ಯೂಟ್ಯೂಬ್‌ ಡಾಕ್ಯುಮೆಂಟರಿ ನೋಡಬಹುದು.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.