ಭಾನುವಾರದಿಂದ ಶನಿವಾರದವರೆಗೆ ಯಾವ ವಾರ ಯಾವ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಶುಭ, ಯಾವ ಬಣ್ಣದ ಬಟ್ಟೆ ಧರಿಸುವುದು ತಪ್ಪಿಸಬೇಕು?
ಜ್ಯೋತಿಷ್ಯದ ಪ್ರಕಾರ ಒಂದೊಂದು ವಾರವೂ ಒಂದೊಂದು ಗ್ರಹಗಳಿಗೆ ಸಂಬಂಧಿಸಿದೆ. ಹಾಗೇ ಗ್ರಹಗಳಿಗೂ ಬಣ್ಣಗಳಿಗೂ ಸಂಬಂಧವಿದೆ. ಆದ್ದರಿಂದ ಭಾನುವಾರದಿಂದ ಶನಿವಾರದವರೆಗೆ ಯಾವ ಬಣ್ಣ ಧರಿಸಿದರೆ ಶುಭ? ಇಲ್ಲಿದೆ ಮಾಹಿತಿ.

ಜ್ಯೋತಿಷ್ಯಶಾಸ್ತ್ರದಲ್ಲಿ ಬಣ್ಣಗಳಿಗೂ ಬಹಳ ಪ್ರಾಮುಖ್ಯತೆ ಇದೆ. ಆಯಾ ರಾಶಿ, ಜನ್ಮ ನಕ್ಷತ್ರ, ಜನ್ಮದಿನಾಂಕಗಳಿಗೆ ಅನುಗುಣವಾಗಿ ಆಯಾ ಬಣ್ಣದ ಹರಳುಗಳನ್ನು , ಬಟ್ಟೆಗಳನ್ನು ಧರಿಸುವುದು, ವಾಹನಗಳನ್ನು ಖರೀದಿಸುವುದು ಮಾಡಿದರೆ ಜೀನವದಲ್ಲಿ ಎಲ್ಲವೂ ಧನಾತ್ಮಕವಾಗಿರುತ್ತದೆ. ಹಾಗೇ ಒಂದೊಂದು ವಾರವೂ ಒಂದೊಂದು ಗ್ರಹಗಳಿಗೆ ಸಂಬಂಧಟ್ಟಿದೆ. ಅದರ ಪ್ರಕಾರ ಯಾವ ವಾರ ಯಾವ ಬಣ್ಣದ ಬಟ್ಟೆಗಳನ್ನು ಧರಿಸಬೇಕು,ಯಾವ ಬಣ್ಣದ ಬಟ್ಟೆ ಧರಿಸುವುದನ್ನು ತಪ್ಪಿಸಬೇಕು? ಇಲ್ಲಿದೆ ವಿವರ.
ಭಾನುವಾರ
ಜ್ಯೋತಿಷ್ಯದ ಪ್ರಕಾರ ಭಾನುವಾರ ಸೂರ್ಯನಿಗೆ ಸಂಬಂಧಿಸಿದೆ. ಮತ್ತು ಚಿನ್ನ ಅಥವಾ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಶುಭ.ಇದನ್ನು ಹೊರತುಪಡಿಸಿ ತಿಳಿ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸುವುದು ಉತ್ತಮ . ಕಿತ್ತಳೆ ಬಣ್ಣದ ಬಟ್ಟೆ ಧರಿಸಿದರೆ ಅದೃಷ್ಟ ಒಲಿಯುತ್ತದೆ ಎಂದು ಹೇಳಲಾಗುತ್ತದೆ. ಹಳದಿ ಮತ್ತು ಬಿಳಿ ಬಣ್ಣಗಳನ್ನು ಧರಿಸಿದರೆ ಮಿಶ್ರ ಫಲ. ಆದರೆ ಕಪ್ಪು, ನೀಲಿ, ಕಡು ಹಸಿರು ಬಣ್ಣ ಧರಿಸಿದರೆ ನೀವು ಸಣ್ಣ ಪುಟ್ಟ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ.
ಸೋಮವಾರ
ಜ್ಯೋತಿಷ್ಯದ ಪ್ರಕಾರ ಸೋಮವಾರವು ಚಂದ್ರನಿಗೆ ಸಂಬಂಧಿಸಿದೆ. ಮತ್ತು ಬಿಳಿ ಬಣ್ಣವು ಈ ದಿನಕ್ಕೆ ಮಂಗಳಕರವಾಗಿದೆ. ಅದನ್ನು ಹೊರತುಪಡಿಸಿ ಹಳದಿ ಬಣ್ಣದ ಬಟ್ಟೆ ಧರಿಸಿದರೆ ಮಿಶ್ರ ಫಲ ಸಿಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಆದಷ್ಟು ಕಡು ಕೆಂಪು, ಕಪ್ಪು ಅಥವಾ ಕಡು ನೀಲಿ ಬಣ್ಣಗಳನ್ನು ಧರಿಸುವುದು ತಪ್ಪಿಸಿದರೆ ಒಳ್ಳೆಯದು.
ಮಂಗಳವಾರ
ಈ ದಿನ ಮಂಗಳ ಗ್ರಹಕ್ಕೆ ಸಂಬಂಧಿಸಿದೆ. ಅದರ ಪ್ರಕಾರ ಈ ದಿನಕ್ಕೆ ಕೆಂಪು ಬಣ್ಣ ಸೂಕ್ತವಾಗಿದೆ. ಬೆಳ್ಳಿಯಂತಹ ಬಿಳಿ ಬಣ್ಣವು ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ . ಆದರೆ ಕಡು ಹಸಿರು ಮತ್ತು ಕಡು ನೀಲಿ ಬಣ್ಣದ ಬಟ್ಟೆ ಧರಿಸಿದರೆ ಸಮಸ್ಯೆ ಹೆಚ್ಚಬಹುದು ಎನ್ನುತ್ತಾರೆ ಜ್ಯೋತಿಷಿಗಳು.
ಬುಧವಾರ
ಈ ದಿನ ಬುಧ ಗ್ರಹದೊಂದಿಗೆ ಸಂಪರ್ಕ ಹೊಂದಿದೆ. ಈ ದಿನಕ್ಕೆ ಹಸಿರು ಬಹಳ ಸೂಕ್ತವಾಗಿದೆ. ಕಡು ನೀಲಿ ಮತ್ತು ಕಪ್ಪು ಬಣ್ಣಗಳು ಮಿಶ್ರ ಫಲಿತಾಂಶಗಳನ್ನು ನೀಡುತ್ತವೆ. ಆದರೆ ಈ ದಿನ ಬಿಳಿ ಮತ್ತು ಹಳದಿ ಬಣ್ಣದ ಬಟ್ಟೆಗಳನ್ನು ಧರಿಸದಿರುವುದು ಉತ್ತಮ.
ಗುರುವಾರ
ಈ ದಿನ ಗುರು ಗ್ರಹದೊಂದಿಗೆ ಸಂಪರ್ಕ ಹೊಂದಿದೆ ಹಾಗೂ ಗುರುವಿಗೆ ಹಳದಿ ಬಣ್ಣ ಇಷ್ಟವಾಗಿರುವುದರಿಂದ ಈ ದಿನ ಹಳದಿ ಬಣ್ಣದ ಬಟ್ಟೆ ಧರಿಸಬಹುದು. ಕಡು ನೀಲಿ ಬಣ್ಣ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ಆದರೆ ಈ ದಿನ ಕಡು ಕೆಂಪು ಮತ್ತು ತಿಳಿ ಕೆಂಪು ಬಟ್ಟೆಗಳನ್ನು ಆದಷ್ಟು ಅವಾಯ್ಡ್ ಮಾಡಿ.
ಶುಕ್ರವಾರ
ಶುಕ್ರ ಗ್ರಹಕ್ಕೆ ಸಂಪರ್ಕ ಹೊಂದಿರುವುದರಿಂದ ಈ ದಿನ ನೀವು ಗುಲಾಬಿ ಅಥವಾ ಬಿಳಿ ಬಣ್ಣದ ಬಟ್ಟೆ ಧರಿಸುವುದು ಶುಭ ಫಲಗಳನ್ನು ನೀಡುತ್ತದೆ. ಒಂದು ವೇಳೆ ನಿಮ್ಮ ಬಳಿ ಆ ಬಣ್ಣದ ಬಟ್ಟೆ ಇಲ್ಲದಿದ್ದಲ್ಲಿ, ಕಡು ಹಸಿರು ಮತ್ತು ಗಾಢ ನೀಲಿ ಧರಿಸಬಹುದು. ಇದು ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ಈ ದಿನ ಕಡುಕೆಂಪು ಬಣ್ಣದ ಬಟ್ಟೆ ಧರಿಸುವುದನ್ನು ತಪ್ಪಿಸಿ.
ಶನಿವಾರ
ಜ್ಯೋತಿಷ್ಯದ ಪ್ರಕಾರ ಶನಿವಾರವು ಶನಿಗ್ರಹದೊಂದಿಗೆ ಸಂಪರ್ಕ ಹೊಂದಿದೆ. ಈ ದಿನ ಕಪ್ಪು ಅಥವಾ ಕಡು ನೀಲಿ ಬಣ್ಣ ಸೂಕ್ತವಾಗಿದೆ. ಬಿಳಿ ಮತ್ತು ಗಾಢ ನೀಲಿ ಬಣ್ಣಗಳು ಮಿಶ್ರ ಫಲಿತಾಂಶಗಳನ್ನು ನೀಡುತ್ತವೆ. ಮತ್ತು ಶನಿವಾರ ಹಳದಿ ಬಣ್ಣದ ಬಟ್ಟೆ ಧರಿಸುವುದು ಅವಾಯ್ಡ್ ಮಾಡಿ.
ಗಮನಿಸಿ: ಇಲ್ಲಿ ತಿಳಿಸಿರುವ ಮಾಹಿತಿಯು ಜ್ಯೋತಿಷ್ಯ ಶಾಸ್ತ್ರವನ್ನು ಆಧರಿಸಿದ್ದು, ನಿಮ್ಮ ನಂಬಿಕೆಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಿ. ಹೆಚ್ಚಿನ ಮಾಹಿತಿಗೆ ತಜ್ಞ ಜ್ಯೋತಿಷಿಗಳನ್ನು ಸಂಪರ್ಕಿಸಿ.
