ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ತವರಿನಿಂದ ಉಡುಗೊರೆ ದೊರೆಯಲಿದೆ, ಅವಿವಾಹಿತರಿಗೆ ವಿವಾಹದ ಮಾತುಕತೆ ಯಶಸ್ವಿ; ಸ್ತ್ರೀ ವಾರ ಭವಿಷ್ಯ

ತವರಿನಿಂದ ಉಡುಗೊರೆ ದೊರೆಯಲಿದೆ, ಅವಿವಾಹಿತರಿಗೆ ವಿವಾಹದ ಮಾತುಕತೆ ಯಶಸ್ವಿ; ಸ್ತ್ರೀ ವಾರ ಭವಿಷ್ಯ

Weekly Women horoscope: ಸ್ತ್ರೀ ವಾರ ಭವಿಷ್ಯ (ಜೂನ್‌ 7 ರಿಂದ 13ವರೆಗೆ) ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಈ ವಾರದ ಸ್ತ್ರೀ ಭವಿಷ್ಯ ಇಲ್ಲಿದೆ.

ಸ್ತ್ರೀ ವಾರ ಭವಿಷ್ಯ
ಸ್ತ್ರೀ ವಾರ ಭವಿಷ್ಯ

ಸ್ತ್ರೀ ವಾರ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (Weekly Women horoscope in Kannada).

ಮೇಷ

ನಿಮ್ಮ ಮಾತಿನಲ್ಲಿ ಎಲ್ಲರ ಮನಸ್ಸನ್ನು ಗೆಲ್ಲುವ ಮೋಡಿ ಇರುತ್ತದೆ. ಉದ್ಯೋಗದಲ್ಲಿ ಅನಿರೀಕ್ಷಿತ ಧನಾತ್ಮಕ ಬದಲಾವಣೆಗಳು ಕಂಡುಬರಲಿವೆ. ಮಕ್ಕಳ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವಿರಿ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶಗಳಿಂದ ಸಂತಸ ಪಡುತ್ತಾರೆ. ದೈನಂದಿನ ಕೆಲಸಗಳ ನಡುವೆ ಹೆಚ್ಚಿನ ಜವಾಬ್ದಾರಿಯೊಂದನ್ನು ಒಪ್ಪಿಕೊಳ್ಳುವಿರಿ. ನಿಮ್ಮ ರೀತಿ ನೀತಿಯಿಂದ ಕುಟುಂಬದಲ್ಲಿ ಶಾಂತಿ ಸೌಹಾರ್ದತೆ ನೆಲೆಸುತ್ತದೆ. ವಿಶ್ರಾಂತಿ ಇಲ್ಲದೆ ಕೆಲಸ ಮಾಡುವಿರಿ. ಸದಾ ಭಯ ಕಾಡುತ್ತದೆ. ಆಪತ್ಕಾಲದಲ್ಲಿ ಸಂಗಾತಿಯ ಸಹಾಯ ಸಹಕಾರ ದೊರೆಯುತ್ತದೆ. ಅವಿವಾಹಿತರಿಗೆ ವಿವಾಹದ ಮಾತುಕತೆ ನಡೆಯುತ್ತದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ.

ವೃಷಭ

ಎಲ್ಲರ ಮನಸ್ಸನ್ನು ಗೆಲ್ಲುವಂತೆ ಕೆಲಸ ನಿರ್ವಹಿಸುವಿರಿ. ಹಟದಿಂದ ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಗಳಿಸುವಿರಿ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ತವರಿನಿಂದ ಉಡುಗೊರೆಯೊಂದು ದೊರೆಯುತ್ತದೆ. ದೈನಂದಿನ ಕೆಲಸ ಕಾರ್ಯಗಳಲ್ಲಿ ಬದಲಾವಣೆ ಮಾಡಬೇಕಾಗುತ್ತದೆ. ಉತ್ತಮ ಅವಕಾಶ ದೊರೆಯುವ ಕಾರಣ ಉದ್ಯೋಗ ಬದಲಿಸುವಿರಿ. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸದಲ್ಲಿ ನಿರತರಾಗುತ್ತಾರೆ. ಮಕ್ಕಳ ಜವಾಬ್ದಾರಿ ಹೆಚ್ಚುತ್ತದೆ. ಪತಿ ಜೊತೆಯಲ್ಲಿನ ಪ್ರೀತಿ ವಿಶ್ವಾಸವು ಹೆಚ್ಚುತ್ತದೆ. ಮನದಲ್ಲಿನ ಬೇಸರದಿಂದ ಹೊರ ಬರಲು ಸರಳವಾದ ವ್ಯಾಪಾರವೊಂದನ್ನು ಆರಂಭಿಸುವಿರಿ. ಮನೆಯವರ ಸಹಾಯ ಸಹಕಾರ ಹೊಸ ಆಶಯಗಳನ್ನು ಉಂಟುಮಾಡಲಿದೆ.

ಮಿಥುನ

ಹಣಕಾಸಿನ ಜವಾಬ್ದಾರಿ ನಿಮ್ಮದಾಗಲಿದೆ. ಇರುವ ಹಣದಲ್ಲಿಯೇ ಉಳಿಸಲು ಯೋಜನೆ ರೂಪಿಸಿ ಯಶಸ್ವಿಯಾಗುವಿರಿ. ಅನಾವಶ್ಯಕವಾದ ವೆಚ್ಚಗಳನ್ನು ನಿಯಂತ್ರಿಸಲು ಪ್ರಯತ್ನಿಸುವಿರಿ. ಅನಾವಶ್ಯಕ ಚಿಂತೆಯೊಂದು ನಿಮ್ಮನ್ನು ಕಾಡಲಿದೆ. ಕುಟುಂಬದಲ್ಲಿ ಎಲ್ಲರ ಪ್ರಶಂಸೆ ಗಳಿಸುವಿರಿ. ಸಮಾಜದಲ್ಲಿ ವಿಶೇಷ ಗೌರವಕ್ಕೆ ದೊರೆತು ನಾಯಕತ್ವ ವಹಿಸಿಕೊಳ್ಳುವಿರಿ. ಉದ್ಯೋಗಸ್ಥರಾದಲ್ಲಿ ಉನ್ನತ ಅಧಿಕಾರ ದೊರೆಯುತ್ತದೆ. ಹಣಕಾಸಿನ ವಿಚಾರದಲ್ಲಿ ತಂದೆ ತಾಯಿಗೆ ಸಹಾಯ ಮಾಡುವಿರಿ. ನಿಮ್ಮ ಮನದಾಸೆಗಳು ಸುಲಭವಾಗಿ ನೆರವೇರುತ್ತದೆ. ತೆಗೆದುಕೊಳ್ಳುವ ನಿರ್ಧಾರವನ್ನು ಪದೇ ಪದೇ ಬದಲಿಸುವ ಕಾರಣ ಕೆಲಸದ ಒತ್ತಡ ಹೆಚ್ಚುತ್ತದೆ. ಮಕ್ಕಳ ಸಹಾಯ ನಿಮಗಿರುತ್ತದೆ.

ಕಟಕ

ಸಮಯವನ್ನು ಗೌರವಿಸುವ ನೀವು ಸದಾ ಚಟುವಟಿಕೆಯಿಂದ ಕೂಡಿರುತ್ತೀರಿ. ಸದಾ ಉತ್ಸಾಹದಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸುವಿರಿ. ನಿಮ್ಮಿಂದಾಗಿ ಕುಟುಂಬದ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ. ಯಾವುದೇ ವಿಚಾರವಾದರೂ ಧೈರ್ಯದಿಂದ ಮುನ್ನುಗ್ಗುವಿರಿ. ಆತುರಗೊಂಡರೆ ಅಪಜಯ ಖಂಡಿತ. ಕುಟುಂಬದಲ್ಲಿನ ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆಗೆ ಪ್ರಯತ್ನಿಸಿ ಯಶಸ್ವಿಯಾಗುವಿರಿ. ಯಾವುದಾದರೂ ಒಂದು ಕೆಲಸ ಕಾರ್ಯಗಳಲ್ಲಿ ತಲ್ಲೀನರಾಗುವಿರಿ. ಮಕ್ಕಳ ಜೀವನದಲ್ಲಿನ ಅಸಮಾನತೆಗನ್ನು ಸರಿಪಡಿಸುವಿರಿ. ಹಣ ಉಳಿಸುವಲ್ಲಿ ಯಶಸ್ವಿಯಾಗುವಿರಿ. ಆರೋಗ್ಯದ ಬಗ್ಗೆ ಗಮನ ಇರಲಿ. ಸಮಾಜ ತಿದ್ದುವ ಕೆಲಸ ಮಾಡುವಿರಿ.

ಸಿಂಹ

ಸಣ್ಣ ಪುಟ್ಟ ಕೆಲಸವನ್ನೂ ಗಮನವಿಟ್ಟು ಮಾಡುವಿರಿ. ಅತಿಯಾದ ಆತ್ಮವಿಶ್ವಾಸದಿಂದ ತಪ್ಪು ನಿರ್ಧಾರ ತೆಗೆದುಕೊಳ್ಳುವಿರಿ. ಹಿರಿಯರ ಸಲಹೆಯನ್ನು ಅನುಸರಿಸುವುದು ಒಳ್ಳೆಯದು. ಉದ್ಯೋಗದಲ್ಲಿ ಕೆಲವೊಂದು ಬದಲಾವಣೆಗಳು ಎದುರಾಗಲಿವೆ. ಕೊಂಚ ಪ್ರಯತ್ನಪಟ್ಟಲ್ಲಿ ಉನ್ನತ ಸ್ಥಾನಕ್ಕೆ ಬಡ್ತಿ ದೊರೆಯುತ್ತದೆ. ಗೃಹಿಣಿಯರ ಜವಾಬ್ದಾರಿ ಹೆಚ್ಚಾಗುತ್ತದೆ. ಅನಾವಶ್ಯಕ ವಾದ ವಿವಾದದಿಂದ ಆತ್ಮೀಯರು ದೂರವಾಗಹುದು. ತಂದೆ ಅಥವಾ ಹಿರಿಯ ವ್ಯಕ್ತಿಯಿಂದ ಅನಿರೀಕ್ಷಿತವಾಗಿ ಹಣದ ಸಹಾಯ ದೊರೆಯುತ್ತದೆ. ಕೌಟುಂಬಿಕ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯುವಿರಿ. ಕುಟುಬದ ಆಸ್ತಿ ವಿಚಾರದಲ್ಲಿ ತೊಂದರೆ ದೂರ ಮಾಡುವಿರಿ. ಧಾರ್ಮಿಕ ಗುರುಗಳನ್ನು ಭೇಟಿ ಮಾಡುವಿರಿ.

ಕನ್ಯಾ

ಮನಸ್ಸಿನ ಮೇಲೆ ಹತೋಟಿ ಸಾಧಿಸಲು ಸಾಧ್ಯವಾಗುವುದಿಲ್ಲ. ಅನಾವಶ್ಯಕವಾಗಿ ಬೇರೆಯವರ ಕೆಲಸ ಕಾರ್ಯಗಳನ್ನು ಟೀಕಿಸುವಿರಿ. ಅದೃಷ್ಠದಿಂದ ನಿಮ್ಮೆಲ್ಲಾ ಕೆಲಸ ಕಾರ್ಯಗಳು ಯಶಸ್ವಿಯಾಗುತ್ತದೆ. ಸಂಗಾತಿಯಿಂದ ನಿಮಗಿಷ್ಟವಾದ ಉಡುಗೊರೆಯೊಂದು ದೊರೆಯಲಿದೆ. ಹೆಚ್ಚಿನ ಜವಾಬ್ದಾರಿಯನ್ನು ಒಪ್ಪಬೇಕಾಗುತ್ತದೆ.. ವಿಶ್ರಾಂತಿ ಇಲ್ಲದ ದುಡಿಮೆಯಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಎದುರಾಗುವ ತೊಂದರೆಯನ್ನು ಎದುರಿಸಿ ಪಾರಾಗುವಿರಿ. ನಿಮ್ಮ ಹೆಸರಿನಲ್ಲಿರುವ ಆಸ್ತಿ ವಿವಾದ ಕೊನೆಯಾಗಲಿದೆ. ಪತಿ ಜೊತೆಯಲ್ಲಿ ಹಣಕಾಸಿನ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಲಿದೆ. ಸಾಧ್ಯವಾದಷ್ಟೂ ಮೌನವಾಗಿ ಕೆಲಸ ಸಾಧಿಸಲು ಪ್ರಯತ್ನಿಸುವಿರಿ.

ತುಲಾ

ದೈನಂದಿನ ಕೆಲಸ ಕಾರ್ಯಗಳಿಂದ ಮನದಲ್ಲಿ ಬೇಸರ ಉಂಟಾಗಲಿದೆ. ವಿಶ್ರಾಂತಿ ಇಲ್ಲದ ಜೀವನ ನಿಮ್ಮದಾಗಲಿದೆ. ತವರಿನ ಬಗ್ಗೆ ವಿಶೇಷವಾದ ಅಕ್ಕರೆ ತೋರುವಿರಿ. ತವರುಮನೆಯ ಧಾರ್ಮಿಕ ಕಾರ್ಯವನ್ನು ನಡೆಸಿಕೊಡುವಿರಿ. ದಿಢೀರ್‌ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಅತಿಮುಖ್ಯವಾದ ಕೆಲಸವೊಂದನ್ನು ಮರೆತುಬಿಡುವಿರಿ. ಹಟದಿಂದಾಗಿ ಮಕ್ಕಳ ಪ್ರಗತಿಗೆ ನಾಂದಿ ಹಾಡುವಿರಿ. ಯಾರಿಂದಲೂ ನಿಮಗೆ ಸಹಾಯ ದೊರೆಯುವುದಿಲ್ಲ. ಸ್ವಂತ ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಗುರಿ ತಲುಪುವವರೆಗೂ ವಿಶ್ರಾಂತಿ ಪಡೆಯುವುದಿಲ್ಲ. ವಿದ್ಯಾರ್ಥಿಗಳು ಹೆಚ್ಚಿನ ಅಧ್ಯಯನಕ್ಕೆ ವಿದೇಶಕ್ಕೆ ತೆರಳಲಿದ್ದಾರೆ. ಕುಟುಂಬದಲ್ಲಿನ ಮಂಗಳ ಕಾರ್ಯವೊಂದು ಮುಂದೂಡಲ್ಪಡುತ್ತದೆ.

ವೃಶ್ಚಿಕ

ಪ್ರತಿಯೊಂದು ವಿಚಾರಗಳಿಗೂ ಸಿಡುಕುತನದಿಂದ ಉತ್ತರಿಸುವಿರಿ. ಏಕಾಂಗಿತನದ ಭಾವನೆಯಿಂದ ಸಹನೆ ಇಲ್ಲದೆ ವರ್ತಿಸುವಿರಿ. ಒಮ್ಮೆ ತೆಗೆದುಕೊಂಡ ತೀರ್ಮಾನಗಳನ್ನು ಬದಲಾಯಿಸುವುದಿಲ್ಲ. ನಿಮ್ಮ ತಪ್ಪು ನಿರ್ಧಾರದಿಂದ ಕುಟುಂಬದಲ್ಲಿ ಬೇಸರ ಉಂಟಾಗುತ್ತದೆ. ಕೈ ಹಿಡಿದ ಕಾರ್ಯಗಳಲ್ಲಿ ಯಶಸ್ಸು ಕಾಣುತ್ತದೆ. ಸಹನೆಯಿಂದ ವರ್ತಿಸಿದಲ್ಲಿ ಎಲ್ಲರ ಸಹಾಯ ಸಹಕಾರ ದೊರೆಯುತ್ತದೆ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಕುಟುಂಬದಲ್ಲಿ ಉತ್ತಮ ಬದಲಾವಣೆಗಳು ಕಂಡುಬರಲಿದೆ. ಉದ್ಯೋಗಸ್ಥರಿಗೆ ವಿಶೇಷ ಸ್ಥಾನಮಾನ ಲಭಿಸುತ್ತದೆ್. ಆರೋಗ್ಯ ಕಾಪಾಡಿಕೊಳ್ಳಲು ಯೋಗ ಪ್ರಾಣಾಯಾಮವನ್ನು ಅನುಸರಿಸುವಿರಿ. ಪತಿಯೊಂದಿಗೆ ಯಾತ್ರಾಸ್ಥಳಕ್ಕೆ ಭೇಟಿ ನೀಡುವಿರಿ.

ಧನಸ್ಸು

ದುಡುಕದೆ ಬುದ್ಧಿವಂತಿಕೆಯಿಂದ ಕುಟುಂಬವನ್ನು ಸರಿಹಾದಿಯಲ್ಲಿ ನಡೆಸುವಿರಿ. ನಿಮ್ಮ ಸಮಯ ಪ್ರಜ್ಞೆಯಿಂದ ಕುಟುಂಬಕ್ಕೆ ಎದುರಾದ ಸಮಸ್ಯೆ ದೂರವಾಗಲಿದೆ. ಉದ್ಯೋಗ ಮಾಡಲು ಆಸಕ್ತಿ ಇರುವುದಿಲ್ಲ. ಸಣ್ಣ ಪ್ರಮಾಣದ ವ್ಯಾಪಾರದಲ್ಲಿ ಹೆಚ್ಚಿನ ಆದಾಯ ಗಳಿಸುವಿರಿ. ಮಕ್ಕಳಿಂದ ಶುಭ ಸುದ್ದಿಯೊಂದನ್ನು ಕೇಳಲಿದ್ದೀರಿ. ಕೋಪದ ಗುಣವನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ಪತಿ ಜೊತೆಯಲ್ಲಿ ಸಂತೋಷದಿಂದ ಜೀವನ ನಡೆಸುವಿರಿ. ಕೌಟುಂಬಿಕ ಸೌಖ್ಯಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗುವಿರಿ. ಅನಾವಶ್ಯಕವಾದ ತಿರುಗಾಟ ಬೇಸರ ಉಂಟುಮಾಡುತ್ತದೆ. ಸೋದರನ ವ್ಯಾಪಾರವೊಂದಕ್ಕೆ ಹಣದ ಸಹಾಯ ಮಾಡುವಿರಿ.

ಮಕರ

ಕುಟುಂಬದ ಸಮಸ್ಯೆಗಳಿಗೆ ಪರಿಹಾರ ಸೂಚಿಸುವಿರಿ. ಪತಿ ಜೊತೆಯಲ್ಲಿ ಸಂತಸದಿಂದ ಜೀವನ ನಡೆಸುವಿರಿ. ನಿಮ್ಮ ಮಾತನ್ನು ವಿರೋಧಿಸಿದವರು ಮತ್ತೊಮ್ಮೆ ನಿಮ್ಮ ಆಶ್ರಯವನ್ನು ಪಾಲಿಸಿ ಬರಲಿದ್ದಾರೆ. ದೈನಂದಿನ ಜೀವನದಲ್ಲಿ ಯಾವುದೇ ತೊಂದರೆ ಎದುರಾಗದು. ಮಕ್ಕಳಿಗೆ ವಿಶೇಷವಾದ ಅನುಕೂಲತೆಗಳು ದೊರೆಯಲಿವೆ. ಸಂತಾನಲಾಭ ಇದೆ. ಕುಟುಂಬದ ಪೂರ್ಣ ಜವಾಬ್ದಾರಿ ನಿಮ್ಮದಾಗುತ್ತದೆ. ಪತಿ ಜೊತೆ ಪಾಲುದಾರಿಕೆ ವ್ಯಾಪಾರವನ್ನು ಆರಂಭಿಸಲು ಇಚ್ಚಿಸುವಿರಿ. ಮಾತನ್ನು ಕಡಿಮೆ ಮಾಡಿ, ಕೆಲಸ ಹೆಚ್ಚಿಸುವ ಅಗತ್ಯವಿದೆ. ವಾಹನ ಚಾಲನೆ ಮಾಡುವಾಗ ಅಪಘಾತದ ಸಾಧ್ಯತೆ ಇದೆ ಎಚ್ಚರ. ಅಶಕ್ತ ಮಹಿಳೆಯರಿಗೆ ಸಹಾಯವಾಗಲು ಸಂಘ ಸಂಸ್ಠೆಯನ್ನು ಆರಂಭಿಸುವಿರಿ.

ಕುಂಭ

ದುಡುಕದೆ ನಿಧಾನಗತಿಯಲ್ಲಿ ದಿನದ ಕೆಲಸವನ್ನು ಆರಂಭಿಸುವಿರಿ. ದೊರೆವ ಅವಕಾಶವನ್ನು ಆತ್ಮವಿಶ್ವಾಸದಿಂದ ನಿಮಗೆ ಅನುಕೂಲವಾಗುವಂತೆ ಮಾರ್ಪಡಿಸುವಿರಿ. ವಾದ ವಿವಾದವಿಲ್ಲದೆ ಹಣಕಾಸಿನ ಸಮಸ್ಯೆಯೊಂದನ್ನು ಬಗೆಹರಿಸುವಿರಿ. ಸಮಾಜದ ಗಣ್ಯ ವ್ಯಕ್ತಿಯೊಬ್ಬರ ಸಹಾಯ ದೊರೆಯುತ್ತದೆ. ಸ್ವಂತ ಹಣಕಾಸಿನ ಸಂಸ್ಥೆಯನ್ನು ಸ್ಥಾಪಿಸುವ ಯೋಚನೆ ಮಾಡುವಿರಿ. ವಿದೇಶದಲ್ಲಿ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ಮನೆಯ ಜವಾಬ್ದಾರಿಯ ಜೊತೆಗೆ ಉದ್ಯೋಗಕ್ಕೂ ಹೆಚ್ಚಿನ ಪ್ರಾಶಸ್ತ್ಯ ನೀಡುವಿರಿ. ಪತಿಯ ಮನಸ್ಸನ್ನು ಅರ್ಥ ಮಾಡಿಕಿಒಳ್ಳಲು ಪ್ರಯ್ಕತ್ನಿಸಿ. ಕಷ್ಟವಾದರೂ ಹಣ ಉಳಿಸುವಲ್ಲಿ ಯಶಸ್ಸು ಕಾಣುವಿರಿ. ಮಕ್ಕಳನ್ನು ಪ್ರೀತಿಯಿಂದ ಕಾಣುವಿರಿ.

ಮೀನ

ಪ್ರಯತ್ನಪೂರ್ವಕವಾಗಿ ಕುಟುಂಬದ ಚಟುವಟಿಕೆಗಳಲ್ಲಿ ಪಾಲೊಳ್ಳುವಿರಿ. ಮಾತಿನಲ್ಲೇ ವಿರೋಧಿಗಳ ಮನಸ್ಸನ್ನುಗೆಲ್ಲಬಲ್ಲಿರಿ. ದುಡುಕಿ ಮಾತನಾಡದೆ ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳಲು ಪ್ರಯತ್ನಿಸಿ. ಕುಟುಂಬದಲ್ಲಿ ಶಾಂತಿ ಸಂತೋಷ ನೆಲೆಸಲು ಪ್ರಯತ್ನಿಸುವಿರಿ. ತಂದೆಯವರಿಗೆ ವಿಶೇಷ ಉಡುಗೊರೆ ನೀಡುವಿರಿ. ಉದ್ಯೋಗ ಮತ್ತು ಕುಟುಂಬವನ್ನು ಯಶಸ್ಸಿನ ಹಾದಿಯಲ್ಲಿ ಕೊಂಡೊಯ್ಯುವಿರಿ. ನಿಮ್ಮ ಪೂರ್ವ ಯೋಜನೆಯಂತೆ ಎಲ್ಲಾ ಕೆಲಸ ಕಾರ್ಯಗಳು ನಡೆಯಲಿವೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ. ಗಂಟಲು ಅಥವ ಮೂಗಿನ ದೋಷ ಇರುತ್ತದೆ. ಆದಾಯದಲ್ಲಿ ಯಾವುದೇ ತೊಂದರೆ ಇರುವುದಿಲ್ಲ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).