Women Horoscope: ಸಂಗೀತ ನಾಟ್ಯ ಬಲ್ಲ ಕಲಾವಿದರಿಗೆ ವಿಶೇಷ ಅವಕಾಶ, ಗೌರವಾದರ: ಏ.12 ರಿಂದ ಏ.18 ರವೆಗಿನ ಸ್ತ್ರೀ ವಾರ ಭವಿಷ್ಯ
Weekly Women horoscope in Kannada: ಸ್ತ್ರೀ ವಾರ ಭವಿಷ್ಯ (ಏ 12 ರಿಂದ ಏ 18ವರೆಗೆ) ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಈ ವಾರದ ಸ್ತ್ರೀ ಭವಿಷ್ಯ ಇಲ್ಲಿದೆ.
ಸ್ತ್ರೀ ವಾರ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (Weekly women Horoscope).
ಮೇಷ
ಕುಟುಂಬದ ಬಹುತೇಕ ಜವಾಬ್ದಾರಿಯು ನಿಮ್ಮದಾಗುತ್ತದೆ. ಬಿಡುವಿಲ್ಲದ ದುಡಿಮೆ ಬೇಸರ ಮೂಡಿಸುತ್ತದೆ. ಹಣಕಾಸಿನ ವಿಚಾರದಲ್ಲಿ ದಿಟ್ಟತನದ ನಿರ್ಣಯದಿಂದಾಗಿ ತೊಂದರೆಯಿಂದ ಪಾರಾಗುವಿರಿ. ಪತಿ ಮತ್ತು ಮಕ್ಕಳ ಜೊತೆ ಉತ್ತಮ ಬಾಂಧವ್ಯ ಇರುತ್ತದೆ. ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆಯಿಂದ ಇರುವುದು ಒಳಿತು. ಉದ್ಯೋಗದಲ್ಲಿ ಉನ್ನತ ಸ್ಥಾನಮಾನ ಲಭಿಸುತ್ತದೆ. ತವರು ಮನೆಯಲ್ಲಿ ನಡೆದ ಮಂಗಳ ಕಾರ್ಯದ ಜವಾಬ್ದಾರಿ ನಿಮ್ಮದಾಗುತ್ತದೆ. ಸಂತಾನ ಲಾಭವಿದೆ. ಆರೋಗ್ಯ ಕಾಪಾಡಿಕೊಳ್ಳಲು ಸರಳ ವ್ಯಾಯಾಮ ಕ್ರಮವನ್ನು ಅನುಸರಿಸುವಿರಿ. ಬೇಸರ ಕಳೆಯಲು ಮನರಂಜನಾ ಮಾಧ್ಯಮವನ್ನು ಅನುಸರಿಸುವಿರಿ.
ವೃಷಭ
ಎಲ್ಲರಿಗೂ ಉಪಯೋಗವಾಗಬಲ್ಲ ಕೆಲಸಗಳನ್ನು ಮಾತ್ರ ಮಾಡುವಿರಿ. ಕುಟುಂಬದ ಹಣಕಾಸಿನ ವ್ಯವಹಾರವು ನಿಮ್ಮದಾಗಲಿದೆ. ಮನೆ ಮಂದಿಯೊಂದಿಗೆ ಯಾತ್ರಾ ಸ್ಥಳಕ್ಕೆ ಭೇಟಿ ನೀಡುವಿರಿ. ಪ್ರಖ್ಯಾತ ಹಣಕಾಸಿನ ಸಂಸ್ಥೆಯ ಒಡೆತನ ಲಭಿಸುತ್ತದೆ. ನಿರೀಕ್ಷಿತ ಯಶಸ್ಸು ದೊರೆಯುವ ಕಾರಣ ಸಂತೋಷದಿಂದ ಇರುವಿರಿ. ಕಷ್ಟಪಟ್ಟು ಕೂಡಿಟ್ಟ ಹಣ ಒಳ್ಳೆಯ ಕಾರ್ಯಕ್ಕೆ ಖರ್ಚಾಗುತ್ತದೆ. ಉದ್ಯೋಗದಲ್ಲಿ ಉನ್ನತ ಸ್ಥಾನವನ್ನು ಗಳಿಸುವಿರಿ. ಹಿರಿಯ ಅಧಿಕಾರಿಗಳ ಪ್ರಶಂಸೆಯನ್ನು ದೊರೆಯುತ್ತದೆ. ಯಾವುದೇ ವಿಚಾರವಾದಲ್ಲಿ ಸೋಲು ಗೆಲುವನ್ನು ಕ್ರೀಡಾ ಮನೋಭಾವನೆಯಿಂದ ಸ್ವೀಕರಿಸುವಿರಿ. ಎಲ್ಲರಿಗೂ ಮಾದರಿಯಾಗಿ ಬಾಳುವಿರಿ. ಆರೋಗ್ಯದ ಬಗ್ಗೆ ಗಮನ ಹರಿಸಿ.
ಮಿಥುನ
ತೆಗೆದುಕೊಂಡ ತೀರ್ಮಾನವನ್ನು ಅನಾವಶ್ಯಕವಾಗಿ ಬದಲಿಸುವಿರಿ. ಬಹುದಿನದಿಂದ ಕುಟುಂಬವನ್ನು ಕಾಡುತ್ತಿದ್ದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವಿರಿ. ಕೆಲವರು ನಿಮ್ಮ ಒಳ್ಳೆಯತನವನ್ನು ದುರುಪಯೋಗ ಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಎಚ್ಚರದಿಂದ ಇರಿ. ಆರೋಗ್ಯದ ಸ್ಥಿರತೆ ಕಂಡು ಬರುತ್ತದೆ. ಧಾರ್ಮಿಕ ಕೆಲಸ ಕಾರ್ಯಗಳ ಜವಾಬ್ದಾರಿ ತೆಗೆದುಕೊಳ್ಳುವಿರಿ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ಪ್ರಯತ್ನಿಸುವಿರಿ. ಪತಿಯ ಜೊತೆ ಉತ್ತಮ ಸಂಬಂಧ ಇರುತ್ತದೆ. ಬೇಸರ ಕಳೆಯಲು ದೀರ್ಘ ಪ್ರವಾಸ ಕೈಗೊಳ್ಳುವಿರಿ. ತವರು ಮನೆಯಿಂದ ಹಣದ ಸಹಾಯ ದೊರೆಯಲಿದೆ.
ಕಟಕ
ಸಹನೆ ಬಹಳ ಮುಖ್ಯ. ಆತುರದಿಂದ ಕೆಲಸ ಕಾರ್ಯಗಳನ್ನು ಮುಗಿಸಿ ತೊಂದರೆಗೆ ಒಳಗಾಗುವಿರಿ. ಸ್ವಂತ ಉದ್ದಿಮೆಯನ್ನು ಸ್ಥಾಪಿಸುವ ಯೋಚನೆಗೆ ಪತಿಯ ಸಹಾಯ ದೊರೆಯಲಿದೆ. ಹಣಕಾಸಿನ ವ್ಯವಹಾರದಲ್ಲಿ ಬುದ್ದಿವಂತಿಕೆಯ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಆರೋಗ್ಯದ ಚೇತರಿಕೆ ಕಂಡುಬರಲಿದೆ. ಮನಸ್ಸು ಒಳ್ಳೆಯದಾದರೂ ಮಾತಿನಲ್ಲಿ ಸಿಡಿಕುತನ ಇರುತ್ತದೆ. ಪ್ರವಾಸ ಮಾಡುವ ಉದ್ದೇಶಕ್ಕಾಗಿ ಕೂಡಿಟ್ಟ ಹಣ ಖರ್ಚಾಗಲಿದೆ. ಕುಟುಂಬದಲ್ಲಿ ಮಂಗಳಕಾರ್ಯವೊಂದು ನೆರವೇರುತ್ತದೆ. ನೂತನ ಒಡವೆ ವಸ್ತ್ರಗಳಿಗಾಗಿ ಹಣವನ್ನು ಖರ್ಚು ಮಾಡುವಿರಿ. ಅನಿರೀಕ್ಷಿತ ಧನ ಲಾಭವಿದೆ.
ಸಿಂಹ
ಎಂದಿಗೂ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಅನಾವಶ್ಯಕವಾದ ವಾದ ವಿವಾದಗಳಲ್ಲಿ ತೊಡಗುವಿರಿ. ಅವಿವಾಹಿತರಿಗೆ ವಿವಾಹದ ಪ್ರಸ್ತಾಪವಾಗುತ್ತದೆ. ಉದ್ಯೋಗಸ್ಥರಿಗೆ ಉನ್ನತ ಅಧಿಕಾರ ಲಭಿಸುತ್ತದೆ. ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಮತ್ತೆ ಬದಲಿಸುವುದಿಲ್ಲ. ಕುಟುಂಬದ ಎಲ್ಲರ ಮೇಲು ಅಧಿಕಾರ ಚಲಾಯಿಸುವಿರಿ. ಕೌಟುಂಬಿಕ ಜೀವನವು ಆನಂದಮಯವಾಗಿರುತ್ತದೆ. ತವರುಮನೆಯ ಕಷ್ಟದ ಸಂದರ್ಭದಲ್ಲಿ ಹಣದ ಸಹಾಯ ಮಾಡುವಿರಿ. ಅನಿರೀಕ್ಷಿತವಾಗಿ ಹಣ ಅಥವಾ ಉಡುಗೊರೆ ದೊರೆಯಲಿದೆ. ರಾಜಕೀಯದಲ್ಲಿ ಆಸಕ್ತಿ ಇದ್ದಲ್ಲಿ ಉತ್ತಮ ಅವಕಾಶ ತಾನಾಗಿಯೇ ಒದಗಿ ಬರಲಿದೆ.
ಕನ್ಯಾ
ತೆಗೆದುಕೊಳ್ಳುವ ತೀರ್ಮಾನಗಳನ್ನು ಸತತವಾಗಿ ಬದಲಾಯಿಸುವಿರಿ. ದೊರೆಯುವ ಅವಕಾಶವನ್ನು ಬಳಸಿಕೊಳ್ಳಲು ವಿಫಲರಾಗುವಿರಿ. ಪತಿಯ ಸಹಾಯ ಸಹಕಾರದಿಂದ ಯಾವುದೇ ತೊಂದರೆ ಉಂಟಾಗದು. ಪ್ರತಿಯೊಂದು ವಿಚಾರದಲ್ಲೂ ನಿರೀಕ್ಷಿತ ಶುಭ ಫಲಗಳನ್ನು ಪಡೆಯುವಿರಿ. ಚಿಕ್ಕ ಪುಟ್ಟ ತಪ್ಪುಗಳನ್ನೂ ಕ್ಷಮಿಸುವುದಿಲ್ಲ. ತಪ್ಪು ಮಾಡಿದವರನ್ನು ವಯಸ್ಸನ್ನು ಪರಿಗಣಿಸದೆ ಟೀಕಿಸಿಸುವಿರಿ. ಒಂದಕ್ಕಿಂತಲೂ ಹೆಚ್ಚಿನ ಆದಾಯವಿರುತ್ತದೆ ಸಂಸಾರ ನಿರ್ವಹಣೆಗೆ ಅಗತ್ಯವಾದಷ್ಟು ಹಣವನ್ನು ಸುಲಭವಾಗಿ ಸಂಪಾದಿಸಬಲ್ಲಿರಿ. ಅತಿಯಾಗಿ ಯೋಚನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಧರ್ಮ ಗುರುಗಳನ್ನು ಭೇಟಿ ಮಾಡುವಿರಿ.
ತುಲಾ
ಕುಟುಂಬದ ಸಂಸಾರದ ಅಭಿವೃದ್ಧಿಗೆ ಯಾವುದೇ ತ್ಯಾಗಕ್ಕೂ ಸಿದ್ಧರಾಗುವಿರಿ. ಜೀವನದಲ್ಲಿ ಯಾವುದೇ ತೊಂದರೆ ಎದುರಾಗದು. ದಿಟ್ಟತನದಿಂದ ಭೂ ವಿವಾದವೊಂದನ್ನು ಎದುರಿಸುವಿರಿ. ಸದಾ ಚುರುಕುತನದಿಂದ ಕರ್ತವ್ಯ ಪಾಲನೆ ಮಾಡುವಿರಿ. ಅವಿವಾಹಿತರಿಗೆ ವಿವಾಹ ಯೋಗವಿದೆ. ಪಾಲುಗಾರಿಕೆಯಲ್ಲಿ ವ್ಯಾಪಾರವೊಂದನ್ನು ಆರಂಭಿಸುವಿರಿ. ಆರೋಗ್ಯದಲ್ಲಿ ತೊಂದರೆ ಕಾಣದು. ಕ್ಷಮಾ ಗುಣ ಇರುವ ಕಾರಣ ಸಂಸಾರದಲ್ಲಿ ಸಂತೋಷವಿರುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಒಲವಿರುತ್ತದೆ. ಪತಿಯಿಂದ ಉಡುಗೊರೆಯೊಂದು ದೊರೆಯಲಿದೆ. ಕಲಾವಿದೆಯರಿಗೆ ಉತ್ತಮ ಅವಕಾಶ ದೊರೆಯಲಿದೆ. ಅನಿರೀಕ್ಷಿತ ಧನ ಲಾಭವಿರುತ್ತದೆ
ವೃಶ್ಚಿಕ
ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಯಶಸ್ಸು ದೊರೆಯಲಿದೆ. ಮಕ್ಕಳ ವಿದ್ಯಾಭ್ಯಾಸದ ವಿಚಾರಕ್ಕೆ ಸಂಬಂಧಿಸಿದಂತೆ ಬಹಳ ಯೋಚನೆ ಮಾಡುವಿರಿ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೋರುವಿರಿ. ಸಿಡುಕುತನವನ್ನು ತೊರೆದು ಸಂಯಮದಿಂದ ವರ್ತಿಸಿ. ವಾದದಲ್ಲಿ ಎಂದಿಗೂ ಸೋಲುವುದಿಲ್ಲ. ಪತಿ ಮತ್ತು ಮಕ್ಕಳ ಜೊತೆ ದೂರದ ಊರಿಗೆ ಪ್ರಯಾಣ ಮಾಡುವಿರಿ. ಗೃಹಿಣಿಯರು ವ್ಯವಧಾನದಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಸಂತಾನ ಲಾಭವಿದೆ. ಉದ್ಯೋಗಸ್ಥರಿಗೆ ಅನಿರೀಕ್ಷಿತ ಖರ್ಚು ವೆಚ್ಚಗಳು ಎದುರಾಗಲಿವೆ. ಹಣದ ತೊಂದರೆ ಕಂಡು ಬರದು.
ಧನಸ್ಸು
ಸ್ಥಿರವಾದ ಮನಸ್ಸಿರುವುದಿಲ್ಲ. ಆದರೆ ಸಮಯಕ್ಕೆ ತಕ್ಕಂತೆ ವರ್ತಿಸಿ ಕುಟುಂಬದ ತೊಂದರೆಗಳನ್ನು ದೂರ ಮಾಡುವಿರಿ. ಒಡವೆ ವಸ್ತ್ರಗಳಿಗೆ ಹೆಚ್ಚು ಹಣ ಖರ್ಚು ಮಾಡುವಿರಿ. ಉದ್ಯೋಗಸ್ಥರದಲ್ಲಿ ಅಧಿಕಾರ ದೊರೆತು ಪರಸ್ಥಳಕ್ಕೆ ವರ್ಗವಾಗಲಿದೆ. ಅನಿರೀಕ್ಷಿತ ಧನ ಪ್ರಾಪ್ತಿ ಆಗುತ್ತದೆ. ಕುಟುಂಬದಲ್ಲಿ ವಿವಾಹದ ಮಾತುಕತೆ ನಡೆಯಲಿದೆ. ಮಕ್ಕಳಿಗೆ ವಿಶೇಷವಾದ ಅನುಕೂಲತೆಗಳನ್ನು ಕಲ್ಪಿಸುವಿರಿ. ವಿದ್ಯಾರ್ಥಿಗಳು ಉನ್ನತ ಮಟ್ಟವನ್ನು ತಲುಪುತ್ತಾರೆ. ಕುಟುಂಬದಲ್ಲಿ ಎಲ್ಲರೊಂದಿಗೆ ಸಂತಸದಿಂದ ಬಾಳುವಿರಿ. ಪತಿಯ ಜೊತೆ ಉತ್ತಮ ಅನ್ಯೋನ್ಯತೆ ಬೆಳೆಯುತ್ತದೆ.
ಮಕರ
ಅತಿಯಾದ ಆತುರದ ಬುದ್ಧಿಯಿಂದ ಕಷ್ಟಕ್ಕೆ ಸಿಲುಕುವಿರಿ. ಕೆಲಸ ಕಾರ್ಯಗಳಲ್ಲಿ ಕ್ಷಿಪ್ರವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು. ದುಡುಕುತನದ ಮಾತುಕತೆಯಿಂದ ವಿವಾದಕ್ಕೆ ಸಿಲುಕುವಿರಿ. ಅತಿ ಮುಖ್ಯ ಕೆಲಸವನ್ನು ಮುಂದೂಡುವಿರಿ. ತಂದೆಯವರು ನಡೆಸುತ್ತಿದ್ದ ವ್ಯಾಪಾರದ ಜವಾಬ್ದಾರಿ ನಿಮ್ಮದಾಗುತ್ತದೆ. ಪತಿಯೊಂದಿಗೆ ವಿದೇಶ ಪ್ರಯಾಣ ಮಾಡುವಿರಿ. ಸಂಗೀತ ನಾಟ್ಯಬಲ್ಲ ಕಲಾವಿದರಿಗೆ ವಿಶೇಷವಾದ ಪ್ರಶಸ್ತಿ ಸನ್ಮಾನಗಳು ಲಭಿಸುತ್ತದೆ. ಪಾಲುಗಾರಿಕೆಯ ವ್ಯಾಪಾರವನ್ನು ಆರಂಭಿಸುವಿರಿ. ಬಿಡುವಿಲ್ಲದ ದುಡಿಮೆ ಬೇಸರಕ್ಕೆ ಕಾರಣವಾಗಲಿದೆ. ಉತ್ತಮ ಆರೋಗ್ಯಕ್ಕಾಗಿ ವಿಶ್ರಾಂತಿಯ ಅಗತ್ಯವಿರುತ್ತದೆ. ಮಕ್ಕಳ ಆರೋಗ್ಯದಲ್ಲಿ ಏರಿಳಿತ ಇರಲಿದೆ.
ಕುಂಭ
ಕುಟುಂಬದ ಕೆಲಸ ಕಾರ್ಯಗಳ ನಡುವೆ ಬೇರೆಯವರಿಗೂ ಸಹಾಯ ಮಾಡುವಿರಿ. ಯಾವುದೇ ವಿಚಾರವಾದರೂ ತಡವಾಗಿ ತೀರ್ಮಾನ ತೆಗೆದುಕೊಳ್ಳುವಿರಿ. ಇದರಿಂದಾಗಿ ಕೆಲಸ ಕಾರ್ಯಗಳು ಅಪೂರ್ಣಗೊಳ್ಳುತ್ತವೆ. ಆಡುವ ಮಾತಿನಲ್ಲಿ ಪಾರದರ್ಶಕತೆ ಇರುವುದರಿಂದ ಎಲ್ಲರ ಹೊಗಳಿಕೆಗೆ ಪಾತ್ರರಾಗುವಿರಿ. ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶ ಪ್ರಯಾಣ ಬೆಳೆಸುವಿರಿ. ಕುಟುಂಬದಲ್ಲಿ ಒಗ್ಗಟ್ಟು ಮೂಡಿಸಲು ಸಫಲರಾಗುವಿರಿ. ಗೃಹಿಣಿಯರಿಗೆ ಜವಾಬ್ದಾರಿ ಕಡಿಮೆಯಾಗುತ್ತದೆ. ಪತಿಯ ಜೊತೆ ಇದ್ದ ಮನಸ್ತಾಪ ಕೊನೆಯಾಗುತ್ತದೆ. ಸಣ್ಣ ಪ್ರಮಾಣದ ವ್ಯಾಪಾರದಲ್ಲಿ ಹೆಚ್ಚಿನ ಲಾಭವಿದೆ.
ಮೀನ
ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ವರ್ತಿಸುವಿರಿ. ಸಂತಾನ ಲಾಭವಿದೆ. ಮಕ್ಕಳು ಜೀವನದಲ್ಲಿ ಜವಾಬ್ದಾರಿಯಿಂದ ಮುಂದುವರೆಯುತ್ತಾರೆ. ಯಾವುದೇ ವಿಚಾರವಾದರೂ ಸೂಕ್ತ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ಅನಾವಶ್ಯಕ ಖರ್ಚು ವೆಚ್ಚಗಳು ಕಂಡು ಬರುತ್ತದೆ. ಸ್ವಂತ ಉದ್ದಿಮೆ ಇದ್ದಲ್ಲಿ ಅನಿರೀಕ್ಷಿತ ಧನ ಲಾಭವಿರುತ್ತದೆ. ದೂರದ ಸಂಬಂಧಿ ಒಬ್ಬರು ವ್ಯಾಪಾರವೊಂದರ ಪಾಲುಗಾರಿಕೆ ನೀಡುತ್ತಾರೆ. ಬುದ್ಧಿವಂತಿಕೆಯಿಂದ ವರ್ತಿಸುವ ಕಾರಣ ಸಮಾಜದಲ್ಲಿ ಅತಿ ಮುಖ್ಯ ಸ್ಥಾನವನ್ನು ಅಲಂಕರಿಸುವಿರಿ. ನೆರೆಹೊರೆಯವರ ಸಮಸ್ಯೆಗಳನ್ನು ಪರಿಹರಿಸುವಿರಿ. ಸಂಘ ಸಂಸ್ಥೆಗಳ ಒಡೆತನ ನಿಮ್ಮದಾಗುತ್ತದೆ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).