ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Women Horoscope: ಕಷ್ಟಕಾಲದಲ್ಲಿ ಸಂಬಂಧಿಕರಿಗೆ ನೀಡಿದ್ದ ಹಣ ಮರಳಿ ಸಿಗಲಿದೆ, ಗರ್ಭಿಣಿಯರಿಗೆ ಎಚ್ಚರ ಅವಶ್ಯ; ಸ್ತ್ರೀ ವಾರಭವಿಷ್ಯ

Women Horoscope: ಕಷ್ಟಕಾಲದಲ್ಲಿ ಸಂಬಂಧಿಕರಿಗೆ ನೀಡಿದ್ದ ಹಣ ಮರಳಿ ಸಿಗಲಿದೆ, ಗರ್ಭಿಣಿಯರಿಗೆ ಎಚ್ಚರ ಅವಶ್ಯ; ಸ್ತ್ರೀ ವಾರಭವಿಷ್ಯ

Weekly Women horoscope in Kannada: ಸ್ತ್ರೀ ವಾರ ಭವಿಷ್ಯ (ಏ 19 ರಿಂದ ಏ 25ವರೆಗೆ) ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಈ ವಾರದ ಸ್ತ್ರೀ ಭವಿಷ್ಯ ಇಲ್ಲಿದೆ.

ಏಪ್ರಿಲ್‌ 19 ರಿಂದ ಏಪ್ರಿಲ್‌ 25ರವರೆಗೆ ಸ್ತ್ರೀ ವಾರಭವಿಷ್ಯ
ಏಪ್ರಿಲ್‌ 19 ರಿಂದ ಏಪ್ರಿಲ್‌ 25ರವರೆಗೆ ಸ್ತ್ರೀ ವಾರಭವಿಷ್ಯ

ಸ್ತ್ರೀ ವಾರ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (Weekly women Horoscope From April 19th to April 25th).

ಮೇಷ

ಚುರುಕುತನದಿಂದ ಕುಟುಂಬದ ಅಧಿಕಾರದ ಚುಕ್ಕಾಣಿ ಹಿಡಿಯುವಿರಿ. ನಿಮ್ಮ ನಿಸ್ವಾರ್ಥದ ವ್ಯಕ್ತಿತ್ವ ಎಲ್ಲರ ಗಮನ ಸೆಳೆಯುತ್ತದೆ. ಕೈ ಹಿಡಿದ ಕೆಲಸ ಕಾರ್ಯಗಳನ್ನು ಸುಲಭವಾಗಿ ಪೂರ್ಣಗೊಳಿಸುವಿರಿ. ಆತ್ಮೀಯ ಅತಿಥಿಗಳ ಆಗಮನ ಸಂತಸಕ್ಕೆ ಕಾರಣವಾಗುತ್ತದೆ. ಪತಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಸ್ವಂತ ವ್ಯಾಪಾರ ಇದ್ದಲ್ಲಿ ವರಮಾನದಲ್ಲಿ ಏರುಪೇರು ಉಂಟಾಗುತ್ತದೆ. ಕುಟುಂಬದ ಸದಸ್ಯರ ಜೊತೆಗೂಡಿ ಪಾಲುದಾರಿಕೆಯ ವ್ಯಾಪಾರ ಆರಂಭಿಸುವಿರಿ. ಕೂಡಿಟ್ಟ ಹಣವು ಮಕ್ಕಳ ಜೀವನಕ್ಕೆ ಆಧಾರವಾಗಲಿದೆ. ಪತಿಯೊಂದಿಗೆ ಯಾತ್ರಾಸ್ಥಳಕ್ಕೆ ಭೇಟಿ ನೀಡುವಿರಿ. ವಿದ್ಯಾರ್ಥಿಗಳಿಗೆ ವಿಶೇಷವಾದ ಯಶಸ್ಸು ದೊರೆಯುತ್ತದೆ. ಅನಾವಶ್ಯಕವಾದ ವಾದ ವಿವಾದ ಒಳ್ಳೆಯದಲ್ಲ.

ವೃಷಭ

ಹಠದಿಂದ ತೆಗೆದುಕೊಂಡ ನಿರ್ಧಾರಗಳಿಗೆ ಬದ್ದರಾಗುವಿರಿ. ಸ್ನೇಹಿತರು ಬಲು ಕಡಿಮೆ. ಮೊದಲ ಆದ್ಯತೆಯನ್ನು ಕುಟುಂಬದ ಏಳಿಗೆಗೆ ನೀಡುವಿರಿ. ಮನದ ಅಭಿಲಾಷೆಗಳನ್ನು ಬದಲಾಯಿಸುವುದಿಲ್ಲ. ತವರು ಮನೆಯ ಕಡೆಯಿಂದ ಶುಭವಾರ್ತೆ ಬರಲಿದೆ. ಪತಿಯೊಂದಿಗೆ ತವರಿಗೆ ಪ್ರಯಾಣ ಬೆಳೆಸುವಿರಿ. ದಾಂಪತ್ಯದಲ್ಲಿ ಬಿಗುವಿನ ವಾತಾವರಣ ಇದ್ದರೂ ಪ್ರೀತಿಗೆ ಕೊರತೆ ಇರುವುದಿಲ್ಲ. ಹಾಸ್ಯದ ಮನೋಭಾವನೆ ನೆಮ್ಮದಿ ನೀಡುತ್ತದೆ. ಉದ್ಯೋಗಿಗಳಿಗೆ ಕೆಲಸದ ಒತ್ತಡದ ಕಾರಣ ಅನಾರೋಗ್ಯ ಉಂಟಾಗಲಿದೆ. ಹಿರಿಯರ ಸಹಾಯ ಸಹಕಾರದಿಂದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಪ್ರಾಣಿಗಳನ್ನು ಸಾಕುವ ವಿಚಾರದಲ್ಲಿ ಕುಟುಂಬದಲ್ಲಿ ವಿವಾದ ಉಂಟಾಗುತ್ತದೆ. ಕೆಲಸದ ನಡುವೆ ವಿಶ್ರಾಂತಿಗೂ ಸಮಯ ಕೊಡಿ.

ಮಿಥುನ

ಹೊಗಳಿಕೆಯ ಮಾತುಗಳಿಗೆ ಮರುಳಾಗಿ ತೊಂದರೆ ಎದುರಿಸುವಿರಿ. ನ್ಯಾಯದ ಪಕ್ಷಪಾತಿಗಳು. ಮಾಡುವ ತಪ್ಪನ್ನು ಒಪ್ಪಿಕೊಳ್ಳುವಿರಿ. ಬೇರೆಯವರ ತಪ್ಪನ್ನು ಮನ್ನಿಸುವುದಿಲ್ಲ. ಆದರೆ ಅದನ್ನು ಸರಿಪರಿಸಿಕೊಳ್ಳುವಿರಿ. ಆರಂಭಿಸಿದ ಕೆಲಸಗಳು ಚಿಕ್ಕದಾಗಲಿ ಅಥವಾ ದೊಡ್ಡದಾಗಲಿ ನಿಷ್ಠೆಯಿಂದ ಪೂರ್ಣಗೊಳಿಸುವಿರಿ. ಕೌಟುಂಬಿಕ ವಿಚಾರಗಳಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಬದಲಾಯಿಸುವಿರಿ. ಪತಿಯೊಂದಿಗೆ ಉತ್ತಮ ಬಾಂಧವ್ಯ ಏರ್ಪಡುತ್ತದೆ. ಆರೋಗ್ಯದಲ್ಲಿ ತೊಂದರೆ ಕಾಣದು. ವ್ಯಾಪಾರವನ್ನು ಅವಲಂಬಿಸಿದವರಿಗೆ ಆದಾಯದ ಕೊರತೆ ಇರುವುದಿಲ್ಲ. ವಿದ್ಯಾರ್ಥಿಗಳು ಹೆಚ್ಚುವರಿ ಅಧ್ಯಯನಕ್ಕೆ ಪರಸ್ಥಳಕ್ಕೆ ತೆರಳುವಿರಿ.

ಕಟಕ

ಅನಪೇಕ್ಷಿತ ವಿಚಾರಗಳಿಗೆ ಮನಸ್ತಾಪ ಉಂಟಾಗಿ ಸ್ನೇಹಿತೆಯಿಂದ ದೂರವಾಗುವಿರಿ. ಎಲ್ಲರೊಂದಿಗೆ ಆತ್ಮೀಯತೆಯಿಂದ ಬಾಳುವಿರಿ. ಕಷ್ಟಕಾಲಕ್ಕೆಂದು ಸಂಬಂಧಿಕರಿಗೆ ನೀಡಿದ್ದ ಹಣ ಮರಳಿ ದೊರೆಯುತ್ತದೆ. ಉದ್ಯೋಗಸ್ಥರಿಗೆ ನಿರೀಕ್ಷಿತ ಫಲಗಳು ದೊರೆಯಲಿದೆ. ಹೊಸ ವಾಹನಕೊಳ್ಳುವಿರಿ. ವಿದ್ಯಾರ್ಥಿಗಳು ಕಷ್ಟಪಡದೆ ಉತ್ತಮ ಅಂಕವನ್ನು ಗಳಿಸುತ್ತಾರೆ. ಕಷ್ಟಕರ ಜವಾಬ್ದಾರಿಗಳಿಂದ ದೂರ ಉಳಿಯುವಿರಿ. ಪತಿಯ ಜೊತೆಯಲ್ಲಿ ಕಿರುಪ್ರವಾಸಕ್ಕೆ ತೆರಳುವಿರಿ. ಆರೋಗ್ಯದಲ್ಲಿ ಚೇತರಿಕೆ ಇರಲಿದೆ. ಅವಿವಾಹಿತರಿಗೆ ವಿವಾಹ ನಿಶ್ಚಯವಾಗುತ್ತದೆ. ಕೌಟುಂಬಿಕ ಸಮಾಲೋಚನಾ ಕೇಂದ್ರವನ್ನು ಆರಂಭಿಸುವಿರಿ. ನಿಮಗಿಷ್ಟವಾದ ವಸ್ತುವೊಂದನ್ನು ಕಳೆದುಕೊಳ್ಳುವ ಸಂಭವವಿದೆ.

ಸಿಂಹ

ಆತಂಕದಿಂದ ಹೊರಬಂದು ಕೆಲಸ ಕಾರ್ಯಗಳಲ್ಲಿ ಮುನ್ನಡೆಯುವಿರಿ. ಅನಿರೀಕ್ಷಿತ ಧನಲಾಭವಿರುತ್ತದೆ. ಕುಟುಂಬದಲ್ಲಿನ ಆತ್ಮೀಯತೆ ನಿಮ್ಮಿಂದ ಉಳಿಯಲಿದೆ. ಕಮೀಷನ್‌ ಆಧಾರಿತ ವ್ಯಾಪಾರವೊಂದನ್ನು ಆರಂಭಿಸುವಿರಿ. ಉದ್ಯೋಗದಲ್ಲಿ ಅಧಿಕಾರದ ಗದ್ದುಗೆ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ ಉಂಟಾಗುತ್ತದೆ. ಹಠದ ಗುಣವನ್ನು ತೊರೆದು ಬೇರೆಯವರ ಸಲಹೆಯನ್ನು ಸ್ವೀಕರಿಸಿ. ಅತಿಯಾದ ಜವಾಬ್ದಾರಿಗಳಿಂದ ವಿಶ್ರಾಂತಿ ಇಲ್ಲವಾಗುತ್ತದೆ. ಪತಿ ಮತ್ತು ಮಕ್ಕಳೊಂದಿಗೆ ಮನರಂಜನಾ ಕೂಟಕ್ಕೆ ತೆರಳುವಿರಿ. ಕಿರು ಪ್ರವಾಸ ಕೈಗೊಳ್ಳುವಿರಿ. ಮೌನ ಮತ್ತು ಸಹನೆಯಿಂದ ಇರಲು ಪ್ರಯತ್ನಿಸಿ.

ಕನ್ಯಾ

ಟೀಕಿಸುವುದನ್ನು ಕಡಿಮೆ ಮಾಡಿದಲ್ಲಿ ನಿಮ್ಮ ಕೆಲಸ ಕಾರ್ಯಗಳು ಪೂರ್ಣಗೊಳ್ಳುತ್ತವೆ. ದುಡುಕಿನ ಮಾತಿನಿಂದ ಸಮಸ್ಯೆಗಳನ್ನು ಎದುರಿಸುವಿರಿ. ನಿಮ್ಮ ತಪ್ಪನ್ನು ಬದಿಗೊತ್ತಿ ಎಲ್ಲರನ್ನೂ ಟೀಕೆ ಮಾಡುವಿರಿ. ಕುಟುಂಬದ ಹಿರಿಯರನ್ನು ಗೌರವದಿಂದ ನೋಡಿಕೊಳ್ಳುವಿರಿ. ದೂರದ ಸ್ಥಳದಿಂದ ಆತ್ಮೀಯರೊಬ್ಬರು ಮರಳಿ ಬರುತ್ತಾರೆ. ಉದ್ಯೋಗ ನಿಮಿತ್ತ ಮಕ್ಕಳು ವಿದೇಶಕ್ಕೆ ತೆರಳುವರು. ಇರುವ ಮನೆಯನ್ನು ವಿಸ್ತರಿಸಲು ನಿರ್ಧರಿಸುವಿರಿ. ಅವಿವಾಹಿತರಿಗೆ ವಿವಾಹ ನಿಶ್ಚಯವಾಗಲಿದೆ. ಯಾರನ್ನೂ ಸುಲಭವಾಗಿ ನಂಬುವುದಿಲ್ಲ. ಹಣಕಾಸಿನ ವಿಚಾರದಲ್ಲಿ ಧೃಡವಾದ ನಿಲುವನ್ನು ತೆಗೆದುಕೊಳ್ಳಲು ವಿಫಲರಾಗುವಿರಿ. ಕುಟುಂಬವನ್ನು ಸುಗಮವಾಗಿ ನಡೆಸಿಕೊಂಡು ಹೋಗುವಿರಿ.

ತುಲಾ

ಪ್ರತಿಯೊಂದು ವಿಚಾರಗಳನ್ನು ಕೂಲಂಕಶವಾಗಿ ಪರೀಕ್ಷಿಸುವಿರಿ. ಸುಲಭವಾಗಿ ಯಾರನ್ನೂ ನಂಬುವುದಿಲ್ಲ. ಕೆಲಸ ಕಾರ್ಯಗಳಲ್ಲಿ ಕೊಂಚ ಏರುಪೇರು ಉಂಟಾದರೂ ಒತ್ತಡಕ್ಕೆ ಒಳಗಾಗುವಿರಿ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಾಯ ಸಹಕಾರ ದೊರೆಯುತ್ತದೆ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು ದೊರೆಯುತ್ತದೆ. ಹಣದ ಕೊರತೆ ಎದುರಾಗುತ್ತದೆ. ಉದ್ಯೋಗ ಬದಲಾಯಿಸುವ ಸೂಚನೆಗಳಿವೆ. ಪತಿಯ ಜೊತೆಯಲ್ಲಿ ಹಣಕಾಸಿನ ವಿಚಾರವಾಗಿ ಮನಸ್ತಾಪ ಇರುತ್ತದೆ. ಕ್ರಮೇಣವಾಗಿ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಲುತ್ತದೆ. ಉತ್ತಮ ಆರೋಗ್ಯವನ್ನು ಗಳಿಸಲು ಹಿರಿಯರ ಬುದ್ಧಿವಾದವನ್ನು ಪಾಲಿಸುವಿರಿ.

ವೃಶ್ಚಿಕ

ಸಿಡುಕಿನ ಗುಣ ಮತ್ತು ಬದಲಾಗದ ನಿರ್ಧಾರಗಳು ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ದುಡುಕುತನದಿಂದ ವಿವಾದಕ್ಕೆ ಸಿಲುಕುವಿರಿ. ಶಾಂತಿ ಸಹನೆಯಿಂದ ವರ್ತಿಸಲು ಪ್ರಯತ್ನಿಸಿ. ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ. ಉದ್ಯೋಗದಲ್ಲಿ ನಿರೀಕ್ಷಿತ ಫಲಿತಾಂಶಗಳು ದೊರೆಯಲಿವೆ. ಪತಿ ಮತ್ತು ಮಕ್ಕಳೊಂದಿಗೆ ಸಂತಸದಿಂದ ಇರುವಿರಿ. ಕುಟುಂಬದಲ್ಲಿನ ಬದಲಾವಣೆಗಳು ನಿಮ್ಮ ಪರವಾಗಲಿವೆ. ಮಕ್ಕಳು ವಿದ್ಯಾಭ್ಯಾಸದಲ್ಲಿ ಉನ್ನತ ಹಂತ ತಲುಪಲಿದ್ದಾರೆ. ಸೋದರಿಯ ಕೌಟುಂಬಿಕ ಕಲಹವನ್ನು ಪರಿಹರಿಸುವಿರಿ. ಮಕ್ಕಳಿಂದ ಸರಿಯಾಗಿ ಹಣದ ಸಹಾಯ ಉಂಟಾಗುತ್ತದೆ.

ಧನಸ್ಸು

ಬದಲಾಗುವ ನಿರ್ಧಾರಗಳು ವಿವಾದಕ್ಕೆ ಕಾರಣವಾಗುತ್ತದೆ. ಸ್ಥಿರವಾದ ಮನಸ್ಸು ಇರುವುದಿಲ್ಲ. ಅವಿವಾಹಿತರಿಗೆ ವಿವಾಹ ಯೋಗವಿದೆ. ಗರ್ಭಿಣಿಯರು ಆರೋಗ್ಯದ ಬಗ್ಗೆ ಕಾಳಜಿ ತೋರಬೇಕು. ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುತ್ತಾರೆ. ಹಣಕಾಸಿನ ತೊಂದರೆ ಇರುವುದಿಲ್ಲ. ಪತಿಯ ವ್ಯಾಪಾರ ವ್ಯವಹಾರಗಳಲ್ಲಿ ಸಹಕಾರ ನೀಡುವಿರಿ. ಕುಟುಂಬದಲ್ಲಿ ಉತ್ತಮ ಹೊಂದಾಣಿಕೆ ಇರುತ್ತದೆ. ಕ್ಷಮಾಗುಣ ಇರುವ ಕಾರಣ ನೆಮ್ಮದಿ ನೆಲೆಸುತ್ತದೆ. ಸಾಲದ ವ್ಯವಹಾರ ಮಾಡದಿರಿ. ಆಹಾರಕ್ಕ ಸಂಭದಿಸಿದ ವ್ಯಾಪಾರ ವ್ಯವಹಾರಗಳು ಉತ್ತಮ ಆದಾಯ ನೀಡುತ್ತದೆ. ಬೇಸರ ಕಳೆಯಲು ಪತಿಯೊಂದಿಗೆ ಕಿರು ಪ್ರವಾಸ ಕೈಗೊಳ್ಳುವಿರಿ

ಮಕರ

ಕಷ್ಟ ನಷ್ಟಗಳಿಗೆ ಬೆದರದೆ ಗೆಲ್ಲಲೇ ಬೇಕೆಂಬ ಗುರಿ ಇರುತ್ತದೆ. ಆತ್ಮೀಯರ ಜೊತೆಗೂಡಿ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಮನಸ್ಸು ಎಷ್ಟೇ ಒಳ್ಳೆಯದಾದರೂ ದುಡುಕುತನದ ಮಾತುಕತೆಯಿಂದ ಕಷ್ಟಕ್ಕೆ ಸಿಲುಕುವಿರಿ. ಮಾತಿನ ಮೋಡಿಗೆ ಸೋತು ಹೋಗಿ ವಿರೋಧಿಗಳು ನಿಮಗೆ ಸಹಾಯ ಮಾಡುತ್ತಾರೆ. ಬಹುದಿನದ ನಂತರ ಆತ್ಮೀಯರೊಬ್ಬರನ್ನು ಭೇಟಿ ಮಾಡುವಿರಿ. ಇರುವ ಮನೆಯನ್ನು ನವೀಕರಣ ಮಾಡುವ ಯೋಜನೆ ರೂಪಿಸುವಿರಿ. ಕುಟುಂಬದಲ್ಲಿನ ಮಂಗಳ ಕಾರ್ಯವು ಕೆಲವು ದಿನ ಮುಂದೆ ಹೋಗಲಿದೆ. ಸಾಲದ ವ್ಯವಹಾರ ಮಾಡದಿರಿ.

ಕುಂಭ

ವಿವಾದದಲ್ಲಿ ಇದ್ದ ಆಸ್ತಿಯೊಂದನ್ನು ಬುದ್ಧಿವಂತಿಕೆಯಿಂದ ನಿಮ್ಮದಾಗಿಸಿಕೊಳ್ಳುವಿರಿ. ಕುಟುಂಬದ ವಯೋವೃದ್ಧರ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಮಿತಿ ಮೀರಿದ ಖರ್ಚು ವೆಚ್ಚಗಳು ಎದುರಾಗುತ್ತವೆ. ಹೊಸ ಗೃಹೋಪಯೋಗಿ ವಸ್ತುಗಳನ್ನು ಖರೀದಿ ಮಾಡುವಿರಿ. ಮನರಂಜನೆಗಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡುವಿರಿ. ಸಾಂಸಾರಿಕ ಜೀವನದಲ್ಲಿ ಸಂತೃಪ್ತಿ ಇರುತ್ತದೆ. ತ್ಯಾಗದ ಮನೋಭಾವನೆಯಿಂದ ಜನಮನ ಗಳಿಸುವಿರಿ. ಅನಿರೀಕ್ಷಿತ ಧನ ಲಾಭ ಇರುತ್ತದೆ. ಉದ್ಯೋಗಸ್ಥರಿಗೆ ಕೆಲಸದ ಒತ್ತಡ ಹೆಚ್ಚಿನದಾಗಿರುತ್ತದೆ. ಮಕ್ಕಳ ಯಶಸ್ಸಿನಲ್ಲಿ ಸಂತಸವನ್ನು ಕಾಣುವಿರಿ. ಅನಾವಶ್ಯಕವಾಗಿ ಎದುರಾಗುವ ಖರ್ಚು ವೆಚ್ಚಗಳನ್ನು ಕಡಿತಗೊಳಿಸಿ.

ಮೀನ

ಯಾವುದೇ ಕೆಲಸ ಕಾರ್ಯವಾದರೂ ಪರಿಪಕ್ವ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಆರಂಭದಲ್ಲಿ ಹಿನ್ನೆಡೆ ಉಂಟಾದರೂ ಕ್ರಮೇಣ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ಸಂಸಾರದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಉದ್ಯೋಗದ ಕಾರಣ ಪತಿಯು ಪರಸ್ಥಳಕ್ಕೆ ತೆರಳುವ ಸಾಧ್ಯತೆಗಳಿವೆ. ಕುಟುಂಬದ ಸದಸ್ಯರ ಜೊತೆಯಲ್ಲಿ ಆರಂಭಿಸುವ ಪಾಲುಗಾರಿಕೆಯ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಹಣಕಾಸಿನ ನಿರ್ವಹಣೆಯ ಜವಾಬ್ದಾರಿ ನಿಮ್ಮದಾಗುತ್ತದೆ. ಹಣ ಉಳಿಸುವಲ್ಲಿ ಸಫಲರಾಗುವಿರಿ. ತಂದೆಗೆ ಹಣದ ಸಹಾಯ ಮಾಡುವಿರಿ. ಸ್ವಂತ ಬಳಕೆಗಾಗಿ ವಾಹನವನ್ನು ಕೊಳ್ಳುವಿರಿ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).