ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Women Horoscope: ವೈವಾಹಿಕ ಜೀವನದಲ್ಲಿ ಸಂತೋಷ ಕಾಣುವಿರಿ, ಅತಿಯಾದ ಆತ್ಮವಿಶ್ವಾಸದಿಂದ ತಪ್ಪು ನಿರ್ಧಾರ ಸಾಧ್ಯತೆ; ಸ್ತ್ರೀ ಜಾತಕ

Women Horoscope: ವೈವಾಹಿಕ ಜೀವನದಲ್ಲಿ ಸಂತೋಷ ಕಾಣುವಿರಿ, ಅತಿಯಾದ ಆತ್ಮವಿಶ್ವಾಸದಿಂದ ತಪ್ಪು ನಿರ್ಧಾರ ಸಾಧ್ಯತೆ; ಸ್ತ್ರೀ ಜಾತಕ

Weekly Women horoscope in Kannada: ಸ್ತ್ರೀ ವಾರ ಭವಿಷ್ಯ (ಏಪ್ರಿಲ್‌ 5 ರಿಂದ ಏ 11ವರೆಗೆ) ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಈ ವಾರದ ಸ್ತ್ರೀ ಭವಿಷ್ಯ ಇಲ್ಲಿದೆ.

ಸ್ತ್ರೀ ವಾರ ಭವಿಷ್ಯ
ಸ್ತ್ರೀ ವಾರ ಭವಿಷ್ಯ

ಸ್ತ್ರೀ ವಾರ ರಾಶಿ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (Weekly Women horoscope in Kannada).

ಮೇಷ

ಕುಟುಂಬದ ಅನಾವಶ್ಯಕ ಖರ್ಚು ವೆಚ್ಚಗಳನ್ನುಕಡಿತಗೊಳಿಸುವಿರಿ. ನೀವಾಗಿಯೇ ಕುಟುಂಬದ ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳುವಿರಿ. ಮಾನಸಿಕ ಒತ್ತಡದಿಂದ ದೂರವಾಗಲು ಮನರಂಜನೆಯನ್ನು ಆಶ್ರಯಿಸುವಿರಿ. ಹಣ ಉಳಿಸಲು ಪತಿಗೆ ಸಹಾಯ ಮಾಡುವಿರಿ. ದಾಂಪತ್ಯ ಜೀವನವು ಸುಖಮಯವಾಗಿರುತ್ತದೆ. ಸಣ್ಣ ಪುಟ್ಟ ವಿವಾದಗಳನ್ನು ಮರೆತು ಪತಿಯೊಂದಿಗೆ ಬಾಳುವಿರಿ. ನಿಮ್ಮ ಮನ ಒಪ್ಪುವ ನೂತನ ವಸ್ತ್ರಗಳನ್ನು ಕೊಳ್ಳುವಿರಿ. ಸಂತಾನ ಲಾಭವಿದೆ. ಕೆಲಸದ ನಡುವೆ ವಿಶ್ರಾಂತಿ ಪಡೆಯುವುದು ಒಳ್ಳೆಯದು. ಉದ್ಯೋಗಸ್ಥರಿಗೆ ನಿರೀಕ್ಷಿತ ಯಶಸ್ಸು ದೊರೆಯುತ್ತದೆ. ಮಕ್ಕಳೊಂದಿಗೆ ಕಿರು ಪ್ರವಾಸ ಕೈಗೊಳ್ಳುವಿರಿ.

ವೃಷಭ

ಮನದಲ್ಲಿನ ವಿಚಾರಗಳನ್ನು ಮರೆತು ಸಂತಸದಿಂದ ಬಾಳುವಿರಿ. ಖರ್ಚು ವೆಚ್ಚಗಳನ್ನು ಸರಿದೂಗಿಸಲು ಉದ್ಯೋಗ ಮಾಡಬೇಕಾದ ಅನಿವಾರ್ಯತೆ ಉಂಟಾಗಲಿದೆ. ಕುಟುಂಬದಲ್ಲಿ ಒಮ್ಮತದ ಕೊರತೆ ಇರುತ್ತದೆ. ಆರೋಗ್ಯದಲ್ಲಿ ಸ್ಥಿರತೆ ಕಂಡು ಬರುತ್ತದೆ. ಉದ್ಯೋಗಸ್ಥರಿಗೆ ವಿದೇಶದಲ್ಲಿ ಉತ್ತಮ ಅವಕಾಶವನ್ನು ದೊರೆಯಲಿದೆ. ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮದಿಂದ ಗುರಿ ಸಾಧಿಸಲಿದ್ದಾರೆ. ಸ್ವಂತ ವ್ಯಾಪಾರ ವ್ಯವಹಾರವಿದ್ದಲ್ಲಿ ಹೆಚ್ಚಿನ ಲಾಭ ದೊರೆಯುತ್ತದೆ. ವೃಥಾ ತಿರುಗಾಟವಿರುತ್ತದೆ. ಅವಿವಾಹಿತರಿಗೆ ವಿವಾಹ ನಿಶ್ಚಯವಾಗುತ್ತದೆ. ಸಮಾಜ ಸೇವಕರಿಗೆ ರಾಜಕೀಯ ಸೇರುವ ಅವಕಾಶ ಲಭಿಸುತ್ತದೆ. ಭವಿಷ್ಯಕ್ಕಾಗಿ ಹಣವನ್ನು ಉಳಿಸುವ ಪ್ರಯತ್ನಕ್ಕೆ ಸರಿಯಾದ ಸಹಕಾರ ದೊರೆಯುವುದಿಲ್ಲ.

ಮಿಥುನ

ಹಣಕಾಸಿನ ಕೊರತೆ ಎದುರಾಗಲಿದೆ. ಹಿರಿಯ ಸೋದರನಿಂದ ಹಣಕಾಸಿನ ಸಹಾಯ ದೊರೆಯುತ್ತದೆ. ಕುಟುಂಬದ ಜವಾಬ್ದಾರಿ ನಿಮ್ಮದಾಗಲಿದೆ. ಉದ್ಯೋಗಸ್ಥರು ಅನಿವಾರ್ಯವಾಗಿ ಉದ್ಯೋಗ ಬದಲಿಸುವರು. ವಿದ್ಯಾರ್ಥಿಗಳು ವಿದೇಶದಲ್ಲಿ ಅಧ್ಯಯ್ಯನ ಮುಂದುವರಿಸುವರು. ದಾಂಪತ್ಯ ಜೀವನ ಸುಖಮಯ ವಾಗಿರುತ್ತದೆ. ಸಂತಾನ ಲಾಭವಿದೆ. ಪತಿಯೊಂದಿಗೆ ಮನರಂಜನಾ ಸ್ಥಳಕ್ಕೆ ತೆರಳುವಿರಿ. ಅಶಕ್ತ ಮಹಿಳೆಯರಿಗೆ ಸಹಾಯ ಮಾಡುವ ಯೋಜನೆ ರೂಪಿಸುವಿರಿ. ಸ್ವಂತ ಬಳಕೆಗಾಗಿ ವಾಹನ ಒಂದನ್ನು ಕೊಳ್ಳುವಿರಿ. ಒಮ್ಮೆ ತೆಗೆದುಕೊಂಡ ತೀರ್ಮಾನವನ್ನು ನಡೆಸಲು ವಿಫಲರಾಗುವಿರಿ. ಅತಿಯಾಗಿ ಚಿಂತೆ ಮಾಡದಿರಿ.

ಕಟಕ

ಯಾರೊಬ್ಬರ ಸಹಾಯವೂ ಇಲ್ಲದೆ ಯಾವುದೇ ಕೆಲಸ ಮಾಡಬಲ್ಲಿರಿ. ಉದ್ಯೋಗದಲ್ಲಿನ ಕೆಲಸ ಕಾರ್ಯದ ಒತ್ತಡ ಹೆಚ್ಚಲಿದೆ. ಆತುರಕ್ಕೆ ಒಳಗಾಗದೆ ಮಾಡುವ ಕೆಲಸದಲ್ಲಿ ಯಶಸ್ಸು ದೊರೆಯಲಿದೆ. ಯಾವುದೇ ಅಸಾಧ್ಯವೆನಿಸುವ ಕೆಲಸವನ್ನು ಸುಲಭವಾಗಿ ಮಾಡಬಲ್ಲಿರಿ. ದಾಂಪತ್ಯ ಜೀವನದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಪತಿಯೊಂದಿಗೆ ವಿದೇಶಕ್ಕೆ ತೆರಳುವ ಅವಕಾಶ ಲಭಿಸುತ್ತದೆ. ಅವಿವಾಹಿತರಿಗೆ ವಿವಾಹ ಯೋಗವಿದೆ. ಸಂಗೀತ ನಾಟ್ಯ ಕಲೆ ಬಲ್ಲವರಿಗೆ ಉನ್ನತ ಗೌರವ ಲಭಿಸುತ್ತದೆ. ತಂದೆಯವರ ವ್ಯಾಪಾರದಲ್ಲಿ ಪಾಲುಗಾರಿಕೆ ದೊರೆಯಲಿದೆ. ಹೆಚ್ಚಿನ ಹಣದ ಆಸೆ ಇರುವುದಿಲ್ಲ. ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳದಿರಿ.

ಸಿಂಹ

ಹಟದ ಗುಣದಿಂದಾಗಿ ಎದುರಾಗುವ ಕಷ್ಟ ನಷ್ಟಗಳಿಂದ ಪಾರಾಗುವಿರಿ. ಕೌಟುಂಬಿಕ ವಿವಾದವೊಂದು ತಾನಾಗಿಯೇ ದೂರವಾಗುತ್ತದೆ. ಒಮ್ಮೆ ತೆಗೆದುಕೊಂಡ ನಿರ್ಧಾರಗಳನ್ನು ಬದಲಾಯಿಸುವುದಿಲ್ಲ. ಯಾರಿಂದಲೂ ಸಾಧ್ಯವಾಗದ ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸುವಿರಿ. ತಂದೆಯವರಿಂದ ಉಡುಗೊರೆಯೊಂದು ಲಭ್ಯವಾಗುತ್ತದೆ. ಕೋಪವನ್ನು ಕಡಿಮೆ ಮಾಡಿಕೊಳ್ಳಿ. ಸಂತಾನ ಲಾಭವಿದೆ. ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ. ಉದ್ಯೋಗಸ್ಥರಿಗೆ ಉತ್ತಮ ಸ್ಥಾನಮಾನ ಲಭಿಸುತ್ತದೆ. ಜನಸೇವೆಗಾಗಿ ಸಂಘ ಸಂಸ್ಥೆಯೊಂದನ್ನು ಸ್ಥಾಪಿಸುವಿರಿ. ಕಷ್ಟ ಕಾಲಕ್ಕೆಂದು ಆತ್ಮೀಯರಿಗೆ ಕೊಟ್ಟಿದ್ದ ಹಣವನ್ನು ಮರಳಿ ಗಳಿಸುವಿರಿ.

ಕನ್ಯಾ

ಸ್ಥಿರವಾರ ತೀರ್ಮಾನ ತೆಗೆದುಕೊಳ್ಳಲು ವಿಫಲರಾಗುವಿರಿ. ಸರಿ ತಪ್ಪು ಎಂಬುದನ್ನು ಎಣಿಸದೆ ದುಡುಕಿನ ನಿರ್ಧಾರ ತೆಗೆದುಕೊಳ್ಳುವಿರಿ. ಪ್ರಯಾಣದ ಸಮಯದಲ್ಲಿ ತೊಂದರೆ ಆಗಬಹುದು ಎಚ್ಚರಿಕೆ ಇರಲಿ. ಆರೋಗ್ಯ ಕಾಪಾಡಿಕೊಳ್ಳಲು ಪ್ರಯತ್ನಿಸಿ. ಕುಟುಂಬ ನಿರ್ವಹಣೆಗೆ ಹೆಚ್ಚಿನ ಹಣದ ಅವಶ್ಯಕತೆ ಇದೆ. ಖ್ಯಾತ ಹಣಕಾಸು ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ಕಲಾವಿದರಿಗೆ ವಿನೂತನ ಗೌರವಾದರ ದೊರೆಯುತ್ತದೆ. ದಾಂಪತ್ಯ ಜೀವನದಲ್ಲಿ ಸುಖ ಸಂತೋಷ ನೆಲೆಸಿರುತ್ತದೆ. ಬೇರೆಯವರ ಹಣಕಾಸಿನ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸದಿರಿ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿದೆ. ತಪ್ಪನ್ನು ಒಪ್ಪದೆ ಟೀಕಿಸಿ ಸರಿಪಡಿಸುವಿರಿ.

ತುಲಾ

ನಿರೀಕ್ಷಿಸಿದಂತೆ ಶುಭ ಫಲಿತಾಂಶಗಳನ್ನು ಪಡೆಯಲು ಸಫಲರಾಗುವಿರಿ. ನಿಮ್ಮ ಪ್ರಯತ್ನಕ್ಕೆ ತಕ್ಕಂಥ ಪ್ರತಿಫಲ ಸದಾ ದೊರೆಯುತ್ತದೆ. ಕುಟುಂಬದ ರೂಪು ರೇಷೆಗಳನ್ನು ಬದಲಾಯಿಸಲು ಪತಿಯನ್ನು ಅವಲಂಬಿಸುವಿರಿ. ಸ್ವಂತ ಕೆಲಸ ಕಾರ್ಯಗಳನ್ನು ಮಾಡಲು ಸೋದರಿಯ ಸಹಕಾರ ದೊರೆಯುತ್ತದೆ. ಪತಿಯೊಡನೆ ಹೊಂದಿಕೊಂಡು ಬಾಳುವಿರಿ. ವೈವಾಹಿಕ ಜೀವನದಲ್ಲಿನ ಸಣ್ಣಪುಟ್ಟ ತಪ್ಪುಗಳನ್ನು ಮನ್ನಿಸುವಿರಿ. ಆತ್ಮೀಯರೊಂದಿಗೆ ಹಣಕಾಸಿನ ವಿವಾದಗಳು ಉಂಟಾಗಬಹುದು. ಸ್ನಾಯುವಿನ ಸೆಳೆತದ ಸಮಸ್ಯೆ ಇರುತ್ತದೆ. ಆರೋಗ್ಯದ ಕಡೆ ಗಮನವಿರಲಿ. ಉದ್ಯೋಗಸ್ಥರಿಗೆ ಯಾವುದೇ ತೊಂದರೆ ಬಾರದು. ಬಹುದಿನದಿಂದ ನಿರೀಕ್ಷಿಸಲ್ಪಟ್ಟಿದ್ದ ಯಶಸ್ಸು ದೊರೆಯಲಿದೆ.

ವೃಶ್ಚಿಕ

ಆರೋಗ್ಯ ಕಾಪಾಡಿಕೊಳ್ಳುವ ಸಲುವಾಗಿ ದೈಹಿಕ ವ್ಯಾಯಾಮವನ್ನು ಆರಂಭಿಸುವಿರಿ. ಮಕ್ಕಳ ಆಗುಹೋಗುಗಳ ಬಗ್ಗೆ ಕಾಳಜಿ ಇರಲಿದೆ. ಮೆಚ್ಚಿದವರೊಂದಿಗೆ ವಿವಾಹವಾಗಬಹುದು. ಯಾರನ್ನೂ ಸುಲಭವಾಗಿ ನಂಬುವುದಿಲ್ಲ. ಕುಟುಂಬದ ಹಣಕಾಸಿನ ಸ್ಥಿತಿ ಉತ್ತಮಗೊಳಿಸಲು ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ನಿಮ್ಮ ಸಿಡುಕಿನ ಮಾತನ್ನು ಯಾರಿಗೂ ಎದುರಿಸಲು ಸಾಧ್ಯವಾಗದು. ಹಣದ ಕೊರತೆ ನೀಗಿಸಲು ಉದ್ಯೋಗಕ್ಕೆ ಸೇರುವಿರಿ. ಪತಿಯ ಸಹಕಾರ ಸಹಾಯ ನಿಮಗಿರುತ್ತದೆ. ಅನಿರೀಕ್ಷಿತ ಧನಲಾಭವಿದೆ. ಪತಿಯ ಜೊತೆ ದೂರದ ಊರಿಗೆ ಪ್ರವಾಸಕ್ಕೆ ತೆರಳುವಿರಿ. ಉತ್ತಮ ಆರೋಗ್ಯಕ್ಕಾಗಿ ಆಹಾರ ಪದ್ಧತಿಯನ್ನು ಬದಲಿಸುವಿರಿ.

ಧನಸ್ಸು

ನಿಮ್ಮ ಒಳ್ಳೆಯ ಮನೋಭಾವನೆಯಿಂದ ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ಕುಟುಂಬದ ಶ್ರೇಯೋಭಿವೃದ್ಧಿಗಾಗಿ ಶ್ರಮ ಪಡೆಯುವಿರಿ. ಹಣಕಾಸಿನ ಜವಾಬ್ದಾರಿ ನಿಮ್ಮದಾಗುತ್ತದೆ. ಕುಟುಂಬದಲ್ಲಿ ಒಮ್ಮತದ ಕೊರತೆ ಎದುರಾಗಬಹುದು. ಅತಿಯಾದ ಆತ್ಮ ವಿಶ್ವಾಸ ಒಳ್ಳೆಯದಲ್ಲ. ಮಕ್ಕಳ ಓದು ಮತ್ತು ಪಠ್ಯೇತರ ಚಟುವಟಿಕೆಗಳ ಬಗ್ಗೆ ಸಂತಸ ವಿರುತ್ತದೆ. ಸಮಾಜದ ಗಣ್ಯ ವ್ಯಕ್ತಿಯ ಭೇಟಿ ಮಾಡುವಿರಿ. ತಂದೆ ತಾಯಿಯ ಆಗಮನ ಸಂತೋಷವನ್ನು ಉಂಟುಮಾಡಲಿದೆ. ಕೈ ಕಾಲುಗಳಲ್ಲಿ ಶಕ್ತಿ ಕಡಿಮೆ ಇರುತ್ತದೆ. ಯಾರ ಮನಸ್ಸಿಗೂ ನೋವಾಗದಂತೆ ಮಾತನಾಡುವಿರಿ. ಪ್ರಯೋಜನವಲ್ಲದ ಕೆಲಸ ಕಾರ್ಯಗಳನ್ನು ಮಾಡಲು ಇಚ್ಚಿಸುವುದಿಲ್ಲ. ಸ್ಥಿರವಾದ ಮನಸ್ಸಿರಲಿ.

ಮಕರ

ಕುಟುಂಬದ ರಾಜಕೀಯದಿಂದ ಬೇಸರ ಮೂಡುತ್ತದೆ. ವ್ಯಾಪಾರಸ್ಥರಾದಲ್ಲಿ ವಿಶೇಷವಾದ ಅನುಕೂಲತೆ ದೊರೆಯಲಿವೆ. ಯಾವುದೇ ವಿಚಾರವಾದರೂ ದುಡುಕುತನದ ನಿರ್ಧಾರ ತೆಗೆದುಕೊಳ್ಳದಿರಿ. ತವರು ಮನೆಯಿಂದ ತಂದೆಯಿಂದ ಹಣ ಅಥವಾ ಕಿರು ಕಾಣಿಕೆ ದೊರೆಯಲಿದೆ. ರಕ್ತದ ದೋಷವಿದ್ದಲ್ಲಿ ಎಚ್ಚರಿಕೆ ಇರಲಿ. ಉದ್ಯೋಗದಲ್ಲಿ ಉನ್ನತ ಸ್ಥಾನ ಮಾನ ಗಳಿಸುವಿರಿ. ನೀವು ಎಣಿಸಿದಂತೆ ಕೌಟುಂಬಿಕ ಕೆಲಸವನ್ನು ಮುಂದೂಡುವಿರಿ. ದಾಂಪತ್ಯ ಜೀವನದಲ್ಲಿ ನಿಮ್ಮ ಮಾತೇ ಮೇಲುಗೈ ಆಗುತ್ತದೆ. ಸಹನೆಯಿಂದ ಇದ್ದಷ್ಟು ಪತಿಯ ಜೊತೆ ಪ್ರೀತಿ ಹೆಚ್ಚುತ್ತದೆ. ಪತಿ ಮತ್ತು ಮಕ್ಕಳ ಜೊತೆಯಲ್ಲಿ ದೀರ್ಘ ಪ್ರವಾಸ ಮಾಡುವಿರಿ. ಕುಟುಂಬದಲ್ಲಿ ಮಂಗಳ ಕಾರ್ಯವೊಂದು ನಿಮ್ಮ ನೇತೃತ್ವದಲ್ಲಿ ನಡೆಯಲಿದೆ.

ಕುಂಭ

ಐಷಾರಾಮಿ ಜೀವನವನ್ನು ಇಷ್ಟಪಡುವಿರಿ. ಆದರೂ ಪರಿಸ್ಥಿತಿಗೆ ಅನುಗುಣವಾಗಿ ನಡೆದುಕೊಳ್ಳುವಿರಿ. ವಿದ್ಯಾರ್ಥಿಗಳು ಉನ್ನತ ವಿದ್ಯೆಗಾಗಿ ವಿದೇಶಕ್ಕೆ ತೆರಳುವರು. ಉದ್ಯೋಗಸ್ಥರಿಗೆ ಯಾವುದೇ ತೊಂದರೆ ಎದುರಾಗದು. ಕುಟುಂಬದ ಸ್ನೇಹ ಸೌಹಾರ್ದವನ್ನು ಉಳಿಸಲು ಪ್ರಯತ್ನಿಸುವಿರಿ. ಅನಿವಾರ್ಯವಾಗಿ ತೆಗೆದುಕೊಂಡ ಸಾಲವನ್ನು ನಿಮ್ಮ ಪತಿ ತೀರಿಸುತ್ತಾರೆ. ಉದ್ಯೋಗದಲ್ಲಿ ವಿಶೇಷ ಬದಲಾವಣೆಗಳು ಸಂತಸ ಉಂಟುಮಾಡಲಿವೆ. ಆತ್ಮ ವಿಮರ್ಶೆ ಮಾಡಿಕೊಳ್ಳುವ ಹವ್ಯಾಸ ಎಲ್ಲರಿಗೂ ಮಾದರಿಯಾಗಲಿದೆ. ಸೋದರ ಅಥವಾ ಸೋದರಿಯ ಜೊತೆ ಅನಾವಶ್ಯಕ ಕಲಹ ಉಂಟಾಗುತ್ತದೆ. ಸೋಲನ್ನು ಒಪ್ಪದೆ ಗೆಲ್ಲುವವರೆಗೂ ಹೋರಾಟ ನಡೆಸುವಿರಿ. ಯಾರ ಮಾತನ್ನೂ ಸುಲಭವಾಗಿ ಒಪ್ಪುವುದಿಲ್ಲ.

ಮೀನ

ಅತಿಯಾದ ಆತ್ಮವಿಶ್ವಾಸದಿಂದ ತಪ್ಪು ನಿರ್ಧಾರ ತೆಗೆದುಕೊಳ್ಳುವಿರಿ. ಆದರೆ ಶುಭ್ರವಾದ ಮನಸ್ಸು ಬೇರೆಯವರಲ್ಲಿ ಸ್ಪೂರ್ತಿಯನ್ನು ಮೂಡಿಸುತ್ತದೆ. ಕುಟುಂಬದ ಗಂಭೀರವಾದ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸುವಿರಿ. ಸಂಗೀತ ನಾಟ್ಯದಂತಹ ಸಾಂಪ್ರದಾಯಿಕ ಕಲೆಗಳಲ್ಲಿ ಆಸಕ್ತಿ ಇರುತ್ತದೆ. ಸಮಾಜದಲ್ಲಿ ವಿಶಿಷ್ಟವಾದ ಸ್ಥಾನಮಾನವನ್ನು ಗಳಿಸುವಿರಿ. ಕುಟುಂಬದಲ್ಲಿ ಸುಖ ಶಾಂತಿ ನೆಲೆಸುತ್ತದೆ. ವಿಶ್ರಾಂತಿ ಇಲ್ಲದ ದುಡಿಮೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಸ್ವಂತ ಬಳಕೆಗಾಗಿ ಐಷಾರಾಮಿ ವಾಹನ ಕೊಳ್ಳುವಿರಿ. ಕಲುಷಿತ ನೀರಿನ ಸೇವನೆಯಿಂದ ಗಂಟಲಿನ ಸೋಂಕು ಉಂಟಾಗಲಿದೆ. ಸಂತಾನ ಲಾಭವಿದೆ. ಪತಿಯ ಜೊತೆ ಅನಾವಶ್ಯಕವಾದ ವಾದ ವಿವಾದ ಎದುರಾಗಲಿದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).