Women Horoscope: ದಾಂಪತ್ಯ ಜೀವನ ಸುಖಮಯ, ಅವಿವಾಹಿತರಿಗೆ ವಿವಾಹ ಯೋಗ: ಮಾ 29 ರಿಂದ ಏ 4 ರವೆಗಿನ ಸ್ತ್ರೀ ವಾರ ಭವಿಷ್ಯ
Weekly Women horoscope in Kannada: ಸ್ತ್ರೀ ವಾರ ಭವಿಷ್ಯ (ಮಾ 29 ರಿಂದ ಏ 4ವರೆಗೆ) ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಈ ವಾರದ ಸ್ತ್ರೀ ಭವಿಷ್ಯ ಇಲ್ಲಿದೆ.
ಸ್ತ್ರೀ ವಾರ ರಾಶಿ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (Weekly women Horoscope).
ಮೇಷ
ಕುಟುಂಬದ ಹಣಕಾಸಿನ ಸಮಸ್ಯೆಯನ್ನು ಪರಿಹರಿಸುವಿರಿ. ಅನಿವಾರ್ಯವಾಗಿ ಹೆಚ್ಚಿನ ಜವಾಬ್ದಾರಿ ಹೊರಬೇಕಾಗುತ್ತ್ತದೆ. ಪತಿಯ ಜೊತೆ ಅನ್ಯೋನ್ಯತೆಯಿಂದ ಬಾಳ್ವೆ ನಡೆಸುವಿರಿ. ಮಕ್ಕಳ ವಿಚಾರದಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಉದ್ಯೋಗಸ್ಥರಿಗೆ ಅಧಿಕಾರಿಗಳ ಪ್ರಶಂಸೆ ಲಭಿಸುತ್ತದೆ. ಹಣದ ಉಳಿತಾಯದ ಬಗ್ಗೆ ಯೋಜನೆ ರೂಪಿಸುವಿರಿ. ಗೃಹಬಳಕೆ ವಸ್ತುಗಳ ಮಾರಾಟದಲ್ಲಿ ಲಾಭವಿರುತ್ತದೆ. ವಿಶ್ರಾಂತಿ ಇಲ್ಲದ ದುಡಿಮೆಯಿಂದ ಆರೋಗ್ಯದಲ್ಲಿ ತೊಂದರೆ ಆಗಬಹುದು. ಬೆಳೆ ಬಾಳುವ ವಸ್ತುಗಳ ಬಗ್ಗೆ ಎಚ್ಚರಿಕೆ ಇರಲಿ. ಪತಿ ಜೊತೆಯಲ್ಲಿ ತವರಿಗೆ ತೆರಳುವಿರಿ. ತಂದೆಯಿಂದ ಉಡುಗೊರೆಯೊಂದು ದೊರೆಯಲಿದೆ.
ವೃಷಭ
ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಹಟದ ಗುಣದಿಂದಾಗಿ ಕುಟುಂಬದಲ್ಲಿ ಬೇಸರ ಉಂಟಾಗುತ್ತದೆ. ಸ್ಥಿರವಾದ ಮನಸ್ಸಿನಿಂದ ಜೀವನದಲ್ಲಿನ ಕಷ್ಟ ನಷ್ಟಗಳನ್ನು ಗೆಲ್ಲುವಿರಿ. ಚಿಕ್ಕ ಪುಟ್ಟ ವಿಚಾರಗಳಿಗೂ ಹೆಚ್ಚಿನ ಪ್ರಾಶಸ್ತ್ಯ ನೀಡುವಿರಿ. ಅತಿಯಾದ ಆಸೆ ಇರದು. ಯಾವ ವಿಚಾರವನ್ನೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಕುಟುಂಬದ ಆದಾಯದಲ್ಲಿ ಹಣ ಉಳಿಸಲು ಪ್ರಯತ್ನಿಸುವಿರಿ. ಪತಿಯೊಂದಿಗೆ ಉತ್ತಮ ಸಂಬಂಧ ಇರುತ್ತದೆ. ಹೊಸ ವಾಹನ ಕೊಳ್ಳುವಿರಿ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಉದ್ಯೋಗಸ್ಥರಿಗೆ ಧನಾತ್ಮಕ ಬದಲಾವಣೆಗಳು ದೊರೆಯಲಿವೆ. ಸಂತಾನ ಲಾಭವಿದೆ. ನೆಮ್ಮದಿಯ ವಾತಾವರಣ ಇರುತ್ತದೆ.
ಮಿಥುನ
ಸಮಯ ಸಂದರ್ಭಕ್ಕೆ ಅನುಸಾರವಾಗಿ ಮನಸ್ಸನ್ನು ಬದಲಾಯಿಸಬಲ್ಲಿರಿ. ಕುಟುಂಬದ ಮುಖ್ಯವಾದ ಕೆಲಸವೊಂದು ನಿಮ್ಮಿಂದಾಗಿ ಪೂರ್ಣಗೊಳ್ಳಲಿದೆ. ಸ್ವಂತ ಕೆಲಸವೊಂದು ಅಪೂರ್ಣಗೊಳ್ಳುತ್ತದೆ. ಅನಿವಾರ್ಯವಾಗಿ ಉದ್ಯೋಗವನ್ನು ಬದಲಾಯಿಸುವಿರಿ. ಸ್ವಂತಂತ್ರವಾಗಿ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ಯೋಗ ಆರಂಭಿಸುವಿರಿ. ಕೌಟುಂಬಿಕ ಕೆಲಸ ಕಾರ್ಯದ ಒತ್ತಡ ಇರುತ್ತದೆ. ಹಣಕಾಸಿನ ವಿಚಾರದಲ್ಲಿ ದೃಢವಾದ ನಿಲುವು ತೆಗೆದುಕೊಳ್ಳುವಿರಿ. ಮೌನದಿಂದಲೇ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ಕಂಡುಹಿಡಿಯುವಿರಿ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಅವಿವಾಹಿತರಿಗೆ ವಿವಾಹ ಯೋಗವಿದೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ವಹಿಸಿ.
ಕಟಕ
ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಕ್ರಿಯಾಶೀಲತೆಯಿಂದ ಕಠಿಣವಾದ ಕೆಲಸಕಾರ್ಯವನ್ನು ಸುಲಭವಾಗಿ ಪೂರ್ಣಗೊಳಿಸುವಿರಿ. ಗೆಲುವನ್ನೇ ಹವ್ಯಾಸವನ್ನಾಗಿ ಮಾಡಿಕೊಳ್ಳುವಿರಿ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲಸಲು ಕಾರಣರಾಗುವಿರಿ. ದಂಪತಿಗಳ ನಡುವಿನ ವಿವಾದವು ಮರೆಯಾಗಲಿದೆ. ಕುಟುಂಬದ ಸದಸ್ಯರ ಜೊತೆಯಲ್ಲಿ ಚಿಕ್ಕ ವ್ಯಾಪಾರವನ್ನು ಆರಂಭಿಸುವಿರಿ. ಎಲ್ಲರೊಂದಿಗೆ ಯಾತ್ರಾ ಸ್ಥಳಕ್ಕೆ ಪ್ರವಾಸಕ್ಕೆ ತೆರಳುವಿರಿ. ಶೀತದ ತೊಂದರೆ ಇರುತ್ತದೆ. ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ಇರುತ್ತದೆ. ಅವಿವಾಹಿತರಿಗೆ ವಿವಾಹ ಯೋಗ ಇದೆ. ಐಷಾರಾಮಿ ಜೀವನವನ್ನು ಇಷ್ಟ ಪಡುವಿರಿ.
ಸಿಂಹ
ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಎಂದಿಗೂ ಬದಲಿಸುವುದಿಲ್ಲ. ಸಮಾಜದ ಮುಖ್ಯಸ್ಥರ ಪಟ್ಟ ದೊರೆಯುತ್ತದೆ. ಹಣಕಾಸಿನ ವಿಚಾರದಲ್ಲಿ ತವರುಮನೆಗೆ ಆಸರೆಯಾಗುವಿರಿ. ಆತ್ಮೀಯರಿಂದ ಹಣದ ಅನುಕೂಲ ಲಭಿಸಲಿದೆ. ಜೀವನದಲ್ಲಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸುವಿರಿ. ಕುಟುಂಬದ ಹಿರಿಯರ ಸೇವೆಯಲ್ಲಿ ಸಂತಸ ಕಾಣುವಿರಿ. ಸಮಾಜದ ಗಣ್ಯ ವ್ಯಕ್ತಿಗಳ ಸಹಕಾರ ಇರುತ್ತದೆ. ದಂಪತಿಗಳಲ್ಲಿ ಪ್ರೀತಿ ವಿಶ್ವಾಸ ಇರುತ್ತದೆ. ಆರೋಗ್ಯದಲ್ಲಿ ಸ್ಥಿರತೆ ಇರುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಯಶಸ್ಸನ್ನು ಗಳಿಸುವಿರಿ. ಮನರಂಜನಾ ಕಾರ್ಯಕ್ರಮಗಳಿಗಾಗಿ ಹಣವನ್ನು ಖರ್ಚು ಮಾಡುವಿರಿ.
ಕನ್ಯಾ
ತಪ್ಪನ್ನು ಮನ್ನಿಸುವ ಗುಣವಿರುವ ಕಾರಣ ವಿವಾದಗಳಿಂದ ದೂರ ಉಳಿಯುವಿರಿ. ಹಾಸ್ಯದ ಗುಣ ಕುಟುಂಬದ ಸಂತಸಕ್ಕೆ ಕಾರಣವಾಗುತ್ತದೆ. ಸ್ಥಿರವಾದ ಮನಸ್ಸಿರುವುದಿಲ್ಲ. ಆತ್ಮವಿಶ್ವಾಸದ ಕೊರತೆಯಿಂದ ಉದ್ಯೋಗವೊಂದು ದೂರವಾಗಲಿದೆ. ಏಕಾಂಗಿತನ ಬಹಳ ಕಾಡುತ್ತದೆ. ಚಿಕ್ಕವರು ದೊಡ್ದವರು ಎನ್ನದೆ ಎಲ್ಲರನ್ನೂ ಟೀಕಿಸುವಿರಿ. ಉದ್ಯೋಗದಲ್ಲಿ ತೊಂದರೆ ಬಾರದು. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ದೀರ್ಘಕಾಲದ ಪ್ರವಾಸದ ಯೋಜನೆ ಕೈಗೂಡುತ್ತದೆ. ವಾಹನವನ್ನು ಕೊಳ್ಳುವ ಯೋಜನೆ ರೂಪಿಸುವಿರಿ. ಮನೆಯನ್ನು ನವೀಕರಿಸಲು ಮುಂದಾಗುವಿರಿ. ದಾಂಪತ್ಯ ಜೀವನ ಸುಖ ಶಾಂತಿಯಿಂದ ಕೂಡಿರುತ್ತದೆ. ಸಾಲದ ವ್ಯವಹಾರ ಮಾಡುವುದಿಲ್ಲ.
ತುಲಾ
ಆತುರದ ನಿರ್ಧಾರ ತೆಗೆದುಕೊಳ್ಳದಿರಿ. ಆತ್ಮವಿಶ್ವಾಸದ ಕಾರಣ ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣುವಿರಿ. ಪತಿಯ ಸಹಕಾರ ಜೀವನದ ಹಾದಿಯನ್ನು ಬದಲಾಯಿಸುತ್ತದೆ. ಕ್ಷಮಾಗುಣ ಇರದ ಕಾರಣ ಸ್ನೇಹಿತರು ಬಂಧುಗಳು ದೂರ ಉಳಿಯುತ್ತಾರೆ. ಉದ್ಯೋಗ ಮಾಡಲಿಚ್ಚಿಸುವುದಿಲ್ಲ. ಸಣ್ಣ ಪುಟ್ಟ ವ್ಯಾಪಾರದಲ್ಲಿ ತೃಪ್ತಿ ಕಾಣುವಿರಿ. ದಾಂಪತ್ಯ ಜೀವನದಲ್ಲಿ ಯಾವುದೇ ತೊಂದರೆ ಕಾಣದು. ಮಕ್ಕಳ ಸುಂದರ ಭವಿಷ್ಯಕ್ಕಾಗಿ ವ್ಯಾಪಾರವೊಂದನ್ನು ಆರಂಭಿಸುವಿರಿ. ಪ್ರಸಾದನ ಸಾಮಗ್ರಿಗಳ ಮಾರಾಟದಲ್ಲಿ ಲಾಭವಿದೆ. ಯೋಗ ಪ್ರಾಣಾಯಾಮದಿಂದ ಉತ್ತಮ ಆರೋಗ್ಯ ಗಳಿಸುವಿರಿ.
ವೃಶ್ಚಿಕ
ಮುಂಗೋಪದಿಂದ ವಿವಾದಗಳನ್ನು ಸೃಷ್ಟಿಸುವಿರಿ. ಸಹಬಾಳ್ವೆಯಲ್ಲಿ ಪ್ರೀತಿ ನಂಬಿಕೆ ಇರುತ್ತದೆ. ಹಟದ ಗುಣ ಕಡಿಮೆ ಮಾಡಿದರೆ ಜೀವನದಲ್ಲಿ ಉನ್ನತಿ ಕಾಣುವಿರಿ. ಕುಟುಂಬದ ಆದಾಯ ಹೆಚ್ಚಲು ಕಾರಣರಾಗುವಿರಿ. ಮಾನಸಿಕ ಒತ್ತಡದ ಕಾರಣ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಉದ್ಯೋಗದಲ್ಲಿ ತೊಂದರೆ ಕಂಡು ಬಾರದು. ಪಶುಸಂಗೋಪನೆಯಲ್ಲಿ ಆಸಕ್ತಿ ಇರುತ್ತದೆ. ಪತಿಯೊಂದಿಗೆ ತವರುಮನೆಗೆ ತೆರಳುವಿರಿ. ಮಕ್ಕಳಿಗೆ ಅನಾರೋಗ್ಯ ಇರುತ್ತದೆ. . ಪಾಲುಗಾರಿಕೆಯ ವ್ಯಾಪಾರದಲ್ಲಿ ತೊಂದರೆ ಇರುತ್ತದೆ. ಪತಿ ಜೊತೆಯಲ್ಲಿ ಮನಸ್ತಾಪ ಇರುತ್ತದೆ. ತಂದೆಯಿಂದ ಹಣದ ಸಹಾಯ ದೊರೆಯುತ್ತದೆ.
ಧನಸ್ಸು
ಸೋಲನ್ನು ಜೀರ್ಣಿಸಿಕೊಳ್ಳಲಾರಿರಿ. ಬದಲಾಗದ ವ್ಯಕ್ತಿತ್ವ ಸಮಾಜದ ನಾಯಕರನ್ನಾಗಿ ಮಾಡುತ್ತದೆ. ಯಾವುದೇ ಕೆಲಸ ಕಾರ್ಯಾಗಳಲ್ಲಿ ನಿಶ್ಚಿತ ಯಶಸ್ಸು ಗಳಿಸುವಿರಿ. ಕುಟುಂಬದ ಅಭಿವೃದ್ಧಿಯ ಗುರುತರ ಹೊಣೆ ನಿಮಗಿರುತ್ತದೆ. ಅವಿರತ ಪ್ರಯತ್ನದಿಂದ ಆದಾಯವು ಹೆಚ್ಚುತ್ತದೆ. ಸಂಗೀತ ನಾಟ್ಯದ ತರಬೇತಿ ನೀಡುವವರಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ಸಂಘ ಸಂಸ್ಥೆಯ ಹೊಣೆ ದೊರೆಯುತ್ತದೆ. ಪತಿಯ ಜೊತೆ ಸಂತಸದಿಂದ ಬಾಳುವಿರಿ. ಸೋದರರಿಗೆ ಹಣದ ಸಹಾಯ ಮಾಡುವಿರಿ. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಆಸಕ್ತಿ ತೋರುವುದಿಲ್ಲ.
ಮಕರ
ಚುರುಕುತನದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಗೆಲ್ಲುವನ್ನೇ ಹವ್ಯಾಸ ಮಾಡಿಕೊಳ್ಳುವಿರಿ. ಸಂತಸದ ಜೀವನ ನಡೆಸುವಿರಿ. ಕೊಂಚವೂ ಯೋಚಿಸದೆ ಮಾತನಾಡುವ ಕಾರಣ ವಿವಾದ ಎದುರಾಗಲಿದೆ. ಕಷ್ಟ ನಷ್ಟಕ್ಕೆ ಹೆದರುವುದಿಲ್ಲ. ಸ್ನೇಹ ಜೀವಿಗಳು. ಪತಿಯ ಜೊತೆಯಲ್ಲಿ ವಿದೇಶಕ್ಕೆ ತೆರಳುವ ಅವಕಾಶ ಲಭಿಸುತ್ತದೆ. ಅನಾರೋಗ್ಯದಿಂದ ಬಳಲುವಿರಿ. ಸ್ಥಿರವಾದ ಮನಸ್ಸು ಇರುವುದಿಲ್ಲ. ಸ್ವಂತ ಪರಿಶ್ರಮದಿಂದ ವ್ಯಾಪಾರವೊಂದನ್ನು ಆರಂಭಿಸುವಿರಿ. ಮಾತು ಕಡಿಮೆ ಮಾಡಿದರೆ ವಿವಾದ ಉಂಟಾಗದು. ಸಂತಾನ ಲಾಭವಿದೆ. ಸೋದರರ ಜೊತೆ ಉತ್ತಮ ಬಾಂಧವ್ಯ ಏರ್ಪಡುತ್ತದೆ.
ಕುಂಭ
ಪ್ರಯೋಜನವಿಲ್ಲದ ಮಾತುಕತೆಯಲ್ಲಿ ಕಾಲ ಕಳೆಯುವುದಿಲ್ಲ. ಸರಳ ಮಾರ್ಗದಲ್ಲಿ ಕೈಹಿಡಿದ ಕೆಲಸ ಕಾರ್ಯಗಳನ್ನು ಸಂಪೂರ್ಣಗೊಳಿಸುವಿರಿ. ಕುಟುಂಬದ ಹಣದ ಗಳಿಕೆಯಲ್ಲಿ ನಿಮ್ಮ ಪಾತ್ರ ದೊಡ್ಡದಾಗುತ್ತದೆ. ಸಮಾಜದಲ್ಲಿ ಉನ್ನತ ಸ್ಥಾನ ಗಳಿಸುವಿರಿ. ಕಿರಿಯ ಸೋದರಿಯ ವಿವಾಹಕ್ಕೆ ನೆರವಾಗುವಿರಿ. ಹಣಕಾಸಿನ ಸಂಸ್ಥೆಯಲ್ಲಿಉದ್ಯೋಗ ದೊರೆಯುತ್ತದೆ. ನಿಮ್ಮ ಮನಸ್ಸನ್ನು ಅರ್ಥಮಾಡಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಅತಿ ಮುಖ್ಯವಾದ ವಿಚಾರವನ್ನು ರಹಸ್ಯವಾಗಿಡುವಿರಿ. ಹೊಸ ಮನೆಯನ್ನು ಕೊಳ್ಳುವ ಸಾಧ್ಯತೆಗಳಿವೆ. ಹಣದ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಅವಿವಾಹಿತರಿಗೆ ವಿವಾಹ ಯೋಗವಿದೆ.
ಮೀನ
ನಿರ್ದಿಷ್ಟವಾದ ಮಾತುಕತೆ ಇರುವುದಿಲ್ಲ. ಸೌಂದರ್ಯ ಪಾಲನೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವಿರಿ. ಮನ ಬಯಸುವ ಆಭರಣವನ್ನು ಕೊಳ್ಳುವಿರಿ. ಹಣದ ತೊಂದರೆ ಇರುವುದಿಲ್ಲ. ನೀವು ಆಡುವ ಮಾತಿಗೆ ಎಲ್ಲರೂ ತಲೆದೂಗುತ್ತಾರೆ. ಶುಚಿ ರುಚಿಯಾದ ಆಹಾರವನ್ನು ಇಷ್ಟಪಡುವಿರಿ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರುತ್ತದೆ. ಅನಾವಶ್ಯಕ ವಿಚಾರಗಳಿಗೆ ಯೋಚನೆ ಮಾಡುವಿರಿ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಕುಟುಂಬದ ಹಣದ ವಿವಾದದಲ್ಲಿ ಜಯ ಗಳಿಸುವಿರಿ. ತಂದೆಗೆ ಸೇರಿದ ವ್ಯಾಪಾರ ವ್ಯವಹಾರದ ಪೂರ್ಣ ಜವಾಬ್ದಾರಿ ದೊರೆಯುತ್ತದೆ. ಪತಿಯ ಜೊತೆಯಲ್ಲಿ ದೀರ್ಘಕಾಲದ ಪ್ರವಾಸ ಕೈಗೊಳ್ಳುವಿರಿ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).