ಕನ್ನಡ ಸುದ್ದಿ  /  Astrology  /  Women Horoscope Of 1 March 2024 To 7 March 2024 Zodiac Signs Women Weekly Astrology Sts

Women Horoscope: ನಿರೀಕ್ಷಿತ ಶುಭಫಲ ಸಿಗುವುದು, ಕುಟುಂಬಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗುವಿರಿ; ಸ್ತ್ರೀ ವಾರ ಭವಿಷ್ಯ

Women Horoscope: ಸ್ತ್ರೀ ವಾರ ಭವಿಷ್ಯ (ಮಾರ್ಚ್​ 1 ರಿಂದ 7ರವರೆಗೆ): ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಈ ವಾರದ ಸ್ತ್ರೀ ಭವಿಷ್ಯ ಇಲ್ಲಿದೆ.

ಸ್ತ್ರೀ ರಾಶಿ ಭವಿಷ್ಯ
ಸ್ತ್ರೀ ರಾಶಿ ಭವಿಷ್ಯ

ಸ್ತ್ರೀ ರಾಶಿ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. ( 1 March 2024 to 7 March 2024 Women Horoscope).

ಮೇಷ

ಕುಟುಂಬದ ಬಹುತೇಕ ಜವಾಬ್ದಾರಿಯು ನಿಮ್ಮದಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಪತಿಯ ಸಹಾಯ ಪಡೆಯುವಿರಿ. ಉದ್ಯೋಗದ ವಿಚಾರವಾಗಿ ತಪ್ಪು ನಿರ್ಣಯದಿಂದಾಗಿ ಗಲಿಬಿಲಿಗೆ ಒಳಗಾಗುವಿರಿ. ಪತಿಯ ಜೊತೆಯಲ್ಲಿ ಉತ್ತಮ ಬಾಂಧವ್ಯ ಇರುತ್ತದೆ. ಆರೋಗ್ಯದ ಬಗ್ಗೆ ಹಿರಿಯರ ಮಾತನ್ನು ಕೇಳುವಿರಿ. ಉದ್ಯೋಗದಲ್ಲಿ ಉನ್ನತ ಸ್ಥಾನಮಾನ ಲಭಿಸುತ್ತದೆ. ತವರು ಮನೆಯಲ್ಲಿ ನಡೆದ ಮಂಗಳ ಕಾರ್ಯದ ಜವಾಬ್ದಾರಿಯನ್ನು ನಿರ್ವಹಿಸುವಿರಿ. ಸಂತಾನ ಲಾಭವಿದೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ಸರಳ ವ್ಯಾಯಾಮ ಕ್ರಮವನ್ನು ಅನುಸರಿಸಿ. ಎಲ್ಲರನ್ನೂ ಮಾತಿನ ಮೋಡಿಯಿಂದ ಗೆಲ್ಲುವಿರಿ. ಸಹನೆಯಿಂದ ವರ್ತಿಸಿರಿ.

ವೃಷಭ

ಎಲ್ಲರ ಮನದ ಇಂಗಿತದದಂತೆ ಕೆಲಸ ಕಾರ್ಯಗಳನ್ನು ಮಾಡುವಿರಿ. ಕುಟುಂಬದ ಹಣಕಾಸಿನ ವ್ಯವಹಾರದಲ್ಲಿ ದೃಢವಾದ ತೀರ್ಮಾನವನ್ನು ತೆಗೆದುಕೊಳ್ಳುವಿರಿ. ಮನೆ ಮಂದಿಯೊಂದಿಗೆ ಯಾತ್ರಾ ಸ್ಥಳಕ್ಕೆ ಭೇಟಿ ನೀಡುವಿರಿ. ಹಣಕಾಸಿನ ಸಂಸ್ಥೆಯ ಒಡೆತನ ಲಭಿಸುತ್ತದೆ. ನಿರೀಕ್ಷಿತ ಯಶಸ್ಸು ದೊರೆಯುವ ಕಾರಣ ಸಂತೋಷದಿಂದ ಇರುವಿರಿ. ಕಷ್ಟಪಟ್ಟು ಕೂಡಿಟ್ಟ ಹಣ ಒಳ್ಳೆಯ ಕಾರ್ಯಕ್ಕೆ ಖರ್ಚಾಗುತ್ತದೆ. ಉದ್ಯೋಗಸ್ಥರು ಹಿರಿಯ ಅಧಿಕಾರಿಗಳ ಪ್ರಶಂಸೆಯನ್ನು ಗಳಿಸುತ್ತಾರೆ. ಯಾವುದೇ ವಿಚಾರವಾದರೂ ಕ್ರೀಡಾ ಮನೋಭಾವನೆಯಿಂದ ಸ್ವೀಕರಿಸಿ. ಸುಲಭವಾಗಿ ಯಾರಿಗೂ ಹಣದ ಸಹಾಯ ನೀಡುವುದಿಲ್ಲ.

ಮಿಥುನ

ಬಹುದಿನದಿಂದ ಕುಟುಂಬದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವಿರಿ. ಆಪ್ತರೊಬ್ಬರು ನಿಮ್ಮ ಒಳ್ಳೆಯತನವನ್ನು ದುರುಪಯೋಗ ಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಎಚ್ಚರವಿರಲಿ. ಆರೋಗ್ಯದಲ್ಲಿ ಸ್ಥಿರತೆ ಕಂಡು ಬರುತ್ತದೆ. ಧಾರ್ಮಿಕ ಕೆಲಸ ಕಾರ್ಯಗಳ ಜವಾಬ್ದಾರಿ ನಿಮ್ಮದಾಗಲಿದೆ. ಸಾರ್ವಜನಿಕ ಸಭೆ ಸಮಾರಂಭದಲ್ಲಿ ಭಾಗವಹಿಸುವಿರಿ. ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ಪ್ರಯತ್ನಿಸುವಿರಿ. ಪತಿಯ ಜೊತೆಯಲ್ಲಿ ಉತ್ತಮ ಸಂಬಂಧ ಇರುತ್ತದೆ. ಬೇಸರ ಕಳೆಯಲು ಪತಿಯೊಂದಿಗೆ ದೀರ್ಘ ಪ್ರವಾಸ ಕೈಗೊಳ್ಳುವಿರಿ. ಅವಶ್ಯಕತೆ ಇದ್ದಲ್ಲಿ ಸೋದರನಿಂದ ಹಣದ ಸಹಾಯ ದೊರೆಯುತ್ತದೆ. ಗರ್ಭಿಣಿಯರು ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಾರೆ.

ಕಟಕ

ಆತ್ಮ ವಿಶ್ವಾಸದಿಂದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ತಾಯಿಯವರ ಅನಾರೋಗ್ಯದ ಕಾರಣ ತವರಿನಲ್ಲಿ ಕೆಲಕಾಲ ಉಳಿಯುವಿರಿ. ಕಡಿಮೆ ಬಂಡವಾಳದ ವ್ಯಾಪಾರವನ್ನು ಆರಂಭಿಸಲು ಪ್ರಯತ್ನಿಸುವಿರಿ. ಸ್ವಂತ ಮನೆ ಕಟ್ಟಿಸುವ ಇಂಗಿತ ವ್ಯಕ್ತಪಡಿಸುವಿರಿ. ಹಣಕಾಸಿನ ವ್ಯವಹಾರದಲ್ಲಿ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಮನಸ್ಸು ಒಳ್ಳೆಯದಾದರೂ ಮಾತಿನಲ್ಲಿ ಸಿಡುಕುತನ ಇರುತ್ತದೆ. ಪ್ರವಾಸ ಮಾಡುವ ಉದ್ದೇಶ ನೆರವೇರುತ್ತದೆ. ನೂತನ ಒಡವೆ ವಸ್ತ್ರಗಳಿಗಾಗಿ ಹಣವನ್ನು ಖರ್ಚು ಮಾಡುವಿರಿ. ಅನಿರೀಕ್ಷಿತ ಧನ ಲಾಭವಿದೆ. ವಾಸಸ್ಥಳವನ್ನು ಬದಲಿಸಬೇಕಾಗಿ ಬರುತ್ತದೆ.

ಸಿಂಹ

ಸುಲಭವಾಗಿ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಹಣದ ವಿಚಾರವಾಗಿ ವಾದ ವಿವಾದಗಳಲ್ಲಿ ತೊಡಗುವಿರಿ. ಅವಿವಾಹಿತರಿಗೆ ವಿವಾಹವಾಗುತ್ತದೆ. ಉದ್ಯೋಗಸ್ಥರಿಗೆ ಉನ್ನತ ಅಧಿಕಾರ ಲಭಿಸುತ್ತದೆ. ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಮತ್ತೆ ಬದಲಿಸುವುದಿಲ್ಲ. ಕುಟುಂಬದ ಸದಸ್ಯರ ಮೇಲೆ ಅಧಿಕಾರ ಚಲಾಯಿಸುವಿರಿ. ವಿದೇಶ ಪ್ರಯಾಣ ಯೋಗವಿದೆ. ಅನಿರೀಕ್ಷಿತವಾಗಿ ಹಣ ಅಥವಾ ಉಡುಗೊರೆ ದೊರೆಯಲಿದೆ. ರಾಜಕೀಯದಲ್ಲಿ ಆಸಕ್ತಿ ಮೂಡಲಿದೆ. ಉತ್ತಮ ಅವಕಾಶ ತಾನಾಗಿಯೇ ಒದಗಿ ಬರಲಿದೆ. ತಂದೆಯ ವ್ಯಾಪಾರದಲ್ಲಿ ಪಾಲುಗಾರಿಕೆ ಲಭಿಸುತ್ತದೆ. ಅತಿಯಾದ ಧೈರ್ಯ ಒಳ್ಳೆಯದಲ್ಲ.

ಕನ್ಯಾ

ದೃಢವಾದ ಮನಸ್ಸಿರುವುದಿಲ್ಲ. ತೆಗೆದುಕೊಳ್ಳುವ ತೀರ್ಮಾನಗಳನ್ನು ಉಳಿಸಿಕೊಳ್ಳಲು ವಿಫಲರಾಗುವಿರಿ. ಪತಿಯ ಸಹಾಯದಿಂದ ಯಾವುದೇ ತೊಂದರೆ ಉಂಟಾಗದು. ಪ್ರತಿಯೊಂದು ವಿಚಾರದಲ್ಲೂ ನಿರೀಕ್ಷಿತ ಶುಭ ಫಲಗಳನ್ನು ಪಡೆಯುವಿರಿ. ನೀವು ಮಾಡುವ ತಪ್ಪುಗಳನ್ನು ಒಪ್ಪುವುದಿಲ್ಲ. ಬೇರೆಯವರ ತಪ್ಪುಗಳನ್ನೂ ಕ್ಷಮಿಸುವುದಿಲ್ಲ. ಒಂದಕ್ಕಿಂತಲೂ ಹೆಚ್ಚಿನ ಆದಾಯವಿರುತ್ತದೆ ಸಂಸಾರ ನಿರ್ವಹಣೆಗೆ ಅಗತ್ಯವಾದಷ್ಟು ಹಣವನ್ನು ಸುಲಭವಾಗಿ ಸಂಪಾದಿಸಬಲ್ಲಿರಿ. ಅತಿಯಾಗಿ ಯೋಚನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಗುರುಗಳ ಯಾತ್ರಾಸ್ಥಳಕ್ಕೆ ಪತಿಯೊಂದಿಗೆ ಭೇಟಿ ನೀಡುವಿರಿ. ಆರೋಗ್ಯದ ಬಗ್ಗೆ ಗಮನವಿರಲಿ. ಪತಿಯ ಕೆಲಸ ಕಾರ್ಯಗಳನ್ನು ಅನಗತ್ಯವಾಗಿ ಟೀಕಿಸುವಿರಿ.

ತುಲಾ

ಕುಟುಂಬದ ಅಭಿವೃದ್ಧಿಗೆ ಯಾವುದೇ ತ್ಯಾಗಕ್ಕೂ ಸಿದ್ಧರಾಗುವಿರಿ. ಎದುರಾಗುವ ತೊಂದರೆ ಒಂದನ್ನು ದಿಟ್ಟತನದಿಂದ ಎದುರಿಸುವಿರಿ. ಸದಾ ಚುರುಕುತನದಿಂದ ಕರ್ತವ್ಯ ಪಾಲನೆ ಮಾಡುವಿರಿ. ಅವಿವಾಹಿತರಿಗೆ ವಿವಾಹ ಯೋಗವಿದೆ. ಪಾಲುಗಾರಿಕೆಯಲ್ಲಿ ಗುಡಿಕೈಗಾರಿಕೆಯೊಂದನ್ನು ಆರಂಭಿಸುವಿರಿ. ಆರೋಗ್ಯದಲ್ಲಿ ತೊಂದರೆ ಕಾಣದು. ತಪ್ಪನ್ನು ಕ್ಷಮಿಸುವಿರಿ. ಸಂಸಾರದಲ್ಲಿ ಸುಖ ಸಂತೋಷವಿರುತ್ತದೆ. ರಾಜಕೀಯದಲ್ಲಿ ಆಸಕ್ತಿ ಇದ್ದಲ್ಲಿ ಅವಕಾಶವೊಂದು ದೊರೆಯಲಿದೆ. ಅನಿರೀಕ್ಷಿತ ಧನ ಲಾಭವಿರುತ್ತದೆ. ಬಡ ವಿದ್ಯಾರ್ಥಿಗಳಿಗೆ ಹಣದ ಸಹಾಯ ಮಾಡುವಿರಿ. ಹಾಸ್ಯದ ಮನೋಭಾವನೆ ಇರಲಿದೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ವಹಿಸಿ. ಪತಿಯ ಹಣಕಾಸಿನ ವ್ಯವಸ್ಥೆ ನಿಮ್ಮನ್ನು ಅವಲಂಭಿಸುತ್ತದೆ.

ವೃಶ್ಚಿಕ

ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಯಶಸ್ಸು ದೊರೆಯದು. ಆದ ಕಾರಣ ಚಿಂತನೆಯಲ್ಲಿ ಮುಳುಗಿರುತ್ತೀರಿ. ಆರೋಗ್ಯದ ಬಗ್ಗೆ ಗಮನ ಇರಲಿ. ಹಠವನ್ನು ತೊರೆದು ಆತ್ಮೀಯರ ಮನ ಗೆಲ್ಲಿರಿ. ಪತಿ ಮತ್ತು ಮಕ್ಕಳ ಜೊತೆ ದೂರದ ಊರಿಗೆ ಪ್ರಯಾಣ ಮಾಡಬೇಕಾಗುತ್ತದೆ. ಗೃಹಿಣಿಯರು ಶಾಂತಿ ಸಮಾಧಾನದಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಸಂತಾನ ಲಾಭವಿದೆ. ಪತಿಯ ಸಹನೆ ಮೀರುವಂತೆ ವಾದ ಮಾಡುವಿರಿ. ಮನರಂಜನೆಗಾಗಿ ಹೆಚ್ಚಿನ ಹಣ ಬೇಕಾಗುತ್ತದೆ. ಯಾತ್ರಾ ಸ್ಥಳಕ್ಕೆ ತೆರಳುವಿರಿ. ಅನಿರೀಕ್ಷಿತ ಖರ್ಚು ವೆಚ್ಚಗಳನ್ನು ನಿಯಂತ್ರಿಸುವಿರಿ. ನಿಮ್ಮಿಂದಾಗಿ ಹಣದ ತೊಂದರೆ ಕಡಿಮೆ ಆಗಲಿದೆ.

ಧನಸ್ಸು

ಸಮಯಕ್ಕೆ ತಕ್ಕಂತೆ ಮನಸ್ಸನ್ನು ಬದಲಿಸುವಿರಿ. ಕಟ್ಟುನಿಟ್ಟಿನಿಂದ ವರ್ತಿಸಿ ಕುಟುಂಬದ ಸಮಸ್ಯೆಗಳನ್ನು ಬಗೆಹರಿಸುವಿರಿ. ಒಡವೆ ವಸ್ತ್ರಗಳಿಗೆ ಹೆಚ್ಚಾದ ಹಣ ಖರ್ಚಾಗಬಹುದು. ಉದ್ಯೋಗಸ್ಥರದಲ್ಲಿ ಅಧಿಕಾರ ಪ್ರಾಪ್ತಿ ಆಗುತ್ತದೆ. ಕುಟುಂಬದಲ್ಲಿ ದೇವತಾ ಕಾರ್ಯದ ಬಗ್ಗೆ ಮಾತುಕತೆ ನಡೆಯಲಿದೆ. ಮಕ್ಕಳಿಗೆ ಅವಶ್ಯವೆನಿಸುವ ಅನುಕೂಲತೆಗಳನ್ನು ಕಲ್ಪಿಸುವಿರಿ. ವಿದ್ಯಾರ್ಥಿಗಳು ಉನ್ನತ ಮಟ್ಟವನ್ನು ತಲುಪುತ್ತಾರೆ. ಕುಟುಂಬದಲ್ಲಿ ಎಲ್ಲರೊಂದಿಗೆ ಸಂತಸದಿಂದ ಬಾಳುವಿರಿ. ಪತಿಯ ಜೊತೆಯಲ್ಲಿ ಉತ್ತಮ ಅನ್ಯೋನ್ಯತೆ ಬೆಳೆಯುತ್ತದೆ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಸ್ವಂತ ಬಳಕೆಗಾಗಿ ವಹನವನ್ನು ಖರೀದಿಸುವಿರಿ.

ಮಕರ

ಆತುರದ ಬುದ್ಧಿಯಿಂದ ಕಷ್ಟಕ್ಕೆ ಸಿಲುಕುವಿರಿ. ಬಿಡುವಿಲ್ಲದ ಕೆಲಸ ಕಾರ್ಯಗಳಿಂದ ಬೇಸರ ಉಂಟಾಗಲಿದೆ. ಸಮಯಕ್ಕೆ ತಕ್ಕಂತಹ ತೀರ್ಮಾನಗಳನ್ನು ತೆಗೆದುಕೊಳ್ಳುವಿರಿ. ಬೇಸರ ಮೂಡುವಂತೆ ಮಾತುಕತೆ ನಡೆಸುವಿರಿ. ತಪ್ಪು ಗ್ರಹಿಕೆಯಿಂದ ಕುಟುಂಬದ ಕೆಲಸವೊಂದನ್ನು ಮುಂದೂಡುವಿರಿ. ತಂದೆಯವರು ನಡೆಸುತ್ತಿದ್ದ ವ್ಯಾಪಾರದ ಜವಾಬ್ದಾರಿ ವಹಿಸುವಿರಿ. ಪತಿಯೊಂದಿಗೆ ವಿದೇಶ ಪ್ರಯಾಣ ಮಾಡುವ ಸಾಧ್ಯತೆ ಇದೆ. ಕಲಾವಿದರಿಗೆ ವಿಶೇಷವಾದ ಪ್ರಶಸ್ತಿ ಸನ್ಮಾನಗಳು ಲಭಿಸುತ್ತದೆ. ಉತ್ತಮ ಆರೋಗ್ಯಕ್ಕಾಗಿ ವಿಶ್ರಾಂತಿಯ ಅಗತ್ಯವಿರುತ್ತದೆ. ಲೋಹದ ವಸ್ತುವಿನಿಂದ ತೊಂದರೆ ಉಂಟಾಗಬಹುದು. ಸೋದರನಿಗೆ ಹಣಸಹಾಯ ಮಾಡುವಿರಿ.

ಕುಂಭ

ಕುಟುಂಬದ ಕೆಲಸ ಕಾರ್ಯಗಳ ಮಧ್ಯೆ ಬೇರೆಯವರಿಗೂ ಸಹಾಯ ಮಾಡುವಿರಿ. ಪ್ರಮುಖ ತೀರ್ಮಾನವನ್ನು ತಡವಾಗಿ ತೆಗೆದುಕೊಳ್ಳುವಿರಿ. ಇದರಿಂದ ಪತಿಗೆ ಬೇಸರವಾಗಬಹುದು. ಮಂಗಳ ಕೆಲಸ ಕಾರ್ಯಗಳು ಅಪೂರ್ಣಗೊಳ್ಳುತ್ತವೆ. ಆಡುವ ಮಾತಿನಲ್ಲಿ ಪಾರದರ್ಶಕತೆ ಇರುವುದು ಮುಖ್ಯ. ಉನ್ನತ ವಿದ್ಯಾಭ್ಯಾಸಕ್ಕಾಗಿ ಪರಸ್ಥಳಕ್ಕೆ ತೆರಳುವಿರಿ. ಕುಟುಂಬದಲ್ಲಿ ಉತ್ತಮ ಹೊಂದಾಣಿಕೆ ಉಂಟಾಗಲು ಕಾರಣರಾಗುವಿರಿ. ಗೃಹಿಣಿಯರಿಗೆ ಜವಾಬ್ದಾರಿಯು ಕಡಿಮೆಯಾಗುತ್ತದೆ. ಪತಿಯ ಜೊತೆ ಇದ್ದ ಮನಸ್ತಾಪವು ಕೊನೆಯಾಗುತ್ತದೆ. ಸಣ್ಣ ಪ್ರಮಾಣದ ವ್ಯಾಪಾರದಲ್ಲಿ ಹೆಚ್ಚಿನ ಲಾಭವಿದೆ.

ಮೀನ

ಹೊಂದಾಣಿಕೆಯ ಬುದ್ಧಿಯಿಂದ ಎಲ್ಲರೊಂದಿಗೆ ಸ್ನೇಹದಿಂದ ವರ್ತಿಸುವಿರಿ. ಸಂತಾನ ಲಾಭವಿದೆ. ಮಕ್ಕಳು ಕೌಟುಂಬಿಕ ಜವಾಬ್ದಾರಿಯಿಂದ ದೂರ ಉಳಿಯುತ್ತಾರೆ. ಸರಿಯಾದ ತೀರ್ಮಾನವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಅನವಶ್ಯಕ ಖರ್ಚು ವೆಚ್ಚಗಳು ಕಂಡು ಬರುತ್ತದೆ. ಸ್ವಂತ ಉದ್ದಿಮೆ ಇದ್ದಲ್ಲಿ ಅನಿರೀಕ್ಷಿತ ಧನ ಲಾಭವಿರುತ್ತದೆ. ದೂರದ ಸಂಬಂಧಿ ಒಬ್ಬರು ವ್ಯಾಪಾರವೊಂದರ ಪಾಲುಗಾರಿಕೆ ನೀಡುತ್ತಾರೆ. ಬುದ್ಧಿವಂತಿಕೆಯಿಂದ ವರ್ತಿಸುವ ಕಾರಣ ಸಮಾಜದಲ್ಲಿ ಅತಿ ಮುಖ್ಯ ಸ್ಥಾನವನ್ನು ಅಲಂಕರಿಸುವಿರಿ. ಕ್ರೀಡಾಸಕ್ತರಿಗೆ ಉತ್ತಮ ಅವಕಾಶ ದೊರೆಯಲಿದೆ. ನೀರಿರುವ ಸ್ಥಳಗಳಲ್ಲಿ ಎಚ್ಚರಿಕೆ ಇರಲಿ.

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).