ಕನ್ನಡ ಸುದ್ದಿ  /  Astrology  /  Women Horoscope Of 15 March 2024 To 21 March 2024 Zodiac Signs Women Weekly Astrology Sts

Women Horoscope: ದಾಂಪತ್ಯ ಜೀವನದಲ್ಲೊಂದು ಶುಭ ಸುದ್ದಿ, ಕಷ್ಟನಷ್ಟ ಎದುರಿಸಿ ಯಶಸ್ಸು ಗಳಿಸುವಿರಿ; ಸ್ತ್ರೀ ವಾರ ಭವಿಷ್ಯ

Women Horoscope: ಸ್ತ್ರೀ ವಾರ ಭವಿಷ್ಯ (ಮಾರ್ಚ್​ 15 ರಿಂದ 21ರವರೆಗೆ): ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಈ ವಾರದ ಸ್ತ್ರೀ ಭವಿಷ್ಯ ಇಲ್ಲಿದೆ.

 ಸ್ತ್ರೀ ವಾರ ಭವಿಷ್ಯ
ಸ್ತ್ರೀ ವಾರ ಭವಿಷ್ಯ

ಸ್ತ್ರೀ ರಾಶಿ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. ( 15 March 2024 to 21 March 2024 Women Horoscope).

ಮೇಷ

ಅನಾರೋಗ್ಯದ ನಡುವೆಯೂ ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ. ಉತ್ತಮ ಆರೋಗ್ಯಕ್ಕೆ ವಿಶ್ರಾಂತಿಯ ಅಗತ್ಯವಿದೆ. ಸ್ವಾರ್ಥವಿಲ್ಲದ ಮನಸ್ಸು ಕುಟುಂಬದ ಎಲ್ಲರ ಬೇಡಿಕೆಯನ್ನೂ ಪೂರೈಸುತ್ತದೆ. ಬುದ್ಧಿವಂತಿಯಿಂದ ಹಣದ ಸಮಸ್ಯೆಯನ್ನು ಪರಿಹರಿಸುವಿರಿ. ಮಕ್ಕಳ ದಿನಚರಿಯಲ್ಲಿ ಬದಲಾವಣೆ ಕಂಡುಬರುತ್ತದೆ. ಸದಾ ಕಾಲ ಯಾವುದೋ ಒಂದು ಕೆಲಸದಲ್ಲಿ ಮಗ್ನರಾಗುವಿರಿ. ಪತಿಯ ಜೊತೆಯಲ್ಲಿ ಹೊಂದಾಣಿಕೆಯಿಂದ ಬಾಳುವಿರಿ. ತಪ್ಪು ಮಾಡಿದಲ್ಲಿ ಪಶ್ಚಾತಾಪ ಪಡುವಿರಿ. ಗುಟ್ಟಾಗಿ ಹಣವನ್ನು ಉಳಿಸುವಿರಿ. ಉದ್ಯೋಗಸ್ಥರಿಗೆ ಹೆಚ್ಚಿನ ಜವಾಬ್ದಾರಿ ದೊರೆಯಲಿದೆ.

ವೃಷಭ

ಹಣಕಾಸಿನ ವಿಚಾರದಲ್ಲಿ ಮನದಲ್ಲಿ ಭಯವಿರುತ್ತದೆ. ಸರಿ ಎನಿಸದಿದ್ದಲ್ಲಿ ಯಾರ ಮಾತನ್ನೂ ಕೇಳುವುದಿಲ್ಲ. ನಿಮ್ಮ ಸ್ವಂತ ನಿರ್ಧಾರದಿಂದ ಭೂಮಿ ಅಥವಾ ಮನೆಯನ್ನು ಕೊಳ್ಳಲು ಸಾಧ್ಯವಾಗಲಿದೆ. ಕಷ್ಟಕ್ಕೆ ಸ್ಪಂದಿಸುವ ಕಾರಣ ಎಲ್ಲರ ಮನಸ್ಸನ್ನುಗೆಲ್ಲಲು ಯಶಸ್ವಿಯಾಗುವಿರಿ. ಯಾರ ಮನಸ್ಸಿಗೂ ಬೇಸರ ಆಗದಂತೆ ಬಾಳುವಿರಿ. ಏಕಾಂಗಿಯಾಗಿ ಸ್ವಂತ ಕೆಲಸವೊಂದನ್ನು ಸಾಧಿಸಿಕೊಳ್ಳುವಿರಿ. ಹಣದ ಕೊರತೆ ಇರದು. ಒಡವೆ ವಸ್ತ್ರಕ್ಕಾಗಿ ಹಣವನ್ನು ಖರ್ಚು ಮಾಡುವಿರಿ. ಉದ್ಯೋಗ ದೊರೆಯುತ್ತದೆ. ಸಮಯ ಕಳೆಯಲೆಂದು ಸಂಗೀತ ನಾಟ್ಯದ ಅಭ್ಯಾಸ ಮಾಡುವಿರಿ. ವಿದ್ಯಾರ್ಥಿಗಳಿಗೆ ವಿಶೇಷವಾದ ಅನುಕೂಲತೆಗಳಿವೆ. ಹಣಕಾಸಿನ ವಿಚಾರದಲ್ಲಿ ತೊಂದರೆ ಇರುತ್ತದೆ.

ಮಿಥುನ

ಆತ್ಮೀಯರನ್ನು ಸಹ ಅನಾವಶ್ಯಕವಾಗಿ ಅನುಮಾನದಿಂದ ಕಾಣುವಿರಿ. ದುಡುಕಿನಿಂದ ತೆಗೆದುಕೊಂಡ ನಿರ್ಧಾರವನ್ನು ಬದಲಾಯಿಸಿ ಸರಿದಾರಿಯಲ್ಲಿ ನಡೆಯುವಿರಿ. ಪತಿಯ ಜೊತೆಯಲ್ಲಿ ತವರಿಗೆ ತೆರಳುವಿರಿ. ಮಕ್ಕಳು ನೆಚ್ಚಿನ ಉಡುಗೊರೆಯೊಂದನ್ನು ನೀಡಲಿದ್ದಾರೆ. ಕುಟುಂಬಕ್ಕೆ ಸಂಬಂಧಿಸಿದ ಹಣಕಾಸಿನ ಸಮಸ್ಯೆ ದೂರಾಗಲು ಸೂಕ್ತ ಸಲಹೆ ನೀಡುವಿರಿ. ವೃತ್ತಿಕ್ಷೇತ್ರದಿಂದ ಶುಭ ವರ್ತಮಾನವೊಂದು ಬರಲಿದೆ. ಹೊಸ ಜವಾಬ್ದಾರಿಯಿಂದ ಬಿಡುವಿಲ್ಲದ ದುಡಿಮೆ ಇರುತ್ತದೆ. ಪತಿಯ ಜೊತೆಯಲ್ಲಿ ಗುಡಿಕೈಗಾರಿಕೆ ಆರಂಭಿಸುವ ಇಂಗಿತ ವ್ಯಕ್ತಪಡಿಸುವಿರಿ. ದುಡುಕದೆ ಸಹನೆಯಿಂದ ಎಲ್ಲವನ್ನೂ ಎಲ್ಲರನ್ನೂ ಗೆಲ್ಲುವಿರಿ.

ಕಟಕ

ನಿಮ್ಮಲ್ಲಿನ ಹಾಸ್ಯದ ಮನೋಭಾವನೆ ಕುಟುಂಬದ ಬೇಸರ ದೂರ ಮಾಡುತ್ತದೆ. ಪತಿಯ ವ್ಯಾಪಾರ ವ್ಯವಹಾರದಲ್ಲಿನ ಲೋಪದೋಷಗಳನ್ನು ತಿದ್ದುವಿರಿ. ಪತಿಯ ಜೊತೆಯಲ್ಲಿ ಯಾತ್ರಾ ಸ್ಥಳಕ್ಕೆ ತೆರಳುವಿರಿ. ಸೋದರಿಯ ವಿವಾಹಕ್ಕೆ ಹಣದ ಸಹಾಯ ಮಾಡುವಿರಿ. ಅರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಸಂತಾನ ಲಾಭವಿದೆ. ವಿದ್ಯಾರ್ಥಿನಿಯರಿಗೆ ವಿದೇಶದಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸುವ ಅವಕಾಶ ದೊರೆಯಲಿದೆ. ಗಾಳಿಮಾತನ್ನು ನಂಬದಿರಿ. ಅತಿ ಸರಳ ಮಾರ್ಗದಲ್ಲಿ ಅವಶ್ಯಕವಾದ ಹಣವನ್ನು ಸಂಪಾದಿಸುವಿರಿ. ಪ್ರೀತಿ ಮತ್ತು ಸಂತಸದ ಬಾಳ್ವೆ ನಿಮ್ಮದಾಗುತ್ತದೆ. ಆತುರದ ನಿರ್ಧಾರ ಒಳ್ಳೆಯದಲ್ಲ.

ಸಿಂಹ

ಒಮ್ಮೆ ತೆಗೆದುಕೊಂಡ ತೀರ್ಮಾನಗಳಿಗೆ ಬದ್ದರಾಗುವಿರಿ. ಸಂಘ ಸಂಸ್ಥೆಯ ನಿರ್ವಹಣೆಯ ಜವಾಬ್ದಾರಿ ನಿಮ್ಮದಾಗುತ್ತದೆ. ರಾಜಕೀಯದಲ್ಲಿ ಆಸಕ್ತಿ ಇದ್ದಲ್ಲಿ ಉತ್ತಮ ಅವಕಾಶ ದೊರೆಯುತ್ತದೆ. ಹಠದ ಗುಣದಿಂದಾಗಿ ಉದ್ಯೋಗದ ಅವಕಾಶವನ್ನು ತಪ್ಪಿಸಿಕೊಳ್ಳುವಿರಿ. ಉತ್ತಮ ಆರೋಗ್ಯಕ್ಕಾಗಿ ದೇಹದ ತೂಕವನ್ನು ಕಡಿಮೆಮಾಡಿಕೊಳ್ಳಲು ನಿರ್ಧರಿಸುವಿರಿ. ಗಣ್ಯವ್ಯಕ್ತಿಯೊಬ್ಬರ ಪರಿಚಯದಿಂದ ಅನುಕೂಲವಾಗುತ್ತದೆ. ಕೌಟುಂಬಿಕ ಜವಾಬ್ದಾರಿ ಕಡಿಮೆ ಆಗಲಿದೆ. ಪತಿಯ ಜೊತೆಯಲ್ಲಿ ವಾದ ವಿವಾದಗಳು ಇರಲಿವೆ. ಪತಿಯ ಕ್ಷಮಾಗುಣ ಎಲ್ಲವನ್ನೂ ಸರಿದಾರಿಗೆ ತರಲಿದೆ. ಅವಿವಾಹಿತರಿಗೆ ವಿವಾಹವಾಗುವ ಸಾಧ್ಯತೆಗಳು ಇರುತ್ತದೆ. ಕೂಡಿಟ್ಟ ಹಣ ಖರ್ಚಾಗಬಹುದು.

ಕನ್ಯಾ

ಸ್ಥಿರವಾದ ಮನಸ್ಸು ಇರುವುದಿಲ್ಲ. ಇದರಿಂದ ಅನಾನುಕೂಲತೆಯೆ ಹೆಚ್ಚು. ಹಿರಿಯರ ಮನಸ್ಸನ್ನು ಅರಿತು ಬಾಳುವುದು ಮುಖ್ಯ. ತಪ್ಪು ಮಾಡಿ ಅನ್ಯರನ್ನು ಟೀಕಿಸುವಿರಿ. ಧೈರ್ಯದಿಂದ ಕೆಲಸ ಕಾರ್ಯಗಳಲ್ಲಿ ಮುಂದುವರೆದಲ್ಲಿ ಜಯ ನಿಶ್ಚಿತ. ಬುದ್ಧಿವಂತಿಕೆಯಿಂದ ದೊರೆವ ಅವಕಾಶವನ್ನು ನಿಮ್ಮದಾಗಿಸಿಕೊಳ್ಳಿರಿ. ಸರಳ ಜೀವನ ನಡೆಸಿ ಎಲ್ಲರಿಗೂ ಮಾದರಿ ಆಗುವಿರಿ. ವಾದ ವಿವಾದ ಇಷ್ಟ ಪಡುವುದಿಲ್ಲ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ. ವ್ಯಾಪಾರದಲ್ಲಿ ಉತ್ತಮ ಲಾಭ ಗಳಿಸುವಿರಿ. ಒಂದೇ ರೀತಿಯ ಕೆಲಸ ಮಾಡಲು ಇಷ್ಟ ಪಡುವುದಿಲ್ಲ. ಹಣದ ಕೊರತೆ ಕಡಿಮೆ ಆಗಲು ಕಾರಣರಾಗುವಿರಿ. ಅನಿರೀಕ್ಷಿತ ಧನಲಾಭವಿದೆ. ಅನಾವಶ್ಯಕವಾಗಿ ಯಾರನ್ನೂ ಟೀಕಿಸದಿರಿ.

ತುಲಾ

ಸಮಯವನ್ನು ವ್ಯರ್ಥ ಮಾಡದೆ ಯಾವುದಾದರೊಂದು ಚಟುವಟಿಕೆಯಲ್ಲಿ ಭಾಗಿಯಾಗುವಿರಿ. ಕಾನೂನಿನ ಚೌಕಟ್ಟಿನಲ್ಲಿ ಭೂ ವಿವಾದದಲ್ಲಿ ಜಯ ಗಳಿಸುವಿರಿ. ಉದ್ಯೋಗದಲ್ಲಿನ ಬದಲಾವಣೆಗಳು ನಿಮಗೆ ಸಹಕಾರಿ ಆಗುತ್ತದೆ. ಷೇರು ವ್ಯವಹಾರದಲ್ಲಿ ಲಾಭ ದೊರೆವ ಸಾಧ್ಯತೆ ಇದೆ. ಚಿನ್ನ ಬೆಳ್ಳಿಯ ಒಡವೆಗಳಿಗೆ ಹಣವನ್ನು ಖರ್ಚುಮಾಡುವಿರಿ. ಕಷ್ಟ ಕಾಲಕ್ಕಾಗಿ ಹಣವನ್ನು ಉಳಿಸಲು ಪ್ರಯತ್ನಿಸುವಿರಿ. ಚುರುಕುತನದಿಂದ ಸಮಯಕ್ಕೆ ತಕ್ಕಂತಹ ತೀರ್ಮಾನಗಳನ್ನು ತೆಗೆದುಕೊಳ್ಳಬಲ್ಲಿರಿ. ಕುಟುಂಬದ ಸದಸ್ಯರ ಜೊತೆಯಲ್ಲಿ ಪ್ರವಾಸ ಬೆಳೆಸುವಿರಿ. ಸಮಾಜದ ಮುಖ್ಯಸ್ಥರಾಗಿ ಮುಂದುವರಿಯುವಿರಿ. ತವರಿನ ಜೊತೆಯಲ್ಲಿ ಉತ್ತಮ ಬಾಂಧವ್ಯ ಇರುವುದಿಲ್ಲ. ಮಕ್ಕಳಿಗೆ ಉದ್ಯೋಗ ದೊರೆಯಲಿದೆ.

ವೃಶ್ಚಿಕ

ಪ್ರತಿಯೊಂದು ವಿಚಾರಗಳಿಗೂ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವಿರಿ. ಕುಟುಂಬದಲ್ಲಿ ಶಾಂತಿಯ ವಾತಾವರಣ ಇರಲಿದೆ. ಪತಿಯ ಜೊತೆಯಲ್ಲಿ ವಾದ ವಿವಾದಗಳು ಸಾಮಾನ್ಯವಾಗಿರುತ್ತವೆ. ಕೋಪದಲ್ಲಿ ತಪ್ಪು ನಿರ್ಧಾರವೊಂದನ್ನು ತೆಗೆದುಕೊಳ್ಳುವಿರಿ. ವಿದೇಶಿ ಸಹಭಾಗಿತ್ವದ ಸಂಸ್ಥೆಯಲ್ಲಿ ಉದ್ಯೋಗ ದೊರೆಯಲಿದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಬೇರೆಯವರ ಹಣಕಾಸಿನ ವಿವಾದದಿಂದ ಶತೃತ್ವ ಉಂಟಾಗಬಹುದು. ತಂದೆಯ ವೃತ್ತಿ ಅಥವ ವ್ಯಾಪಾರವನ್ನು ಅನುಸರಿಸಬೇಕಾದ ಅನಿವಾರ್ಯತೆ ಉಂಟಾಗಲಿದೆ. ಮಕ್ಕಳ ವಿವಾಹದ ಬಗ್ಗೆ ಮಾತುಕತೆ ನಡೆಯುತ್ತದೆ. ಮನೆಯನ್ನು ಕಾಲಕ್ಕೆ ತಕ್ಕಂತೆ ಅಲಂಕರಿಸಲು ಹೆಚ್ಚಿನ ಹಣವನ್ನು ಖರ್ಚುಮಾಡುವಿರಿ.

ಧನಸ್ಸು

ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ತಂದೆಯ ಸಹಾಯದಿಂದ ಸ್ವಂತ ಉದ್ಧಿಮೆ ಆರಂಭಿಸುವಿರಿ. ದುಡುಕದೆ ಮೌನದಿಂದ ಯಶಸ್ಸನ್ನು ಗಳಿಸುವಿರಿ. ಎರಡಕ್ಕಿಂತಲೂ ಹೆಚ್ಚಿನ ಮೂಲದಿಂದ ಆದಾಯ ಗಳಿಸುವಿರಿ. ಸ್ವಂತ ಮನೆಯನ್ನು ಕೊಳ್ಳುವ ಸಾಧ್ಯತೆಗಳಿವೆ. ಆತ್ಮೀಯರ ಹಣದ ಸಹಾಯವನ್ನು ತಿರಸ್ಕರಿಸುವಿರಿ. ಕೇವಲ ಹಣಕ್ಕೆ ಪ್ರಾಮುಖ್ಯತೆ ನೀಡುವುದಿಲ್ಲ. ಸಮಾಜದಲ್ಲಿ ಮುಖ್ಯಸ್ಥಾನವನ್ನು ಅಲಂಕರಿಸುವಿರಿ. ದಾಂಪತ್ಯದಲ್ಲಿ ಶುಭ ಸುದ್ದಿಯೊಂದು ಕಾದಿದೆ. ಪತಿಗೆ ಹಣದ ಸಹಾಯ ಮಾಡುವಿರಿ. ತಪ್ಪು ಮಾಡುವವರನ್ನು ದೂರ ಇಡುವಿರಿ. ಕೋಪವು ಬೆಗನೆ ಬರುತ್ತದೆ. ಶಾಂತಿ ಸಂಯಮದಿಂದ ಬಾಳಿದಲ್ಲಿ ಕುಟುಂಬದಲ್ಲಿ ಸಂತಸ ಮನೆ ಮಾಡುತ್ತದೆ.

ಮಕರ

ಎದುರಾಗುವ ಸವಾಲನ್ನು ಎದುರಿಸಿ ಆರಂಭಿಸಿರುವ ಕೆಲಸ ಕಾರ್ಯವನ್ನು ಪೂರ್ಣಗೊಳಿಸುವಿರಿ. ದುಡಿಮೆಯ ನಡುವೆ ವಿಶ್ರಾಂತಿಗೂ ಸಮಯ ಇರುವುದಿಲ್ಲ. ಬೇರೆಯವರ ಸಹಾಯವನ್ನು ಪಡೆಯುವುದಿಲ್ಲ. ವಿದ್ಯಾರ್ಥಿಗಳ ಕಲಿಕಾಮಟ್ಟ ಹೆಚ್ಚುತ್ತದೆ. ಸಮಾಜದ ಪ್ರತಿಸ್ಥಿತ ಸಂಸ್ಥೆಯಲ್ಲಿ ಉದ್ಯೋಗ ದೊರೆಯಬಹುದು. ನಿಮ್ಮಲ್ಲಿನ ವಿದ್ಯೆಯನ್ನು ಎಲ್ಲರಿಗೂ ಕಲಿಸುವ ಪ್ರಯತ್ನ ಮಾಡುವಿರಿ. ಬರವಣಿಗೆಯ ಅಭ್ಯಾಸ ಮುಂದುವರೆಯಲ್ಕಿದೆ. ಜನರಿಗೆ ಉಪಯೋಗವಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಿರಿ. ರಾಜಕೀಯ ಸೇರುವ ಆಸೆ ಪೂರ್ಣಗೊಳ್ಳಲಿದೆ. ಪತಿಯ ಜೊತೆಯಲ್ಲಿ ಯಾತ್ರಾಸ್ಥಳಕ್ಕೆ ಭೇಟಿ ನೀಡುವಿರಿ.

ಕುಂಭ

ಮನದಲ್ಲಿನ ಆಸೆ ಆಕಾಂಕ್ಷೆಗಳನ್ನು ಯಾರಲ್ಲಿಯೂ ಹೇಳಿಕೊಳ್ಳುವುದಿಲ್ಲ. ಯಾರೊಂದಿಗೂ ಮನಬಿಚ್ಚಿ ಮಾತನಾಡುವುದಿಲ್ಲ. ಕಷ್ಟ ನಷ್ಟಗಳನ್ನು ಎದುರಿಸಿ ಯಶಸ್ಸನ್ನು ಗಳಿಸುವಿರಿ. ಹಣಕಾಸಿನ ಸಂಸ್ಥೆಯಲ್ಲಿ ಉದ್ಯೋಗ ಇದ್ದಲ್ಲಿ ಬಡ್ತಿ ದೊರೆಯುತ್ತದೆ. ಸಮಾಜದಲ್ಲಿ ಮುಖ್ಯ ವ್ಯಕ್ತಿಯಾಗಿ ಬಾಳುವಿರಿ. ವಿದೇಶ ಪ್ರಯಾಣದ ಅವಕಾಶ ದೊರೆಯುತ್ತದೆ. ಅನಾವಶ್ಯಕ ಮಾತಿನಿಂದ ವಿವಾದಕ್ಕೆ ಸಿಲುಕುವಿರಿ. ಜನೋಪಯೋಗಿ ಕೆಲಸದಲ್ಲಿ ಆಸಕ್ತಿ ಇರುತ್ತದೆ. ಯಾರು ಬೇಕಾದರೂ ಸುಲಭವಾಗಿ ನಿಮ್ಮನ್ನು ವಂಚಿಸಬಹುದು ಎಚ್ಚರಿಕೆಯಿಂದ ಇರಿ. ಮನಸ್ಸಿನ ಭಾವನೆಗಳಿಗೆ ಜೀವ ನೀಡುವಿರಿ. ಸ್ವಂತ ಮನೆಯ ಅಭಿಲಾಷೆ ಈಡೇರಲು ತವರಿನ ಸಹಾಯ ದೊರೆಯುತ್ತದೆ.

ಮೀನ

ನಿಮ್ಮ ನಡೆ ನುಡಿಗಳಿಗೆ ಕುಟುಂಬದ ಒಳಗೂ ಹೊರಗೂ ಗೌರವ ಇರುತ್ತದೆ. ಮನಸ್ಸು ನೀರಿನಂತೆ ಪರಿಶುದ್ದವಾಗಿರುತ್ತದೆ. ತೆಗೆದುಕೊಂಡ ನಿರ್ಧಾರಗಳನ್ನು ಬದಲಿಸದಿರಿ. ಬರಿ ಮಾತಿನಿಂದ ಪತಿಗೆ ಸಂಬಂಧಿಸಿದ ಭೂ ವಿವಾದವನ್ನು ಪರಿಹರಿಸುವಿರಿ. ಸಾಕುಪ್ರಾಣಿಗಳ ಮೇಲೆ ಕನಿಕರವಿರುತ್ತದೆ. ಹಣ ಕಾಸಿನ ವಿಚಾರದಲ್ಲಿ ಯಾರನ್ನೂ ನಂಬುವುದಿಲ್ಲ. ಬಡವರ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವಿರಿ. ಸ್ಥಿರವಾದ ಮನಸ್ಸಿರದ ಕಾರಣ ಉದ್ಯೋಗಾವಕಾಶವೊಂದನ್ನು ಕಳೆದುಕೊಳ್ಳುವಿರಿ. ಪತಿ ಮತ್ತು ಮಕ್ಕಳ ಜೊತೆಯಲ್ಲಿ ದೀರ್ಘಕಾಲದ ಪ್ರವಾಸ ಕೈಗೊಳ್ಳುವಿರಿ. ಕಣ್ಣಿನ ದೋಷ ಇರಲಿದೆ. ದ್ರವರೂಪದ ಆಹಾರಪದಾರ್ಥಗಳ ಸೇವನೆಯಿಂದ ಆರೋಗ್ಯದಲ್ಲಿ ತೊಂದರೆ ಉಂಟಾಗುವ ಸಾಧ್ಯತೆಗಳಿವೆ.

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).