ಕನ್ನಡ ಸುದ್ದಿ  /  Astrology  /  Women Horoscope Of 22 March 2024 To 28 March 2024 Zodiac Signs Women Weekly Astrology Sts

Women Horoscope: ದೀರ್ಘ ಪ್ರವಾಸದ ಯೋಚನೆ ಕೈಗೂಡತ್ತೆ, ಕುಟುಂಬದ ಮುಖ್ಯ ಕೆಲಸವೊಂದು ಅಪೂರ್ಣ; ಸ್ತ್ರೀ ವಾರ ಭವಿಷ್ಯ

Women Horoscope: ಸ್ತ್ರೀ ವಾರ ಭವಿಷ್ಯ (ಮಾರ್ಚ್​ 22 ರಿಂದ 28ರವರೆಗೆ): ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಈ ವಾರದ ಸ್ತ್ರೀ ಭವಿಷ್ಯ ಇಲ್ಲಿದೆ.

ಸ್ತ್ರೀ ರಾಶಿ ಭವಿಷ್ಯ
ಸ್ತ್ರೀ ರಾಶಿ ಭವಿಷ್ಯ

ಸ್ತ್ರೀ ರಾಶಿ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. ( 22 March 2024 to 28 March 2024 Women Horoscope).

ಮೇಷ

ಬುದ್ದಿವಂತಿಕೆಯಿಂದ ಕುಟುಂಬವನ್ನು ಹಣದ ತೊಂದರೆಯಿಂದ ಪಾರುಮಾಡುವಿರಿ. ಅನಿವಾರ್ಯವಾಗಿ ಹೆಚ್ಚಿನ ಜವಾಬ್ದಾರಿ ಹೊರಬೇಕಾಗುತ್ತದೆ. ಪತಿಯ ಜೊತೆಯಲ್ಲಿ ಉತ್ತಮ ಹೊಂದಾಣಿಕೆ ಉಂಟಾಗುತ್ತದೆ. ಅವಿರತ ದುಡಿಮೆಯ ಫಲವಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಉದ್ಯೋಗಸ್ಥರು ಅಧಿಕಾರಿಗಳಾಗಿ ಬಡ್ತಿ ಪಡೆಯುತ್ತಾರೆ. ಹಣದ ಬಗ್ಗೆ ಅತಿಯಾಸೆ ಇರುವುದಿಲ್ಲ. ಗೃಹೋಪಯೋಗಿ ವಸ್ತುಗಳನ್ನು ಕೊಳ್ಳಲು ಹೆಚ್ಚಿನ ಹಣ ಬೇಕಾಗಬಹುದು. ಆರೋಗ್ಯದಲ್ಲಿ ತೊಂದರೆ ಆಗಬಹುದು. ಮಕ್ಕಳ ಬಗ್ಗೆ ಎಚ್ಚರಿಕೆ ಇರಲಿ. ಪತಿಯ ಜೊತೆಯಲ್ಲಿ ತವರಿಗೆ ತೆರಳುವಿರಿ. ತಂದೆಯಿಂದ ಉಡುಗೊರೆಯೊಂದು ದೊರೆಯಲಿದೆ.

ವೃಷಭ

ಸೋತರೂ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಗೆಲ್ಲುವ ಛಲದಿಂದ ಜೀವನದಲ್ಲಿ ಮುಂದುವರೆಯುವಿರಿ. ಹಠದ ಗುಣದಿಂದಾಗಿ ಕೆಲವರಿಗೆ ಬೇಸರ ಉಂಟಾಗಬಹುದು. ಜೀವನದಲ್ಲಿ ಎದುರಾಗುವ ಕಷ್ಟ ನಷ್ಟಗಳನ್ನು ಗೆಲ್ಲುವಿರಿ. ಚಿಕ್ಕ ಪುಟ್ಟ ವಿಷಯವನ್ನು ಕೂಲಂಕುಶವಾಗಿ ಪರಿಶೀಲಿಸುವಿರಿ. ಮಕ್ಕಳ ವಿಚಾರಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವಿರಿ. ಅತಿಯಾದ ಆಸೆ ಇರದು. ಕುಟುಂಬದ ಸುಖ ಸಂತೃಪ್ತಿಗಾಗಿ ಹಣ ಉಳಿಸಲು ಪ್ರಯತ್ನಿಸುವಿರಿ. ಪತಿಯ ಸಹಾಯ ಸಹಕಾರ ಸದಾಕಾಲ ದೊರೆಯುತ್ತದೆ. ಹೊಸ ವಾಹನ ಕೊಳ್ಳುವಿರಿ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಉದ್ಯೋಗಸ್ಥರು ಅನಿವಾರ್ಯವಾಗಿ ವೃತ್ತಿ ಬಿಡುವಿರಿ.

ಮಿಥುನ

ಸಮಯ ಸಂಬಂಧಕ್ಕೆ ಹೊಂದಿಕೊಂಡು ಜೀವನ ಸಾಗಿಸುವಿರಿ. ಹಣಕಾಸಿನ ವಿಚಾರದಲ್ಲಿ ಅವಸರವಾಗಿ ಮನಸ್ಸನ್ನು ಬದಲಾಯಿಸುವಿರಿ. ಕುಟುಂಬದ ಮುಖ್ಯವಾದ ಕೆಲಸವೊಂದು ಅಪೂರ್ಣಗೊಳ್ಳುತ್ತದೆ. ಅನಿವಾರ್ಯವಾಗಿ ಉದ್ಯೋಗವನ್ನು ಬದಲಿಸುವಿರಿ. ಸ್ವಂತಂತ್ರವಾಗಿ ಮಂಗಳ ಕಾರ್ಯಗಳನ್ನು ಆಯೋಜಿಸುವ ಉದ್ಯಮ ಆರಂಭಿಸುವಿರಿ. ಕೌಟುಂಬಿಕ ಕೆಲಸ ಕಾರ್ಯದ ಒತ್ತಡ ಹೆಚ್ಚಾಗಿ ಇರುತ್ತದೆ. ಹಣಕಾಸಿನ ವಿಚಾರದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳುವಿರಿ. ಮೌನದಿಂದಲೇ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ಕಂಡುಹಿಡಿಯುವಿರಿ. ದಾಂಪತ್ಯಜೀವನ ಸುಖಮಯವಾಗಿರುತ್ತದೆ. ಅವಿವಾಹಿತರಿಗೆ ವಿವಾಹಯೋಗವಿದೆ.

ಕಟಕ

ಅತಿಯಾದ ಆತ್ಮವಿಶ್ವಾಸದಿಂದ ತೊಂದರೆಗೆ ಒಳಗಾಗುವಿರಿ. ಕ್ರಿಯಾಶೀಲ ಗುಣ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ. ಕಠಿಣದ ಕೆಲಸಕಾರ್ಯಗಳಲ್ಲಿ ಪತಿಯ ಸಹಾಯ ದೊರೆಯುತ್ತದೆ. ಕುಟುಂಬದ ಅವಶ್ಯಕತೆಗಳನ್ನು ಸುಲಭವಾಗಿ ಪೂರೈಸುವಿರಿ. ಗೆಲುವನ್ನೇ ಹವ್ಯಾಸವನ್ನಾಗಿ ಮಾಡಿಕೊಳ್ಳುವಿರಿ. ನಿಮ್ಮ ಪ್ರಯತ್ನದಿಂದ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲಸಿರುತ್ತದೆ. ಕ್ಷುಲ್ಲಕ ವಿಚಾರಗಳ ಸಲುವಾಗಿ ದಂಪತಿಗಳ ನಡುವೆ ವಿವಾದವು ಉಂಟಾಗಲಿದೆ. ಕುಟುಂಬದ ಸದಸ್ಯರ ಜೊತೆಯಲ್ಲಿ ಕಿರುಪ್ರವಾಸವನ್ನು ಆಯೋಜಿಸುವಿರಿ. ಶೀತದ ತೊಂದರೆ ಇರುತ್ತದೆ. ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ಇರುತ್ತದೆ. ಐಷಾರಾಮಿ ಜೀವನವನ್ನು ಇಷ್ಟ ಪಡುವಿರಿ.

ಸಿಂಹ

ಹಠದಿಂದ ತೆಗೆದುಕೊಂಡ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಿರಿ. ಕುಟುಂಬದ ದೈನಂದಿನ ಕಾರ್ಯವಿಧಿಗಳನ್ನು ಬದಲಿಸುವಿರಿ. ಸಮಾಜದ ಪ್ರಮುಖ ಪದವಿ ಪಟ್ಟ ದೊರೆಯುತ್ತದೆ. ತವರುಮನೆಗೆ ಹಣದ ವಿಚಾರವಾಗಿ ಆಸರೆಯಾಗುವಿರಿ. ತಂದೆಯಿಂದ ಅನುಕೂಲ ಲಭಿಸಲಿದೆ. ಜೀವನದಲ್ಲಿನ ಸವಾಲುಗಳನ್ನು ಜಯಿಸುವಿರಿ. ಕುಟುಂಬದ ಹಿರಿಯರ ಸೇವೆಯಲ್ಲಿ ಸಂತಸ ಕಾಣುವಿರಿ. ದಂಪತಿಗಳಲ್ಲಿ ವಿಶೇಷವಾದ ಪ್ರೀತಿ ವಿಶ್ವಾಸ ಇರುತ್ತದೆ. ಆರೋಗ್ಯದಲ್ಲಿ ಸ್ಥಿರತೆ ಇರುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಯಶಸ್ಸನ್ನು ಗಳಿಸುವಿರಿ. ಮನರಂಜನಾ ಕಾರ್ಯಕ್ರಮಗಳಿಗಾಗಿ ಹಣವನ್ನು ಖರ್ಚುಮಾಡುವಿರಿ. ಬಡವರ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವಿರಿ.

ಕನ್ಯಾ

ತಪ್ಪನ್ನು ಮನ್ನಿಸುವ ದೊಡ್ಡತನ ಇರುತ್ತದೆ. ಸ್ನೇಹಪ್ರಿಯರಾದ ಕಾರಣ ವಿವಾದಗಳಿಂದ ದೂರ ಉಳಿಯುವಿರಿ. ನಿಮ್ಮಲ್ಲಿನ ಹಾಸ್ಯದ ಮನೋಭಾವನೆ ಕುಟುಂಬದ ಸಂತಸಕ್ಕೆ ಕಾರಣವಾಗುತ್ತದೆ. ಸ್ಥಿರವಾದ ಮನಸ್ಸಿರುವುದಿಲ್ಲ. ಆತ್ಮವಿಶ್ವಾಸದ ಕೊರತೆ ಬಹುವಾಗಿ ಕಾಡುತ್ತದೆ. ಚಿಕ್ಕವರು ದೊಡ್ದವರು ಎನ್ನದೆ ಎಲ್ಲರನ್ನೂ ಟೀಕಿಸುವಿರಿ. ಉದ್ಯೋಗದಲ್ಲಿ ತೊಂದರೆ ಬಾರದು. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ದೀರ್ಘಪ್ರವಾಸದ ಯೋಚನೆ ಕೈಗೂಡುತ್ತದೆ. ಹೊಸವಾಹನವನ್ನು ಕೊಳ್ಳುವಿರಿ. ಇರುವ ಮನೆಯನ್ನು ಆಧುನೀಕರಿಸಲು ಮುಂದಾಗುವಿರಿ. ದಾಂಪತ್ಯಜೀವನ ಶಾಂತಿ ಸುಖದಿಂದ ಕೂಡಿರುತ್ತದೆ. ಸಾಲದ ವ್ಯವಹಾರ ಮಾಡದಿರಿ.

ತುಲಾ

ಆತುರದಿಂದ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಆತ್ಮವಿಶ್ವಾಸದ ಕಾರಣ ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣುವಿರಿ. ಪತಿಯ ಸಹಕಾರ ಜೀವನದ ಹಾದಿಯನ್ನು ಬದಲಾಯಿಸುತ್ತದೆ. ಕ್ಷಮಾಗುಣದಿಂದ ಎಲ್ಲರ ಮನಸ್ಸನ್ನು ಗೆಲ್ಲುವಿರಿ. ಮನ ಬಿಚ್ಚಿ ಮಾತನಾಡದ ಕಾರಣ ಸ್ನೇಹಿತರು ಕಡಿಮೆ. ಉದ್ಯೋಗ ಮಾಡಲಿಚ್ಚಿಸುವುದಿಲ್ಲ. ಸಣ್ಣ ಪುಟ್ಟ ವ್ಯಾಪಾರದಲ್ಲಿ ತೃಪ್ತಿ ಕಾಣುವಿರಿ. ದಾಂಪತ್ಯ ಜೀವನದಲ್ಲಿ ಯಾವುದೇ ತೊಂದರೆ ಕಾಣದು. ಮಕ್ಕಳ ಸುಂದರ ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡುವಿರಿ. ಪ್ರಸಾದನ ಸಾಮಗ್ರಿಗಳ ಮಾರಾಟದಲ್ಲಿ ಲಾಭವಿದೆ. ಯೋಗ ಪ್ರಾಣಾಯಾಮದಿಂದ ಉತ್ತಮ ಆರೋಗ್ಯ ಗಳಿಸುವಿರಿ.

ವೃಶ್ಚಿಕ

ಮುಂಗೋಪದಿಂದ ವಿವಾದಗಳನ್ನು ಎದುರಿಸುವಿರಿ. ಸಹಬಾಳ್ವೆಯಲ್ಲಿ ಪ್ರೀತಿ ನಂಬಿಕೆ ಇರುತ್ತದೆ. ಹಠದ ಗುಣವನ್ನು ಕಡಿಮೆ ಮಾಡಿ ಸಹನೆ ಬೆಳೆಸಿಕೊಳ್ಳಿರಿ. ಕುಟುಂಬದ ಆದಾಯ ಹೆಚ್ಚಲು ಕಾರಣರಾಗುವಿರಿ. ಮಾನಸಿಕ ಒತ್ತಡದ ಕಾರಣ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಉದ್ಯೋಗದಲ್ಲಿ ತೊಂದರೆ ಕಂಡುಬಾರದು. ಪಶುಸಂಗೋಪನೆಯಲ್ಲಿ ಆಸಕ್ತಿ ಇರುತ್ತದೆ. ಪತಿಯೊಂದಿಗೆ ತವರುಮನೆಗೆ ತೆರಳುವಿರಿ. ಮಕ್ಕಳಿಗೆ ಅನಾರೋಗ್ಯ ಇರುತ್ತದೆ. ಪತಿಯ ಜೊತೆ ಪಾಲುಗಾರಿಕೆಯ ವ್ಯಾಪಾರ ಆರಂಭಿಸುವಿರಿ. ತಂದೆಯಿಂದ ಹಣದ ಸಹಾಯ ದೊರೆಯುತ್ತದೆ. ರಕ್ತದ ಒತ್ತಡ ಇದ್ದಲ್ಲಿ ಎಚ್ಚರಿಕೆ ಇರಲಿ.

ಧನಸ್ಸು

ಸೋಲಿನ ವೇಳೆಯಲ್ಲಿಯೂ ಹೋರಾಟದ ಮನೋಭಾವನೆ ತೋರುವಿರಿ. ಬದಲಾಗದ ವ್ಯಕ್ತಿತ್ವ ಸಮಾಜದ ನಾಯಕರನ್ನಾಗಿ ಮಾಡುತ್ತದೆ. ಯಾವುದೇ ಕೆಲಸ ಕಾರ್ಯಾಗಳಲ್ಲಿ ನಿಶ್ಚಿತ ಜಯ ಗಳಿಸುವಿರಿ. ಕುಟುಂಬದ ಅಭಿವೃದ್ಧಿಯ ಗುರುತರ ಹೊಣೆ ದೊರೆಯುತ್ತದೆ. ಅವಿರತ ಪ್ರಯತ್ನದಿಂದ ಆದಾಯವು ಹೆಚ್ಚುತ್ತದೆ. ಸಂಗೀತ ನಾಟ್ಯದಲ್ಲಿ ಹೆಚ್ಚಿನ ಸಾಧನೆ ಮಾಡುವಿರಿ. ಕಲಾವಿದರಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ಸಂಘ ಸಂಸ್ಥೆಯ ಹೊಣೆ ದೊರೆಯುತ್ತದೆ. ಪತಿಯ ಜೊತೆ ಸಂತಸದಿಂದ ಬಾಳುವಿರಿ. ಸೋದರರಿಗೆ ಹಣದ ಸಹಾಯ ಮಾಡುವಿರಿ.

ಮಕರ

ಚುರುಕುತನದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಗೆಲ್ಲುವನ್ನೇ ಹವ್ಯಾಸ ಮಾಡಿಕೊಳ್ಳುವಿರಿ. ಸಂತಸದ ದಾಂಪತ್ಯ ಜೀವನವನ್ನು ನಡೆಸುವಿರಿ. ಕೊಂಚವೂ ಯೋಚಿಸದೆ ಮಾತನಾಡಿ ಎಲ್ಲರ ಬೇಸರಕ್ಕೆ ಕಾರಣರಾಗುವಿರಿ. ಕಷ್ಟ ನಷ್ಟಕ್ಕೆ ಹೆದರುವುದಿಲ್ಲ. ಸ್ನೇಹ ಜೀವಿಗಳು. ಪತಿಯ ಜೊತೆಯಲ್ಲಿ ವಿದೇಶಕ್ಕೆ ತೆರಳುವ ಅವಕಾಶ ಲಭಿಸುತ್ತದೆ. ಅನಾರೋಗ್ಯದಿಂದ ಬಳಲುವಿರಿ. ಸ್ಥಿರವಾದ ಮನಸ್ಸು ಇರುವುದಿಲ್ಲ. ಸ್ವಂತ ಪರಿಶ್ರಮದಿಂದ ವ್ಯಾಪಾರವೊಂದನ್ನು ಆರಂಭಿಸುವಿರಿ. ಮಾತು ಕಡಿಮೆ ಮಾಡಿದರೆ ವಿವಾದ ಉಂಟಾಗದು. ಸಂತಾನ ಲಾಭವಿದೆ. ಪತಿಯ ಜೊತೆಯಲ್ಲಿ ಉತ್ತಮ ಬಾಂಧವ್ಯ ಏರ್ಪಡುತ್ತದೆ.

ಕುಂಭ

ಪ್ರಯೋಜನವಿಲ್ಲದ ಮಾತುಕತೆ ಇಷ್ಟಪಡುವುದಿಲ್ಲ. ಬೇಡದ ಮಾತಿನಿಂದ ಕಾಲ ಕಳೆಯುವುದಿಲ್ಲ. ಸರಳ ಮಾರ್ಗದಲ್ಲಿ ಕೆಲಸ ಕಾರ್ಯಗಳನ್ನು ಸಂಪೂರ್ಣಗೊಳಿಸುವಿರಿ. ಕುಟುಂಬದ ಹಣದ ಗಳಿಕೆಯಲ್ಲಿ ಉನ್ನತ ಸ್ಥಾನ ಗಳಿಸುವಿರಿ. ಕಿರಿಯ ಸೋದರಿಯ ವಿವಾಹಕ್ಕೆ ನೆರವಾಗುವಿರಿ. ಹಣಕಾಸಿನ ಸಂಸ್ಥೆಯಲ್ಲಿಉದ್ಯೋಗ ದೊರೆಯುತ್ತದೆ. ನಿಮ್ಮ ಮನಸ್ಸನ್ನು ಅರ್ಥಮಾಡಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಅತಿ ಮುಖ್ಯವಾದ ವಿಚಾರವನ್ನು ರಹಸ್ಯವಾಗಿಡುವಿರಿ. ಹೊಸ ಮನೆಯನ್ನು ಕೊಳ್ಳುವ ಸಾಧ್ಯತೆಗಳಿವೆ. ಹಣದ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಅವಿವಾಹಿತರಿಗೆ ವಿವಾಹಯೋಗವಿದೆ.

ಮೀನ

ನಿರ್ದಿಷ್ಟವಾದ ಮಾತುಕತೆ ಇರುವುದಿಲ್ಲ. ಆಡಿದ ಮಾತನ್ನು ಬದಲಾಯಿಸುವಿರಿ. ಸೌಂದರ್ಯದ ಪಾಲನೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವಿರಿ. ಮನ ಮೆಚ್ಚಿದ ಆಭರಣವನ್ನು ಕೊಳ್ಳುವಿರಿ. ಹಣದ ತೊಂದರೆ ಕಂಡುಬಾರದು. ನೀವು ಆಡುವ ಬುದ್ಧಿವಂತಿಕೆಯ ಮಾತಿಗೆ ಎಲ್ಲರೂ ತಲೆದೂಗುತ್ತಾರೆ. ಶುಚಿ ರುಚಿಯಾದ ಆಹಾರವನ್ನು ಇಷ್ಟಪಡುವಿರಿ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೋರುವಿರಿ. ಅನಾವಶ್ಯಕ ವಿಚಾರಗಳಿಗೆ ಯೋಚನೆ ಮಾಡುವಿರಿ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಕುಟುಂಬಕ್ಕೆ ಸೇರಿದ ವ್ಯಾಪಾರ ವ್ಯವಹಾರದ ಪೂರ್ಣ ಜವಾಬ್ದಾರಿ ಹೊರುವಿರಿ. ಪತಿಯ ಜೊತೆಯಲ್ಲಿ ದೀರ್ಘಕಾಲದ ಪ್ರವಾಸ ಮಾಡುವಿರಿ.

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).