ಕನ್ನಡ ಸುದ್ದಿ  /  Astrology  /  Women Horoscope Of 23 February 2024 To 29 February 2024 Zodiac Signs Women Weekly Astrology Sts

Women Horoscope: ಕಷ್ಟಪಟ್ಟು ಕೂಡಿಟ್ಟ ಹಣ ಖರ್ಚು, ಉದ್ಯೋಗ ಬದಲಾವಣೆ, ಒಡವೆ ಖರೀದಿ; ಸ್ತ್ರೀ ವಾರ ಭವಿಷ್ಯ

Women Horoscope: ಸ್ತ್ರೀ ವಾರ ಭವಿಷ್ಯ (ಫೆಬ್ರವರಿ 23 ರಿಂದ 29ರವರೆಗೆ): ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಈ ವಾರದ ಸ್ತ್ರೀ ಭವಿಷ್ಯ ಇಲ್ಲಿದೆ.

ಸ್ತ್ರೀ ರಾಶಿ ಭವಿಷ್ಯ
ಸ್ತ್ರೀ ರಾಶಿ ಭವಿಷ್ಯ

ಸ್ತ್ರೀ ರಾಶಿ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. ( 23 February 2024 to 29 February 2024 Women Horoscope).

ಮೇಷ

ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಲು ಪ್ರಯತ್ನಿಸುವಿರಿ. ರುಚಿಕರವಾದ ಆಹಾರ ತಯಾರಿಕೆ ಹವ್ಯಾಸವಾಗುತ್ತದೆ. ಸಹಜೀವನವನ್ನು ಇಷ್ಟಪಡುವಿರಿ. ಮನದಲ್ಲಿ ಧನಾತ್ಮಕ ಚಿಂತನೆಗಳು ಇರುತ್ತವೆ. ಮಾಡುವ ಪ್ರತಿ ಕಾರ್ಯದಲ್ಲಿಯೂ ಜಯಗಳಿಸುವಿರಿ. ಆಡುವ ಮಾತಿಗೆ ಸಮಾಜದಲ್ಲಿ ಗೌರವ ದೊರೆಯುತ್ತದೆ. ಅಜೀರ್ಣತೆಯಿಂದ ಬಳಲುವಿರಿ. ವಾದ ವಿವಾದಗಳಿಗೆ ಆಸ್ಪದ ನೀಡದೆ ವಿವೇಚನೆಯಿಂದ ಕೆಲಸ ಸಾಧಿಸುವಿರಿ. ತಪ್ಪನ್ನು ಒಪ್ಪುವುದಿಲ್ಲ. ಬೇಗನೆ ಕೋಪ ಬರುತ್ತದೆ. ಕುಟುಂಬದ ಉನ್ನತಿಗಾಗಿ ಶ್ರಮಿಸುವಿರಿ. ಪತಿಯ ಜೊತೆಯಲ್ಲಿ ಉತ್ತಮ ಅನುಬಂಧ ಇರುತ್ತದೆ. ಉದ್ಯೋಗ ಬದಲಾಯಿಸುವಿರಿ. ಆರೋಗ್ಯದ ಬಗ್ಗೆ ಗಮನ ಇರಲಿ.

ವೃಷಭ

ಸೋದರರ ಸಾಂಸಾರಿಕ ಜೀವನದಲ್ಲಿನ ವಿವಾದ ಕೊನೆಯಾಗಲು ಕಾರಣರಾಗುವಿರಿ. ಕುಟುಂಬದ ಸೌಖ್ಯವೇ ನಿಮಗೆ ಮುಖ್ಯವಾಗುತ್ತವೆ. ಸ್ಥಿರವಾದ ಮನಸ್ಸಿನ ಸಹಾಯದಿಂದ ಯಾವುದೇ ಕೆಲಸ ಸಾಧಿಸಬಲ್ಲಿರಿ. ಉದ್ಯೋಗದಲ್ಲಿ ಯಾವುದೇ ಬದಲಾವಣೆ ಕಾಣದು. ಮಹಿಳೆಯರಿಗೆ ಸಂಬಂಧಿಸಿದ ಬಟ್ಟೆ ಅಥವಾ ಇನ್ನಿತರ ವಸ್ತುಗಳ ವ್ಯಾಪಾರದಲ್ಲಿ ಆದಾಯ ಇರುತ್ತದೆ. ಅನಾವಶ್ಯಕ ಖರ್ಚು ವೆಚ್ಚಗಳನ್ನು ಕಡಿತಗೊಳಿಸುವಿರಿ. ಪತಿಯ ಆತುರದ ನಿರ್ಧಾರಗಳು ನೆಮ್ಮದಿ ಕೆಡಿಸುತ್ತವೆ. ಅನಿರೀಕ್ಷಿತ ಧನಲಾಭವಿದೆ. ತವರಿನಿಂದ ಹಣದ ಸಹಾಯ ದೊರೆಯುತ್ತದೆ. ಹೆತ್ತವರ ಅನಿರೀಕ್ಷಿತ ಆಗಮನ ಸಂತಸವನ್ನು ಉಂಟುಮಾಡುತ್ತದೆ. ಅವಿವಾಹಿತರಿಗೆ ವಿವಾಹವಾಗುವ ಸಾಧ್ಯತೆಗಳಿವೆ. ಪುಟ್ಟ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಮಿಥುನ

ಕುಟುಂಬದ ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುವಿರಿ. ಬದಲಾಗುವ ನಡೆ ನುಡಿಗಳು ಜೀವನಕ್ಕೆ ತೊಂದರೆ ನೀಡಬಹುದು. ಕೆಲಸದಲ್ಲಿನ ಆಸಕ್ತಿ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತವೆ. ಅನಿರೀಕ್ಷಿತ ಧನ ಲಾಭವಿರುತ್ತದೆ. ಉದ್ಯೋಗ ಬದಲಿಸುವ ಸಾಧ್ಯತೆ ಇದೆ. ಪತಿಯ ಜೊತೆಯಲ್ಲಿ ಪ್ರವಾಸ ಮಾಡಲು ಒಳ್ಳೆಯ ಅವಕಾಶ ದೊರೆಯುತ್ತದೆ. ಹಣಕಾಸಿನ ವಿಚಾರದಲ್ಲಿ ಅಪೂರ್ವವಾದ ನಿಲುವನ್ನು ತೆಗೆದುಕೊಳ್ಳುವಿರಿ. ಅನಗತ್ಯ ವಾದ ವಿವಾದಗಳನ್ನು ಮಾಡದಿರಿ. ಮಕ್ಕಳ ಸಂಪೂರ್ಣವಾದ ಜವಾಬ್ದಾರಿ ನಿಮ್ಮ್ಮದಾಗುತ್ತದೆ. ಪತಿಯ ಆರೋಗ್ಯದಲ್ಲಿ ಏಳು ಬೀಳುಗಳು ತಲೆದೋರಲಿವೆ. ಕಷ್ಟಪಟ್ಟು ಕೂಡಿಟ್ಟ ಹಣ ಖರ್ಚಾಗುವ ಸಂಭವವಿದೆ.

ಕಟಕ

ಸೋಲು ಗೆಲುವನ್ನು ಒಂದೇ ಭಾವನೆಯಿಂದ ನೋಡುವಿರಿ. ಕ್ರೀಡಾಮನೋಭಾವನೆಯು ಮಾನಸಿಕ ಒತ್ತಡದಿಂದ ದೂರ ಮಾಡುತ್ತದೆ. ತಂದೆಗೆ ಸಂಬಂಧಿಸಿದ ಆಸ್ತಿಯಲ್ಲಿ ಪಾಲು ದೊರೆಯುತ್ತದೆ. ಕುಟುಂಬದ ಒಳಗೂ ಹೊರಗೂ ಉನ್ನತ ಸ್ಥಾನ ದೊರೆಯುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಲಾಭ ಇರುತ್ತದೆ. ಸ್ವಂತ ಉದ್ಯಮ ಇದ್ದಲ್ಲಿ ಆದಾಯದ ಕೊರತೆ ಬಾರದು. ದಾಂಪತ್ಯ ಜೀವನದಲ್ಲಿ ಉತ್ತಮ ಸಾಮರಸ್ಯ ಇರುತ್ತದೆ. ಮಕ್ಕಳ ಭವಿಷ್ಯಕ್ಕಾಗಿ ಗುಟ್ಟಾಗಿ ಹಣ ಉಳಿತಾಯ ಮಾಡುವಿರಿ. ಪತಿಯ ಜೊತೆಯಲ್ಲಿ ತವರಿಗೆ ತೆರಳುವಿರಿ. ಸ್ವಂತ ಬಳಕೆಗಾಗಿ ಹೊಸ ವಾಹನ ಕೊಳ್ಳುವಿರಿ. ಅತಿಯಾದ ಆತುರದ ಗುಣದಿಂದಾಗಿ ಸಂಧಿಗ್ದತೆಗೆ ಸಿಲುಕುವಿರಿ. ವಿಶ್ರಾಂತಿಯಿಂದ ಆತ್ಮವಿಶ್ವಾಸ ಹೆಚ್ಚುತ್ತದೆ.

ಸಿಂಹ

ಕುಟುಂಬದ ಆಧಾರಸ್ತಂಭವಾಗಿ ಬಾಳುವಿರಿ. ಮಕ್ಕಳ ಜೀವನದಲ್ಲಿ ಪ್ರಮುಖವಾದ ಘಟನೆಯೊಂದು ನಡೆಯಲಿದೆ. ಪತಿಯ ವ್ಯಾಪಾರದ ಬಂಡವಾಳಕ್ಕಾಗಿ ಕೂಡಿಟ್ಟ ಹಣವನ್ನು ನೀಡುವಿರಿ. ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳುವ ಸಾಧ್ಯತೆಗಳಿವೆ. ಸಮಾಜದ ಗಣ್ಯವ್ಯಕ್ತಿಗಳ ಸಹಕಾರ ದೊರೆಯುತ್ತದೆ. ಹಣಕಾಸಿನ ವಿಚಾರದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳುವಿರಿ. ಕುಟುಂಬದಲ್ಲಿ ಹಣಕಾಸಿನ ಕೊರತೆ ಉಂಟಾಗಲಿದೆ. ಆದಾಯ ಹೆಚ್ಚಿಸಿಕೊಳ್ಳಲು ಗುಡಿಕೈಗಾರಿಕೆಯನ್ನು ಆರಂಭಿಸುವಿರಿ. ಕುಟುಂಬದಲ್ಲಿ ಮಂಗಳ ಕಾರ್ಯದ ಜವಾಬ್ದಾರಿ ನಿಮ್ಮದಾಗುತ್ತದೆ. ಮನಸ್ಸಿದ್ದಲ್ಲಿ ರಾಜಕೀಯ ಸೇರಲು ಅವಕಾಶವೊಂದು ಲಭಿಸಲಿದೆ. ತಂದೆಯ ಸಹಾಯ ಸಹಕಾರ ದೊರೆಯುತ್ತದೆ.

ಕನ್ಯಾ

ತಪ್ಪು ಒಪ್ಪನ್ನು ಸರಿಯಾಗಿ ಗ್ರಹಿಸದೆ ಪ್ರತಿ ವಿಚಾರವನ್ನು ಟೀಕಿಸುವುದರಲ್ಲಿ ನಿರತರಾಗುವಿರಿ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಅನಾವಶ್ಯಕವಾಗಿ ತೆಗೆದುಕೊಂಡ ನಿರ್ಧಾರಗಳನ್ನು ಬದಲಿಸುವ ಕಾರಣ ವಿವಾದವನ್ನು ಎದುರಿಸುವಿರಿ. ಕಡಿಮೆ ಬಂಡವಾಳದಿಂದ ಆರಂಭಿಸುವ ವ್ಯಾಪಾರದಲ್ಲಿ ಉತ್ತಮ ಆದಾಯ ಗಳಿಸುವಿರಿ. ವಿದ್ಯಾರ್ಥಿಗಳಿಗೆ ಶುಭವಿದೆ. ಉದ್ಯೋಗದಲ್ಲಿ ಬದಲಾವಣೆ ಕಾಣದು. ಬೇಸರಗೊಂಡು ಉದ್ಯೋಗ ಬದಲಾಯಿಸುವ ನಿರ್ಧಾರ ಮಾಡುವಿರಿ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಲು ಕಾರಣರಾಗುವಿರಿ. ಪತಿಯ ಉದ್ಯೋಗದಲ್ಲಿ ಆತಂಕದ ಕ್ಷಣಗಳು ಎದುರಾಗಲಿವೆ. ಓಡಾಟಕ್ಕಾಗಿ ಹೊಸ ವಾಹನ ಕೊಳ್ಳುವಿರಿ. ಆತ್ಮೀಯರಿಗೆ ಅನಿವಾರ್ಯವಾಗಿ ಹಣವನ್ನು ನೀಡಬೇಕಾಗುತ್ತದೆ.

ತುಲಾ

ಸದಾ ಕಾಲ ಚುರುಕುತನದಿಂದ ಜೀವನದಲ್ಲಿ ಮುಂದುವರಿಯುವಿರಿ. ಕುಟುಂಬದ ಜವಾಬ್ದಾರಿ ಇರದು. ಹಣದ ತೊಂದರೆ ಕಾಣದು. ಆತ್ಮೀಯ ಸ್ನೇಹಿತರೊಬ್ಬರ ಜೊತೆಗೂಡಿ ಪಾಲುಗಾರಿಕೆಯಲ್ಲಿ ವ್ಯಾಪಾರವನ್ನು ಆರಂಭಿಸುವಿರಿ. ಜನಸೇವೆಯಲ್ಲಿ ನಿರತರಾಗುವಿರಿ. ಸಮಾಜದಲ್ಲಿ ಗೌರವಯುತ ಸ್ಥಾನಮಾನ ಲಭಿಸುತ್ತದೆ. ಮನೆಯನ್ನು ಕೊಳ್ಳುವ ಆಸೆ ಈಡೇರಲಿದೆ. ಮಕ್ಕಳೊಂದಿಗೆ ದೂರದ ಊರಿಗೆ ಪ್ರವಾಸ ಮಾಡುವಿರಿ. ಹಣಕಾಸಿನ ವ್ಯವಹಾರದಲ್ಲಿ ಲಾಭವಿರುತ್ತದೆ. ಮೌನದಿಂದ ಎಲ್ಲವನ್ನೂ ಗೆಲ್ಲುವಿರಿ. ಪತಿಯ ಜೊತೆಯಲ್ಲಿ ಉತ್ತಮ ಒಡನಾಟ ಇರುತ್ತದೆ. ಅವಿವಾಹಿತರಿಗೆ ವಿವಾಹಯೋಗವಿದೆ. ಆರೋಗ್ಯದಲ್ಲಿ ಸ್ಥಿರತೆ ಕಾಯ್ದುಕೊಳ್ಳಿರಿ.

ವೃಶ್ಚಿಕ

ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಯೋಗಾಭ್ಯಾಸದಲ್ಲಿ ತೊಡಗುವಿರಿ. ಆತಿಯಾದ ಕೋಪ ಕುಟುಂಬದ ನೆಮ್ಮದಿಯನ್ನು ಹಾಳುಮಾಡುತ್ತದೆ. ವಿದೇಶದಲ್ಲಿ ಉದ್ಯೋಗ ದೊರೆವ ಸಾಧ್ಯತೆ ಇದೆ. ನಿಮ್ಮಲ್ಲಿನ ಆತ್ಮವಿಶ್ವಾಸ ನೆಮ್ಮದಿಯನ್ನು ನೀಡುತ್ತದೆ. ಕುಟುಂಬದ ಸಂಪೂರ್ಣ ಜವಾಬ್ದಾರಿ ನಿಮ್ಮದಾಗುತ್ತದೆ. ವಿಶ್ರಾಂತಿ ಇಲ್ಲದ ದುಡಿಮೆಯಿಂದ ಬೇಸರಿಸುವಿರಿ. ತಂದೆಗೆ ಸೇರಿದ ಮನೆ ಅಥವಾ ಜಮೀನು ನಿಮ್ಮದಾಗುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಸಾಲದ ವ್ಯವಹಾರ ಪತಿಗೆ ಬೇಸರ ಮೂಡಿಸಬಹುದು. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ.

ಧನಸ್ಸು

ನಿಮಗೆ ಸೇರಿದಂತೆ ಭೂವಿವಾದವೊಂದು ಎದುರಾಗಲಿದೆ. ಕೌಟುಂಬಿಕ ಕಲಹವೊಂದನ್ನು ಸುಲಭವಾಗಿ ಬಗ ಹರಿಸುವಿರಿ. ಉತ್ತಮ ಆದಾಯವಿರುವ ಕೆಲಸಗಳನ್ನು ಮಾತ್ರ ಮಾಡುವಿರಿ. ದಿಢೀರನೆ ಕೋಪ ಬಂದರೂ ಬಹುಕಾಲ ನಿಲುವುದಿಲ್ಲ. ವಾದ ವಿವಾದ ಬದಿಗಿಟ್ಟು ಕೆಲಸ ಸಾಧಿಸುವಿರಿ. ಬೇರೆಯವರಿಗೆ ಅಸಾಧ್ಯವಾದ ವಿಚಾರವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಲ್ಲಿರಿ. ತಂದೆಯವರಿಂದ ಹಣದ ಸಹಾಯ ದೊರೆಯುತ್ತದೆ. ಇಷ್ಟವೆನಿಸುವ ಒಡವೆ ವಸ್ತ್ರಗಳನ್ನು ಕೊಳ್ಳುವಿರಿ. ಪತಿಯ ಜೊತೆಯಲ್ಲಿ ವಿದೇಶಕ್ಕೆ ತೆರಳುವಿರಿ. ಅಜೀರ್ಣದ ದೋಷ ದೀರ್ಘಕಾಲ ಭಾದಿಸಬಹುದು. ಸಾಲವಾಗಿ ಹಣವನ್ನು ಯಾರಿಗೂ ನೀಡದಿರಿ.

ಮಕರ

ಕುಟುಂಬದ ಒಳಿತಿಗಾಗಿ ಕಷ್ಟಪಟ್ಟು ಕೆಲಸ ಮಾಡುವಿರಿ. ಮನಸ್ಸು ಒಳ್ಳೆಯದಾದರೂ ಮಾತಿನಿಂದ ವಿವಾದಕ್ಕೆ ಒಳಗಾಗುವಿರಿ. ಆತ್ಮೀಯರಿಗೆ ಹಣದ ಸಹಾಯ ಮಾಡುವಿರಿ. ಉದ್ಯೋಗವನ್ನು ಬದಲಾಯಿಸುವಿರಿ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲಸಲು ಕಾರಣರಾಗುವಿರಿ. ಪತಿಯ ಬಗ್ಗೆ ಮನದಲ್ಲಿ ಬೇಸರವಿರುತ್ತದೆ. ಹೆಚ್ಚಿನ ಜವಾಬ್ದಾರಿಯಿಂದ ಆರೋಗ್ಯದಲ್ಲಿ ತೊಂದರೆ ಉಂಟಾಗಬಹುದು. ಉದ್ಯೋಗವನ್ನರಸಿ ವಿದೇಶಕ್ಕೆ ತೆರಳುವಿರಿ. ಸ್ವಂತ ವ್ಯಾಪಾರ ಆರಂಭಿಸಿ ಯಶಸ್ಸನ್ನು ಗಳಿಸುವಿರಿ. ಎಲ್ಲರೂ ನಿಮ್ಮ ಹಿತೈಷಿಗಳಲ್ಲ ಎಂಬದು ನೆನಪಿರಲಿ. ನಿಮ್ಮಿಂದ ಸಹಾಯ ಪಡೆದವರೇ ನಿಮ್ಮ ವಿರೋಧಿಗಳಾಗಬಹುದು. ಮೌನದಿಂದ ಎಲ್ಲವನ್ನೂ ಸಾಧಿಸುವಿರಿ.

ಕುಂಭ

ಮನದಲ್ಲಿ ಅನಾವಶ್ಯಕ ವಿಚಾರಗಳ ಬಗ್ಗೆ ಯೋಚನೆ ಇರುತ್ತದೆ. ಕೆಲಸ ಕಾರ್ಯಗಳಲ್ಲಿ ಸುಲಭವಾಗಿ ಜಯ ಗಳಿಸುವಿರಿ. ನಿಮ್ಮ ಜಯವನ್ನು ನೋಡಿ ಹೊಟ್ಟಿಕಿಚ್ಚುಪಡುವ ಜನರಿರುತ್ತಾರೆ. ಕುಟುಂಬದ ಮುಖ್ಯ ವಿಚಾರಗಳನ್ನು ರಹಸ್ಯವಾಗಿಡುವಿರಿ. ಆತ್ಮವಿಶ್ವಾಸದ ಕೊರತೆ ಕೆಲಸ ಕಾರ್ಯಗಳಲ್ಲಿ ಹಿನ್ನೆಡೆ ಉಂಟುಮಾಡುತ್ತದೆ. ಎಲ್ಲರನ್ನೂ ಅನುಮಾನ ದೃಷ್ಠಿಯಿಂದ ನೋಡುವಿರಿ. ಹಣವನ್ನು ಉಳಿಸುವ ಯೋಚನೆ ಮಾಡಿರಿ. ಅನಾವಶ್ಯಕ ಖರ್ಚು ವೆಚ್ಚಗಳನ್ನು ನಿಯಂತ್ರಿಸಿ. ತಂದೆಯ ಜೊತೆಯಲ್ಲಿ ಹಣದ ವಿಚಾರದಲ್ಲಿ ವಾದ ವಿವಾದಗಳು ಇರಲಿವೆ. ಮನದಲ್ಲಿರುವ ನೋವನ್ನು ಯಾರಲ್ಲಿಯೂ ಹೇಳಿಕೊಳ್ಳುವುದಿಲ್ಲ. ಸೋದರಿಯ ಜೊತೆಯಲ್ಲಿ ಉತ್ತಮ ಒಡನಾಟವಿರುತ್ತದೆ.

ಮೀನ

ಆದಾಯದಲ್ಲಿ ತೊಂದರೆ ಬಾರದು. ಆಡುವ ಮಾತಿನ ಮೇಲೆ ನಂಬಿಕೆ ಇರುತ್ತದೆ. ಅನಿರೀಕ್ಷಿತ ಧನಲಾಭವಿರುತ್ತದೆ. ನಿಮ್ಮಿಂದ ಕುಟುಂಬದಲ್ಲಿ ಶಾಂತಿ ನೆಮ್ಮದಿ ಉಂಟಾಗುತ್ತದೆ. ಉದ್ಯೋಗದಲ್ಲಿ ನಿರೀಕ್ಷಿತ ಮಟ್ಟ ತಲುಪುವಿರಿ. ಕುಟುಂಬದ ಸೌಖ್ಯಕ್ಕಾಗಿ ಪುಟ್ಟ ವ್ಯಾಪಾರವನ್ನು ಆರಂಭಿಸುವಿರಿ. ಮಹಿಳೆಯರ ಸ್ವಾಸ್ಥ್ಯ ಕಾಪಾಡಲು ಅಗತ್ಯವಾದ ಸಲಹಾ ಕೇಂದ್ರವನ್ನು ಆರಂಭಿಸುವಿರಿ. ತೆಗೆದುಕೊಂಡ ತೀರ್ಮಾನವನ್ನು ಪದೇ ಪದೇ ಬದಲಿಸದಿರಿ. ಕುಟುಂಬದ ಎಲ್ಲರೊಡನೆ ದೂರದ ಊರಿಗೆ ಪ್ರಯಾಣ ಬೆಳೆಸುವಿರಿ. ಮಕ್ಕಳ ಬಗ್ಗೆ ವಿಶೇಷವಾದ ಅಕ್ಕರೆ ಇರುತ್ತದೆ. ನೀರಿನ ಜೊತೆಯಲ್ಲಿ ಹುಡುಗಾಟವಾಡದಿರಿ. ನಿಮ್ಮ ಮನಸ್ಸಿಗೆ ಒಪ್ಪುವ ಒಡವೆ ವಸ್ತ್ರಗಳನ್ನು ಕೊಳ್ಳುವಿರಿ.

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).