Women Horoscope: ಚಿನ್ನ ಖರೀದಿಸುವ ಯೋಗವಿದೆ, ಬರವಣಿಗೆಯ ಹವ್ಯಾಸ ಬದುಕು ನೀಡಲಿದೆ; ಈ ವಾರದ ಸ್ತ್ರೀ ಜಾತಕ-women horoscope of 8 march 2024 to 14 march 2024 zodiac signs women weekly astrology prediction sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Women Horoscope: ಚಿನ್ನ ಖರೀದಿಸುವ ಯೋಗವಿದೆ, ಬರವಣಿಗೆಯ ಹವ್ಯಾಸ ಬದುಕು ನೀಡಲಿದೆ; ಈ ವಾರದ ಸ್ತ್ರೀ ಜಾತಕ

Women Horoscope: ಚಿನ್ನ ಖರೀದಿಸುವ ಯೋಗವಿದೆ, ಬರವಣಿಗೆಯ ಹವ್ಯಾಸ ಬದುಕು ನೀಡಲಿದೆ; ಈ ವಾರದ ಸ್ತ್ರೀ ಜಾತಕ

Women Horoscope: ಸ್ತ್ರೀ ವಾರ ಭವಿಷ್ಯ (ಮಾರ್ಚ್​ 8 ರಿಂದ 14ರವರೆಗೆ): ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಈ ವಾರದ ಸ್ತ್ರೀ ಭವಿಷ್ಯ ಇಲ್ಲಿದೆ.

 ಸ್ತ್ರೀ ಜಾತಕ
ಸ್ತ್ರೀ ಜಾತಕ

ಸ್ತ್ರೀ ರಾಶಿ ಭವಿಷ್ಯ: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. ( 8 March 2024 to 14 March 2024 Women Horoscope).

ಮೇಷ

ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ಇರುತ್ತದೆ. ಬಿಡುವಿಲ್ಲದ ಕೆಲಸದ ಕಾರಣ ದೇಹಾಲಸ್ಯ ಉಂಟಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಸ್ವಾರ್ಥವಿಲ್ಲದೆ ಕುಟುಂಬದ ಜವಾಬ್ದಾರಿ ನಿರ್ವಹಿಸುವಿರಿ. ಪ್ರೀತಿ ವಿಶ್ವಾಸದ ಮಾತು ಎಲ್ಲರ ಮನಸ್ಸನ್ನೂ ಗೆಲ್ಲುತ್ತದೆ. ಬುದ್ಧಿವಂತಿಯಿಂದ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವಿರಿ. ಕುಟುಂಬದ ಕ್ಷೇಮಕ್ಕಾಗಿ ಹಣ ಉಳಿಸುವಿರಿ. ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ಸದಾ ಕಾಲ ಯಾವುದಾದರೊಂದು ಕೆಲಸದಲ್ಲಿ ಮಗ್ನರಾಗುವಿರಿ. ಕುಟುಂಬದ ಸಂತೋಷ ನೆಮ್ಮದಿಗೆ ಕಾರಣರಾಗುವಿರಿ. ಪತಿಯ ಜೊತೆಯಲ್ಲಿ ಹೊಂದಾಣಿಕೆಯಿಂದ ಬಾಳುವಿರಿ. ತಪ್ಪು ಮಾಡಿದಲ್ಲಿ ಪಶ್ಚಾತಾಪ ಪಡುವಿರಿ.

ವೃಷಭ

ಅತಿಯಾದ ಶಿಸ್ತಿನ ಕಾರಣ ಕುಟುಂಬದಲ್ಲಿ ಬೇಸರವಿರುತ್ತದೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಅನಾವಶ್ಯಕ ಭಯವಿರುತ್ತದೆ. ಸುಲಭವಾಗಿ ಯಾರ ಸಲಹೆಯನ್ನೂ ಒಪ್ಪುವುದಿಲ್ಲ. ಸ್ವಂತ ನಿರ್ಧಾರದಿಂದ ಕುಟುಂಬದ ವಿವಾದವನ್ನು ಕೊನೆಗೊಳಿಸುವಿರಿ. ಕ್ರಮೇಣ ಎಲ್ಲರ ಮನಸ್ಸನ್ನು ಗೆಲ್ಲಲು ಯಶಸ್ವಿಯಾಗುವಿರಿ. ಯಾರ ಮನಸ್ಸಿಗೂ ಬೇಸರ ಆಗದಂತೆ ಮಾತನಾಡುವಿರಿ. ಸ್ವಂತ ಕೆಲಸವನ್ನು ಮೊದಲು ಪೂರ್ಣಗೊಳಿಸುವಿರಿ. ಹಣದ ಕೊರತೆ ಇರದು. ಒಡವೆ ವಸ್ತ್ರಕ್ಕಾಗಿ ಹಣವನ್ನು ಖರ್ಚು ಮಾಡುವಿರಿ. ಉದ್ಯೋಗ ದೊರೆಯುತ್ತದೆ. ಪತಿಯ ಜೊತೆಯಲ್ಲಿ ಉತ್ತಮ ಹೊಂದಾಣಿಕೆ ಇರುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಮಿಥುನ

ಎಲ್ಲರನ್ನೂ ಅನುಮಾನದಿಂದ ನೋಡುವಿರಿ. ತಪ್ಪಾದ ನಿರ್ಧಾರವನ್ನು ಬದಲಾಯಿಸಿ ಸರಿದಾರಿಯಲ್ಲಿ ನಡೆಯುವಿರಿ. ಪತಿಯು ನೆಚ್ಚಿನ ಉಡುಗೊರೆಯೊಂದನ್ನು ನೀಡಲಿದ್ದಾರೆ. ಕುಟುಂಬದ ಹಣಕಾಸಿನ ವ್ಯವಹಾರದಲ್ಲಿ ಸೂಕ್ತ ಸಲಹೆ ನೀಡುವಿರಿ. ತವರಿನಿಂದ ಶುಭ ವರ್ತಮಾನವೊಂದು ಬರಲಿದೆ. ಆತ್ಮವಿಶ್ವಾಸದ ಕೊರತೆ ಇರುತ್ತದೆ. ಪತಿಯ ಜೊತೆಯಲ್ಲಿ ಧಾರ್ಮಿಕ ಸ್ಥಳಕ್ಕೆ ಬೇಟಿ ನೀಡುವಿರಿ. ದುಡುಕದೆ ಸಹನೆಯಿಂದ ಎಲ್ಲವನ್ನೂ ಎಲ್ಲರನ್ನೂ ಗೆಲ್ಲುವಿರಿ. ಸುಲಭದ ಕೆಲಸವನ್ನೂ ಕಷ್ಟದಿಂದಲೇ ಪೂರ್ಣಗೊಳಿಸುವಿರಿ. ಅನಾವಶ್ಯಕ ವಾದ ವಿವಾದಗಳು ಎದುರಾಗಲಿವೆ. ಹಣದ ವ್ಯವಹಾರದಲ್ಲಿ ಮಧ್ಯಸ್ಥಿಕೆ ವಹಿಸದಿರಿ.

ಕಟಕ

ಪ್ರೀತಿ ವಿಶ್ವಾಸದ ಮಾತುಕತೆ ಕುಟುಂಬದ ಒಗ್ಗಟ್ಟನ್ನು ಉಳಿಸುತ್ತದೆ. ಹಾಸ್ಯದ ಮನೋಭಾವದಿಂದ ಬೇಸರ ದೂರ ಮಾಡುವಿರಿ. ಪತಿಯ ಜೊತೆಯಲ್ಲಿ ಉತ್ತಮ ಬಾಂಧವ್ಯವಿರುತ್ತದೆ. ಸೋದರಿಯಿಂದ ಹಣದ ಉಡುಗೊರೆ ಬರಲಿದೆ. ಹಣಕಾಸಿನ ವ್ಯವಹಾರದಲ್ಲಿ ಜಾಣ್ಮೆ ತೋರುವಿರಿ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ. ಸಂತಾನ ಲಾಭವಿದೆ. ವಿದ್ಯಾರ್ಥಿನಿಯರಿಗೆ ವಿದೇಶದಲ್ಲಿ ಅಧ್ಯಯನಕ್ಕೆ ಅವಕಾಶ ದೊರೆಯಲಿದೆ. ಚಾಡಿ ಮಾತನ್ನು ನಂಬದಿರಿ. ಪತಿಯ ಕೆಲಸ ಕಾರ್ಯಗಳಲ್ಲಿ ನಿಮ್ಮ ಪಾತ್ರ ಅತಿ ಮುಖ್ಯವಾಗುತ್ತದೆ. ಸಣ್ಣ ಪುಟ್ಟ ವ್ಯಾಪಾರದಿಂದ ಹಣವನ್ನು ಸಂಪಾದಿಸುವಿರಿ. ಪ್ರೀತಿ ಮತ್ತು ಸಂತಸದ ಬಾಳುವಿರಿ.

ಸಿಂಹ

ಸ್ವಂತ ತೀರ್ಮಾನಗಳಿಗೆ ಬದ್ದರಾಗುವಿರಿ. ಸ್ವಾಭಿಮಾನದ ಕಾರಣ ಬೇರೆಯವರ ಸಲಹೆಯನ್ನು ಒಪ್ಪುವುದಿಲ್ಲ. ಕುಟುಂಬದಲ್ಲಿ ನಿಮ್ಮ ತೀರ್ಮಾನವೇ ಅಂತಿಮವಾಗುತ್ತದೆ. ಮಹಿಳಾ ಸಂಘ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುವಿರಿ. ಮಕ್ಕಳ ತಪ್ಪಿನ ಪರ ವಕಾಲತ್ತನ್ನು ವಹಿಸುವಿರಿ. ರಾಜಕೀಯ ಉತ್ತಮ ಅವಕಾಶ ದೊರೆಯುತ್ತದೆ. ಹಠದ ಗುಣದಿಂದಾಗಿ ಆತ್ಮೀಯರ ವಿಶ್ವಾಸ ಕಳೆದುಕೊಳ್ಳುವಿರಿ. ಉತ್ತಮ ಆರೋಗ್ಯಕ್ಕಾಗಿ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಿ. ಗಣ್ಯ ವ್ಯಕ್ತಿಯೊಬ್ಬರ ಪರಿಚಯ ಹೊಸ ಅಭಿಲಾಷೆಗೆ ಕಾರಣವಾಗುತ್ತದೆ. ಪತಿಯ ಜೊತೆಯಲ್ಲಿ ಹಣದ ಬಗ್ಗೆ ಮನಸ್ತಾಪ ಉಂಟಾಗುತ್ತದೆ. ಅವಿವಾಹಿತರಿಗೆ ವಿವಾಹ ಯೋಗವಿದೆ.

ಕನ್ಯಾ

ಯಾವುದೇ ವಿಚಾರದಲ್ಲಿಯೂ ದೃಢವಾದ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ನಿಮ್ಮ ತಪ್ಪಿಗೆ ಬೇರೆಯವರನ್ನು ದೂರುವಿರಿ. ಅಸ್ಥಿರವಾದ ಮನಸ್ಸು ಅವಕಾಶ ವಂಚಿತರನ್ನಾಗಿ ಮಾಡುತ್ತದೆ. ಸರಳವಾದ ವ್ಯಾಪಾರದಿಂದ ಹಣದ ಕೊರತೆ ನೀಗಿಸುವಿರಿ. ಸೋದರನ ವಿವಾಹಕ್ಕೆ ಸಹಾಯ ಮಾಡುವಿರಿ. ಅನಿರೀಕ್ಷಿತ ಧನಲಾಭವಿದೆ. ಆರೋಗ್ಯದ ಬಗ್ಗೆ ಗಮನ ಹರಿಸಿ. ವಿದ್ಯಾರ್ಥಿಗಳಿಗೆ ಉನ್ನತ ವಿಧ್ಯಾಭ್ಯಾಸದ ಯೋಗವಿದೆ. ಬೇಸರದಿಂದ ಹೊರ ಬರಲು ಮನರಂಜನಾ ಸ್ಥಳಕ್ಕೆ ತೆರಳುವಿರಿ. ಮಕ್ಕಳನ್ನು ವಿಶೇಷವಾದ ಪ್ರೀತಿಯಿಂದ ಕಾಣುವಿರಿ. ಅನಾವಶ್ಯಕವಾಗಿ ಯಾರನ್ನೂ ಟೀಕಿಸದಿರಿ. ತವರಿಗೆ ತೆರಳಬೇಕಾದ ಅನಿವಾರ್ಯತೆ ಇರುತ್ತದೆ. ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಉಡುಗೊರೆಯಾಗಿ ಇಷ್ಟಪಟ್ಟ ಒಡವೆಯೊಂದು ದೊರೆಯಲಿದೆ.

ತುಲಾ

ಕಾನೂನಿನ ಆಸರೆಯಲ್ಲಿ ಹಣಕಾಸಿನ ಸಂಸ್ಥೆಯನ್ನು ಆರಂಭಿಸುವಿರಿ. ಪತಿಗೆ ಸೇರಿದ ಭೂಮಿ ವಿವಾದವನ್ನು ಮಾತುಕತೆಯಿಂದ ಪೂರ್ಣಗೊಳಿಸುವಿರಿ. ಕುಟುಂಬದಲ್ಲಿ ಉತ್ತಮ ಅನುಬಂಧ ಇರಲಿದೆ. ಸಮಾಜದಲ್ಲಿ ವಿಶೇಷವಾದ ಗೌರವಾದರ ಲಭಿಸುತ್ತದೆ. ಉದ್ಯೋಗದಲ್ಲಿ ಆಶಾದಾಯಕ ಬದಲಾವಣೆ ಆಗುತ್ತದೆ. ಷೇರು ವ್ಯವಹಾರದಲ್ಲಿ ಲಾಭ ದೊರೆವ ಸಾಧ್ಯತೆ ಇದೆ. ಚಿನ್ನದ ಒಡವೆಗಳಿಗೆ ಹಣ ಖರ್ಚು ಮಾಡುವಿರಿ. ಕಷ್ಟ ಕಾಲಕ್ಕಾಗಿ ಹಣವನ್ನು ಉಳಿಸುವಿರಿ. ಚುರುಕುತನದಿಂದ ಸಮಯಕ್ಕೆ ತಕ್ಕಂತಹ ತೀರ್ಮಾನಗಳನ್ನು ಬದಲಾಯಿಸುವಿರಿ. ಮಕ್ಕಳ ಜೊತೆಯಲ್ಲಿ ದೂರದ ಸ್ಥಳಕ್ಕೆ ಪ್ರವಾಸ ಬೆಳೆಸುವಿರಿ.

ವೃಶ್ಚಿಕ

ಕುಟುಂಬದ ಚಿಕ್ಕ ಪುಟ್ಟ ವಿಚಾರಗಳಿಗೂ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವಿರಿ. ಕುಟುಂಬದಲ್ಲಿ ಶಾಂತಿ ನೆಮ್ಮದಿ ಮನೆ ಮಾಡಿರುತ್ತದೆ. ವಿದೇಶದಲ್ಲಿ ಉದ್ಯೋಗ ದೊರೆಯಲಿದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಬೇರೆಯವರ ಭೂವಿವಾದದಿಂದಾಗಿ ಶತ್ರುತ್ವ ಉಂಟಾಗಬಹುದು. ತಂದೆಯ ವೃತ್ತಿ ಅಥವ ವ್ಯಾಪಾರವನ್ನು ಅನುಸರಿಸಲು ಇಚ್ಚಿಸುವಿರಿ. ಮಕ್ಕಳನ್ನು ಉನ್ನತ ವಿದ್ಯೆಗಾಗಿ ವಿದೇಶಕ್ಕೆ ಕಳುಹಿಸುವ ಬಗ್ಗೆ ಮಾತುಕತೆ ನಡೆಯುತ್ತದೆ. ಅವಿವಾಹಿತರಿಗೆ ವಿವಾಹ ನಿಶ್ಚಯವಾಗುತ್ತದೆ. ವಾಸಸ್ಥಳವನ್ನು ವಿಶಾಲವಾದ ಮನೆಗೆ ಬದಲಾಯಿಸುವಿರಿ. ಸುಲಭವಾಗಿ ಬೇರೆಯವರ ಪ್ರಭಾವಕ್ಕೆ ಒಳಗಾಗುವಿರಿ.

ಧನಸ್ಸು

ಗೆಲ್ಲಲೇ ಬೇಕೆಂಬ ಹಠದಿಂದ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ. ದುಡುಕದೆ ಕುಟುಂಬದ ಗೌರವವನ್ನು ಕಾಪಾಡುವಿರಿ. ಮೌನದಿಂದ ಎಲ್ಲರ ವಿಶ್ವಾಸ ಗಳಿಸುವಿರಿ. ಎರಡು ಬಗೆಯ ಆದಾಯ ನಿಮಗಿರುತ್ತದೆ. ಮನೆಯನ್ನು ಕೊಳ್ಳಲು ತಂದೆಗೆ ಹಣದ ಸಹಾಯ ಮಾಡುವಿರಿ. ಹೆಚ್ಚಿನ ಹಣ ಗಳಿಕೆಯ ಆಸೆ ಇರುವುದಿಲ್ಲ. ದಾಂಪತ್ಯದಲ್ಲಿ ಶುಭ ಸುದ್ಧಿಯೊಂದು ಕಾದಿದೆ. ಪತಿಯ ಕೆಲಸದಲ್ಲಿ ಸಹಾಯ ಮಾಡುವಿರಿ. ಬೇಗ ಕೋಪ ಬರುತ್ತದೆ ಆದರೆ ಬಹುಕಾಲ ನಿಲ್ಲದು. ಶಾಂತಿ ಸಂಯಮದಿಂದ ಬಾಳಿನ ಸಂತಸವನ್ನು ಕಾಪಾಡುವಿರಿ. ಅಜೀರ್ಣದ ತೊಂದರೆ ಕಾಡುತ್ತದೆ. ಚಂಚಲದ ಮನಸ್ಸು ಮನೆ ಮಾಡುತ್ತದೆ.

ಮಕರ

ಕಷ್ಟ ನಷ್ಟವನ್ನು ಪರಿಗಣಿಸದೆ ಕುಟುಂಬದ ಜವಾಬ್ದಾರಿಯನ್ನು ಒಪ್ಪಿಕೊಳ್ಳುವಿರಿ. ಸುಲಭವೆನಿಸುವ ಕೆಲಸ ಕಾರ್ಯವನ್ನು ಪೂರ್ಣಗೊಳಿಸುವಿರಿ. ದುಡಿಮೆಯ ನಡುವೆ ವಿಶ್ರಾಂತಿಯನ್ನೂ ಪಡೆಯುವುದಿಲ್ಲ. ವಿದ್ಯಾರ್ಥಿಗಳ ಕಲಿಕೆ ಉನ್ನತ ಮಟ್ಟದಲ್ಲಿರುತ್ತದೆ. ಸಮಾಜದಲ್ಲಿ ನೇತೃತ್ವ ನಿಮಗೆ ದೊರೆಯಬಹುದು. ಹವ್ಯಾಸ್ಯವಾಗಿದ್ದ ಬರವಣಿಗೆಯೇ ಜೀವನಾಧಾರವಾಗುತ್ತದೆ. ಸೋದರಿಯಿಂದ ಹಣದ ಲಾಭವಿದೆ. ಜನರಿಗೆ ಉಪಯೋಗವಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಿರಿ. ರಾಜಕೀಯ ಸೇರುವ ಅವಕಾಶ ದೊರೆಯುತ್ತದೆ. ಪತಿಯ ಜೊತೆಯಲ್ಲಿ ಯಾತ್ರಾಸ್ಥಳಕ್ಕೆ ಬೇಟಿ ನೀಡುವಿರಿ. ಸಂತಾನಲಾಭವಿದೆ. ತಂದೆ ತಾಯಿಯ ಆಗಮನ ಸಂತಸ ಉಂಟುಮಾಡುತ್ತದೆ.

ಕುಂಭ

ಏಕಾಂಗಿತನವನ್ನು ಇಷ್ಟ ಪಡುವಿರಿ. ಯಾರೊಂದಿಗೂ ಮನಬಿಚ್ಚಿ ಮಾತನಾಡುವುದಿಲ್ಲ. ಕಷ್ಟ ನಷ್ಟಗಳಿಗೆ ಹೆದರುವುದಿಲ್ಲ. ಹಣಕಾಸಿನ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ಕುಟುಂಬದಲ್ಲಿ ಮುಖ್ಯ ವ್ಯಕ್ತಿಯಾಗಿ ಬಾಳುವಿರಿ. ಜನೋಪಯೋಗಿ ಕೆಲಸವನ್ನು ಮಾಡಿ ಜನ ಮೆಚ್ಚುಗೆ ಗಳಿಸುವಿರಿ. ಹೊಗಳಿಕೆಗೆ ಮರುವಾಗಿ ತೊಂದರೆಗೆ ಒಳಗಾಗುವಿರಿ. ಅನಾವಶ್ಯಕವಾಗಿ ಹಣವನ್ನು ನೀಡದಿರಿ. ಸುಲಭವಾಗಿ ಹೊಗಳು ಮಾತಿಗೆ ಮರುಳಾಗುವಿರಿ. ಎಚ್ಚರಿಕೆಯಿಂದ ಪತಿಯ ಹಣಕಾಸಿನ ವಿವಾದವನ್ನು ಪರಿಹರಿಸುವಿರಿ. ಮನಸ್ಸಿನ ಭಾವನೆಗಳಿಗೆ ಜೀವ ನೀಡುವಿರಿ. ಸ್ವಂತ ಮನೆಯ ಅಭಿಲಾಷೆ ಈಡೇರಲು ತವರಿನ ಸಹಾಯ ದೊರೆಯುತ್ತದೆ.

ಮೀನ

ನಿಮ್ಮ ಮಾತಿಗೆ ಕುಟುಂಬದ ಒಳಗೂ ಹೊರಗೂ ಗೌರವ ಇರುತ್ತದೆ. ಮನಸ್ಸು ನೀರಿನಂತೆ ಪರಿಶುದ್ದವಾಗಿರುತ್ತದೆ. ದುಡುಕಿನ ನಿರ್ಧಾರ ತೆಗೆದುಕೊಳ್ಳದಿರಿ. ಬರಿ ಮಾತಿನಿಂದ ಭೂ ವಿವಾದವನ್ನು ಪರಿಹರಿಸುವಿರಿ. ಸಾಕುಪ್ರಾಣಿಗಳ ಮೇಲೆ ಕನಿಕರವಿರುತ್ತದೆ. ಹಣಕಾಸಿನ ವಿಚಾರದಲ್ಲಿ ಯಾರನ್ನೂ ಸುಲಭವಾಗಿ ನಂಬುವುದಿಲ್ಲ. ಅವಶ್ಯಕತೆ ಇರುವವರಿಗೆ ಸಹಾಯ ಮಾಡುವಿರಿ. ಪದೇ ಪದೇ ಮನಸ್ಸು ಬದಲಾಯಿಸುವ ಕಾರಣ ಅವಕಾಶ ವಂಚಿತರಾಗುವಿರಿ. ಪತಿ ಮತ್ತು ಮಕ್ಕಳ ಜೊತೆಯಲ್ಲಿ ದೀರ್ಘಕಾಲದ ಪ್ರವಾಸ ಕೈಗೊಳ್ಳುವಿರಿ. ಶೀತದ ತೊಂದರೆ ಎದುರಾಗುತ್ತದೆ. ಪ್ರಾಣಿ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿರಿ.

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.