ಸ್ತ್ರೀ ವಾರ ಭವಿಷ್ಯ ಸಿಂಹದಿಂದ ವೃಶ್ಚಿಕದವರೆಗೆ; ಬೇಸರದ ಸನ್ನಿವೇಶ ಎದುರಾಗಲಿದೆ, ದಾಂಪತ್ಯದಲ್ಲಿನ ಮನಸ್ತಾಪ ದೂರಾಗುತ್ತದೆ
ಸ್ತ್ರೀ ವಾರ ಭವಿಷ್ಯ: ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಈ ವಾರ ಸಿಂಹದಿಂದ ವೃಶ್ಚಿಕ ರಾಶಿವರೆಗಿನ ಮಹಿಳೆಯರಿಗೆ ಏನು ಫಲ? ಇಲ್ಲಿದೆ ವಿವರ.

ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಕೆಲ ಮಹಿಳೆಯರು ಕೂಡ ತಮ್ಮ ಭವಿಷ್ಯವನ್ನು ನೋಡಿಕೊಳ್ಳುತ್ತಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. 2025ರ ಮೇ 23 ರ ಶುಕ್ರವಾರದಿಂದ 29ರ ಗುರುವಾರದವರೆಗೆ ಸಿಂಹ, ಕನ್ಯಾ, ತುಲಾ ಹಾಗೂ ವೃಶ್ಚಿಕ ರಾಶಿಯವರ ಸ್ತ್ರೀ ವಾರ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ.
ಸಿಂಹ
ಕುಟುಂಬದ ಹಿರಿಯರ ಆರೋಗ್ಯದಲ್ಲಿ ಏರುಪೇರಾಗಲಿದೆ. ಒಲ್ಲದ ಮನಸ್ಸಿನಿಂದ ಕುಟುಂಬದ ಜವಾಬ್ದಾರಿಯನ್ನು ಒಪ್ಪಿಕೊಳ್ಳುವಿರಿ. ಪತಿಯ ಬಿಡುವಿಲ್ಲದ ಕೆಲಸಗಳಿಗೆ ಸಹಕಾರ ನೀಡುವಿರಿ. ಅನಾವಶ್ಯಕ ಖರ್ಚು ವೆಚ್ಚಗಳನ್ನು ನಿಯಂತ್ರಿಸುವಿರಿ. ಸ್ವಂತ ವ್ಯಾಪಾರ ವ್ಯವಹಾರವಿದ್ದಲ್ಲಿ ನಿಮ್ಮ ತೀರ್ಮಾನಗಳೇ ಅಂತಿಮವಾಗುತ್ತದೆ. ಮಾತಿನಲ್ಲಿ ನಯ ವಿನಯ ತೋರುವಿರಿ. ನಿಮ್ಮ ಮಾತಿಗೆ ಗೌರವ ದೊರೆಯದೇ ಹೋದಾಗ ಕೋಪದಿಂದ ವರ್ತಿಸುವಿರಿ. ಗುರು ಹಿರಿಯರಲ್ಲಿ ವಿಶೇಷವಾದ ಗೌರವ ವಿಶ್ವಾಸ ಇರಲಿದೆ. ಬಂಧು-ಬಳಗದವರಿಂದ ದೂರ ಉಳಿಯುವಿರಿ. ಏಕಾಂಗಿಯಾಗಿ ಹೋರಾಡುವ ಗುಣ ನಿಮ್ಮಲ್ಲಿ ಇರುತ್ತದೆ. ಮಕ್ಕಳನ್ನು ಉನ್ನತ ಮಟ್ಟಕ್ಕೆ ತಲುಪಲು ಕಾರಣರಾಗುವಿರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ಇರುವುದಿಲ್ಲ. ಸಮಾಜದಲ್ಲಿ ನಿಮ್ಮ ಪ್ರಭಾವವು ಹೆಚ್ಚಿನದಾಗಿರುತ್ತದೆ.
ಪರಿಹಾರ: ಹಳದಿ ಬಣ್ಣ ಅದೃಷ್ಟವಾಗಿರುತ್ತದೆ.
ಅದೃಷ್ಟದ ಸಂಖ್ಯೆ : 6
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಟದ ಬಣ್ಣ : ನೀಲಿ ಬಣ್ಣ
ಕನ್ಯಾ
ಬೇರೆಯವರ ತಪ್ಪನ್ನು ಮನ್ನಿಸುವಿರಿ. ಆದರೆ ಟೀಕಿಸುವ ಗುಣವು ನಿಮ್ಮಲ್ಲಿದ್ದು ಬೇಸರದ ಸನ್ನಿವೇಶವನ್ನು ಉಂಟುಮಾಡುತ್ತದೆ. ನಿಮ್ಮ ಬುದ್ಧಿ ಶಕ್ತಿಯು ಕುಟುಂಬದ ಯಾವುದೇ ಸನ್ನಿವೇಶವನ್ನು ಬದಲಾಗುವಂತೆ ಮಾಡುತ್ತದೆ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಬಾಳುವಿರಿ. ಆದರೆ ಒಮ್ಮೆ ತೆಗೆದುಕೊಂಡ ತೀರ್ಮಾನವನ್ನು ಪದೇ ಪದೇ ಬದಲಿಸುವಿರಿ. ಹಣಕಾಸಿನ ವಿಚಾರದಲ್ಲಿ ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ತಾಯಿಯ ಮೇಲೆ ಹೆಚ್ಚಿನ ಪ್ರೀತಿ ಇರುತ್ತದೆ. ಕುಟುಂಬ ಸದಸ್ಯರ ಜೊತೆಯಲ್ಲಿ ಪಾಲುದಾರಿಕೆಯ ವ್ಯಾಪಾರವನ್ನು ಆರಂಭಿಸುವಿರಿ. ಒಂದಕ್ಕಿಂತಲೂ ಹೆಚ್ಚಿನ ಕೆಲಸವನ್ನು ಏಕಕಾಲದಲ್ಲಿ ಮಾಡಬಲ್ಲಿರಿ. ಸೋಲಿನ ಬಗ್ಗೆ ಯೋಚನೆ ಮಾಡುವುದಿಲ್ಲ. ಪ್ರಸಕ್ತ ಸನ್ನಿವೇಶವನ್ನು ಮಾತ್ರ ಎಚ್ಚರಿಕೆ ಮತ್ತು ಆಸಕ್ತಿಯಿಂದ ಎದುರಿಸುವಿರಿ. ನಿಮ್ಮ ಮಾತಿನಲ್ಲಿ ನೇರ ಮತ್ತು ನಿಷ್ಠೂರದ ಕುರುಹು ಕಂಡುಬರುತ್ತದೆ.
ಪರಿಹಾರ: ನೀವು ತಿನ್ನುವ ಆಹಾರದಲ್ಲಿ ಅಲ್ಪಭಾಗವನ್ನು ಪಕ್ಷಿಗಳಿಗೆ ನೀಡಿ.
ಅದೃಷ್ಟದ ಸಂಖ್ಯೆ: 10
ಅದೃಷ್ಟದ ದಿಕ್ಕು: ಪೂರ್ವ
ಅದೃಷ್ಟದ ಬಣ್ಣ: ನೇರಳೆ ಬಣ್ಣ
ತುಲಾ
ಬೇರೆಯವರ ಕೆಲಸ ಕಾರ್ಯದಲ್ಲಿ ಸರಿ ತಪ್ಪುಗಳನ್ನು ಕಂಡುಹಿಡಿಯುವಿರಿ. ಆಕರ್ಷಕ ಮಾತುಕತೆಯಿಂದ ಕುಟುಂಬದಲ್ಲಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವಿರಿ. ಕುಟುಂಬದ ಸದಸ್ಯರ ಜೊತೆಯಲ್ಲಿ ವಿಶೇಷವಾದ ಅನುಬಂಧ ಇರಲಿದೆ. ಕುಟುಂಬದಲ್ಲಿ ತೊಂದರೆಯೂ ಎದುರಾದಾಗ ಅನುಕಂಪದಿಂದ ವರ್ತಿಸುವಿರಿ. ಉದ್ಯೋಗದಲ್ಲಿ ನಿಮ್ಮ ನಿರೀಕ್ಷೆಯಂತೆ ಉನ್ನತ ಅಧಿಕಾರ ಲಭಿಸುತ್ತದೆ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಇರುತ್ತದೆ. ಅನಾವಶ್ಯಕ ಖರ್ಚು ವೆಚ್ಚಗಳು ಎದುರಾಗಲಿವೆ. ಆತಂಕದ ಪರಿಸ್ಥಿತಿಯಲ್ಲಿಯೂ ನಿಮ್ಮ ಪ್ರಯತ್ನವನ್ನು ನಿಲ್ಲಿಸುವುದಿಲ್ಲ. ಕೈಕಾಲುಗಳಿಗೆ ಪೆಟ್ಟಾಗುವ ಸಂಭವವಿದೆ. ಅವಿವಾಹಿತರಿಗೆ ಪರಿಚಯದವರ ಜೊತೆಯಲ್ಲಿ ವಿವಾಹ ನಿಶ್ಚಯವಾಗುತ್ತದೆ. ಸಮಯ ವ್ಯರ್ಥ ಮಾಡದೆ ಯಾವುದಾದರೊಂದು ಕೆಲಸ ಕಾರ್ಯಗಳಲ್ಲಿ ನಿರತರಾಗುವಿರಿ. ರಾಜಕೀಯದಲ್ಲಿ ಆಸಕ್ತಿ ಉಂಟಾಗುತ್ತದೆ. ವಿದೇಶಕ್ಕೆ ತೆರಳುವ ಅವಕಾಶ ಲಭ್ಯವಾಗುತ್ತದೆ.
ಪರಿಹಾರ: ತಲೆಯಲ್ಲಿ ಚಿನ್ನದ ಒಡವೆ ಇರಲಿ. ಅದೃಷ್ಟದ ಸಂಖ್ಯೆ: 3
ಅದೃಷ್ಟದ ದಿಕ್ಕು: ದಕ್ಷಿಣ
ಅದೃಷ್ಟದ ಬಣ್ಣ: ಗುಲಾಬಿ ಬಣ್ಣ
ವೃಶ್ಚಿಕ
ಸಣ್ಣಪುಟ್ಟ ವಿಚಾರಗಳಿಗೂ ಕೋಪದಿಂದ ವರ್ತಿಸುವಿರಿ. ಮನದಲ್ಲಿ ಇರುವ ಒಳ್ಳೆಯ ವಿಚಾರಗಳು ಬೇರೆಯವರಿಗೆ ತಿಳಿಯದಂತಾಗುತ್ತದೆ. ಗುರು ಹಿರಿಯರ ಸಮಾಗಮದಲ್ಲಿ ಹೊಸ ಕೆಲಸವನ್ನು ಆರಂಭಿಸುವಿರಿ. ನಿಮ್ಮ ಪ್ರತಿಯೊಂದು ತಪ್ಪಿಗೂ ವೇದಾಂತದ ಮೆರಗು ನೀಡುವಿರಿ. ನಿಮ್ಮ ತೀರ್ಮಾನಗಳನ್ನು ಯಾವುದೇ ಕಾರಣಕ್ಕೂ ಬದಲಿಸುವುದಿಲ್ಲ. ನಿಧಾನಗತಿಯಲ್ಲಿ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಕುಟುಂಬದಲ್ಲಿನ ಹಣದ ಕೊರತೆ ಮನಸ್ಸಿನ ಶಾಂತಿಯನ್ನು ಕದಡುತ್ತದೆ. ಹಠದ ಸ್ವಭಾವ ಇರುವ ಕಾರಣ ಬಂಧು ಬಳಗದವರು ನಿಮ್ಮಿಂದ ದೂರ ಉಳಿಯುತ್ತಾರೆ. ಬಾಳ ಸಂಗಾತಿಯನ್ನು ಮಗುವಿನಂತೆ ಸಲಹುವಿರಿ. ದಾಂಪತ್ಯ ಜೀವನದಲ್ಲಿನ ಮನಸ್ತಾಪವು ಕೇವಲ ಕ್ಷಣಿಕವಾಗುತ್ತದೆ. ಆಸೆಯಿಂದ ಯೋಜಿಸಿದ್ದ ಪ್ರವಾಸವನ್ನು ಮೋಟಕುಗೊಳಿಸುವಿರಿ.
ಪರಿಹಾರ: ಮನೆಯ ಮುಂದಿನ ಒಣಗಿದ ಗಿಡವನ್ನು ವಿಲೇವಾರಿ ಮಾಡಿ.
ಅದೃಷ್ಟದ ಸಂಖ್ಯೆ: 7
ಅದೃಷ್ಟದ ದಿಕ್ಕು: ಪಶ್ಚಿಮ
ಅದೃಷ್ಟದ ಬಣ್ಣ: ಬಿಳಿ ಬಣ್ಣ
ಬರಹ: ಹೆಚ್. ಸತೀಶ್, ಜ್ಯೋತಿಷಿ, ಬೆಂಗಳೂರು
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ಸ್ತ್ರೀ ವಾರ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).