ಸ್ತ್ರೀ ವಾರ ಭವಿಷ್ಯ: ಮೇಷ ರಾಶಿಯವರಿಗೆ ಕೆಲಸದಲ್ಲಿ ಒತ್ತಡ ಇರಲಿದೆ, ವೃಷಭ ರಾಶಿಯವರು ಕುಟುಂಬದ ವಿವಾದವನ್ನ ಬಗೆಹರಿಸುತ್ತಾರೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸ್ತ್ರೀ ವಾರ ಭವಿಷ್ಯ: ಮೇಷ ರಾಶಿಯವರಿಗೆ ಕೆಲಸದಲ್ಲಿ ಒತ್ತಡ ಇರಲಿದೆ, ವೃಷಭ ರಾಶಿಯವರು ಕುಟುಂಬದ ವಿವಾದವನ್ನ ಬಗೆಹರಿಸುತ್ತಾರೆ

ಸ್ತ್ರೀ ವಾರ ಭವಿಷ್ಯ: ಮೇಷ ರಾಶಿಯವರಿಗೆ ಕೆಲಸದಲ್ಲಿ ಒತ್ತಡ ಇರಲಿದೆ, ವೃಷಭ ರಾಶಿಯವರು ಕುಟುಂಬದ ವಿವಾದವನ್ನ ಬಗೆಹರಿಸುತ್ತಾರೆ

ಸ್ತ್ರೀ ವಾರ ಭವಿಷ್ಯ: ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಈ ವಾರ ಯಾವ ಮಹಿಳಾ ರಾಶಿಯವರಿಗೆ ಏನು ಫಲ? 1 ವಾರ ಭವಿಷ್ಯದ ವಿವರ ಇಲ್ಲಿದೆ.

ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರ ಸ್ತ್ರೀ ವಾರ ಭವಿಷ್ಯ
ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರ ಸ್ತ್ರೀ ವಾರ ಭವಿಷ್ಯ

Women Weekly Horoscope: ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಕೆಲ ಮಹಿಳೆಯರು ಕೂಡ ತಮ್ಮ ಭವಿಷ್ಯವನ್ನು ನೋಡಿಕೊಳ್ಳುತ್ತಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. 2025ರ ಏಪ್ರಿಲ್ 11 ರ ಶುಕ್ರವಾರದಿಂದ ಏಪ್ರಿಲ್ 17ರ ಗುರುವಾರದವರೆಗೆ ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರ ಸ್ತ್ರೀ ವಾರ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ.

ಮೇಷ ರಾಶಿ

ಕುಟುಂಬದವರ ಒತ್ತಡಕ್ಕೆ ಗಲಿಬಿಲಿಗೊಂಡು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಅವಶ್ಯಕತೆ ಇಲ್ಲದ ವಿಚಾರಗಳಿಗೆ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಉದ್ಯೋಗಸ್ಥರಾದಲ್ಲಿ ಕೆಲಸದ ಒತ್ತಡ ಹೆಚ್ಚಿನದಾಗಿರುತ್ತದೆ. ಅನಾವಶ್ಯಕವಾಗಿ ಎಲ್ಲರೊಂದಿಗೆ ಕೋಪದಿಂದ ವರ್ತಿಸುವಿರಿ. ಅತಿಯಾದ ಭಾವುಕತೆಯಿಂದ ವರ್ತಿಸುವಿರಿ. ಬೇರೆಯವರೊಂದಿಗೆ ವಾದ ವಿವಾದದ ನಡುವೆ ಆತ್ಮೀಯರ ಸಹಾಯವನ್ನು ನಿರೀಕ್ಷಿಸುವಿರಿ. ಸಂತೋಷವನ್ನಾಗಲಿ ದುಃಖವನ್ನಾಗಲಿ ಮನದಲ್ಲಿ ಮುಚ್ಚಿಡಲು ವಿಫಲರಾಗುವಿರಿ. ಕೌಟುಂಬಿಕ ಕೆಲಸ ಕಾಯಗಳಲ್ಲಿ ನಿಮ್ಮಿಂದ ತಪ್ಪುಗಳಾದಾಗ ನಿಮಗಿಂತ ಕಿರಿಯರನ್ನು ದೂರುವಿರಿ. ನೋಡಲು ಶಾಂತರಾಗಿ ಕಂಡರೂ ಸ್ವಾರ್ಥದ ಬುದ್ಧಿ ಇರುತ್ತದೆ. ಆರೋಗ್ಯದಲ್ಲಿ ತೊಂದರೆ ಕಾಣಲಿದೆ. ವೃಥಾ ಓಡಾಟ ಕಂಡು ಬರಲಿದೆ. ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಭಾಗಶಃ ಯಶಸ್ವಿಯಾಗುವಿರಿ. ಮಕ್ಕಳ ವಿವಾಹದ ವಿಚಾರಕ್ಕೆ ಪ್ರಾಮುಖ್ಯತೆ ನೀಡುವಿರಿ.

ಪರಿಹಾರ: ಬೇವಿನ ಮರಕ್ಕೆ ನೀರನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿದರೆ ಒಳ್ಳೆಯದು
ಅದೃಷ್ಟದ ಸಂಖ್ಯೆ: 5
ಅದೃಷ್ಟದ ದಿಕ್ಕು: ದಕ್ಷಿಣ
ಅದೃಷ್ಟದ ಬಣ್ಣ: ಕೇಸರಿ

ವೃಷಭ ರಾಶಿ

ಆತ್ಮೀಯರಿಂದ ಹಣದ ಸಹಾಯ ದೊರೆಯುತ್ತದೆ. ಉನ್ನತ ಮಟ್ಟದ ತಿರುವುಗಳು ದೊರೆಯಲಿವೆ. ಯಾವುದೇ ವಿಚಾರದಲ್ಲೂ ಹೆಚ್ಚಿನ ಆಸೆ ತೋರುವುದಿಲ್ಲ. ಆದರೆ ಮಾಡಬೇಕಾದ ಕೆಲಸ ಕಾರ್ಯಗಳು ಸಣ್ಣಮಟ್ಟದಾದರೂ ಹೆಚ್ಚಿನ ಆಸಕ್ತಿ ವಹಿಸುವಿರಿ. ನಿಮ್ಮಲ್ಲಿ ಇರುವ ಕಲೆಗಾರಿಕೆಗೆ ಹೊಸ ಆಯಾಮ ದೊರೆಯುತ್ತದೆ. ತಪ್ಪು ಮಾಡಿದವರನ್ನು ಕ್ಷಮಿಸುವಿರಿ. ಎಲ್ಲರ ಪ್ರೀತಿ ವಿಶ್ವಾಸ ನಿಮಗೆ ದೊರೆಯುತ್ತದೆ. ಕುಟುಂಬದಲ್ಲಿನ ಮುಖ್ಯ ವಿಚಾರಗಳ ಜವಾಬ್ದಾರಿಯು ನಿಮ್ಮದಾಗುತ್ತದೆ. ಬಂಧು-ಬಳಗದವರಲ್ಲಿ ಆತ್ಮೀಯತೆ ತೋರುವಿರಿ. ಉದ್ಯೋಗದಲ್ಲಿ ಇರುವವರಿಗೆ ಉನ್ನತ ಅಧಿಕಾರ ದೊರೆಯುತ್ತದೆ. ತಂದೆಯಿಂದ ಅಥವಾ ತಾಯಿಯಿಂದ ಹಣದ ಸಹಾಯ ದೊರೆಯುತ್ತದೆ. ಉತ್ತಮ ಆರೋಗ್ಯ ನಿಮಗಿರುತ್ತದೆ. ಕಾನೂನಿನ ಚೌಕಟ್ಟಿನಲ್ಲಿ ಕುಟುಂಬದ ವಿವಾದ ಒಂದನ್ನು ಪರಿಹರಿಸುವಿರಿ.

ಪರಿಹಾರ: ಮನೆ ಮುಂದಿನ ಒಣಗಿದ ಗಿಡಗಳನ್ನು ವಿಲೇವಾರಿ ಮಾಡಿ ದಿನದ ಕೆಲಸವನ್ನು ಆರಂಭಿಸಿ
ಅದೃಷ್ಟದ ಸಂಖ್ಯೆ: 9
ಅದೃಷ್ಟದ ದಿಕ್ಕು: ಪಶ್ಚಿಮ
ಅದೃಷ್ಟದ ಬಣ್ಣ: ಮಣ್ಣಿನ ಬಣ್ಣ

ಮಿಥುನ ರಾಶಿ

ಕಷ್ಟ ಎನಿಸಿದರು ಒಪ್ಪಿಕೊಂಡ ಕೆಲಸ ಕಾರ್ಯಗಳನ್ನು ಮುತುವರ್ಜಿಯಿಂದ ಪೂರ್ಣಗೊಳಿಸುವಿರಿ. ಸಮಾಜದಲ್ಲಿ ಉನ್ನತ ಅಧಿಕಾರವಿದ್ದರೂ ನಿಮ್ಮ ಪ್ರಭಾವವನ್ನು ಚಲಾಯಿಸುವುದಿಲ್ಲ. ಆತ್ಮೀಯರ ಜೀವನದಲ್ಲಿ ನಿಮ್ಮಿಂದ ಅನುಕೂಲತೆಗಳು ದೊರೆಯುತ್ತವೆ. ಆರೋಗ್ಯದಲ್ಲಿ ಸ್ಥಿರತೆ ಇರುವುದಿಲ್ಲ. ದೈಹಿಕವಾಗಿ ಮತ್ತು ಮಾನಸಿಕವಾಗಿ ತೊಂದರೆ ಇರುತ್ತದೆ. ಮಕ್ಕಳ ಜೀವನದಲ್ಲಿ ನಿರೀಕ್ಷಿತ ಬದಲಾವಣೆಗಳು ಕಂಡುಬರುತ್ತದೆ. ಇದರಿಂದ ಸುಖ ಸಂತೃಪ್ತಿಯ ಜೀವನ ನಿಮ್ಮದಾಗುತ್ತದೆ. ಆದರೆ ಪ್ರತಿಯೊಂದು ವಿಚಾರದಲ್ಲಿಯೂ ಒತ್ತಡವನ್ನು ಅನುಭವಿಸುವಿರಿ. ತೆಗೆದುಕೊಳ್ಳುವ ತೀರ್ಮಾನಗಳನ್ನು ಅನಗತ್ಯವಾಗಿ ಬದಲಿಸುವಿರಿ. ನಿಮಗೆ ದೊರೆಯುವ ಅವಕಾಶಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಆಡುವ ಮಾತಿನಲ್ಲಿ ಹಿಡಿತವಿರುವುದಿಲ್ಲ. ಒಮ್ಮೆ ಮಾಡಿದ ಕೆಲಸದಲ್ಲಿ ತಪ್ಪಾದರು ಸರಿಪಡಿಸುವ ಮನಸ್ಸು ಕಾಣುವುದಿಲ್ಲ. ಜೀವನದಲ್ಲಿ ಹೊಂದಿಕೊಂಡು ಬಾಳುವ ಬುದ್ದಿ ಇರುತ್ತದೆ. ಅತಿಯಾದ ಆಸೆ ಇರುವುದಿಲ್ಲ. ನಿರ್ದಿಷ್ಟ ಗುರಿಯು ಇರುವುದಿಲ್ಲ. ಇದರಿಂದಾಗಿ ಸಾಮಾನ್ಯ ಜೀವನ ನಿಮ್ಮದಾಗುತ್ತದೆ.

ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಅಕ್ಕಿ ಬೆಳೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ
ಅದೃಷ್ಟದ ಸಂಖ್ಯೆ: 2
ಅದೃಷ್ಟದ ದಿಕ್ಕು: ಉತ್ತರ
ಅದೃಷ್ಟದ ಬಣ್ಣ: ಕೆಂಪು ಬಣ್ಣ

ಕಟಕ ರಾಶಿ

ಶಾಂತಿ ಸಹನೆಯ ಗುಣವು ಮರೆಯಾಗುತ್ತದೆ. ನೇರವಾಗಿ ಟೀಕಿಸುವ ಕಾರಣ ವಿರೋಧಿಗಳು ಹೆಚ್ಚುತ್ತಾರೆ. ಎದುರಾಗುವ ಸವಾಲುಗಳನ್ನು ಸುಲಭವಾಗಿ ಎದುರಿಸುವಿರಿ. ನಿಮ್ಮ ನಿರೀಕ್ಷೆಯಂತೆ ಯಾವುದೇ ಕೆಲಸ ಕಾರ್ಯಗಳು ನಡೆಯಲಾರದು. ಪರಿಸ್ಥಿತಿಗೆ ಅನುಗುಣವಾಗಿ ನಡೆದುಕೊಂಡಲ್ಲಿ ಮನಸ್ಸಿಗೆ ಶಾಂತಿ ಲಭಿಸುತ್ತದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳು ತಪ್ಪು ಮಾಡಿದ್ದಲ್ಲಿ ಕಠೋರವಾಗಿ ವರ್ತಿಸುವಿರಿ. ಹಣಕಾಸಿನ ಕೊರತೆ ಕಂಡು ಬರುತ್ತದೆ. ಕುಟುಂಬದ ಹಿರಿಯ ಆರೋಗ್ಯದಲ್ಲಿ ಏರಿಳಿತ ಕಾಣಲಿದೆ. ನಿಮ್ಮ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗಲಿವೆ. ಕುಟುಂಬದ ಹಿರಿಯರ ನಡುವೆ ಉತ್ತಮ ಹೊಂದಾಣಿಕೆ ಇರುವುದಿಲ್ಲ. ದಂಪತಿ ನಡುವೆ ಹೊಂದಾಣಿಕೆಯ ಕೊರತೆ ಕಂಡುಬರುತ್ತದೆ. ಪತಿ ಮತ್ತು ಮಕ್ಕಳ ಜೊತೆಯಲ್ಲಿ ಯಾತ್ರಾ ಸ್ಥಳಕ್ಕೆ ಭೇಟಿ ನೀಡುವಿರಿ. ಕಾದು ನೋಡುವ ತಂತ್ರದಿಂದ ಮಾತ್ರ ಜೀವನವು ಗೆಲುವಿನ ಹಾದಿಯಲ್ಲಿ ಸಾಗುತ್ತದೆ.

ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಪೂಜಾ ದ್ರವ್ಯಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿ
ಅದೃಷ್ಟದ ಸಂಖ್ಯೆ: 6
ಅದೃಷ್ಟದ ದಿಕ್ಕು: ಪೂರ್ವ
ಅದೃಷ್ಟದ ಬಣ್ಣ: ಕಿತ್ತಳೆ ಬಣ್ಣ

ಬರಹ: ಹೆಚ್‌. ಸತೀಶ್‌, ಜ್ಯೋತಿಷಿ, ಬೆಂಗಳೂರು

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ಸ್ತ್ರೀ ವಾರ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.