ಮಗಳ ವಿವಾಹ ಮಾತುಕತೆ ನಡೆಸಲಿದ್ದೀರಿ, ಜಮೀನು ಕೊಳ್ಳುವ ಆಸೆಗೆ ಪತಿಯ ಆಸರೆ ಸಿಗಲಿದೆ; ಧನು ರಾಶಿಯಿಂದ ಮೀನ ರಾಶಿವರೆಗೆ ಸ್ತ್ರೀ ವಾರ ಭವಿಷ್ಯ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಗಳ ವಿವಾಹ ಮಾತುಕತೆ ನಡೆಸಲಿದ್ದೀರಿ, ಜಮೀನು ಕೊಳ್ಳುವ ಆಸೆಗೆ ಪತಿಯ ಆಸರೆ ಸಿಗಲಿದೆ; ಧನು ರಾಶಿಯಿಂದ ಮೀನ ರಾಶಿವರೆಗೆ ಸ್ತ್ರೀ ವಾರ ಭವಿಷ್ಯ

ಮಗಳ ವಿವಾಹ ಮಾತುಕತೆ ನಡೆಸಲಿದ್ದೀರಿ, ಜಮೀನು ಕೊಳ್ಳುವ ಆಸೆಗೆ ಪತಿಯ ಆಸರೆ ಸಿಗಲಿದೆ; ಧನು ರಾಶಿಯಿಂದ ಮೀನ ರಾಶಿವರೆಗೆ ಸ್ತ್ರೀ ವಾರ ಭವಿಷ್ಯ

ಸ್ತ್ರೀ ವಾರ ಭವಿಷ್ಯ: ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಈ ವಾರ ಯಾವ ಮಹಿಳಾ ರಾಶಿಯವರಿಗೆ ಏನು ಫಲ? 1 ವಾರ ಭವಿಷ್ಯದ ವಿವರ ಇಲ್ಲಿದೆ.

ಧನು ರಾಶಿಯಿಂದ ಮೀನ ರಾಶಿವರೆಗೆ ಸ್ತ್ರೀ ವಾರ ಭವಿಷ್ಯ
ಧನು ರಾಶಿಯಿಂದ ಮೀನ ರಾಶಿವರೆಗೆ ಸ್ತ್ರೀ ವಾರ ಭವಿಷ್ಯ

ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಕೆಲ ಮಹಿಳೆಯರು ಕೂಡ ತಮ್ಮ ಭವಿಷ್ಯವನ್ನು ನೋಡಿಕೊಳ್ಳುತ್ತಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. 2025ರ ಜೂನ್ 20 ರ ಶುಕ್ರವಾರದಿಂದ 26ರ ಗುರುವಾರದವರೆಗೆ ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರ ಸ್ತ್ರೀ ವಾರ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ.

ಧನಸ್ಸು ರಾಶಿ

ಜೀವನದಲ್ಲಿ ಗೆಲ್ಲುವ ಹಠ ನಿಮ್ಮಲ್ಲಿರುತ್ತದೆ. ಪತಿಯ ಜೊತೆಯಲ್ಲಿ ಉತ್ತಮ ಒಡನಾಟ ಇರುತ್ತದೆ. ಸ್ವಂತ ಅವಶ್ಯಕತೆ ಪೂರೈಸಲು ಹೆಚ್ಚಿನ ಹಣ ಬೇಕಾಗುತ್ತದೆ. ಬುದ್ಧಿವಂತರಾದರು ಸಮಯಕ್ಕೆ ತಕ್ಕಂತೆ ವರ್ತಿಸಲು ಸಾಧ್ಯವಾಗುವುದಿಲ್ಲ. ಕುಟುಂಬದ ವಿಚಾರದಲ್ಲಿ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಲು ಸಫಲರಾಗುವಿರಿ. ವಿದ್ಯಾರ್ಥಿಗಳು ಸಾಧನೆಗೆ ಎಲ್ಲರ ಪ್ರಶಂಸೆಗೆ ಪಾತ್ರರಾಗುತ್ತಾರೆ ಮಗಳ ವಿವಾಹದ ಬಗ್ಗೆ ಮಾತುಕತೆ ನಡೆಸುವಿರಿ. ವಂಶಕ್ಕೆ ಸೇರಿದ ಹಳೆಯ ಮನೆಯನ್ನು ನಿಮ್ಮದಾಗಿಸಿಕೊಳ್ಳುವಿರಿ. ಕೃಷಿ ಚಟುವಟಿಕೆಗಳಲ್ಲಿ ನೆಮ್ಮದಿ ಕಾಣುವಿರಿ. ಹಣದ ಕೊರತೆ ನೀಗಿಸಲು ಮತ್ತು ಜೀವನ ನಿರ್ವಹಣೆಗಾಗಿ ಉಪವೃತ್ತಿಯನ್ನು ಆರಂಭಿಸುವಿರಿ. ನೂತನ ವಾಹನ ಲಾಭವಿದೆ. ಮಕ್ಕಳ ಮನಸ್ಸಿಗೆ ನೊವುಂಟುಮಾಡುವ ಘಟನೆಯೊಂದು ನಡೆಯಲಿದೆ. ಅನಾವಶ್ಯಕವಾಗಿ ಕೋಪಗೊಳ್ಳುವಿರಿ. ಕೋಪದಲ್ಲಿಯೂ ತಪ್ಪು ನಿರ್ಧಾರ ಕೈಗೊಳ್ಳುವುದಿಲ್ಲ. ಹಿರಿಯ ಸೋದರ ಅಥವ ಸೋದರಿಯಿಂದ ಸಹಾಯ ದೊರೆಯುತ್ತದೆ.

ಪರಿಹಾರ: ಗೋಸೇವೆ ಮಾಡಿ.

ಅದೃಷ್ಟದ ಸಂಖ್ಯೆ : 10 ‌

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ನಸುಗೆಂಪು

ಮಕರ ರಾಶಿ

ಬಿಡುವಿಲ್ಲದ ಕೆಲಸ ಕಾರ್ಯಗಳಿದ್ದರೂ ಧೃತಿಗೆಡುವುದಿಲ್ಲ. ಸಮಾಜದಲ್ಲಿ ವಿಶೇಷ ವ್ಯಕ್ತಿಯಾಗಿ ಹೊರಹೊಮ್ಮುವಿರಿ. ಆತ್ಮಿಯರೊಬ್ಬರನ್ನು ಭೇಟಿ ಮಾಡುವ ಸಲುವಾಗಿ ತವರಿಗೆ ತೆರಳುವಿರಿ. ಕೊಂಚ ತಡವಾದರೂ ಬುದ್ಧಿವಂತಿಕೆಯಿಂದ ನಿಮ್ಮ ಕೆಲಸ ಕಾರ್ಯಗಳನ್ನು ಸಾಧಿಸುವಿರಿ. ಸಮಯಕ್ಕೆ ತಕ್ಕಂತೆ ವರ್ತಿಸುವ ಕಾರಣ ವಾದ ವಿವಾದಗಳು ದೂರ ಉಳಿಯುತ್ತವೆ. ಧಾರ್ಮಿಕ ವಿಧಿ ವಿಧಾನಗಳ ಬಗ್ಗೆ ಅಧ್ಯಯನ ನಡೆಸುವಿರಿ. ಬಿಡುವಿಲ್ಲದ ಕೆಲಸದಿಂದ ಬೇಸತ್ತು ಕುಟುಂಬದ ಮಕ್ಕಳ ಜೊತೆಯಲ್ಲಿ ಮನರಂಜನಾ ಸ್ಥಳಕ್ಕೆ ತೆರಳುವಿರಿ. ಜನಸೇವೆಯಲ್ಲಿ ಆಸಕ್ತಿ ಮೂಡುತ್ತದೆ. ಹಣಕಾಸಿನ ಕೊರತೆ ಕಾಡುವುದಿಲ್ಲ. ಉದ್ಯೋಗದಲ್ಲಿ ಉನ್ನತ ಸ್ಥಾನ ಲಭಿಸುತ್ತದೆ. ಕಾಣಿಕೆಯ ರೂಪದಲ್ಲಿ ದೊಡ್ಡಪ್ರಮಾಣದ ಹಣ ನಿಮ್ಮದಾಗುತ್ತದೆ. ಪತಿಯ ವ್ಯಾಪಾರದಲ್ಲಿ ಸಹಾಯ ಮಾಡುವಿರಿ. ಮಕ್ಕಳಿಗೆ ಉನ್ನತ ಸಂಸ್ಥೆಯಲ್ಲಿ ಉದ್ಯೋಗ ದೊರೆಯಲು ಪರೋಕ್ಷವಾಗಿ ಕಾರಣರಾಗುವಿರಿ. ಕುಟುಂಬದ ಒಗ್ಗಟ್ಟನ್ನು ಕಾಪಾಡುವಲ್ಲಿ ಯಶಸ್ಸನ್ನು ಗಳಿಸುವಿರಿ.

ಪರಿಹಾರ: ಮನೆಯ ದೇವರ ಗುಡಿಯಲ್ಲಿ ತುಪ್ಪದ ದೀಪವನ್ನುಬೆಳಗಿಸಿ.

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ನೀಲಿ ಮಿಶ್ರಿತ ಬಿಳಿ ಬಣ್ಣ

ಕುಂಭ ರಾಶಿ

ಒಮ್ಮೆ ತೆಗೆದುಕೊಂಡ ತೀರ್ಮಾನಗಳನ್ನು ಬದಲಾಯಿಸುವುದಿಲ್ಲ. ಸ್ವತಂತ್ರವಾಗಿ ನಿಮ್ಮ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ ಎಲ್ಲರ ಮೆಚ್ಚುಗೆ ಗಳಿಸುವಿರಿ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುವಂತೆ ಮಾಡಲು ಪ್ರಯತ್ನಿಸುವಿರಿ. ಸಾಧ್ಯವಾಗದೇ ಹೋದಲ್ಲಿ ಮಾನಸಿಕ ಒತ್ತಡದಿಂದ ಬಳಲುವಿರಿ. ಮಕ್ಕಳ ಆರೋಗ್ಯವನ್ನು ಕಾಪಾಡುವುದರಲ್ಲಿ ಹೆಚ್ಚಿನ ಕಾಳಜಿ ತೋರಿಸುವಿರಿ. ವಿದ್ಯಾರ್ಥಿಗಳು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಇತರರಿಗೆ ಮಾದರಿಯಾಗುತ್ತಾರೆ. ಬಿಡುವಿಲ್ಲದ ಕೆಲಸದಿಂದ ದೈಹಿಕವಾಗಿ ಸೊರಗುವಿರಿ. ನಿಮ್ಮ ಮಾತಿಗೆ ಗೌರವ ದೊರೆಯದೆ ಹೋದಲ್ಲಿ ಬೇಸರ ಹೊಂದುವಿರಿ. ಅಗತ್ಯಕ್ಕಿಂತ ಹೆಚ್ಚಿನ ಖರ್ಚು ವೆಚ್ಚಗಳು ಎದುರಾಗುತ್ತವೆ. ಹಿತೈಷಿಗಳ ಮಾರ್ಗದರ್ಶನದಿಂದ ಸುಖ ನೆಮ್ಮದಿಯ ಜೀವನ ನಡೆಸುವಿರಿ. ನಿಮ್ಮಲ್ಲಿರುವ ಪ್ರತಿಭೆಗೆ ತಕ್ಕ ಅವಕಾಶಗಳು ದೊರೆಯುವುದಿಲ್ಲ. ಆರೋಗ್ಯದಲ್ಲಿ ಏರಿಳಿತ ಸಾಮಾನ್ಯವಾಗಿರುತ್ತದೆ. ತಲೆಗೆ ಪೆಟ್ಟಾಗುವ ಸಂಭವವಿದೆ ಎಚ್ಚರಿಕೆ ಇರಲಿ.

ಪರಿಹಾರ: ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿ.

ಅದೃಷ್ಟದ ಸಂಖ್ಯೆ: 7

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಹಾಲಿನ ಬಣ್ಣ

ಮೀನ ರಾಶಿ

ಎಲ್ಲರ ಜೊತೆ ಪ್ರೀತಿ ವಿಶ್ವಾಸದಿಂದ ಬಾಳುವಿರಿ. ಹೊಸ ಮನೆ ಅಥವ ಜಮೀನು ಕೊಳ್ಳುವ ಆಸೆಗೆ ನಿಮ್ಮ ಪತಿಯ ಆಸರೆ ದೊರೆಯುತ್ತದೆ. ಬೇರೆಯವರ ಮನಸ್ಸನ್ನು ನೋಯಿಸದೇ ಮನದ ವಿಚಾರ ಎಲ್ಲರಿಗೂ ತಿಳಿಸುವಿರಿ. ಹಣಕಾಸಿನ ತೊಂದರೆ ಕಂಡುಬಾರದು. ಪ್ರತಿಯೊಂದು ವಿಚಾರದಲ್ಲಿಯೂ ಯಶಸ್ಸು ಗಳಿವಿಸುವಿರಿ. ಉದ್ಯೋಗದಲ್ಲಿ ಯಾವುದೇ ತೊಂದರೆ ಎದುರಾಗದು. ಸಂಗಾತಿಯ ಜೊತೆಯಲ್ಲಿ ಕಿರು ಪ್ರವಾಸ ಕೈಗೊಳ್ಳುವಿರಿ. ಕೃಷಿ ಭೂಮಿಯನ್ನು ಕೊಳ್ಳುವ ಸಾಧ್ಯತೆ ಇದೆ. ಕಷ್ಟದಲ್ಲಿದ್ದವರಿಗೆ ಹಣದ ಸಹಾಯ ಮಾಡುವಿರಿ. ರಾಜಕೀಯ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಗಳಿಸುವಿರಿ. ಹೊಸ ಯಂತ್ರೋಪಕರಣಗಳಿಗೆ ಹೆಚ್ಚಿನ ಹಣ ಖರ್ಚು ಮಾಡುವಿರಿ. ವಿದ್ಯಾರ್ಥಿಗಳು ವಿದೇಶದಲ್ಲಿ ನೆಲೆಸುತ್ತಾರೆ. ಉದ್ಯೋಗವನ್ನು ಬದಲಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಕುಟುಂಬದಲ್ಲಿ ಧಾರ್ಮಿಕ ಕಾರ್ಯವನ್ನು ನಡೆಸುವಿರಿ. ಹಿರಿಯ ಸೋದರನಿಗೆ ಹಣದ ಸಹಾಯ ಮಾಡುವಿರಿ.

ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ.

ಅದೃಷ್ಟದ ಸಂಖ್ಯೆ : 11

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಆಕಾಶನೀಲಿ ಬಣ್ಣ

ಬರಹ: ಹೆಚ್‌. ಸತೀಶ್‌, ಜ್ಯೋತಿಷಿ, ಬೆಂಗಳೂರು

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ಸ್ತ್ರೀ ವಾರ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.