ಬಹುದಿನದಿಂದ ಕಾಡುತ್ತಿದ್ದ ಆರೋಗ್ಯದ ಸಮಸ್ಯೆ ಬಗೆಹರಿಯುತ್ತದೆ, ಮನದಾಸೆಯೊಂದು ಈಡೇರಲಿದೆ; ಮೇಷದಿಂದ ಕಟಕದವರೆಗೆ ಸ್ತ್ರೀ ವಾರ ಭವಿಷ್ಯ
ಸ್ತ್ರೀ ವಾರ ಭವಿಷ್ಯ: ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಈ ವಾರ ಯಾವ ಮಹಿಳಾ ರಾಶಿಯವರಿಗೆ ಏನು ಫಲ? 1 ವಾರ ಭವಿಷ್ಯದ ವಿವರ ಇಲ್ಲಿದೆ.

ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಕೆಲ ಮಹಿಳೆಯರು ಕೂಡ ತಮ್ಮ ಭವಿಷ್ಯವನ್ನು ನೋಡಿಕೊಳ್ಳುತ್ತಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. 2025ರ ಜೂನ್ 26 ರ ಶುಕ್ರವಾರದಿಂದ 19ರ ಗುರುವಾರದವರೆಗೆ ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರ ಸ್ತ್ರೀ ವಾರ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ.
ಮೇಷ ರಾಶಿ
ವಿಶ್ರಾಂತಿ ಇಲ್ಲದೆ ಕುಟುಂಬದ ಒಳಿತಿಗಾಗಿ ದುಡಿಯುವಿರಿ. ಮನದಲ್ಲಿನ ಬೇಸರವನ್ನು ಬೇರೆಯವರಿಗೆ ತಿಳಿಸುವುದಿಲ್ಲ. ಪತಿ ಮತ್ತು ಕುಟುಂಬ ಸದಸ್ಯರೊಂದಿಗೆ ಕಿರು ಪ್ರವಾಸ ಕೈಗೊಳ್ಳುವಿರಿ. ಕುಟುಂಬದ ಖರ್ಚು ವೆಚ್ಚಗಳನ್ನು ಕಡಿತಗೊಳಿಸುವಿರಿ. ಕೆಲವೊಮ್ಮೆ ಸಹನೆ ಕಳೆದುಕೊಂಡು ಉಗ್ರವಾಗಿ ವರ್ತಿಸುತ್ತೀರಿ. ಉದ್ಯೋಗದಲ್ಲಿನ ಮಾರ್ಪಾಡುಗಳನ್ನು ನಿಮಗೆ ಅನುಕೂಲವಾಗುವಂತೆ ಬದಲಿಸುವಿರಿ. ಆರೋಗ್ಯದಲ್ಲಿ ಯಾವುದೇ ತೊಂದರೆ ಎದುರಾಗದು. ಮನೆಯನ್ನು ಸುಂದರವಾಗಿ ಅಲಂಕರಿಸುವಿರಿ. ಮಕ್ಕಳ ಬಗ್ಗೆ ಅನಾವಶ್ಯಕ ಆಲೋಚನೆ ಮಾಡುವಿರಿ. ವಯೋವೃದ್ದರನ್ನು ಬಹುದಿನದಿಂದ ಕಾಡುತ್ತಿದ್ದ ಆರೋಗ್ಯದ ಸಮಸ್ಯೆಯು ಬಗೆಹರಿಯುತ್ತದೆ. ಕೌಟುಂಬಿಕ ವಿವಾದವನ್ನು ಮಾತುಕತೆಯಿಂದ ಸರಿಪಡಿಸುವಿರಿ. ವಿವಾಹದ ವಿಚಾರದಲ್ಲಿ ಗಲಿಬಿಲಿಗೆ ಒಳಗಾಗುವಿರಿ. ಸಂಗಾತಿಯ ಜೊತೆಯಲ್ಲಿ ಹಣದ ವಿಚಾರವಾಗಿ ಮನಸ್ತಾಪ ಉಂಟಾಗಲಿದೆ. ಪ್ರಾಣಿ ಪಕ್ಷಿಗಳನ್ನು ಅನುಕಂಪದಿಂದ ಕಾಣುವಿರಿ. ನಿಮ್ಮ ಮಾತನ್ನು ಒಪ್ಪದೇ ಹೋದಾಗ ಕೋಪದಿಂದ ವರ್ತಿಸುವಿರಿ.
ಪರಿಹಾರ: ಕಾಲಿನಲ್ಲಿ ಕಪ್ಪು ದಾರವನ್ನು ಧರಿಸುವುದರಿಂದ ಶುಭವಿರುತ್ತದೆ.
ಅದೃಷ್ಟದ ಸಂಖ್ಯೆ: 1
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ: ಕೆಂಪು ಬಣ್ಣ
ವೃಷಭ ರಾಶಿ
ಒಳ್ಳೆಯ ವಿಚಾರಗಳಿಗೆ ಮೊದಲ ಆದ್ಯತೆ ನೀಡುವಿರಿ. ಕೆಟ್ಟ ಮನಸ್ಸಿನವರನ್ನು ಸಹ ಬದಲಾಯಿಸಬಲ್ಲಿರಿ. ನಿಮ್ಮ ನಿರ್ಧಾರಗಳೆಲ್ಲ ಸರಿಯಾದದ್ದು ಎಂಬ ಭಾವನೆ ಇರುತ್ತದೆ. ಯಶಸ್ಸನ್ನೇ ಗುರಿ ಮಾಡಿಕೊಂಡು ಜೀವನದಲ್ಲಿ ಮುಂದುವರೆಯುವಿರಿ. ಬೇರೆಯವರ ಮಾತನ್ನು ಆಲಿಸುವುದಿಲ್ಲ. ಸುಲಭದ ಹಾದಿಯಲ್ಲಿ ನಿಮ್ಮ ಕೆಲಸವನ್ನು ಪೂರ್ಣಗೊಳಿಸುವಿರಿ. ಕುಟುಂಬದ ಜವಾಬ್ದಾರಿಯನ್ನುಒಪ್ಪಿಕೊಳ್ಳುವುದಿಲ್ಲ. ಸಣ್ಣ ಪುಟ್ಟ ವ್ಯಾಪಾರವನ್ನು ಆಯ್ದುಕೊಂಡು ಅದನ್ನು ಅಭಿವೃದ್ಧಿಪಡಿಸುತ್ತೀರಿ. ಅಗತ್ಯವಿದ್ದಲ್ಲಿ ಆತ್ಮೀಯರಿಂದ ಹಣದ ಸಹಾಯ ಪಡೆಯುವಿರಿ. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ಉಂಟಾಗುತ್ತದೆ. ಅಪರೂಪದ ವ್ಯಕ್ತಿಯೊಬ್ಬರ ಆಗಮನ ಹಬ್ಬದ ವಾತಾವರಣವನ್ನು ಉಂಟು ಮಾಡುತ್ತದೆ. ಸ್ವಂತ ಬಳಕೆಗಾಗಿ ವಾಹನವನ್ನು ಕೊಳ್ಳುವಿರಿ. ಹಣ ಉಳಿಸುವ ಬಗ್ಗೆ ಯೋಚಿಸುವುದಿಲ್ಲ. ಬೆಳ್ಳಿ ಮತ್ತು ಚಿನ್ನದ ಆಭರಣಗಳನ್ನು ಕೊಳ್ಳುವಿರಿ. ತಾಯಿಯ ಬಗ್ಗೆ ಹೆಚ್ಚಿನ ಪ್ರೀತಿ ತೋರುವಿರಿ
ಪರಿಹಾರ: ಮಕ್ಕಳಿಗೆ ಗೋಧಿ ಮತ್ತು ಬೆಲ್ಲದಿಂದ ಮಾಡಿದ ಸಿಹಿ ತಿಂಡಿಯನ್ನು ನೀಡಿ.
ಅದೃಷ್ಟದ ಸಂಖ್ಯೆ: 5
ಅದೃಷ್ಟದ ದಿಕ್ಕು: ದಕ್ಷಿಣ
ಅದೃಷ್ಟದ ಬಣ್ಣ: ನೇರಳೆ ಬಣ್ಣ
ಮಿಥುನ ರಾಶಿ
ನಿಮ್ಮ ನೆಚ್ಚಿನ ಕೆಲಸ ಕಾರ್ಯಗಳನ್ನು ಆಯ್ದುಕೊಳ್ಳುವಿರಿ. ಮನರಂಜನೆಗೆ ಸಮಾನ ಆದ್ಯತೆ ನೀಡುತ್ತೀರಿ. ಮನದ ನೋವನ್ನು ನುಂಗಿ ಎಲ್ಲರೊಂದಿಗೆ ಸಂತೋಷ ಹಂಚಿಕೊಳ್ಳುತ್ತೀರಿ. ಮಕ್ಕಳ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಉಂಟಾಗಲಿವೆ. ಅನಿರೀಕ್ಷಿತ ಧನ ಲಾಭವಿರುತ್ತದೆ. ಬಿಡುವಿಲ್ಲದ ಕೆಲಸ ಕಾರ್ಯಗಳ ಮಧ್ಯೆ ಸಂಗಾತಿಯ ಬಗ್ಗೆಯೂ ಗಮನ ನೀಡುವಿರಿ. ನಿಮ್ಮ ಸಲಹೆಗಳು ಮಕ್ಕಳಿಗೆ ಅತಿ ಮುಖ್ಯವಾಗುತ್ತವೆ. ಸ್ನೇಹ ಪ್ರೀತಿಯಿಂದ ಜನರ ಮನಸ್ಸನ್ನು ಗೆಲ್ಲುವಿರಿ. ಸಮಾಜದ ಗಣ್ಯ ವ್ಯಕ್ತಿಯಾಗಿ ಬಾಳುವಿರಿ. ಅತಿಯಾದ ಆದಾಯದ ಆಸೆ ನಿಮ್ಮಲ್ಲಿರುತ್ತದೆ. ಆದ್ದರಿಂದ ಪಾಲುಗಾರಿಕೆಯ ವ್ಯಾಪಾರ ಆರಂಭಿಸುವಿರಿ. ವ್ಯಾಪಾರ ವ್ಯವಹಾರದಲ್ಲಿ ಮಧ್ಯಮ ಗತಿಯ ಲಾಭ ದೊರೆಯುತ್ತದೆ. ಆರೋಗ್ಯದಲ್ಲಿ ಕೊಂಚ ಹಿನ್ನೆಡೆ ಉಂಟಾಗುತ್ತದೆ. ಮನೆಯನ್ನು ನವೀಕರಣಗೊಳಿಸಲು ಪ್ರಯತ್ನಿಸುವಿರಿ. ಕುಟುಂಬದ ಹಿರಿಯರ ಮಾತಿಗೆ ಸಮ್ಮತಿ ಸೂಚಿಸುವುದಿಲ್ಲ. ಕುಟುಂಬದಲ್ಲಿ ಕ್ರಮೇಣವಾಗಿ ಶಾಂತಿ ನೆಮ್ಮದಿ ನೆಲೆಸುತ್ತದೆ. ಸಂತಾನ ಲಾಭವಿದೆ.
ಪರಿಹಾರ: ಎಡಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 9
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ: ಗುಲಾಬಿ ಬಣ್ಣ
ಕಟಕ ರಾಶಿ
ಯಾವುದೇ ಅಳುಕಿಲ್ಲದೆ ನಿಮ್ಮ ಕರ್ತವ್ಯವನ್ನು ಪಾಲಿಸುವಿರಿ. ನಿಮ್ಮ ಜೀವನದಲ್ಲಿ ಮಕ್ಕಳ ಕಾಳಜಿಯೇ ಮುಖ್ಯವಾಗುತ್ತದೆ. ಕುಟುಂಬದಲ್ಲಿ ನಿರೀಕ್ಷಿಸಿದ ಮಟ್ಟದಲ್ಲಿ ಶುಭಫಲಗಳು ದೊರೆಯಲಿದೆ. ಯಾತ್ರಾ ಸ್ಥಳಕ್ಕೆ ಪತಿ ಮತ್ತು ಮಕ್ಕಳ ಜೊತೆಯಲ್ಲಿ ಭೇಟಿ ನೀಡುವಿರಿ. ಪತಿಯ ಹಣದ ಕೊರತೆಯನ್ನು ನೀಗಿಸಲು ಉದ್ಯೋಗವನ್ನು ಅವಲಂಭಿಸುವಿರಿ. ಬಿಡುವಿನ ವೇಳೆಯಲ್ಲಿ ಗುಡಿ ಕೈಗಾರಿಕೆಯನ್ನು ಆರಂಭಿಸುವಿರಿ. ಬಹುದಿನದ ನಿಮ್ಮ ಮನದಾಸೆಯೊಂದು ಈಡೇರಲಿದೆ. ಆರೋಗ್ಯ ಸಮಸ್ಯೆಯು ಬಗೆ ಹರಿಯುತ್ತದೆ. ಸಾಂಪ್ರದಾಯಿಕ ಕಲೆ ಅಥವಾ ವಿದ್ಯೆಗಳಲ್ಲಿ ಆಸಕ್ತಿ ಮೂಡಲಿದೆ. ನಿಮಗೆ ಪೂರ್ಣ ಪರಿಣತಿ ಇರುವ ಕೆಲಸವನ್ನು ಆರಂಭಿಸುವಿರಿ. ಒಳ್ಳೆಯ ಕೆಲಸ ಕಾರ್ಯಗಳಿಗೆ ಹಣವನ್ನು ಖರ್ಚು ಮಾಡುವಿರಿ. ನಿಮ್ಮ ಪ್ರಯತ್ನಗಳು ವಿಫಲವಾದಾಗ ಬೇರೆಯವರನ್ನು ಟೀಕಿಸುವಿರಿ. ತಾಯಿಯ ಅಥವಾ ಅತ್ತೆಯಿಂದ ಒಡವೆ ವಸ್ತ್ರಗಳು ನಿಮಗೆ ದೊರೆಯುತ್ತವೆ. ಮಕ್ಕಳಿಂದ ಹಣದ ಸಹಾಯ ದೊರೆಯುತ್ತದೆ.
ಪರಿಹಾರ: ಸಾಧು ಸಂತರ ಆಶೀರ್ವಾದವನ್ನು ಪಡೆದು ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 1
ಅದೃಷ್ಟದ ದಿಕ್ಕು : ಪಶ್ಚಿಮ
ಅದೃಷ್ಟದ ಬಣ್ಣ: ಬಿಳಿ ಬಣ್ಣ
ಬರಹ: ಎಚ್. ಸತೀಶ್, ಜ್ಯೋತಿಷಿ, ಬೆಂಗಳೂರು
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ಸ್ತ್ರೀ ವಾರ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).