ಸ್ತ್ರೀ ವಾರ ಭವಿಷ್ಯ: ಸಿಂಹ ರಾಶಿಯವರಿಗೆ ಹಣದ ಕೊರತೆ ಇರುತ್ತೆ, ಕನ್ಯಾ ರಾಶಿಯ ಅವಿವಾಹಿತರಿಗೆ ಮದುವೆಯಾಗಲಿದೆ
ಸ್ತ್ರೀ ವಾರ ಭವಿಷ್ಯ: ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಈ ವಾರ ಯಾವ ಮಹಿಳಾ ರಾಶಿಯವರಿಗೆ ಏನು ಫಲ? 1 ವಾರ ಭವಿಷ್ಯದ ವಿವರ ಇಲ್ಲಿದೆ.

Women Weekly Horoscope: ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಕೆಲ ಮಹಿಳೆಯರು ಕೂಡ ತಮ್ಮ ಭವಿಷ್ಯವನ್ನು ನೋಡಿಕೊಳ್ಳುತ್ತಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. 2025ರ ಮಾರ್ಚ್ 14 ರ ಶುಕ್ರವಾರದಿಂದ 20ರ ಗುರುವಾರದವರೆಗೆ ಸಿಂಹ, ಕನ್ಯಾ, ತುಲಾ ಹಾಗೂ ವೃಶ್ಚಿಕ ರಾಶಿಯವರ ಸ್ತ್ರೀ ವಾರ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ.
ಸಿಂಹ ರಾಶಿ
ಹಣದ ಕೊರತೆ ಇರುತ್ತದೆ. ಆದರೆ ಆದಾಯವೂ ಉತ್ತಮವಾಗಿರುತ್ತದೆ. ತಂದೆಯವರ ಅಥವಾ ಕುಟುಂಬದ ಹಿರಿಯರ ಆರೋಗ್ಯದಲ್ಲಿ ತೊಂದರೆ ಇರುತ್ತದೆ. ಬುದ್ಧಿವಂತಿಕೆಯಿಂದ ದಿನನಿತ್ಯದ ಸಮಸ್ಯೆಗಳನ್ನು ಬಗೆಹರಿಸುವಿರಿ. ಮಕ್ಕಳ ಜೀವನದಲ್ಲಿ ಶುಭದಾಯಕ ಘಟನೆಗಳು ನಡೆಯಲಿವೆ. ಉದ್ಯೋಗದಲ್ಲಿ ಏಕಾಂಗಿಯಾಗಿ ಕರ್ತವ್ಯವನ್ನು ನಿರ್ವಹಿಸುವಿರಿ. ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡುವಿರಿ. ನೇರವಾದ ನಡೆ ನುಡಿಯಿಂದ ಕೆಲಸ ಕಾರ್ಯದಲ್ಲಿ ಯಶಸ್ಸು ಗಳಿಸುವಿರಿ. ಕುಟುಂಬದಲ್ಲಿ ಎಲ್ಲರೊಡದೆ ಪ್ರೀತಿಯಿಂದ ಬಾಳುವಿರಿ. ನಿಮ್ಮನ್ನು ನೋಡಿ ಅಸೂಯೆ ಪಡುವವರು ಹೆಚ್ಚುತ್ತಾರೆ. ಸದಾಕಾಲ ಆತ್ಮೀಯರ ಜೊತೆಯಲ್ಲಿ ಸಮಯ ಕಳಿಯುವಿರಿ. ಬೇರೆಯವರನ್ನು ಸರಿಯಾದ ಮಾರ್ಗದಲ್ಲಿ ನಡೆಯಲು ಸಹಾಯ ನೀಡುವಿರಿ. ದಾಂಪತ್ಯ ಜೀವನದಲ್ಲಿ ಸೌಹಾರ್ದಯುತ ವಾತಾವರಣ ಕಂಡುಬರುತ್ತದೆ. ಜೀವನದಲ್ಲಿ ಕೆಲವೊಂದು ಬದಲಾವಣೆಗಳು ಕಂಡುಬರುತ್ತವೆ.
ಪರಿಹಾರ: ಸೋದರರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ: 6
ಅದೃಷ್ಟದ ದಿಕ್ಕು: ಉತ್ತರ
ಅದೃಷ್ಟದ ಬಣ್ಣ: ಬೂದು ಬಣ್ಣ
ಕನ್ಯಾ ರಾಶಿ
ವಿವಾಹ ಕಾರ್ಯವು ನೆರವೇರುತ್ತದೆ. ಕುಟುಂಬದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗುತ್ತದೆ. ಯುವಕ ಯುವತಿಯರು ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳುತ್ತಾರೆ. ಕಲುಷಿತ ಆಹಾರ ಸೇವನೆಯಿಂದ ಅನಾರೋಗ್ಯ ಉಂಟಾಗುತ್ತದೆ. ಕುಟುಂಬದ ಹಿರಿಯರಿಗೆ ಉತ್ತಮ ಆದಾಯ ಇರುತ್ತದೆ. ಉದ್ಯೋಗದಲ್ಲಿ ಆಶ್ಚರ್ಯಕರ ರೀತಿಯ ಬೆಳವಣಿಗೆಗಳು ಕಂಡುಬರಲಿವೆ. ಹಣಕಾಸಿನ ವ್ಯವಹಾರದಲ್ಲಿ ನಿರೀಕ್ಷಿಸಿದ ಆದಾಯ ದೊರೆಯಲಿದೆ. ವಂಶಾನುಗತವಾಗಿ ಬಂದ ವೃತ್ತಿಯನ್ನು ಆರಂಭಿಸುವಿರಿ. ಕಣ್ಣಿನ ತೊಂದರೆ ಇರುತ್ತದೆ. ಹಣದ ಬಗ್ಗೆ ಹೆಚ್ಚಿನ ಆಸೆ ಇರುವುದಿಲ್ಲ. ಸಮಾಜದಲ್ಲಿ ಉನ್ನತ ಕೀರ್ತಿ ಲಭಿಸುತ್ತದೆ. ಭೂ ವಿವಾದ ಒಂದರಲ್ಲಿ ಯಶಸ್ಸನ್ನು ಗಳಿಸುವಿರಿ. ಕುಟುಂಬಕ್ಕೆ ಸಂಬಂಧಿಸಿದ ಶುಭ ಕಾರ್ಯಕ್ರಮಗಳಲ್ಲಿ ನಿಮಗೆ ಹೆಚ್ಚಿನ ಜವಾಬ್ದಾರಿ ದೊರೆಯುತ್ತದೆ.
ಪರಿಹಾರ: ಮಕ್ಕಳಿಗೆ ಗೋಧಿಯಿಂದ ತಯಾರಿಸಿದ ಸಿಹಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ: 9
ಅದೃಷ್ಟದ ದಿಕ್ಕು: ದಕ್ಷಿಣ
ಅದೃಷ್ಟದ ಬಣ್ಣ: ಕಂದು ಬಣ್ಣ
ತುಲಾ ರಾಶಿ
ಬಿಡುವಿಲ್ಲದೆ ಒಪ್ಪಿಕೊಂಡ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ. ಅವಶ್ಯಕತೆ ಇರುವಷ್ಟು ಹಣವನ್ನು ಸಂಪಾದಿಸಬಹುದು. ಉತ್ತಮ ಹೆಸರು ಗಳಿಸುವಿರಿ. ಜನ ಮೆಚ್ಚುವಂತಹ ಕೆಲಸ ಕಾರ್ಯಗಳನ್ನು ಆಯೋಜಿಸುವಿರಿ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ತಪ್ಪುಗಳನ್ನು ಸರಿಪಡಿಸುವಿರಿ. ಇದರಿಂದ ವಿವಾದಕ್ಕೆ ಸಿಲುಕುವ ಸಾಧ್ಯತೆಗಳಿವೆ. ಶಿಥಿಲಗೊಂಡ ಮನೆತನದ ಮನೆಯನ್ನು ನವೀಕರಣಗೊಳಿಸುವಿರಿ. ಹೊಸದಾಗಿ ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಎದುರಾಗುವ ಅಡೆತಡೆಗಳನ್ನು ಸರಿಪಡಿಸಬಲ್ಲಿರಿ. ಸಂಚಾರ ಪ್ರಿಯರು. ಬೇಗನೆ ಕೋಪ ಬರುತ್ತದೆ. ಹೊಸ ವಾಹನವನ್ನು ಕೊಳ್ಳುವ ಸಾಧ್ಯತೆಗಳಿವೆ. ಖರ್ಚ್ಚು ವೆಚ್ಚಗಳು ನಿಯಂತ್ರಣಕ್ಕೆ ಸಿಲುಕುವುದಿಲ್ಲ. ಕುಟುಂಬದ ಒಳಗೂ ಹೊರಗೂ ನಿಮ್ಮ ತೀರ್ಮಾನಗಳನ್ನು ಎಲ್ಲರೂ ಗೌರವಿಸುತ್ತಾರೆ.
ಪರಿಹಾರ: ಇರುವೆಗಳಿಗೆ ಆಹಾರ ಧಾನ್ಯವನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ: 1
ಅದೃಷ್ಟದ ದಿಕ್ಕು: ಪಶ್ಚಿಮ
ಅದೃಷ್ಟದ ಬಣ್ಣ: ಕಪ್ಪು ಬಣ್ಣ
ವೃಶ್ಚಿಕ ರಾಶಿ
ತಡವಾದರೂ ನಿರೀಕ್ಷಿಸಿದ ಮಟ್ಟದ ಯಶಸ್ಸು ನಿಮ್ಮದಾಗುತ್ತದೆ. ಸಣ್ಣ ಪುಟ್ಟ ವಿಚಾರಗಳಿಗೂ ಕೋಪದಿಂದ ಪ್ರತಿಕ್ರಿಯಿಸುವಿರಿ. ಹಣಕಾಸಿನ ತೊಂದರೆ ಕಂಡುಬರುವುದಿಲ್ಲ. ಸಣ್ಣಪುಟ್ಟ ಸಮಸ್ಯೆಗಳು ಆರೋಗ್ಯದಲ್ಲಿ ಇರುತ್ತವೆ. ಅನಾವಶ್ಯಕವಾದ ಖರ್ಚು ವೆಚ್ಚಗಳಿರುತ್ತವೆ. ಕುಟುಂಬದ ಹಣಕಾಸಿನ ಜವಾಬ್ದಾರಿ ನಿಮ್ಮದಾಗುತ್ತದೆ. ಆತಂಕದ ಪರಿಸ್ಥಿತಿಯಲ್ಲಿಯೂ ಬುದ್ಧಿವಂತಿಕೆಯ ತೀರ್ಮಾನಗಳನ್ನು ತೆಗೆದುಕೊಳ್ಳುವಿರಿ. ಪ್ರೀತಿಯ ಸಾಕುಪ್ರಾಣಿ ಅನಾರೋಗ್ಯಕ್ಕೆ ತುತ್ತಾಗುತ್ತದೆ. ಮಾತಿನ ಬಲ ನಿಮಗೆ ಹೆಚ್ಚಿನ ರಕ್ಷಣೆ ನೀಡುತ್ತದೆ. ಕೌಟುಂಬಿಕ ಜೀವನದಲ್ಲಿ ಸ್ನೇಹಮಯ ವಾತಾವರಣವಿರುತ್ತದೆ. ದೇವತಾ ಕಾರ್ಯಗಳಲ್ಲಿ ಭಾಗವಹಿಸುವಿರಿ. ನೀರಿರುವ ಪ್ರದೇಶಗಳಲ್ಲಿ ಎಚ್ಚರಿಕೆ ಇರಲಿ. ಯಾತ್ರಾ ಸ್ಥಳಕ್ಕೆ ಭೇಟಿ ನೀಡುವಿರಿ. ಸಂಗೀತ ನಾಟ್ಯವನ್ನು ಬಲ್ಲವರಿಗೆ ಉನ್ನತ ಅವಕಾಶಗಳು ದೊರೆಯಲಿದೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ.
ಪರಿಹಾರ: ತಾಯಿಯವರಿಗೆ ಸಿಹಿತಿಂಡಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ: 5
ಅದೃಷ್ಟದ ದಿಕ್ಕು: ಉತ್ತರ
ಅದೃಷ್ಟದ ಬಣ್ಣ: ತಿಳಿಹಸಿರು ಬಣ್ಣ
ಬರಹ: ಹೆಚ್. ಸತೀಶ್, ಜ್ಯೋತಿಷಿ, ಬೆಂಗಳೂರು
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ಸ್ತ್ರೀ ವಾರ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ವಿಭಾಗ