ಸ್ತ್ರೀ ವಾರ ಭವಿಷ್ಯ: ಕುಂಭ ರಾಶಿಯರಿಗೆ ಸ್ವಂತ ಮನೆ ಕೊಳ್ಳುವ ಆಸೆ ಈಡೇರುತ್ತೆ, ಮೀನ ರಾಶಿಯವರು ಭೂ ವಿವಾದ ಬಗೆಹರಿಸುತ್ತಾರೆ
ಸ್ತ್ರೀ ವಾರ ಭವಿಷ್ಯ: ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಈ ವಾರ ಯಾವ ಮಹಿಳಾ ರಾಶಿಯವರಿಗೆ ಏನು ಫಲ? 1 ವಾರ ಭವಿಷ್ಯದ ವಿವರ ಇಲ್ಲಿದೆ.

Women Weekly Horoscope: ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಕೆಲ ಮಹಿಳೆಯರು ಕೂಡ ತಮ್ಮ ಭವಿಷ್ಯವನ್ನು ನೋಡಿಕೊಳ್ಳುತ್ತಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. 2025ರ ಮಾರ್ಚ್ 28 ರ ಶುಕ್ರವಾರದಿಂದ ಏಪ್ರಿಲ್ 3ರ ಗುರುವಾರದವರೆಗೆ ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರ ಸ್ತ್ರೀ ವಾರ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ.
ಧನು ರಾಶಿ
ಗೆಲ್ಲಲೇ ಬೇಕೆಂಬ ಹಠ ನಿಮ್ಮಲ್ಲಿ ಇರುತ್ತದೆ. ಇದರಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ಸ್ವಂತ ಉದ್ಯಮ ಆರಂಭಿಸುವಿರಿ. ದುಡುಕದೆ ಆತ್ಮವಿಶ್ವಾಸದಿಂದ ಪ್ರತಿ ಕೆಲಸದಲ್ಲಿಯೂ ಯಶಸ್ಸನ್ನು ಗಳಿಸುವಿರಿ. ಮನೆತನಕ್ಕೆ ಸೇರಿದ ವೃತ್ತಿಯನ್ನು ಮಾಡುವಿರಿ. ದೃಢವಾದ ನಿರ್ಧಾರದ ಕಾರಣ ಉತ್ತಮ ಆದಾಯ ಗಳಿಸುವಿರಿ. ಮನೆಯನ್ನು ಕೊಳ್ಳಲು ತಂದೆಯವರಿಗೆಗೆ ಹಣದ ಸಹಾಯ ಮಾಡುವಿರಿ. ಮನದಲ್ಲಿ ವಿಶೇಷವಾದ ಆಸೆ ಇರುವುದಿಲ್ಲ. ಅಲ್ಪ ತೃಪ್ತಿ ಇರುತ್ತದೆ. ದಾಂಪತ್ಯದಲ್ಲಿ ಶುಭ ಸುದ್ಧಿಯೊಂದು ಬರಲಿದೆ. ಪತಿಗೆ ಆರೋಗ್ಯದಲ್ಲಿನ ಸ್ಥಿರತೆಗೆ ಸಹಾಯ ಮಾಡುವಿರಿ. ಕೋಪವು ಬೇಗನೆ ಬರುತ್ತದೆ. ಆದರೆ ಶಾಂತಿ ಸಂಯಮದಿಂದ ವರ್ತಿಸುವಿರಿ. ಮಕ್ಕಳ ಬಾಳಿನಲ್ಲಿ ಸಂತಸ ಮನೆ ಮಾಡಲು ಕಾರಣರಾಗುವಿರಿ.
ಪರಿಹಾರ: ಮನೆಯಲ್ಲಿರುವ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳಿಗೆ ಹಾಲನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ: 7
ಅದೃಷ್ಟದ ದಿಕ್ಕು: ಪೂರ್ವ
ಅದೃಷ್ಟದ ಬಣ್ಣ: ಹೊಗೆಯ ಬಣ್ಣ
ಮಕರ ರಾಶಿ
ಕಷ್ಟ ನಷ್ಟವನ್ನು ಪರಿಗಣಿಸದೆ ಹೊಸ ಕೆಲಸ ಕಾರ್ಯವನ್ನು ಅರಂಭಿಸುವಿರಿ. ಅವಿಶ್ರಾಂತ ದುಡಿಮೆಯ ನಡುವೆ ವಿಶ್ರಾಂತಿಯನ್ನೂ ಮರೆಯುವಿರಿ. ವಿದ್ಯಾರ್ಥಿಗಳ ಕಲಿಕೆಯಲ್ಲಿ ನಿಮ್ಮ ಪಾತ್ರ ಮಹತ್ತರವಾಗಿರುತ್ತದೆ. ಉದ್ಯೋಗದಲ್ಲಿ ಉನ್ನತ ಮಟ್ಟ ತಲುಪುವಿರಿ. ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನ ಮಾನ ದೊರೆಯಲಿದೆ. ಹವಾಸ್ಯಾವಾಗಿದ್ದ ಚಟುವಟಿಕೆಯೊಂದು ನಿಮ್ಮ ಉದ್ಯೋಗವಾಗಲಿದೆ. ಗಾಯನ ಮತ್ತು ಬರವಣಿಗೆಯಿಂದ ಲಾಭವಿದೆ. ಜನರಿಗೆ ಉಪಯೋಗವಾಗುವ ಕಾರ್ಯಕ್ರಮಗಳನ್ನು ಆರಂಭಿಸುವಿರಿ. ರಾಜಕೀಯದಲ್ಲಿ ಆಸಕ್ತಿ ಮೂಡುತ್ತದೆ. ಹೊಸ ಆಭರಣಗಳನ್ನು ಕೊಳ್ಳುವ ಆಸೆ ಪೂರ್ಣಗೊಳ್ಳಲಿದೆ. ಪತಿಯ ಜೊತೆಯಲ್ಲಿ ಹಣಕಾಸಿನ ವಿಚಾರದಲ್ಲಿ ಮನಸ್ತಾಪ ಇರುತ್ತದೆ. ಸಂತಾನಲಾಭವಿದೆ. ತಂದೆ ತಾಯಿಯ ಆಗಮನ ಸಂತಸ ಉಂಟುಮಾಡುತ್ತದೆ. ಆರೋಗ್ಯದಲ್ಲಿ ಸ್ಥಿರತೆ ಇರುವುದಿಲ್ಲ.
ಪರಿಹಾರ: ಮಕ್ಕಳಿಗೆ ಗೋಧಿ ಮತ್ತು ಬೆಲ್ಲದಿಂದ ಮಾಡಿದ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ: 11
ಅದೃಷ್ಟದ ದಿಕ್ಕು: ದಕ್ಷಿಣ
ಅದೃಷ್ಟದ ಬಣ್ಣ: ಆಕಾಶನೀಲಿ ಬಣ್ಣ
ಕುಂಭ ರಾಶಿ
ಸದಾ ಏಕಾಂಗಿಯಾಗಿ ಇರುವಿರಿ. ಯಾರೊಂದಿಗೂ ಮನಬಿಚ್ಚಿ ಮಾತನಾಡುವುದಿಲ್ಲ. ದಿನ ನಿತ್ಯದ ಕಷ್ಟ ನಷ್ಟಗಳಿಗೆ ಹೆದರುವುದಿಲ್ಲ. ಹಣಕಾಸಿನ ಸಂಸ್ಥೆಯ ಒಡೆತನ ನಿಮಗೆ ದೊರೆಯುತ್ತದೆ. ಉದ್ಯೋಗದಲ್ಲಿ ಅನಾವಶ್ಯಕ ವಾದ ವಿವಾದ ಇರುತ್ತದೆ. ಸಮಾಜದ ಮುಖ್ಯ ಸ್ಥಾನ ನಿಮ್ಮದಾಗಲಿದೆ. ಕುಟುಂಬದ ಮುಖ್ಯ ವ್ಯಕ್ತಿಯಾಗಿ ಬಾಳುವಿರಿ. ಕುಟುಂಬದ ಒಳಿತಿಗಾಗಿ ಯಾವುದೇ ತ್ಯಾಗ ಮಾಡಬಲ್ಲಿರಿ. ನಿಮ್ಮ ಮಕ್ಕಳಿಗೆ ವಿದೇಶದಲ್ಲಿ ಉದ್ಯೋಗ ದೊರೆಯುತ್ತದೆ. ನೆರೆ ಹೊರೆಯವರ ಮೆಚ್ಚುಗೆ ಗಳಿಸುವಿರಿ. ಹಣದ ವಿಚಾರವಾಗಿ ಸುಲಭವಾಗಿ ವಂಚಿತರಾಗುವಿರಿ. ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರಿ. ಪತಿಯ ಮನಸ್ಸಿನ ಭಾವನೆಗಳಿಗೆ ಗೌರವ ನೀಡುವಿರಿ. ಸ್ವಂತ ಮನೆ ಕೊಳ್ಳುವ ಆಸೆ ಈಡೇರಲಿದೆ.
ಪರಿಹಾರ: ಎಡಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ: 4
ಅದೃಷ್ಟದ ದಿಕ್ಕು: ಪಶ್ಚಿಮ
ಅದೃಷ್ಟದ ಬಣ್ಣ: ರಕ್ತದ ಬಣ್ಣ
ಮೀನ ರಾಶಿ
ನಿಮ್ಮ ಮಾತಿಗೆ ಪತಿಯ ಒಪ್ಪಿಗೆ ಇರುತ್ತದೆ. ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ನಿಮಗೆ ವಿಶೇಷ ಗೌರವ ಇರುತ್ತದೆ. ನಿಮ್ಮ ಮನಸ್ಸು ಪರಿಶುದ್ದವಾಗಿರುತ್ತದೆ. ಉದ್ಯೋಗದ ವಿಚಾರದಲ್ಲಿ ದುಡುಕಿನ ನಿರ್ಧಾರ ತೆಗೆದುಕೊಳ್ಳುವಿರಿ. ನಯವಾದ ಮಾತಿನಿಂದ ತವರಿನ ಭೂ ವಿವಾದವನ್ನು ಪರಿಹರಿಸುವಿರಿ. ಸಾಕುಪ್ರಾಣಿಗಳ ಮೇಲೆ ಕನಿಕರವಿರುತ್ತದೆ. ಹಣಕಾಸಿನ ವಿಚಾರದಲ್ಲಿ ಬೇರೆಯವರನ್ನು ಸುಲಭವಾಗಿ ನಂಬುವುದಿಲ್ಲ. ಅವಶ್ಯಕತೆ ಇರುವವರಿಗೆ ಹಣದ ಸಹಾಯ ಮಾಡುವಿರಿ. ತೆಗೆದುಕೊಂಡ ತೀರ್ಮಾನವನ್ನು ಬದಲಾಯಿಸುವ ಕಾರಣ ಅವಕಾಶವೊಂದರಿಂದ ವಂಚಿತರಾಗುವಿರಿ. ಪತಿ ಮತ್ತು ಮಕ್ಕಳ ಜೊತೆಯಲ್ಲಿ ದೀರ್ಘಕಾಲದ ಪ್ರವಾಸ ಕೈಗೊಳ್ಳುವಿರಿ. ಕಣ್ಣಿನ ತೊಂದರೆಯಿಂದ ಬಳಲುವಿರಿ. ಪಾಲುಗಾಕೆಯ ವ್ಯಾಪಾರದಲ್ಲಿ ನಿಮ್ಮ ಆದಾಯ ಹೆಚ್ಚುತ್ತದೆ.
ಪರಿಹಾರ: ಸಾಧು ಸಂತರ ಆಶೀರ್ವಾದವನ್ನು ಪಡೆದು ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ: 8
ಅದೃಷ್ಟದ ದಿಕ್ಕು: ಉತ್ತರ
ಅದೃಷ್ಟದ ಬಣ್ಣ: ಎಲೆಹಸಿರು ಬಣ್ಣ
ಬರಹ: ಹೆಚ್. ಸತೀಶ್, ಜ್ಯೋತಿಷಿ, ಬೆಂಗಳೂರು
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ಸ್ತ್ರೀ ವಾರ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ವಿಭಾಗ