ಸ್ತ್ರೀ ವಾರ ಭವಿಷ್ಯ ಮೇಷದಿಂದ ಕಟಕದವರೆಗೆ: ಕೌಟುಂಬಿಕ ಶಾಂತಿ ನೆಲೆಸಿರುತ್ತದೆ, ವಿವಾಹ ನಿಶ್ಚಯ ಸಾಧ್ಯತೆ
ಸ್ತ್ರೀ ವಾರ ಭವಿಷ್ಯ: ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಈ ವಾರ ಮೇಷದಿಂದ ಕಟಕರಾಶಿವರೆಗಿನ ಮಹಿಳೆಯರಿಗೆ ಏನು ಫಲ? ಇಲ್ಲಿದೆ ವಿವರ.

ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಕೆಲ ಮಹಿಳೆಯರು ಕೂಡ ತಮ್ಮ ಭವಿಷ್ಯವನ್ನು ನೋಡಿಕೊಳ್ಳುತ್ತಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. 2025ರ ಮೇ 23 ರ ಶುಕ್ರವಾರದಿಂದ 29ರ ಗುರುವಾರದವರೆಗೆ ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರ ಸ್ತ್ರೀ ವಾರ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ.
ಮೇಷ
ನಿಮ್ಮಲ್ಲಿ ಆತುರದ ಮನಸ್ಸಿರುತ್ತದೆ. ಇದರಿಂದ ಯಾವುದೇ ಕೆಲಸ ಕಾರ್ಯಗಳನ್ನು ಯೋಜನಾಬದ್ಧವಾಗಿ ಮಾಡಲು ಸಾಧ್ಯವಾಗುವುದಿಲ್ಲ. ಆತ್ಮವಿಶ್ವಾಸದಿಂದ ಮುಂದುವರೆದರೆ ನಿರೀಕ್ಷಿತ ಯಶಸ್ಸು ನಿಮ್ಮದಾಗುತ್ತದೆ. ನಯವಾದ ಮಾತಿನ ಬಲದಿಂದ ಎದುರಾಗುವ ಸಮಸ್ಯೆಗಳಿಂದ ಪಾರಾಗುವಿರಿ. ಯಾವುದೇ ವಿಚಾರವಾದರೂ ಸ್ಥಿರವಾದ ಮನಸ್ಸಿನಿಂದ ತೀರ್ಮಾನಗಳನ್ನು ತೆಗೆದುಕೊಳ್ಳುವುದಿಲ್ಲ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಮಕ್ಕಳ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ಉದ್ಯೋಗಸ್ಥರಿಗೆ ಅನಿರೀಕ್ಷಿತ ಅನುಕೂಲಗಳು ದೊರೆಯಲಿವೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ತಡವಾದರೂ ಆರ್ಥಿಕ ಪರಿಸ್ಥಿತಿಯಲ್ಲಿ ಪ್ರಗತಿ ಇರಲಿದೆ. ದಂಪತಿಗಳ ನಡುವೆ ಸ್ನೇಹ ಪ್ರೀತಿ ನೆಲೆಸಿರುತ್ತದೆ. ಇದರಿಂದ ಕೌಟುಂಬಿಕ ಜೀವನದಲ್ಲಿ ಶಾಂತಿ ನೆಮ್ಮದಿ ಇರುತ್ತದೆ. ಜವಾಬ್ದಾರಿಗಳು ಹೆಚ್ಚಾದಾಗ ಅಸಹನೆಯಿಂದ ವರ್ತಿಸುವಿರಿ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿತ ಯಶಸ್ಸು ದೊರೆಯುತ್ತದೆ. ಬೇರೆಯವರ ಕೆಲಸ ಕಾರ್ಯಗಳಲ್ಲಿಆಸಕ್ತಿ ತೋರುವುದಿಲ್ಲ. ಮನಸ್ಸಿನಲ್ಲಿ ಅಲ್ಪಮಟ್ಟದ ಸ್ವಾರ್ಥವಿದ್ದರೂ ಬೇರೆಯವರಿಗೆ ತೊಂದರೆ ಆಗುವುದಿಲ್ಲ.
ಪರಿಹಾರ: ಹಸಿರು ಬಣ್ಣದ ವಸ್ತ್ರಗಳನ್ನು ಧರಿಸದಿರಿ.
ಅದೃಷ್ಟದ ಸಂಖ್ಯೆ: 1
ಅದೃಷ್ಟದ ದಿಕ್ಕು: ಉತ್ತರ
ಅದೃಷ್ಟದ ಬಣ್ಣ: ಕೆಂಪು ಬಣ್ಣ
ವೃಷಭ
ಸಣ್ಣ ಪುಟ್ಟ ಕೆಲಸವಾದರೂ ಹೆಚ್ಚಿನ ಶ್ರದ್ದೆಯಿಂದ ನಿರ್ವಹಿಸುವಿರಿ. ಇದರಿಂದ ಸೋಲಿನ ಭಯವಿಲ್ಲದೆ ಬಾಳುವಿರಿ. ಬೇರೆಯವರ ಪ್ರಭಾವಕ್ಕೆ ಮಣಿಯದೆ ಸ್ವಂತ ನಿರ್ಧಾರಗಳಿಗೆ ಬದ್ಧರಾಗುವಿರಿ. ನಿಮ್ಮ ಕೆಲಸ ಕಾರ್ಯಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ. ನಿಮ್ಮ ನಿರ್ಧಾರದ ನಡೆ ನುಡಿ ಯಶಸ್ಸಿಗೆ ಕಾರಣವಾಗುತ್ತದೆ. ಒಮ್ಮೆ ತೆಗೆದುಕೊಳ್ಳುವ ನಿರ್ಧಾರಗಳನ್ನು ಬದಲಾಯಿಸುವುದಿಲ್ಲ. ಕುಟುಂಬದ ಎಲ್ಲರ ಪ್ರೀತಿ ವಿಶ್ವಾಸ ನಿಮ್ಮದಾಗುತ್ತದೆ. ಕುಟುಂಬದ ಹಿರಿಯರ ಸಮಕ್ಷಮದಲ್ಲಿ ಹಣಕಾಸಿನ ವಿಚಾರದ ಚರ್ಚೆ ನಡೆಸುವಿರಿ. ಮಕ್ಕಳ ವಿಚಾರದಲ್ಲಿ ಬೇರೆಯವರ ಮಾತನ್ನು ಕೇಳುವುದಿಲ್ಲ. ಉದ್ಯೋಗದಲ್ಲಿ ಹಠದ ಗುಣದ ಕಾರಣ ವಾದ ವಿವಾದಗಳು ಕಂಡು ಬರುತ್ತದೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಉನ್ನತ ಮಟ್ಟವನ್ನು ತಲುಪುತ್ತಾರೆ. ಸ್ವತಂತ್ರವಾಗಿ ಹಣ ಸಂಪಾದಿಸುವ ಕನಸು ನನಸಾಗಲಿದೆ. ತಂದೆಯವರ ಆರೋಗ್ಯದಲ್ಲಿ ಹಿನ್ನಡೆ ಇರುತ್ತದೆ. ನಿಮ್ಮನ್ನು ನಂಬಿದವರಿಗೆ ಯಾವುದೇ ರೀತಿಯ ತೊಂದರೆ ಎದುರಾಗುವುದಿಲ್ಲ. ನಿಮ್ಮಲ್ಲಿನ ಸೇವಾ ಮನೋಭಾವನೆ ಎಲ್ಲರಿಗೂ ಮಾದರಿಯಾಗುತ್ತದೆ. ವಿವಾಹ ನಿಶ್ಚಯವಾಗುವ ಸಂಭವವಿದೆ.
ಪರಿಹಾರ: ತಲೆಯಲ್ಲಿ ಬೆಳ್ಳಿಯ ಆಭರಣವಿರಲಿ.
ಅದೃಷ್ಟದ ಸಂಖ್ಯೆ: 5
ಅದೃಷ್ಟದ ದಿಕ್ಕು: ಪೂರ್ವ
ಅದೃಷ್ಟದ ಬಣ್ಣ: ಕಿತ್ತಳೆ ಬಣ್ಣ
ಮಿಥುನ
ನಿಮ್ಮಲ್ಲಿರುವ ಬುದ್ಧಿವಂತಿಕೆಯೇ ಮೂಲ ಬಂಡವಾಳವಾಗುತ್ತದೆ. ಕೊಂಚ ತಡವಾದರೂ ಆರಂಭಿಸಿದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ನಿಮಗೆ ಅನುಕೂಲಕರವಾದ ಕೆಲಸ ಕಾರ್ಯಗಳನ್ನು ಮಾತ್ರ ಮಾಡಲು ಇಚ್ಛಿಸುವಿರಿ. ಉದ್ಯೋಗಸ್ಥರಾದಲ್ಲಿ ಹೆಚ್ಚಿನ ಹಣ ಸಹಾಯ ದೊರೆಯುತ್ತದೆ. ಸಣ್ಣಪುಟ್ಟ ವ್ಯಾಪಾರ ವ್ಯವಹಾರದಲ್ಲಿ ಆಸಕ್ತಿ ಮೂಡುತ್ತದೆ. ಕುಟುಂಬದಲ್ಲಿ ಹೊಂದಾಣಿಕೆಯ ಸ್ವಭಾವ ಕಂಡುಬರುವುದಿಲ್ಲ. ನಿಮ್ಮದೇ ಆದ ತಪ್ಪಿಗೆ ತೊಂದರೆ ಎದುರಿಸಬೇಕಾಗುತ್ತದೆ. ಆರೋಗ್ಯದ ಬಗ್ಗೆ ಚಿಂತೆ ಇರಲಿದೆ. ಹಿರಿಯ ಸಹೋದರಿ ಅಥವಾ ಸೋದರನ ಜೊತೆಗೂಡಿ ವ್ಯಾಪಾರವನ್ನು ಆರಂಭಿಸುವ ಸಂಭವ ಇದೆ. ಕುಟುಂಬದ ಹೆಚ್ಚಿನ ಜವಾಬ್ದಾರಿಯನ್ನು ನಿರ್ವಹಿಸುವಿರಿ. ಮಕ್ಕಳು ಹೆಚ್ಚಿನ ಆಸಕ್ತಿಯಿಂದ ಕಲಿಕೆಯಲ್ಲಿ ಮುಂದುವರೆಯುತ್ತಾರೆ. ಸ್ವಂತ ಉದ್ಯಮ ಇದ್ದಲ್ಲಿ ಎಲ್ಲರಿಗೂ ಸಮಾನವಾದ ಅವಕಾಶವನ್ನು ನೀಡುವಿರಿ. ಇದರಿಂದ ಎಲ್ಲರ ಮನ ಗೆಲ್ಲುವಿರಿ. ಬೇಸರದಿಂದ ದೂರವಾಗಲು ಮನರಂಜನೆಯನ್ನು ಆಶ್ರಯಿಸುತ್ತೀರಿ.
ಪರಿಹಾರ: ಬೆಳ್ಳಿಯ ಲೋಟದಲ್ಲಿ ಹಾಲನ್ನು ಕುಡಿದು ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ: 9
ಅದೃಷ್ಟದ ದಿಕ್ಕು: ದಕ್ಷಿಣ
ಅದೃಷ್ಟದ ಬಣ್ಣ: ಹಳದಿ ಬಣ್ಣ
ಕಟಕ
ಸದಾಕಾಲ ಜೀವನದಲ್ಲಿ ಹೊಸ ವಿಚಾರಗಳನ್ನು ನಿರೀಕ್ಷಿಸುವಿರಿ. ಮನಸ್ಸಿನಲ್ಲಿ ಯಾವುದೇ ರೀತಿಯ ಚಿಂತೆ ಇರುವುದಿಲ್ಲ. ನಿರೀಕ್ಷಿಸಿದ ಸಮಯದಲ್ಲಿ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಮನಸ್ಸಿಗೆ ಇಷ್ಟವಾಗುವ ಜನರೊಂದಿಗೆ ಮಾತ್ರ ಸ್ನೇಹ ಬೆಳೆಸಲಿದ್ದೀರಿ. ಉದ್ಯೋಗದಲ್ಲಿ ಉನ್ನತ ಅಧಿಕಾರ ದೊರೆಯುತ್ತದೆ. ಕುಟುಂಬದಲ್ಲಿ ಎಲ್ಲರನ್ನು ವಿಶ್ವಾಸದಿಂದ ಕಾಣುವಿರಿ. ಕುಟುಂಬದಲ್ಲಿ ನಿಮ್ಮಿಂದ ಸ್ನೇಹಮಯ ವಾತಾವರಣ ಇರುತ್ತದೆ. ದಾಂಪತ್ಯ ಜೀವನದಲ್ಲಿ ಉತ್ತಮ ಹೊಂದಾಣಿಕೆ ಇರಲಿದೆ. ಕುಟುಂಬದ ಹಣಕಾಸಿನ ವ್ಯವಹಾರದಿಂದ ದೂರ ಉಳಿಯುವಿರಿ. ಮಕ್ಕಳ ವಿದ್ಯಾಭ್ಯಾಸವು ನಿಮ್ಮ ಮುಖ್ಯ ಧ್ಯೇಯವಾಗಿರುತ್ತದೆ. ಪತಿಯ ಜೊತೆ ದೀರ್ಘಕಾಲದ ಪ್ರವಾಸ ಕೈಗೊಳ್ಳುವಿರಿ. ಶಾಸ್ತ್ರ, ಸಂಪ್ರದಾಯದಲ್ಲಿ ಆಸಕ್ತಿ ಮೂಡುತ್ತದೆ. ಬಿಡುವಿಲ್ಲದ ಕೆಲಸ ಕಾರ್ಯದ ಕಾರಣ ಆರೋಗ್ಯ ಸಮಸ್ಯೆಯೂ ಎದುರಾಗುತ್ತದೆ. ದಾನ ಧರ್ಮದ ಕೆಲಸದಲ್ಲಿ ಆಸಕ್ತಿ ಮೂಡುತ್ತದೆ.
ಪರಿಹಾರ: ಮಕ್ಕಳಿಗೆ ತುಪ್ಪದ ಅನ್ನ ನೀಡಿ ದಿನದ ಕೆಲಸ ಆರಂಭಿಸಿ.
ಅದೃಷ್ಟದ ಸಂಖ್ಯೆ: 2
ಅದೃಷ್ಟದ ದಿಕ್ಕು: ಪಶ್ಚಿಮ
ಅದೃಷ್ಟದ ಬಣ್ಣ: ಹಸಿರು ಬಣ್ಣ
ಬರಹ: ಹೆಚ್. ಸತೀಶ್, ಜ್ಯೋತಿಷಿ, ಬೆಂಗಳೂರು
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ಸ್ತ್ರೀ ವಾರ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).