ಸ್ತ್ರೀ ವಾರ ಭವಿಷ್ಯ ಧನು ರಾಶಿಯಿಂದ ಮೀನದವರೆಗೆ: ತವರು ಮನೆಯಲ್ಲಿ ಅಧಿಕಾರ ಚಲಾಯಿಸುತ್ತೀರಿ, ಚಿನ್ನ ಖರೀದಿಸುತ್ತೀರಿ
ಸ್ತ್ರೀ ವಾರ ಭವಿಷ್ಯ: ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಈ ವಾರ ಧನು ರಾಶಿಯಿಂದ ಮೀನದವರೆಗಿನ ಮಹಿಳೆಯರಿಗೆ ಏನು ಫಲ? ಇಲ್ಲಿದೆ ವಿವರ.

ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಕೆಲ ಮಹಿಳೆಯರು ಕೂಡ ತಮ್ಮ ಭವಿಷ್ಯವನ್ನು ನೋಡಿಕೊಳ್ಳುತ್ತಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. 2025ರ ಮೇ 23 ರ ಶುಕ್ರವಾರದಿಂದ 29ರ ಗುರುವಾರದವರೆಗೆ ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರ ಸ್ತ್ರೀ ವಾರ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ.
ಧನಸ್ಸು
ಕುಟುಂಬದಲ್ಲಿ ಸುಖ ಸಂತೋಷ ಸಮೃದ್ಧಿ ತುಂಬಿರುತ್ತದೆ. ಕುಟುಂಬದ ಹಣಕಾಸಿನ ವಿಚಾರದಲ್ಲಿ ನಿಧಾನವಾಗಿ ಹತೋಟಿ ಸಾಧಿಸುವಿರಿ. ಸೋದರನಿಂದ ಹಣದ ಸಹಾಯ ದೊರೆಯುತ್ತದೆ. ವಿವಾಹವಾದರೂ ತವರು ಮನೆಯಲ್ಲಿ ಅಧಿಕಾರ ಚಲಾಯಿಸುವಿರಿ. ನಿಮ್ಮ ಮಾತುಗಳಿಗೆ ಎಲ್ಲೆಡೆ ಗೌರವ ಲಭಿಸುತ್ತದೆ. ಒಮ್ಮೆ ತೆಗೆದುಕೊಂಡ ತೀರ್ಮಾನಗಳಿಗೆ ಬದ್ಧರಾಗಲು ವಿಪಲರಾಗುವಿರಿ. ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮದಿಂದ ಉನ್ನತ ಸ್ಥಾನ ಗಳಿಸುತ್ತಾರೆ. ಕಷ್ಟವಿಲ್ಲದ ಉದ್ಯೋಗವನ್ನು ಆಯ್ಕೆ ಮಾಡುವಿರಿ. ಹಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದಿಲ್ಲ. ಅನಿರೀಕ್ಷಿತವಾಗಿ ಕುಟುಂಬದ ನಿರ್ವಹಣೆಯ ಜವಾಬ್ದಾರಿ ನಿಮ್ಮದಾಗುತ್ತದೆ. ಪತಿಯು ನಿಮ್ಮ ಮಾತುಗಳನ್ನು ಗೌರವಿಸುತ್ತಾರೆ. ಇದರಿಂದ ದಾಂಪತ್ಯ ಜೀವನದಲ್ಲಿ ಯಾವುದೇ ತೊಡಕು ಎದುರಾಗುವುದಿಲ್ಲ. ವಾಸ ಸ್ಥಳವನ್ನು ಬದಲಾಯಿಸುವ ಇಂಗಿತ ನಿಮ್ಮಲ್ಲಿರುತ್ತದೆ. ನಿಮ್ಮ ಕನಸುಗಳು ನನಸಾಗುವ ಸಾಧ್ಯತೆಗಳಿವೆ. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಆಸಕ್ತಿ ತೋರುವಿರಿ.
ಪರಿಹಾರ: ಬೆಳ್ಳಿಯ ಆಭರಣವನ್ನು ಧರಿಸದಿರಿ. ಅದೃಷ್ಟದ ಸಂಖ್ಯೆ : 11
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಟದ ಬಣ್ಣ: ಬೂದು ಬಣ್ಣ
ಮಕರ
ಬರಿ ಮಾತಿನಿಂದ ನಿಮ್ಮ ಕೆಲಸ ಕಾರ್ಯಗಳನ್ನು ಸಾಧಿಸುವಿರಿ. ನಷ್ಟದ ಪರಿವೆ ಇಲ್ಲದೆ ನಿಮ್ಮ ಜವಾಬ್ದಾರಿಯನ್ನು ಪೂರ್ಣಗೊಳಿಸಲು ಪ್ರಯತ್ನಿಸುವಿರಿ. ಶೀತದ ತೊಂದರೆ ನಿಮ್ಮನ್ನು ಕಾಡಲಿದೆ. ಕೌಟುಂಬಿಕ ಜೀವನದಲ್ಲಿ ಕೆಲವೊಂದು ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಹಣಕಾಸಿನ ವಿಚಾರವನ್ನು ಬೇರೆಯವರಿಗೆ ತಿಳಿಸುವುದಿಲ್ಲ. ಕುಟುಂಬದ ಜವಾಬ್ದಾರಿಯನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ಪತಿಯ ಕೆಲಸ ಕಾರ್ಯಗಳಲ್ಲಿ ನೆರವಾಗುವಿರಿ. ಉದ್ಯೋಗದಲ್ಲಿ ಉನ್ನತ ಅಧಿಕಾರ ದೊರೆಯುತ್ತದೆ. ಸ್ವತಂತ್ರವಾಗಿ ವ್ಯಾಪಾರ ವ್ಯವಹಾರವನ್ನು ನಿರ್ವಹಿಸಬಲ್ಲಿರಿ. ದುಡುಕಿ ಆಡುವ ಮಾತಿನಿಂದ ಕುಟುಂಬದಲ್ಲಿ ಇದ್ದ ಶಾಂತಿ ನೆಮ್ಮದಿಯು ಕಡಿಮೆಯಾಗುತ್ತದೆ. ಪ್ರವಾಸ ಪ್ರಿಯರು. ಹೊಸ ವಾಹನವನ್ನು ಕೊಳ್ಳುವ ಸಾಧ್ಯತೆಗಳಿವೆ. ಸೋದರ ಅಥವಾ ಸೋದರಿಯ ಜೊತೆ ಹಣಕಾಸಿನ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಲಿದೆ. ನಿಮ್ಮ ಮನಸ್ಸಿಗೆ ಒಪ್ಪಿದ ಚಿನ್ನ ಬೆಳ್ಳಿಯ ಒಡವೆಯನ್ನು ಕೊಳ್ಳುವಿರಿ.
ಪರಿಹಾರ: ನಿಮ್ಮ ಆಹಾರದ ಸ್ವಲ್ಪ ಭಾಗವನ್ನು ಸಾಕುಪ್ರಾಣಿಗಳಿಗೆ ನೀಡಿ.
ಅದೃಷ್ಟದ ಸಂಖ್ಯೆ: 4
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ: ಕಂದು ಬಣ್ಣ
ಕುಂಭ
ಕುಟುಂಬದಲ್ಲಿ ಒಂದು ರೀತಿಯ ಗಂಭೀರತೆ ನೆಲೆಸಿರುತ್ತದೆ. ಪರಸ್ಪರ ಒಬ್ಬರ ಭಾವನೆಯನ್ನು ಇನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಮನಸ್ಸಿಗೆ ತಪ್ಪು ಎಂಬ ಭಾವನೆ ಇದ್ದರೂ ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಬದಲಿಸುವುದಿಲ್ಲ. ಯಾವುದೇ ಕೆಲಸ ಕಾರ್ಯಗಳನ್ನು ಆರಂಭಿಸಲು ಆತ್ಮೀಯರ ನೆರವು ಅನಿವಾರ್ಯವಾಗುತ್ತದೆ. ಮಕ್ಕಳ ವಿಚಾರದಲ್ಲಿ ಉತ್ತಮ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ವಿದ್ಯಾರ್ಥಿಗಳು ಕಷ್ಟವೆನಿಸಿದರು ತಮ್ಮ ಪ್ರಯತ್ನದಲ್ಲಿ ಸೋಲುವುದಿಲ್ಲ. ಹಣಕಾಸಿನ ತೊಂದರೆ ಕಂಡುಬರುವುದಿಲ್ಲ. ಹಿರಿಯ ಸೋದರನಿಗೆ ಇದ್ದ ಕಷ್ಟ ನಷ್ಟಗಳು ದೂರವಾಗಲಿವೆ. ವಾಹನದಿಂದ ತೊಂದರೆ ಉಂಟಾಗಬಹುದು. ಎಚ್ಚರಿಕೆ ಇರಲಿ. ಕುಟುಂಬಕ್ಕೆ ಸಂಬಂಧಿಸಿದ ಭೂಮಿಯ ವಿಚಾರದಲ್ಲಿ ವಿವಾದವು ಎದುರಾಗಲಿದೆ. ಉದ್ಯೋಗದಲ್ಲಿ ಇದ್ದಲ್ಲಿ ಅನಿವಾರ್ಯವಾಗಿ ಉದ್ಯೋಗವನ್ನು ಬದಲಿಸುವಿರಿ. ಅತಿಯಾದ ಆತ್ಮವಿಶ್ವಾಸದಿಂದ ತಪ್ಪು ನಿರ್ಧಾರ ತೆಗೆದುಕೊಳ್ಳುವಿರಿ.
ಪರಿಹಾರ: ಮಕ್ಕಳಿಗೆ ಸಿಹಿತಿಂಡಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 8
ಅದೃಷ್ಟದ ದಿಕ್ಕು: ದಕ್ಷಿಣ
ಅದೃಷ್ಟದ ಬಣ್ಣ: ಕಪ್ಪು ಬಣ್ಣ
ಮೀನ
ಕುಟುಂಬದಲ್ಲಿ ಇದ್ದ ಮನಸ್ತಾಪವು ದೂರವಾಗಿ ನೆಮ್ಮದಿಯ ವಾತಾವರಣ ಉಂಟಾಗಲಿದೆ. ನಿಮ್ಮ ಮನದ ಆಶೋತ್ತರಗಳು ಪತಿಯ ಸಹಾಯದಿಂದ ಈಡೇರಲಿವೆ. ಯಾವುದೇ ವಿಚಾರದಲ್ಲಿಯೂ ಸ್ಥಿರವಾದ ತೀರ್ಮಾನವನ್ನು ತೆಗೆದುಕೊಳ್ಳುವುದಿಲ್ಲ. ಕಣ್ಣಿನ ತೊಂದರೆ ನಿಮ್ಮನ್ನು ಕಾಡಲಿದೆ. ತಾಯಿಯವರ ಆರೋಗ್ಯದಲ್ಲಿ ಚೇತರಿಕೆ ಇರುತ್ತದೆ. ಕುಟುಂಬದ ಹಿರಿಯ ಸ್ತ್ರೀಯರಿಗೆ ಭೂಲಾಭವಿದೆ. ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ಸ್ಪರ್ದಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುತ್ತಾರೆ. ಸಂತಾನ ಲಾಭವಿದೆ. ಅತಿ ಮುಖ್ಯವಾದ ಕೆಲಸವೊಂದನ್ನು ಮುಂದೂಡುವಿರಿ. ಹಣಕಾಸಿನ ವಿಚಾರದಲ್ಲಿ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಕುಟುಂಬದ ಸದಸ್ಯರ ಜೊತೆಗೂಡಿ ಸ್ವಂತ ಉದ್ದಿಮೆಯನ್ನು ಆರಂಭಿಸುವ ಸೂಚನೆಗಳಿವೆ. ಹಣವನ್ನು ಉಳಿಸುವ ಯೋಚನೆ ಕಾರ್ಯರೂಪಕ್ಕೆ ಬರುವುದಿಲ್ಲ. ದುಡುಕಿನ ಮಾತಿನಿಂದ ಆತ್ಮೀಯರೊಬ್ಬರು ನಿಮ್ಮಿಂದ ದೂರವಾಗಬಹುದು. ತಂದೆಯವರ ಆರೋಗ್ಯದಲ್ಲಿ ಏರಿಳಿತ ಉಂಟಾಗುತ್ತದೆ.
ಪರಿಹಾರ: ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿ ದಿನದ ಕೆಲಸವನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ : 12
ಅದೃಷ್ಟದ ದಿಕ್ಕು : ಪಶ್ಚಿಮ
ಅದೃಷ್ಟದ ಬಣ್ಣ: ತಿಳಿಹಸಿರು ಬಣ್ಣ
ಬರಹ: ಹೆಚ್. ಸತೀಶ್, ಜ್ಯೋತಿಷಿ, ಬೆಂಗಳೂರು
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ಸ್ತ್ರೀ ವಾರ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).