ಸ್ತ್ರೀ ವಾರ ಭವಿಷ್ಯ ಮೇಷದಿಂದ ಕಟಕದವರೆಗೆ: ಕಷ್ಟ–ನಷ್ಟಗಳಿಂದ ಪಾರಾಗಲಿದ್ದೀರಿ, ಸಾಕುಪ್ರಾಣಿಗಳಿಂದ ತೊಂದರೆ ಉಂಟಾಗಬಹುದು
ಸ್ತ್ರೀ ವಾರ ಭವಿಷ್ಯ: ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಗಳನ್ನು ನೀಡುತ್ತವೆ. ಈ ವಾರ ಮೇಷದಿಂದ ಕಟಕರಾಶಿವರೆಗಿನ ಮಹಿಳೆಯರಿಗೆ ಏನು ಫಲ? ಇಲ್ಲಿದೆ ವಿವರ.

ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಕೆಲ ಮಹಿಳೆಯರು ಕೂಡ ತಮ್ಮ ಭವಿಷ್ಯವನ್ನು ನೋಡಿಕೊಳ್ಳುತ್ತಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. 2025ರ ಮೇ 30 ರ ಶುಕ್ರವಾರದಿಂದ ಜೂನ್ 5ರ ಗುರುವಾರದವರೆಗೆ ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರ ಸ್ತ್ರೀ ವಾರ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ.
ಮೇಷ ರಾಶಿ
ನಿಮ್ಮಿಂದ ಕುಟುಂಬಕ್ಕೆ ವಿಶೇಷವಾದ ಕೀರ್ತಿ, ಪ್ರತಿಷ್ಠೆ ಲಭಿಸುತ್ತದೆ. ಸಮಾಜದಲ್ಲಿ ಉನ್ನತ ಗೌರವ ನಿಮ್ಮದಾಗುತ್ತದೆ. ಕುಟುಂಬದಲ್ಲಿ ಎಲ್ಲರೊಂದಿಗೆ ಹೊಂದಿಕೊಂಡು ಬಾಳುತ್ತೀರಿ. ಆತ್ಮೀಯರ ಮನೆಗೆ ಭೇಟಿ ನೀಡಲಿದ್ದೀರಿ. ಸಭೆ ಸಮಾರಂಭಗಳ ಕೇಂದ್ರ ಬಿಂದುಗಳಾಗುತ್ತೀರಿ. ತವರು ಮನೆಯ ಪ್ರಭಾವದಿಂದ ವಿಶೇಷ ಕೆಲಸ ಕಾರ್ಯಗಳನ್ನು ನಿರ್ವಹಿಸಬಲ್ಲಿರಿ. ತಂದೆಯವರ ಕೆಲಸ ಅಥವಾ ವ್ಯಾಪಾರವನ್ನು ಮುಂದುವರಿಸುತ್ತೀರಿ. ನಿಮ್ಮ ತಪ್ಪುಗಳನ್ನು ಮರೆ ಮಾಚಲಿದ್ದೀರಿ. ಉದ್ಯೋಗದಲ್ಲಿ ಆತ್ಮೀಯರಿಂದ ಅಡ್ಡಿ ಆತಂಕಗಳು ಎದುರಾಗುತ್ತವೆ. ಶೀತದ ತೊಂದರೆ ಇರುತ್ತದೆ. ಧಾರ್ಮಿಕ ವಿಧಿ ವಿಧಾನಗಳಲ್ಲಿ ಆಸಕ್ತಿ ಮೂಡುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಪ್ರಯತ್ನದಿಂದ ತಮ್ಮ ಗುರಿ ತಲುಪುತ್ತಾರೆ. ನಿಮ ಗೆ ಉತ್ತಮ ಮುಂದಾಲೋಚನೆ ಇರುತ್ತದೆ. ಸುಲಭವಾಗಿ ಯಾವುದೇ ಕಷ್ಟ ನಷ್ಟಗಳಿಂದ ಪಾರಾಗುವಿರಿ. ಮಕ್ಕಳ ಮೇಲೆ ವಿಶೇಷ ಪ್ರೀತಿ ಮತ್ತು ವಿಶ್ವಾಸ ತೋರುವಿರಿ.
ಪರಿಹಾರ: ತಲೆಗೆ ಹಾಲಲ್ಲಿಟ್ಟು ಸ್ನಾನ ಮಾಡಿದ ನಂತರ ದಿನದ ಕೆಲಸ ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 8
ಅದೃಷ್ಟದ ದಿಕ್ಕು : ಪಶ್ಚಿಮ
ಅದೃಷ್ಟದ ಬಣ್ಣ: ನಸುಗೆಂಪು ಬಣ್ಣ
ವೃಷಭ ರಾಶಿ
ಹೊಸ ವಿಚಾರಗಳನ್ನು ಕಲಿಯುವ ಆಸಕ್ತಿ ಇರುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡುವಿರಿ. ಹಿರಿಯ ಸೋದರ ಅಥವಾ ಸೋದರಿಯ ಜೊತೆಯಲ್ಲಿ ಉತ್ತಮ ಅನುಬಂಧ ಇರುತ್ತದೆ. ಕುಟುಂಬದ ಹಿರಿಯ ಮಹಿಳಾ ಸದಸ್ಯರಿಗೆ ವಾಯುದೋಷವಿರುತ್ತದೆ. ಕುಟುಂಬದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡು ಹಿಡಿಯುವಿರಿ. ಉತ್ತಮ ಊಹಾಶಕ್ತಿ ನಿಮ್ಮಲ್ಲಿರುತ್ತದೆ. ದೀರ್ಘ ಕಾಲದ ಪ್ರವಾಸಗಳನ್ನು ಇಷ್ಟಪಡುವಿರಿ. ಉದ್ಯೋಗವನ್ನು ಬದಲಿಸುವ ಅವಕಾಶ ಇರುತ್ತದೆ. ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ ಹೊಂದುವಿರಿ. ಮನಸ್ಸು ಒಳ್ಳೆಯದಾದರೂ ತಪ್ಪಾದ ಮಾತುಗಳಿಂದ ತೊಂದರೆಯನ್ನು ಎದುರಿಸಬೇಕು. ಕುಟುಂಬದಲ್ಲಿ ಅಶಾಂತಿಯ ವಾತಾವರಣ ಇರುತ್ತದೆ. ನಿಮ್ಮ ತಪ್ಪು ಇಲ್ಲದೆ ಹೋದರೂ ನಿಂದನೆಯನ್ನು ಸಹಿಸಿಕೊಳ್ಳಬೇಕು. ಪತಿಯ ಉತ್ತಮ ಮಾತು ಮತ್ತು ಪ್ರೀತಿ ನಿಮ್ಮಲ್ಲಿ ಹೊಸ ಶಕ್ತಿಯನ್ನು ಉಂಟುಮಾಡುತ್ತದೆ.
ಪರಿಹಾರ: ಹಣೆಯಲ್ಲಿ ತಿಲಕವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ : 12
ಅದೃಷ್ಟದ ದಿಕ್ಕು : ಉತ್ತರ
ಅದೃಷ್ಟದ ಬಣ್ಣ: ನೀಲಿ ಮಿಶ್ರಿತ ಬಿಳಿ ಬಣ್ಣ
ಮಿಥುನ ರಾಶಿ
ಪ್ರತಿಯೊಬ್ಬರ ಬಗ್ಗೆಯೂ ಮನಸ್ಸಿನಲ್ಲಿ ಒಳ್ಳೆಯ ಭಾವನೆ ಇರುತ್ತದೆ. ಬೇರೆಯವರ ಮನಸ್ಸಿಗೆ ನೋವನ್ನು ಉಂಟುಮಾಡದೆ ನಿಮ್ಮ ಕೆಲಸವನ್ನು ಸಾಧಿಸುವಿರಿ. ನಿಮ್ಮ ತಪ್ಪಿನಿಂದ ತೊಂದರೆ ಎದುರಾದರೂ ಬೇರೆಯವರನ್ನು ದೂರವಿರುವಿರಿ. ಸಂಪ್ರದಾಯದಲ್ಲಿ ವಿಶೇಷ ಆಸಕ್ತಿ ಮೂಡುತ್ತದೆ. ಸ್ವತಂತ್ರದಿಂದ ಬಾಳಲು ಇಚ್ಚಿಸುವಿರಿ. ಯಾವುದೇ ವಿಚಾರದಲ್ಲಿ ಬೇರೆಯವರ ಮೇಲೆ ಅವಲಂಬಿತರಾಗುವುದಿಲ್ಲ. ಆತ್ಮೀಯರಿಗೆ ಉತ್ತಮ ಮಾರ್ಗದರ್ಶನ ನೀಡಬಲ್ಲರಿ. ಹಠದ ಕಾರಣ ನಿಮ್ಮ ಕೆಲವೊಂದು ಕೆಲಸ ಕಾರ್ಯಗಳು ಅಪೂರ್ಣಗೊಳ್ಳುತ್ತವೆ. ಉದ್ಯೋಗದಲ್ಲಿ ನೆಮ್ಮದಿಯ ವಾತಾವರಣ ಇರುವುದಿಲ್ಲ. ಕಷ್ಟಪಟ್ಟು ಹಣಕಾಸಿನ ಸ್ಥಿತಿಯಲ್ಲಿ ಅಭಿವೃದ್ಧಿ ಹೊಂದುವಿರಿ. ಬರಿ ಮಾತಿನಲ್ಲಿ ವೇಳೆ ಕಳೆಯುವುದಿಲ್ಲ. ಕಷ್ಟಪಟ್ಟು ಕೆಲಸ ಕೆಲಸ ಕಾರ್ಯಗಳಲ್ಲಿ ತೊಡಗಿ ನಿರೀಕ್ಷಿತ ಯಶಸ್ಸು ಗಳಿಸುವಿರಿ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿಸಿದ ಲಾಭ ದೊರೆಯುತ್ತದೆ. ಸ್ವಂತ ಮನೆ ಅಥವಾ ಜಮೀನು ಕೊಳ್ಳಲು ತವರಿನ ಸಹಾಯವಿರುತ್ತದೆ.
ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 1
ಅದೃಷ್ಟದ ದಿಕ್ಕು : ಪೂರ್ವ
ಅದೃಷ್ಟದ ಬಣ್ಣ: ಹಾಲಿನ ಬಣ್ಣ
ಕಟಕ ರಾಶಿ
ಸ್ವಂತ ವ್ಯಾಪಾರವಿದ್ದಲ್ಲಿ ಉತ್ತಮ ಆದಾಯ ಗಳಿಸುವಿರಿ. ಆದರೆ ಹಣವನ್ನು ಉಳಿಸಲು ಸಾಧ್ಯವಾಗುವುದಿಲ್ಲ. ಕುಟುಂಬದಲ್ಲಿ ವಾದ ವಿವಾದಗಳು ಉಂಟಾದರೂ ಅದನ್ನು ದೂರ ಮಾಡುವುವಿರಿ. ಶಾಂತಿ ಸಂಯಮದ ವಾತಾವರಣ ಇರಲಿದೆ. ನಿಮ್ಮ ವಿಚಾರಗಳನ್ನು ಬೇರೆಯವರಿಗೆ ತಿಳಿಸುವುದಿಲ್ಲ. ಬೇರೆಯವರ ವಿಚಾರಗಳನ್ನು ಬುದ್ಧಿವಂತಿಕೆಯಿಂದ ತಿಳಿದುಕೊಳ್ಳುವಿರಿ. ಕುಟುಂಬದ ಮಂಗಳ ಕಾರ್ಯಗಳ ಜವಾಬ್ದಾರಿಯನ್ನು ವಹಿಸಿಕೊಳ್ಳುವಿರಿ. ಅನಿರೀಕ್ಷಿತವಾದ ಘಟನೆಗಳು ಮನಸ್ಸಿನ ಬೇಸರಕ್ಕೆ ಕಾರಣವಾಗುತ್ತವೆ. ನಿಮ್ಮ ಗೌರವಕ್ಕೆ ಧಕ್ಕೆ ಬರುವಂತಹ ಕೆಲಸ ಕಾರ್ಯಗಳನ್ನು ಮಾಡುವುದಿಲ್ಲ. ಉದ್ಯೋಗದಲ್ಲಿ ಉನ್ನತ ಅಧಿಕಾರ ದೊರೆಯುತ್ತದೆ. ನಿಮ್ಮ ಮನಸ್ಸಿನಲ್ಲಿ ವಿಶೇಷವಾದ ಆಸೆ ಆಕಾಂಕ್ಷಿಗಳು ಇರುತ್ತವೆ. ಸಾಕುಪ್ರಾಣಿಗಳಿಂದ ತೊಂದರೆ ಉಂಟಾಗಬಹುದು ಎಚ್ಚರಿಕೆ ಇರಲಿ. ಹೊಟ್ಟೆಗೆ ಸಂಬಂಧಿಸಿದ ತೊಂದರೆ ಇರುತ್ತದೆ. ಆತ್ಮೀಯರ ಹಣಕಾಸಿನ ವಿವಾದಗಳಿಗೆ ಪರಿಹಾರ ಕಂಡುಹಿಡಿಯುವಿರಿ.
ಪರಿಹಾರ: ಪೂರ್ವಿಕರ ಮನೆಯಲ್ಲಿ ನೀರಿನ ವ್ಯವಸ್ಥೆಯನ್ನು ಮಾಡಿ ದಿನದ ಕೆಲಸ ಆರಂಭಿಸಿ.
ಅದೃಷ್ಟದ ಸಂಖ್ಯೆ : 5
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ: ಹೊಗೆಯ ಬಣ್ಣ
ಬರಹ: ಹೆಚ್. ಸತೀಶ್, ಜ್ಯೋತಿಷಿ, ಬೆಂಗಳೂರು
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ಸ್ತ್ರೀ ವಾರ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).