ಮೇಷ , ಮಿಥುನ ಸೇರಿದಂತೆ ಈ 5 ರಾಶಿಗಳಿಗೆ ಸೇರಿದವರಿಗೆ ದೀರ್ಘಾವಧಿ ಸಂಬಂಧ ಉಳಿಸಿಕೊಳ್ಳುವುದೇ ತೊಳಲಾಟ
ಜ್ಯೋತಿಷ್ಯ ಶಾಸ್ತ್ರವು ಮನುಷ್ಯನ ಸ್ವಭಾವನ್ನು ಹೇಳುತ್ತದೆ. ಕೆಲವು ರಾಶಿಯವರು ಸಂಬಂಧಗಳಿಗೆ ಬಹಳ ಮಹತ್ವ ನೀಡಿ, ಅದನ್ನು ದೀರ್ಘಾವಧಿಯವರೆಗೆ ಕಾಯ್ದುಕೊಂಡು ಹೋಗುತ್ತಾರೆ. ಆದರೆ ಇನ್ನು ಕೆಲವರು ಅವರ ಜೀವನದಲ್ಲಿ ನಡೆದ ಕೆಲವು ಘಟನೆಗಳಿಂದ, ಸಂಬಂಧಗಳನ್ನು ದೀರ್ಘಾವಧಿಯವರೆಗೆ ಉಳಿಸಿಕೊಳ್ಳಲು ಬಹಳಷ್ಟು ಕಷ್ಟಪಡುತ್ತಾರೆ.

ಸಂಬಂಧಗಳು ಬಹಳ ನಾಜೂಕಾಗಿರುತ್ತದೆ. ಅಲ್ಲಿ ನಂಬಿಕೆಯ ಜೊತೆಗೆ ಆ ಸಂಬಂಧಗಳಿಗೆ ಬದ್ಧರಾಗಿರಬೇಕಾಗುತ್ತದೆ. ಕೆಲವರು ಬಹಳ ಸುಲಭವಾಗಿ ಒಪ್ಪಿಕೊಳ್ಳುತ್ತಾರೆ. ಆದರೆ ಕೆಲವರಿಗೆ ಹಾಗಲ್ಲ, ಸಂಬಂಧದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ಬಹಳಷ್ಟು ಕಷ್ಟಪಡುತ್ತಾರೆ. ಜ್ಯೋತಿಷ್ಯ ಶಾಸ್ತ್ರ ನಕ್ಷತ್ರ, ಗ್ರಹ ಮತ್ತು ರಾಶಿಗಳು ನಮ್ಮ ಜೀವನದಲ್ಲಿ ನಡೆಯುವ ಘಟನೆಗಳಿಗೆ ಕಾರಣವೇನೆಂಬುದನ್ನು ಹೇಳುತ್ತವೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ರಾಶಿಗಳು ದೀರ್ಘಕಾಲದವರೆಗೆ ಸಂಬಂಧದಲ್ಲಿ ಬದ್ಧತೆಯನ್ನು ಕಾಪಾಡಿಕೊಳ್ಳಲು ಕಷ್ಟಪಡುತ್ತಾರೆ ಎಂದು ಹೇಳಲಾಗಿದೆ. ಅವರು ಬೆಳೆದ ರೀತಿ, ಹಿಂದಿನ ಅನುಭವ ಮತ್ತು ಭೂತಕಾಲದಲ್ಲಿ ನಡೆದ ಘಟನೆಗಳು ಮುಂತಾದ ಅನೇಕ ವಿಷಯಗಳಿಂದ ಅವರು ಯಾರನ್ನೂ ಅಷ್ಟು ಸುಲಭವಾಗಿ ತಮ್ಮ ಜೀವನದಲ್ಲಿ ಸೇರಿಸಿಕೊಳ್ಳುವುದಿಲ್ಲ. ಜೊತೆಗೆ ದೀರ್ಘಾವಧಿಯ ಸಂಬಂಧಗಳನ್ನು ಉಳಿಸಿಕೊಳ್ಳಲು ಕಷ್ಟಪಡುತ್ತಾರೆ. ಆ ರಾಶಿಗಳ ಜನರು ಇತರರಿಗಿಂತ ಬಹಳಷ್ಟು ಭಿನ್ನವಾಗಿ ಕಾಣಬಹುದು. ಹಾಗಾದರೆ ಆ ರಾಶಿಯವರು ಯಾರು? ಏಕೆ ಅವರು ದೀರ್ಘಾವಧಿಯ ಸಂಬಂಧಗಳನ್ನು ಉಳಿಸಿಕೊಳ್ಳಲು ಕಷ್ಟಪಡುತ್ತಾರೆ ತಿಳಿಯಲು ಮುಂದೆ ಓದಿ.
ಇದನ್ನೂ ಓದಿ: ಮನೆಯಲ್ಲಿ ಒಂದಕ್ಕಿಂದ ಹೆಚ್ಚು ತುಳಸಿಗಿಡ ನೆಡಬಹುದೇ?
ಮೇಷ ರಾಶಿ
ಈ ರಾಶಿಗೆ ಸೇರಿದ ಜನರು ಸ್ವತಂತ್ರರಾಗಿರುವುದನ್ನು ಬಯಸುತ್ತಾರೆ, ಜೊತೆಗೆ ಸಾಹಸಮಯಿಗಳೂ ಆಗಿರುತ್ತಾರೆ. ಅವರು ಅತ್ಯುತ್ಸಾಹದಿಂದ ಜನರನ್ನು ಪ್ರೀತಿಸುತ್ತಾರೆ. ಅಷ್ಟೇ ಸುಲಭವಾಗಿ ಅದರಲ್ಲಿ ಬೇಸರಗೊಳ್ಳುತ್ತಾರೆ. ಆಗ ಆ ಸಂಬಂಧವನ್ನು ಮುಂದುವರೆಸಲು ಕಷ್ಟಪಡುತ್ತಾರೆ. ಮೇಷ ರಾಶಿಯವರಲ್ಲಿ ಬದ್ಧತೆಯ ಕೊರತೆಯಿಂದ ಸಂಬಂಧಗಳನ್ನು ದೀರ್ಘಾವಧಿಯವರೆಗೆ ಉಳಿಸಿಕೊಳ್ಳಲು ಬಹಳ ಕಷ್ಟಪಡುವುದನ್ನು ಕಾಣಬಹುದು. ಉತ್ಸಾಹಿ ಮನೋಭಾವದ ಈ ರಾಶಿಯವರು ಒಂದೇ ವ್ಯಕ್ತಿಗಳ ಜೊತೆ ಸಂಬಂಧದಲ್ಲಿ ಬದ್ಧತೆಯನ್ನು ಕಾಯ್ದುಕೊಳ್ಳಲು ಕಷ್ಟಪಡಬಹುದು.
ಮಿಥುನ ರಾಶಿ
ಮಿಥುನ ರಾಶಿಯವರು ದ್ವಂಧ ಮನಸ್ಸಿನ ಸ್ವಭಾವವನ್ನು ತೋರಿಸುತ್ತಾರೆ. ಸಮಾಜಮುಖಿಯಾಗಿರುವ ಅವರು ಕುತೂಹಲ ಸ್ವಭಾವದವರಾಗಿರುತ್ತಾರೆ. ಅವರದು ಸಹಜ ಮತ್ತು ಕುತೂಹಲದಿಂದ ಕೂಡಿರುವ ವ್ಯಕ್ತಿತ್ವ ಆಗಿದೆ. ಮಿಥುನ ರಾಶಿಗೆ ಸೇರಿದವರು ಸಂಬಂಧವನ್ನು ದೀರ್ಘಾವಧಿಯವರೆಗೆ ಉಳಿಸಿಕೊಳ್ಳಲು ಬಹಳ ಕಷ್ಟಪಡುತ್ತಾರೆ. ಏಕೆಂದರೆ ಇತರೆ ಅವಕಾಶಗಳು ಕೈತಪ್ಪಿ ಹೋಗಬಹುದೆಂದು ಅವರು ಚಿಂತಿಸುತ್ತಿರುತ್ತಾರೆ. ಈ ರಾಶಿಯವರು ಎಲ್ಲರನ್ನೂ ಇಷ್ಟಪಡುತ್ತಾರೆ. ಆದರೆ ನಿರ್ದಿಷ್ಟ ವ್ಯಕ್ತಿಗಳೊಂದಿಗೆ ಸಂಬಂಧವನ್ನು ಕಾಯ್ದುಕೊಳ್ಳುವುದು ಅವರಿಗೆ ಸ್ವಲ್ಪ ಕಷ್ಟ ಎನಿಸಬಹುದು.
ಧನು ರಾಶಿ
ಈ ರಾಶಿಯ ಜನರು ಮುಕ್ತ ಮತ್ತು ಸಾಹಸಮಯ ಮನೋಭಾವದ ಜನರು. ಧನು ರಾಶಿಯವರು ತಮ್ಮ ಸ್ವಾತಂತ್ರ್ಯಕ್ಕೆ ಹೆಚ್ಚು ಮಹತ್ವ ಕೊಡುತ್ತಾರೆ. ದೀರ್ಘಾವಧಿಯ ಸಂಬಂಧಗಳಿಗೆ ಸಿಲುಕುವುದನ್ನು ವಿರೋಧಿಸುತ್ತಾರೆ. ಹೊಸ ಹೊಸ ಜನರೊಂದಿಗೆ ಬೆರೆಯಲು ಇಷ್ಟಪಡುವ ಇವರು ಒಂದೇ ವ್ಯಕ್ತಿಯೊಂದಿಗೆ ದೀರ್ಘಕಾಲದವರೆಗೆ ಸಂಬಂಧಗಳನ್ನು ಇರಿಸಿಕೊಳ್ಳಲು ಕಷ್ಟಪಡುತ್ತಾರೆ.
ಕುಂಭ ರಾಶಿ
ಕುಂಭ ರಾಶಿಯ ಜನರು ಸ್ವತಂತ್ರರಾಗಿ ಇರಲು ಮತ್ತು ಸ್ವತಂತ್ರರಾಗಿ ಬದುಕುವುದಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ. ಸ್ವಾತಂತ್ರ್ಯವನ್ನು ಕಳೆದುಕೊಳ್ಳಲು ಬಯಸದ ಕುಂಭ ರಾಶಿಯವರು ದೀರ್ಘಕಾಲದವರೆಗೆ ಸಂಬಂಧಗಳನ್ನು ಕಾಯ್ದುಕೊಳ್ಳಲು ಹೆಚ್ಚು ಶ್ರಮ ವಹಿಸುತ್ತಾರೆ. ಒಂದೇ ವ್ಯಕ್ತಿಯೊಂದಿಗೆ ಇರುವುದಕ್ಕಿಂತಲೂ ಸಾಮಾಜಿಕ ಜೀವನ ಮತ್ತು ಗೆಳೆಯರನ್ನು ಹೆಚ್ಚು ಕಾಳಜಿಯಿಂದ ಕಾಣುತ್ತಾರೆ.
ಮೀನ ರಾಶಿ
ಮೀನ ರಾಶಿಯವರು ಬಹಳ ಸೂಕ್ಷ್ಮ ಮನಸ್ಸಿನವರಾಗಿರುತ್ತಾರೆ. ಜೊತೆಗೆ ಇವರು ರೊಮ್ಯಾಂಟಿಕ್ ಕೂಡಾ ಹೌದು. ಬಹಳ ಆಳವಾಗಿ ಪ್ರೀತಿಸುವ ಇವರು ಸಂಬಂಧಗಳಿಂದ ದೂರವಾದರೆ ಅತಿ ಹೆಚ್ಚು ನೋವಾಗಬಹುದೆಂದು ಹೆದರುತ್ತಾರೆ.ಈ ರಾಶಿಯವರಿಗೆ ಪ್ರೀತಿಯ ವಿಚಾರದಲ್ಲಿ ದೊಡ್ಡ ದೊಡ್ಡ ಯೋಚನೆಗಳಿರುವುದರಿಂದ ಒಂದೇ ಸಂಬಂಧಗಳಿಗೆ ಕಮಿಟ್ ಆಗಲು ಸವಾಲುಗಳನ್ನು ಎದುರಿಸಬೇಕಾಗಬಹುದು. ದೀರ್ಘಕಾಲದ ಸಂಬಂಧಗಳು ನೋವುಂಟು ಮಾಡಬಹುದೆಂದು ಅದರಿಂದ ದೂರವಿರಲು ನೋಡಬಹುದು.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
