ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಈ ರಾಶಿಯವರಿಗೆ ಕರುಣೆ-ಸಹಾನುಭೂತಿ ಗುಣ ಹೆಚ್ಚು; ನಿಮ್ಮ ರಾಶಿಚಕ್ರ ಕೂಡಾ ಇದೆಯಾ ನೋಡಿ

ಈ ರಾಶಿಯವರಿಗೆ ಕರುಣೆ-ಸಹಾನುಭೂತಿ ಗುಣ ಹೆಚ್ಚು; ನಿಮ್ಮ ರಾಶಿಚಕ್ರ ಕೂಡಾ ಇದೆಯಾ ನೋಡಿ

ದ್ವಾದಶ ರಾಶಿಗಳಲ್ಲಿ ಒಂದೊಂದು ರಾಶಿಗಳ ಜನರು ಭಿನ್ನ ವಿಭಿನ್ನ ಸ್ವಭಾವ ಹೊಂದಿರುತ್ತಾರೆ. ಇವುಗಳಲ್ಲಿ ಈ ನಾಲ್ಕು ರಾಶಿಯ ಜನರು ಹುಟ್ಟಿನಿಂದಲೇ ದಯಾಮಯಿಗಳು. ಬೇರೆಯವರ ಕಷ್ಟವನ್ನು ಅರ್ಥಮಾಡಿಕೊಳ್ಳುವ, ಮತ್ತೊಬ್ಬರಿಗೆ ನೆರವಾಗುವ ಗುಣ ಹೊಂದಿರುತ್ತಾರೆ.

ಈ ರಾಶಿಯವರಿಗೆ ಕರುಣೆ-ಸಹಾನುಭೂತಿ ಗುಣ ಹೆಚ್ಚು; ನಿಮ್ಮ ರಾಶಿಚಕ್ರ ಕೂಡಾ ಇದೆಯಾ ನೋಡಿ
ಈ ರಾಶಿಯವರಿಗೆ ಕರುಣೆ-ಸಹಾನುಭೂತಿ ಗುಣ ಹೆಚ್ಚು; ನಿಮ್ಮ ರಾಶಿಚಕ್ರ ಕೂಡಾ ಇದೆಯಾ ನೋಡಿ (Pexel)

ರಾಶಿಚಕ್ರ ಚಿಹ್ನೆಗಳ ಪ್ರಕಾರ ಪ್ರತಿಯೊಬ್ಬರ ಸ್ವಭಾವ, ಗುಣವನ್ನು ಹೇಳಬಹುದು. ರಾಶಿಗನುಸಾರವಾಗಿ ಕೆಲವೊಂದು ರಾಶಿಯ ಜನರಲ್ಲಿ ಜನ್ಮತಃ ಕೆಲವೊಂದು ಸ್ವಭಾವಗಳು ಮೈಗಂಟಿರುತ್ತವೆ. ಕೆಲವೊಬ್ಬರು ಸದಾ ಲವಲವಿಕೆಯಿಂದರಿದ್ದರೆ, ಇನ್ನೂ ಕೆಲವರಲ್ಲಿ ಮಕ್ಕಳಂಥಾ ಮನಸ್ಥಿತಿ ಇರುತ್ತದೆ. ಕೆಲವೊಬ್ಬರು ಸಹಾಯ ಮಾಡುವ ಗುಣ ಹೊಂದಿದ್ದರೆ, ಕೆಲವರು ಸಹಾನುಭೂತಿ ತೋರುತ್ತಾರೆ. ಹೀಗೆ ವ್ಯಕ್ತಿಗಿಂತ ವ್ಯಕ್ತಿಗಳಲ್ಲಿ ಭಿನ್ನ ಲಕ್ಷಣಗಳನ್ನು ನೋಡಬಹುದು. ಸ್ವಾಭಾವಿಕವಾಗಿ ಕೆಲವು ರಾಶಿಚಕ್ರ ಚಿಹ್ನೆಗಳ ಜನರು ಸಹಾನುಭೂತಿಯುಳ್ಳವರು ಎಂದು ಹೇಳಲಾಗುತ್ತದೆ. ಹಾಗಿದ್ದರೆ ಯಾವ ರಾಶಿಯವರು ಮೃದು ಸ್ವಭಾವ ಹೊಂದಿರುತ್ತಾರೆ? ಹಾಗೂ ಸಹಾಯ ಮಾಡುವ ಗುಣ ಇರುತ್ತದೆ ಎಂಬುದನ್ನು ನೋಡೋಣ.

ಈ ರಾಶಿಚಕ್ರದ ಚಿಹ್ನೆಗಳ ಜನರು ದಯೆ ಮತ್ತು ಸಹಾನುಭೂತಿ ಹೊಂದಿರುತ್ತಾರೆ

ಕರ್ಕಾಟಕ

ಕರ್ಕಾಟಕ ರಾಶಿ ಪರಾನುಭೂತಿಗೆ ಹೆಸರುವಾಸಿ. ಈ ಚಿಹ್ನೆಯ ಜನರು ಕರುಣಾಮಯಿಗಳು. ಇವರು ಉತ್ತಮ ಕೇಳುಗರು. ಯಾರ ಮತನ್ನು ಆಲಿಸುವ ಮತ್ತು ಅದಕ್ಕೆ ಪ್ರತಿಕ್ರಿಯಿಸುವ ಸಾಮರ್ಥ್ಯ ಹಾಗೂ ತಾಳ್ಮೆ ಇವರಲ್ಲಿರುತ್ತದೆ. ಯಾರದೇ ಭಾವನೆಗಳನ್ನು ಹಂಚಿಕೊಳ್ಳಲು ಕಿವಿಯಾಗುತ್ತಾರೆ. ಭಾವುಕರಾಗುವವರಿಗೆ ಹೆಗಲಾಗುತ್ತಾರೆ. ಇತರರ ನೋವನ್ನು ಗ್ರಹಿಸುವ ಸಾಮರ್ಥ್ಯ ಇವರಲ್ಲಿದೆ.

ಕನ್ಯಾರಾಶಿ

ಈ ಚಿಹ್ನೆಯಲ್ಲಿ ಜನಿಸಿದವರು ತಮ್ಮ ನೈಜತೆ ಮತ್ತು ನಿಖರತೆಗೆ ಹೆಸರುವಾಸಿ. ಇವರು ದಯೆ ಮತ್ತು ಸಹಾನುಭೂತಿ ಹೊಂದಿದ್ದಾರೆ. ಇತರರಿಗೆ ನೆರವಾಗುವ ಉದಾರ ಮನಸ್ಸು ಹೊಂದಿರುತ್ತಾರೆ. ಅಗತ್ಯವಿದ್ದವರಿಗೆ ಸಹಾಯ ಮಾಡಲು ಸದಾ ಸಿದ್ಧರಿರುತ್ತರೆ. ಹಿಂದುಳಿದವರನ್ನು ಮೇಲಕ್ಕೆತ್ತಲು ಪ್ರೇರಣೆ ಪಡೆಯುತ್ತಾರೆ. ಮೃದು ಸೌಭಾವ ಇವರದಾಗಿದ್ದು, ಬೇಗನೆ ಒಬ್ಬರನ್ನು ಅರ್ಥಮಾಡಿಕೊಳ್ಳುತ್ತಾರೆ.

ತುಲಾ

ತುಲಾ ರಾಶಿ ಸಾಮರಸ್ಯಕ್ಕೆ ಹೆಸರುವಾಸಿಯಾಗಿದೆ. ಈ ಚಿಹ್ನೆಯ ಸಹಜ ಸಂವೇದನೆ ಮತ್ತು ನ್ಯಾಯದ ಪ್ರಜ್ಞೆಯು ಜೀವನದ ಎಲ್ಲಾ ಅಂಶಗಳಲ್ಲಿ ಸಾಮರಸ್ಯ ಮತ್ತು ಸಮತೋಲನಕ್ಕಾಗಿ ಶ್ರಮಿಸಲು ಅವರನ್ನು ಪ್ರೇರೇಪಿಸುತ್ತದೆ. ಸಂಬಂಧಗಳನ್ನು ಬೆಳೆಸುವಲ್ಲಿ ಇವರು ಜಾಣರು. ಅವರ ಸಹಾನುಭೂತಿಯ ಗುಣದಿಂದಾಗಿ ಬೇಗನೆ ಉತ್ತಮ ಸ್ನೇಹಿತರನ್ನು ಸಂಪಾದಿಸುತ್ತಾರೆ.

ಮೀನ

ಮೀನ ರಾಶಿಯು ದಯೆಯ ಸ್ವಭಾವದಿಂದ ಇತರರನ್ನು ಆಕರ್ಷಿಸುತ್ತದೆ. ಈ ಚಿಹ್ನೆಯ ಜನರು ಪರಾನುಭೂತಿ ಹೊಂದಿರುತ್ತಾರೆ. ಸಾಮಾನ್ಯವಾಗಿ ತಮ್ಮ ಅಗತ್ಯಗಳಿಗಿಂತಲೂ ಇತರರ ಅಗತ್ಯಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ತಮ್ಮ ಬುದ್ಧಿವಂತಿಕೆಯಿಂದಾಗಿ, ಎಲ್ಲರನ್ನೂ ಅರ್ಥಮಾಡಿಕೊಳ್ಳುತ್ತಾರೆ. ತಮ್ಮ ಸುತ್ತಲಿನ ಇತರರೊಂದಿಗೆ ಸಹಾನುಭೂತಿ ಹೊಂದಲು ಸಾಧ್ಯವಾಗುತ್ತದೆ. ಒಬ್ಬರಿಗೆ ಸಾಂತ್ವನ ಹೇಳುವಲ್ಲೂ ಇವರು ಜಾಣರು.

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.