ಈ ರಾಶಿಗಳಿಗೆ ಸೇರಿದವರಿಗೆ ಫ್ಯಾಷನ್ ಮೋಹ ಹೆಚ್ಚು, ಟಿಪ್‌ಟಾಪ್ ಡ್ರೆಸ್ ಮಾಡ್ಕೊಬೇಕು ಅನ್ನೋ ಆಸೆ ಜಾಸ್ತಿ
Zodiac Sings: ಫ್ಯಾಷನ್ ಬಗ್ಗೆ ಅನೇಕರಿಗೆ ಆಸಕ್ತಿ ಇರುತ್ತದೆ. ಅದರಲ್ಲೂ ಕೆಲವು ನಿರ್ದಿಷ್ಟ ರಾಶಿಯ ಜನರಿಗೆ ಫ್ಯಾಷನ್ ಬಗ್ಗೆ ಬಹಳ ಒಲವಿರುತ್ತದೆ. ಸೊಗಸಾದ ಫ್ಯಾಷನ್ ಪ್ರಜ್ಞೆಗೆ ಯಾವ ರಾಶಿಗಳು ಹೆಸರುವಾಸಿ? ಯಾರು ಯಾವ ರೀತಿ ಫ್ಯಾಷನ್ ಇಷ್ಟಪಡುತ್ತಾರೆ? ಎನ್ನುವುದರ ಬಗ್ಗೆ ಇಲ್ಲಿ ಮಾಹಿತಿ ಇದೆ.

ಫ್ಯಾಷನ್ ಎನ್ನುವುದು ಸ್ವಯಂ ಅಭಿವ್ಯಕ್ತಿಯ ಒಂದು ರೂಪವಾಗಿದೆ. ಆದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕೆಲವು ರಾಶಿಚಕ್ರದವರು ಸೊಗಸಾದ ಫ್ಯಾಷನ್ ಪ್ರಜ್ಞೆಗೆ ಹೆಸರುವಾಸಿಯಾಗಿರುತ್ತಾರೆ. ಯಾವ ರಾಶಿಯ ಜನರು ಯಾವ ರೀತಿ ಫ್ಯಾಶನ್ ಇಷ್ಟ ಪಡುತ್ತಾರೆ ನೋಡೋಣ.
ಸಿಂಹ ರಾಶಿ
ಸಿಂಹ ರಾಶಿಯವರು ಫ್ಯಾಷನ್ ವಿಚಾರದಲ್ಲಿ ಸಹಜವಾದ ಅಭಿರುಚಿಯನ್ನು ಹೊಂದಿರುತ್ತಾರೆ. ಅವರು ತಮ್ಮ ಉಡುಪುಗಳ ಆಯ್ಕೆಯಲ್ಲಿ ಬಹಳ ಚೂಸಿಯಾಗಿರುತ್ತಾರೆ. ಫ್ಯಾಷನ್ ವಿಚಾರದಲ್ಲಿ ಅವರು ರಾಜಿಯಾಗಲು ಇಷ್ಟಪಡುವುದಿಲ್ಲ. ತಮಗೆ ಒಪ್ಪುವಂಥ ಉಡುಪುಗಳನ್ನು ಆಯ್ಕೆ ಮಾಡಿಕೊಳ್ಳುವರೆಗೂ ಇವರಿಗೆ ಸಮಾಧಾನ ಇರುವುದಿಲ್ಲ. ಇವರು ಹೆಚ್ಚಾಗಿ ಬೋಲ್ಡ್ ಪ್ರಿಂಟ್‌ಗಳು, ಗಾಢ ಬಣ್ಣಗಳನ್ನು ಇಷ್ಟಪಡುತ್ತಾರೆ. ತಮ್ಮ ವಾರ್ಡ್‌ರೋಬ್ ಕಲೆಕ್ಷನ್‌ನಿಂದ ಇತರರನ್ನು ಆಕರ್ಷಿಸುತ್ತಾರೆ.
ಇದನ್ನೂ ಓದಿ: ಈ ದಿನಾಂಕದಲ್ಲಿ ಜನಿಸಿದ ಪುರುಷರು ಅದೃಷ್ಟವಂತರು
ತುಲಾ ರಾಶಿ
ತುಲಾ ರಾಶಿಯನ್ನು ಪ್ರೀತಿ ಮತ್ತು ಸೌಂದರ್ಯದ ಗ್ರಹವಾದ ಶುಕ್ರನು ಆಳುತ್ತಾನೆ. ಈ ರಾಶಿಯಲ್ಲಿ ಜನಿಸಿದ ಜನರು ಕೂಡಾ ಫ್ಯಾಷನ್ ವಿಚಾರದಲ್ಲಿ ಬಹಳ ತೀಕ್ಷ್ಣವಾಗಿರುತ್ತಾರೆ. ಸ್ವಾಭಾವಿಕವಾಗಿ ಎಲ್ಲಾ ಸುಂದರವಾದ ವಸ್ತುಗಳತ್ತ ಆಕರ್ಷಿತರಾಗುತ್ತಾರೆ. ಸೊಗಸಾದ ಮತ್ತು ಸಂಸ್ಕರಿಸಿದ ಫ್ಯಾಷನ್ ಶೈಲಿಯನ್ನು ಇವರು ಆಯ್ಕೆ ಮಾಡಿಕೊಳ್ಳುತ್ತಾರೆ. ಹೊಸ ಫ್ಯಾಷನ್ ಟ್ರೆಂಡ್ ಸೃಷ್ಟಿ ಮಾಡುವಲ್ಲಿ ಇವರು ನಿಪುಣರು. ಸಾಮಾನ್ಯವಾಗಿ ಇವರು ಉನ್ನತ ಮಟ್ಟದ ಫ್ಯಾಷನ್ ಬ್ರ್ಯಾಂಡ್‌ಗಳತ್ತ ಆಕರ್ಷಿತರಾಗುತ್ತಾರೆ.
ಮಿಥುನ ರಾಶಿ
ಈ ರಾಶಿಯವರನ್ನು ಸಂವಹನ ಗ್ರಹವಾದ ಬುಧನು ಆಳುತ್ತಾನೆ. ಮಿಥುನ ರಾಶಿಯವರು ವಿಭಿನ್ನ ಲುಕ್ ಮತ್ತು ಫ್ಯಾಷನ್ ಟ್ರೆಂಡ್ ಪ್ರಯೋಗಿಸಲು ಯಾವಾಗಲೂ ಮುಂದೆ ಇರುತ್ತಾರೆ. ಮಾರುಕಟ್ಟೆಗೆ ಯಾವುದೇ ಹೊಸ ಫ್ಯಾಷನ್ ಬ್ರ್ಯಾಂಡ್ ಬಂದಲ್ಲಿ ಅದನ್ನು ಪ್ರಯೋಗಿಸಲು ಇವರೇ ಸದಾ ಮುಂದಿರುತ್ತಾರೆ. ತಮಗೆ ಒಪ್ಪುವಂಥ ಯಾವುದೇ ಉಡುಪುಗಳನ್ನು ಧರಿಸಲು ಅವರು ಹಿಂಜರಿಯುವುದಿಲ್ಲ. ತಮ್ಮ ಫ್ಯಾಷನ್‌ನಿಂದಲೇ ಇತರರನ್ನು ಸೆಳೆಯಲು ಬಯಸುತ್ತಾರೆ.
ವೃಷಭ ರಾಶಿ
ಶುಕ್ರನು ಈ ರಾಶಿಯವರನ್ನು ಆಳುತ್ತಾನೆ. ಈ ರಾಶಿಯಡಿ ಜನಿಸಿದ ಜನರು ಕ್ಲಾಸಿಕ್ ಮತ್ತು ಟೈಮ್‌ಲೆಸ್ ಶೈಲಿಯ ಫ್ಯಾಷನ್‌ನ್ನು ಹೆಚ್ಚಿಗೆ ಅಳವಡಿಸಿಕೊಳ್ಳುತ್ತಾರೆ. ಅವರು ಹೆಚ್ಚಿನ ಪ್ರಮಾಣಕ್ಕಿಂತ ಗುಣಮಟ್ಟಕ್ಕೆ ಆದ್ಯತೆ ನೀಡುತ್ತಾರೆ ಸರಳವಾದ ಉಡುಪುಗಳನ್ನು ಕೂಡಾ ಹೇಗೆ ಆಕರ್ಷಕವಾಗಿ ಕಾಣಿಸುವಂತೆ ಮಾಡಬೇಕು ಎಂಬ ಕಲೆ ಇವರಿಗೆ ಗೊತ್ತಿದೆ.
ಕನ್ಯಾ ರಾಶಿ
ಈ ರಾಶಿಯವರನ್ನು ಬುಧನು ಆಳುತ್ತಾನೆ. ಈ ರಾಶಿಯಡಿ ಜನಿಸಿದ ಜನರು ಪರಿಪೂರ್ಣತಾವಾದಿಗಳು. ಚಿಕ್ಕ ವಿಚಾರಗಳಿಗೂ ಹೆಚ್ಚಿನ ಗಮನ ನೀಡುತ್ತಾರೆ. ಇವರು ಟ್ರೆಂಡಿ ಫ್ಯಾಡ್‌ಗಳಿಗಿಂತ ಕ್ಲಾಸಿಕ್ ಮತ್ತು ಟೈಮ್‌ಲೆಸ್ ಫ್ಯಾಷನ್ ಮಾಡಲು ಬಯಸುತ್ತಾರೆ. ಕನ್ಯಾ ರಾಶಿಯವರು ಯಾವಾಗಲೂ ಚೆನ್ನಾಗಿ ಸಿದ್ದಗೊಳ್ಳುತ್ತಾರೆ. ಸರಳವಾದ ಉಡುಪುಗಳನ್ನೇ ಆಕರ್ಷಕವಾಗಿ ಕಾಣುವಂತೆ ಮಾಡುತ್ತಾರೆ. ಇತರ ರಾಶಿಗಳಿಂತ ಇವರು ಫ್ಯಾಷನ್ ವಿಚಾರದಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
