ಬಾಂಗ್ಲಾದೇಶ ಪ್ರೀಮಿಯರ್ ಲೀಗ್​ನಲ್ಲಿ ಮ್ಯಾಚ್ ಫಿಕ್ಸಿಂಗ್; 10 ಆಟಗಾರರು, 4 ಫ್ರಾಂಚೈಸಿಗಳ ವಿರುದ್ಧ ತನಿಖೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಬಾಂಗ್ಲಾದೇಶ ಪ್ರೀಮಿಯರ್ ಲೀಗ್​ನಲ್ಲಿ ಮ್ಯಾಚ್ ಫಿಕ್ಸಿಂಗ್; 10 ಆಟಗಾರರು, 4 ಫ್ರಾಂಚೈಸಿಗಳ ವಿರುದ್ಧ ತನಿಖೆ

ಬಾಂಗ್ಲಾದೇಶ ಪ್ರೀಮಿಯರ್ ಲೀಗ್​ನಲ್ಲಿ ಮ್ಯಾಚ್ ಫಿಕ್ಸಿಂಗ್; 10 ಆಟಗಾರರು, 4 ಫ್ರಾಂಚೈಸಿಗಳ ವಿರುದ್ಧ ತನಿಖೆ

ಬಾಂಗ್ಲಾದೇಶ ಪ್ರೀಮಿಯರ್ ಲೀಗ್​ನಲ್ಲಿ ನಾಲ್ಕು ಫ್ರಾಂಚೈಸಿಗಳು ಮತ್ತು 10 ಆಟಗಾರರ ವಿರುದ್ಧ ಸ್ಪಾಟ್ ಫಿಕ್ಸಿಂಗ್ ನಡೆಸಿರುವ ಆರೋಪ ಕೇಳಿ ಬಂದಿದ್ದು, ತನಿಖೆಗೆ ಒಳಪಟ್ಟಿದ್ದಾರೆ.

ಬಾಂಗ್ಲಾದೇಶ ಪ್ರೀಮಿಯರ್ ಲೀಗ್​ನಲ್ಲಿ ಮ್ಯಾಚ್ ಫಿಕ್ಸಿಂಗ್; 10 ಆಟಗಾರರು, 4 ಫ್ರಾಂಚೈಸಿಗಳ ವಿರುದ್ಧ ತನಿಖೆ
ಬಾಂಗ್ಲಾದೇಶ ಪ್ರೀಮಿಯರ್ ಲೀಗ್​ನಲ್ಲಿ ಮ್ಯಾಚ್ ಫಿಕ್ಸಿಂಗ್; 10 ಆಟಗಾರರು, 4 ಫ್ರಾಂಚೈಸಿಗಳ ವಿರುದ್ಧ ತನಿಖೆ

ಬಾಂಗ್ಲಾದೇಶ ಪ್ರೀಮಿಯರ್ ಲೀಗ್​ನಲ್ಲಿ (Bangladesh Premier League) ಸ್ಪಾಟ್ ಫಿಕ್ಸಿಂಗ್ ನಡೆಸಿದ ಆರೋಪದಡಿ 10 ಆಟಗಾರರು ಮತ್ತು 4 ಫ್ರಾಂಚೈಸಿಗಳು ತನಿಖೆ ಎದುರಿಸುತ್ತಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅನಾಮಧೇಯ ಸುಳಿವುಗಳು ಮತ್ತು ಮಾಧ್ಯಮ ವರದಿಗಳ ಪ್ರಕಾರ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (BCB) ಭ್ರಷ್ಟಾಚಾರ ನಿಗ್ರಹ ಘಟಕ (ACU) ಅನುಮಾನಾಸ್ಪದ ಫಿಕ್ಸಿಂಗ್​ ಕಾರಣ 8 ಪಂದ್ಯಗಳು ತನಿಖೆಗೆ ಒಳಪಡಿಸಿವೆ.

ಡೈಲಿ ಸ್ಟಾರ್ ವರದಿಯ ಪ್ರಕಾರ, ಎಸಿಯು ರೇಡಾರ್ ಅಡಿಯಲ್ಲಿ ಬಂದ 10 ಆಟಗಾರರ ಪೈಕಿ 6 ಮಂದಿ ರಾಷ್ಟ್ರೀಯ ತಂಡದ ಪರ ಆಡಿದವರಾಗಿದ್ದಾರೆ. ಇಬ್ಬರು ಅನ್​ಕ್ಯಾಪ್ಡ್​ ಆಟಗಾರರು ಮತ್ತು ಇಬ್ಬರು ವಿದೇಶಿ ಆಟಗಾರರು ಇದರಲ್ಲಿದ್ದಾರೆ. ದರ್ಬಾರ್ ರಾಜಾ ಶಾಹಿ, ಢಾಕಾ ಕ್ಯಾಪಿಟಲ್ಸ್, ಸಿಲ್ಹೆಟ್ ಸ್ಟ್ರೈಕರ್ಸ್ ಮತ್ತು ಚಿತ್ತಗಾಂಗ್ ಕಿಂಗ್ಸ್ ಫ್ರಾಂಚೈಸ್​ಗಳು ತನಿಖೆಗೆ ಒಳಪಟ್ಟಿವೆ.

ಸ್ಪಾಟ್ ಮತ್ತು ಮ್ಯಾಚ್ ಫಿಕ್ಸಿಂಗ್ ಬಗ್ಗೆ ತನಿಖೆಗೆ ಒಳಪಟ್ಟಿರುವ ಪಂದ್ಯಗಳು

ಫಾರ್ಚೂನ್ ಬರಿಶಾಲ್ vs ದರ್ಬಾರ್ ರಾಜಾಶಾಹಿ (ಜನವರಿ 6)

ರಂಗ್ ಪುರ್ ರೈಡರ್ಸ್ vs ಢಾಕಾ ಕ್ಯಾಪಿಟಲ್ಸ್ (ಜನವರಿ 7)

ಢಾಕಾ ಕ್ಯಾಪಿಟಲ್ಸ್ vs ಸಿಲ್ಹೆಟ್ ಸ್ಟ್ರೈಕರ್ಸ್ (ಜನವರಿ 10)

ದರ್ಬಾರ್ ರಾಜಾಶಾಹಿ vs ಢಾಕಾ ಕ್ಯಾಪಿಟಲ್ಸ್ (ಜನವರಿ 12)

ಚಿತ್ತಗಾಂಗ್ ಕಿಂಗ್ಸ್ vs ಸಿಲ್ಹೆಟ್ ಸ್ಟ್ರೈಕರ್ಸ್ (ಜನವರಿ 13)

ಫಾರ್ಚೂನ್ ಬರಿಶಾಲ್ vs ಖುಲ್ನಾ ಟೈಗರ್ಸ್ (ಜನವರಿ 22)

ಚಿತ್ತಗಾಂಗ್ ಕಿಂಗ್ಸ್ ವಿರುದ್ಧ ಸಿಲ್ಹೆಟ್ ಸ್ಟ್ರೈಕರ್ಸ್ (ಜನವರಿ 22)

ದರ್ಬಾರ್ ರಾಜಾ ಶಾಹಿ vs ರಂಗ್ ಪುರ್ ರೈಡರ್ಸ್ (ಜನವರಿ 23)

ಈ ಪಂದ್ಯಗಳಲ್ಲಿ ಬೌಲರ್​​ಗಳು ಸತತ ಮೂರು ವೈಡ್​ಗಳು ಮತ್ತು ನೋ-ಬಾಲ್​ಗಳನ್ನು ಬಿಟ್ಟುಕೊಟ್ಟ ಉದಾಹರಣೆಗಳಿವೆ. ಅನುಮಾನಾಸ್ಪದ ಪ್ಲೇಯಿಂಗ್ 11 ಆಯ್ಕೆ ಮತ್ತು ದೊಡ್ಡ ಸ್ಕೋರ್​​ಗಳ ಗುರಿ ಬೆನ್ನಟ್ಟುವಾಗ ಮಧ್ಯಮ ಓವರ್​ಗಳಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡಿದ ಉದಾಹರಣೆಗಳಿವೆ. ಏತನ್ಮಧ್ಯೆ, 7 ಫ್ರಾಂಚೈಸಿಗಳಿಗೆ ನೇಮಕವಾದ 7 ಎಸಿಯು ಸಮಗ್ರತೆ ಅಧಿಕಾರಿಗಳ ಕಾರ್ಯಕ್ಷಮತೆಯ ಬಗ್ಗೆಯೂ ಕಳವಳ ವ್ಯಕ್ತವಾಗಿದೆ. ಏಕೆಂದರೆ ಈ ಅಧಿಕಾರಿಗಳಿಗೆ ವೇತನ, ವಸತಿ ಮತ್ತು ಇತರ ಭತ್ಯೆಗಳನ್ನು ಫ್ರಾಂಚೈಸಿಗಳೇ ನೋಡಿಕೊಳ್ಳುತ್ತಿವೆ.

ಅಧಿಕಾರಿಯೊಬ್ಬರು ಹೇಳಿದ್ದು ಹೀಗೆ…

ಹೆಸರು ಹೇಳಲು ಇಚ್ಛಿಸದ ಬಿಸಿಬಿ ಅಧಿಕಾರಿಯೊಬ್ಬರು, 'ಎಸಿಯು ಅಧಿಕಾರಿಗಳು ತಂಡದೊಂದಿಗೆ ಇರುವಾಗ, ಅವರ ವೆಚ್ಚವನ್ನು ಫ್ರಾಂಚೈಸಿಗಳೇ ವಹಿಸಿಕೊಂಡರೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುವುದು ಹೇಗೆ ಎಂದು ಬಿಸಿಬಿ ಸಿಇಒ ನಿಜಾಮುದ್ದೀನ್ ಚೌಧರಿ ಮತ್ತು ಬಿಸಿಬಿ ಅಧ್ಯಕ್ಷ ಫಾರುಕ್ ಅಹ್ಮದ್ ಅವರ ಗಮನಕ್ಕೆ ತಂದಿದ್ದೇನೆ. ಫ್ರಾಂಚೈಸಿಗಳು ಖಂಡಿತವಾಗಿ ಪಕ್ಷಪಾತಿಯಾಗಿರುತ್ತಾರೆ ಎಂದು ದಿ ಡೈಲಿ ಸ್ಟಾರ್‌ಗೆ ತಿಳಿಸಿದ್ದಾರೆ. ನಾನು ವಿಷಯದ ಬಗ್ಗೆ ತಿಳಿಸಿದಾಗ ಅಧ್ಯಕ್ಷರು, ಸಿಇಒ ವಿಷಯ ಒಪ್ಪಿದರು. ಆದರೆ ನಂತರ ಏನೂ ಬದಲಾಗಲಿಲ್ಲ ಎಂದು ಹೇಳಿದ್ದಾರೆ.

ಸ್ಪಾಟ್ ಫಿಕ್ಸಿಂಗ್‌ಗಾಗಿ ಬಿಪಿಎಲ್ ತನಿಖೆಗೆ ಒಳಪಟ್ಟಿರುವುದು ಇದೇ ಮೊದಲಲ್ಲ. 2014 ರಲ್ಲಿ ಬಾಂಗ್ಲಾದೇಶದ ಮಾಜಿ ನಾಯಕ ಮೊಹಮ್ಮದ್ ಅಶ್ರಫುಲ್ ಬಿಪಿಎಲ್ 2013 ರಲ್ಲಿ ಸ್ಪಾಟ್ ಫಿಕ್ಸಿಂಗ್ ಮಾಡಿರುವುದನ್ನು ಒಪ್ಪಿಕೊಂಡಿದ್ದರು. ಇದರಿಂದ ಎಂಟು ವರ್ಷಗಳ ಕಾಲ ನಿಷೇಧಕ್ಕೊಳಗಾಗಿದ್ದರು. ಇದೀಗ ಪ್ರಸ್ತುತ ನಡೆಯುತ್ತಿರುವ ತನಿಖೆಯಲ್ಲಿ ಫಿಕ್ಸಿಂಗ್ ಮಾಡಿರುವುದು ಸಾಬೀತಾದರೆ ಇಂತಹದ್ದೇ ಶಿಕ್ಷೆಗೆ ಗುರಿಯಾಗಲಿದ್ದಾರೆ.

Whats_app_banner