4NB, 4NB, 0NB, 0, 4NB, 0NB, 4; ಭಾರತದ ಈ ಬ್ಯಾಟರ್​ಗೆ ಭಯ ಬಿದ್ದು 2 ಬಾಲ್​ಗೆ 21 ರನ್ ನೀಡಿದ್ದ ಪಾಕ್​ ಬೌಲರ್
ಕನ್ನಡ ಸುದ್ದಿ  /  ಕ್ರಿಕೆಟ್  /  4nb, 4nb, 0nb, 0, 4nb, 0nb, 4; ಭಾರತದ ಈ ಬ್ಯಾಟರ್​ಗೆ ಭಯ ಬಿದ್ದು 2 ಬಾಲ್​ಗೆ 21 ರನ್ ನೀಡಿದ್ದ ಪಾಕ್​ ಬೌಲರ್

4NB, 4NB, 0NB, 0, 4NB, 0NB, 4; ಭಾರತದ ಈ ಬ್ಯಾಟರ್​ಗೆ ಭಯ ಬಿದ್ದು 2 ಬಾಲ್​ಗೆ 21 ರನ್ ನೀಡಿದ್ದ ಪಾಕ್​ ಬೌಲರ್

ಭಾರತ ತಂಡದ ವೀರೇಂದ್ರ ಸೆಹ್ವಾಗ್​ ಅವರಿ​ಗೆ ಭಯ ಬಿದ್ದು ಪಾಕಿಸ್ತಾನದ ಈ ಬೌಲರ್​​ ಕೇವಲ 2 ಎಸೆತಗಳಿಗೆ ​ಗೆ 21 ರನ್ ನೀಡಿದ್ದರು. ಇದು ಕ್ರಿಕೆಟ್ ಜಗತ್ತಿನ ಅತ್ಯಂತ ಕೆಟ್ಟ ಓವರ್.

4NB, 4NB, 0NB, 0, 4NB, 0NB, 4; ಭಾರತದ ಈ ಬ್ಯಾಟರ್​ಗೆ ಭಯ ಬಿದ್ದು 2 ಬಾಲ್​ಗೆ 21 ರನ್ ನೀಡಿದ್ದ ಪಾಕ್​ನ ಈ ಬೌಲರ್
4NB, 4NB, 0NB, 0, 4NB, 0NB, 4; ಭಾರತದ ಈ ಬ್ಯಾಟರ್​ಗೆ ಭಯ ಬಿದ್ದು 2 ಬಾಲ್​ಗೆ 21 ರನ್ ನೀಡಿದ್ದ ಪಾಕ್​ನ ಈ ಬೌಲರ್

ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಆ್ಯಡಂ ಗಿಲ್‌ಕ್ರಿಸ್ಟ್... ಹೀಗೆ ಕ್ರಿಕೆಟ್ ಲೋಕದಲ್ಲಿ ವಿಧ್ವಂಸಕ ಬ್ಯಾಟ್ಸ್​ಮನ್​ಗಳ ಪಟ್ಟಿ ಹೇಳುತ್ತಾ ಹೋದಂತೆಲ್ಲಾ ದೊಡ್ಡದೇ ಇದೆ. ಆದರೆ ಭಾರತೀಯ ಆಟಗಾರರ ವಿಷಯದಲ್ಲಿ ಈ ಪಟ್ಟಿಯಲ್ಲಿ ಮೊದಲಿಗರು ವೀರೇಂದ್ರ ಸೆಹ್ವಾಗ್. ಬೌಲರ್ ಯಾರೇ ಆಗಿರಲಿ, ಯಾವುದೇ ಓವರ್ ಆಗಿರಲಿ, ಮೊದಲ ಎಸೆತದಲ್ಲೇ ಸಿಕ್ಸರ್ ಹೊಡೆಯುವುದು ಸೆಹ್ವಾಗ್ ಅವರ ಶೈಲಿ.

ಹೀಗೆ ಅಬ್ಬರಿಸುವ ಮೂಲಕ ಎದುರಾಳಿ ಬೌಲರ್​ಗಳನ್ನು ಹೆದರಿಸುತ್ತಿದ್ದರು. 2000ರ ದಶಕದಲ್ಲಿ ಪಾಕಿಸ್ತಾನದ ಬೌಲರ್​​ಗೆ ನರಕ ತೋರಿಸಿದ್ದ. ಪಾಕಿಸ್ತಾನಿ ಬೌಲರ್ ರಾಣಾ ನವೀದ್-ಉಲ್-ಹುಸೇನ್​ಗೆ ಸೆಹ್ವಾಗ್ ನೈಟ್​​ಮೇರ್​ ಆಗಿದ್ದ. ಅಂದು ಸೆಹ್ವಾಗ್​ಗೆ ಭಯಬಿದ್ದು ಕೇವಲ ಎರಡು ಎಸೆತಗಳಿಗೆ ಆ ಬೌಲರ್​​ 21 ರನ್‌ ಬಿಟ್ಟುಕೊಟ್ಟಿದ್ದ. ಇಷ್ಟಕ್ಕೂ ಆ ಓವರ್​ ಏನಾಗಿತ್ತು? ಆ ಪಂದ್ಯದ ಹೈಲೈಟ್ಸ್ ಏನೆಂದು ತಿಳಿಯೋಣ.

ಹೇಗಿತ್ತು ಆ ಓವರ್​​​?

ಈ ಪಂದ್ಯ ಸರಿಯಾಗಿ 17 ವರ್ಷಗಳ ಹಿಂದೆ ನಡೆದಿತ್ತು. ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿಯ ಭಾಗವಾಗಿ 2004ರ ಮಾರ್ಚ್ 13ರಂದು ಈ ಏಕದಿನ ನಡೆದಿತ್ತು. ಆ ಪಂದ್ಯದ ಇನ್ನಿಂಗ್ಸ್‌ನ 11ನೇ ಓವರ್‌ನಲ್ಲಿ ರಾಣಾ ಬೌಲಿಂಗ್ ಮಾಡಿದರು. ಆಗಲೇ ಬಿರುಸಿನ ಬ್ಯಾಟಿಂಗ್ ನಡೆಸುವ ಮೂಲಕ ಬೌಲರ್​​ಗಳಿಗೆ ಬೆಂಡೆತ್ತುತ್ತಿದ್ದ ಸೆಹ್ವಾಗ್, ರಾಣಾ ಬೌಲಿಂಗ್​​ನಲ್ಲಿ ಬೌಂಡರಿಗಳ ಸುರಿಮಳೆಗೈದರು. ಇದರಿಂದ ಒತ್ತಡಕ್ಕೊಳಗಾದ ರಾಣಾ, ಮೊದಲ ಎಸೆತದಲ್ಲೇ ನೋ-ಬಾಲ್ ಎಸೆದರು. ಅದನ್ನು ಸೆಹ್ವಾಗ್ ಬೌಂಡರಿಗಟ್ಟಿದರು.

2ನೇ ಎಸೆತವೂ ನೋ ಬಾಲ್ ಆಗಿತ್ತು. ಮತ್ತೊಮ್ಮೆ ಫೋರ್ ಹೊಡೆದರು. ಮೂರನೇ ಎಸೆತವೂ ನೋ ಬಾಲ್ ಹಾಕಿದ. ಆದರೆ ಯಾವುದೇ ರನ್ ಬರಲಿಲ್ಲ. ನಾಲ್ಕನೇ ಎಸೆತ ಕಾನೂನುಬದ್ಧ ಎಸೆತವಾಗಿತ್ತು. ಆದರೆ ಐದನೇ ಎಸೆತದಲ್ಲಿ ಮತ್ತೆ ನೋ ಬಾಲ್ ಎಸೆದರು. ಸೆಹ್ವಾಗ್ ಅದಕ್ಕೂ ಬೌಂಡರಿ ಬಾರಿಸಿದರು. ಅದರ ಮರು ಅಂದರೆ 6ನೇ ಎಸೆತ ನೋ-ಬಾಲ್ ಆಗಿದ್ದರೂ, ಯಾವುದೇ ರನ್ ಬರಲಿಲ್ಲ. ಕೊನೆಗೆ, 2ನೇ ಕಾನೂನುಬದ್ಧ ಎಸೆತ ಎಸೆದಾಗ, ಸೆಹ್ವಾಗ್ ಆ ಚೆಂಡನ್ನು ಬೌಂಡರಿಗೆ ಹೊಡೆದರು. ಹೀಗೆ ಎರಡು ಎಸೆತಗಳಿಗೆ ಒಟ್ಟು 21 ರನ್ ಬಿಟ್ಟುಕೊಟ್ಟಿದ್ದರು.

ಕ್ರಿಕೆಟ್ ಜಗತ್ತಿನ ಅತ್ಯಂತ ಕೆಟ್ಟ ಓವರ್​

ಇದರೊಂದಿಗೆ, ಆ ಓವರ್‌ನಲ್ಲಿ ಕೇವಲ ಎರಡು ಎಸೆತಗಳಲ್ಲಿ 21 ರನ್‌ಗಳು ಬಂದವು. ಸೆಹ್ವಾಗ್ 4NB, 4NB, 0NB, 0, 4NB, 0NB, 4 ರೂಪದಲ್ಲಿ 21 ರನ್ ಗಳಿಸಿದರು. ಏತನ್ಮಧ್ಯೆ, ವಿಶ್ಲೇಷಕರು ಹೇಳುವಂತೆ ಇದು ಕ್ರಿಕೆಟ್ ಜಗತ್ತಿನಲ್ಲಿ ಅತ್ಯಂತ ಕೆಟ್ಟ ಓವರ್ ಆಗಿದೆ. ಆ ಓವರ್‌ನ ಉಳಿದ ಎಸೆತಗಳಲ್ಲಿ ರಾಣಾ ಕೇವಲ ಮೂರು ರನ್‌ಗಳನ್ನು ಮಾತ್ರ ನೀಡಿದ್ದರು ಎಂಬುದು ಗಮನಾರ್ಹ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.