ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವಿಶ್ವಕಪ್‌ ಆಡುತ್ತಿರುವ ಓಮನ್ ತಂಡದಲ್ಲಿ 7 ಭಾರತೀಯರು, ಪಾಕಿಸ್ತಾನ ಮೂಲದ 10 ಕ್ರಿಕೆಟಿಗರು

ಟಿ20 ವಿಶ್ವಕಪ್‌ ಆಡುತ್ತಿರುವ ಓಮನ್ ತಂಡದಲ್ಲಿ 7 ಭಾರತೀಯರು, ಪಾಕಿಸ್ತಾನ ಮೂಲದ 10 ಕ್ರಿಕೆಟಿಗರು

Oman T20 World Cup 2024 Squad: ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಓಮನ್ ಕ್ರಿಕೆಟ್‌ ತಂಡ ಕಣಕ್ಕಿಳಿಸುತ್ತಿದೆ. ಆದರೆ, ಈ ತಂಡದಲ್ಲಿ ಪಾಕಿಸ್ತಾನ ಮತ್ತು ಭಾರತ ಮೂಲದ ಕ್ರಿಕೆಟಿಗರೇ ತುಂಬಿದ್ದಾರೆ.

ಟಿ20 ವಿಶ್ವಕಪ್‌ ಆಡುತ್ತಿರುವ ಓಮನ್ ತಂಡದಲ್ಲಿ 7 ಭಾರತೀಯರು
ಟಿ20 ವಿಶ್ವಕಪ್‌ ಆಡುತ್ತಿರುವ ಓಮನ್ ತಂಡದಲ್ಲಿ 7 ಭಾರತೀಯರು

ಟಿ20 ವಿಶ್ವಕಪ್ ಪಂದ್ಯಾವಳಿಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಟೂರ್ನಿಯಲ್ಲಿ ಭಾಗವಹಿಸುವ ಬಹುತೇಕ ಎಲ್ಲಾ ದೇಶಗಳು 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಜೂನ್‌ 1ರಂದು ಪಂದ್ಯಾವಳಿ ಆರಂಭವಾಗುತ್ತಿದ್ದು, ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಅಭಿಮಾನಿಗಳ ನಡುವೆ ಕಾತರ ಹೆಚ್ಚಿದೆ. ಈ ನಡುವೆ ವಿಶ್ವಸಮರದಲ್ಲಿ ಈ ಬಾರಿ ಓಮನ್‌ ಕ್ರಿಕೆಟ್‌ ತಂಡ ಕೂಡಾ ಭಾಗವಹಿಸುತ್ತಿದ್ದು, ಈ ತಂಡ ಕೂಡಾ ಬಲಿಷ್ಠವಾಗಿದೆ. ಓಮನ್‌ ದೇಶದ ತಂಡವಾದರೂ, ಇದರಲ್ಲಿ ಇರುವ ಹೆಚ್ಚಿನ ಕ್ರಿಕೆಟಿಗರು ಭಾರತ ಅಥವಾ ಪಾಕಿಸ್ತಾನ ಮೂಲದವರು ಎಂಬುದೇ ವಿಶೇಷ.

ಟ್ರೆಂಡಿಂಗ್​ ಸುದ್ದಿ

ಜಾಗತಿಕ ಕ್ರಿಕೆಟ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಹೆಚ್ಚು ಪಂದ್ಯಗಳನ್ನು ನೋಡಲು ಸಿಗುವುದು ಅಪರೂಪ. ಏಕೆಂದರೆ ಈ ಎರಡು ತಂಡಗಳು ಐಸಿಸಿ ಟೂರ್ನಿ ಹೊರತಾಗಿ ದ್ವಿಪಕ್ಷೀಯ ಸರಣಿಗಳಲ್ಲಿ ಆಡುವುದಿಲ್ಲ. ಪಾಕಿಸ್ತಾನ ಕ್ರಿಕೆಟಿಗರಿಗೆ ಐಪಿಎಲ್‌ನಲ್ಲಿ ಆಡುವ ಅವಕಾಶ ಕೂಡಾ ಇಲ್ಲ. ಇತ್ತ ಭಾರತೀಯ ಕ್ರಿಕೆಟಿಗರು ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆಡಲ್ಲ. ಹೀಗಾಗಿ ಉಭಯ ರಾಷ್ಟ್ರಗಳ ನಡುವಿನ ಪಂದ್ಯವು ಹೈವೋಲ್ಟೇಜ್‌ ಕದನವಾಗಿ ಜನಪ್ರಿಯತೆ ಪಡೆದಿದೆ.

ಆದರೆ, ಈ ಬಾರಿ ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿರುವುದು ಒಂದೆಡೆಯಾದರೆ, ಉಭಯ ದೇಶಗಳ ಕ್ರಿಕೆಟಿಗರು ಸಹ ಆಟಗಾರರಾಗಿ ಒಂದೇ ತಂಡದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಭಾರತ ಮತ್ತು ಪಾಕಿಸ್ತಾನದಲ್ಲಿ ಜನಿಸಿದ ಕ್ರಿಕೆಟಿಗರು ಒಂದೇ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅದುವೇ ಓಮನ್‌ ಕ್ರಿಕೆಟ್‌ ತಂಡ.

ಇದನ್ನೂ ಓದಿ | ಕೊಹ್ಲಿ-ರೋಹಿತ್​ ಅಲ್ಲ; ಭಾರತಕ್ಕೆ ಟಿ20 ವಿಶ್ವಕಪ್​ ಟ್ರೋಫಿ ಗೆದ್ದುಕೊಡಬಲ್ಲ ಜೋಡಿಯನ್ನು ಹೆಸರಿಸಿದ ರವಿ ಶಾಸ್ತ್ರಿ

ವಿಶ್ವಕಪ್‌ ಟೂರ್ನಿಗಾಗಿ ಓಮನ್‌ ಪ್ರಕಟಿಸಿರುವ ತಂಡದಲ್ಲಿ ಮುಖ್ಯವಾಗಿ ಪಾಕಿಸ್ತಾನ ಮತ್ತು ಭಾರತದಲ್ಲಿ ಜನಿಸಿದ ಆಟಗಾರರೇ ತುಂಬಿದ್ದಾರೆ. ಒಮನ್ ಕ್ರಿಕೆಟ್ ಸಂಸ್ಥೆಯು 4 ಮೀಸಲು ಆಟಗಾರರು ಸೇರಿದಂತೆ 15 ಆಟಗಾರರಿರುವ ಮುಖ್ಯ ತಂಡವನ್ನು ಪ್ರಕಟಿಸಿದೆ. ಒಟ್ಟು 19 ಕ್ರಿಕೆಟಿಗರ ಪೈಕಿ ಒಬ್ಬರು ಮಾತ್ರವೇ ಓಮನ್‌ನಲ್ಲಿ ಜನಿಸಿದ್ದಾರೆ. ಉಳಿದಂತೆ 17 ಕ್ರಿಕೆಟಿಗರು ಭಾರತ ಅಥವಾ ಪಾಕಿಸ್ತಾನದಲ್ಲಿ ಜನಿಸಿದವರು.

ಒಮಾನ್‌ ಟಿ20 ವಿಶ್ವಕಪ್ ತಂಡದಲ್ಲಿ ಒಟ್ಟು 7 ಕ್ರಿಕೆಟಿಗರು ಭಾರತ ಮೂಲದವರು. ಉಳಿದಂತೆ ಪಾಕಿಸ್ತಾನ ಮೂಲದ 10 ಕ್ರಿಕೆಟಿಗರು ಸ್ಥಾನ ಪಡೆದಿದ್ದಾರೆ. ಭಾರತೀಯರಿಗಿಂತ ಪಾಕಿಸ್ತಾನದವರೇ ತಂಡದಲ್ಲಿ ಹೆಚ್ಚಿದ್ದಾರೆ.

ಓಮನ್ ವಿಶ್ವಕಪ್ ತಂಡದಲ್ಲಿರುವ ಭಾರತ ಮೂಲದ ಕ್ರಿಕೆಟಿಗರು

 • ಕಶ್ಯಪ್ ಪ್ರಜಾಪತಿ- ಗುಜರಾತ್‌ನ ಖೇರಾದಲ್ಲಿ ಜನಿಸಿದವರು.
 • ಪ್ರತೀಕ್ ಅಠಾವಳೆ - ಮಹಾರಾಷ್ಟ್ರದ ನಾಸಿಕ್‌ನಲ್ಲಿ ಜನಿಸಿದವರು.
 • ಅಯಾನ್ ಖಾನ್- ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಜನಿಸಿದವರು.
 • ಜತೀಂದರ್ ಸಿಂಗ್- ಪಂಜಾಬ್‌ನ ಲುಧಿಯಾನದಲ್ಲಿ ಜನಿಸಿದವರು.
 • ಸಮಯ ಶ್ರೀವಾಸ್ತವ - ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಜನಿಸಿದವರು.
 • ಶೋಯೆಬ್ ಖಾನ್- ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಜನಿಸಿದವರು.
 • ಜಾಯ್ ಒಡೆದ್ರಾ- ಸೌರಾಷ್ಟ್ರದ ಪೋರಬಂದರ್‌ನಲ್ಲಿ ಜನಿಸಿದವರು.

ಓಮನ್‌ನ ವಿಶ್ವಕಪ್ ತಂಡದಲ್ಲಿರುವ ಪಾಕಿಸ್ತಾನ ಮೂಲದ ಕ್ರಿಕೆಟಿಗರು

 • ಅಕಿಬ್ ಇಲ್ಯಾಸ್- ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ಜನಿಸಿದವರು.
 • ನಸೀಮ್ ಖುಷಿ - ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ಜನಿಸಿದವರು.
 • ಮೆಹ್ರಾನ್ ಖಾನ್- ಪಾಕಿಸ್ತಾನದ ಮರ್ದಾನ್‌ನಲ್ಲಿ ಜನಿಸಿದವರು.
 • ಜೀಶನ್ ಮಕ್ಸೂದ್ - ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಜನಿಸಿದವರು.
 • ಮೊಹಮ್ಮದ್ ನದೀಮ್- ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ಜನಿಸಿದವರು.
 • ಬಿಲಾಲ್ ಖಾನ್- ಪಾಕಿಸ್ತಾನದ ಪೇಶಾವರದಲ್ಲಿ ಜನಿಸಿದವರು.
 • ಕಲೀಮುಲ್ಲಾ - ಪಾಕಿಸ್ತಾನದ ಗುಜ್ರಾನ್ವಾಲಾದಲ್ಲಿ ಜನಿಸಿದವರು.
 • ಫೈಜ್ ಬಟ್- ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ಜನಿಸಿದವರು.
 • ಶಕೀಲ್ ಅಹ್ಮದ್- ಪಾಕಿಸ್ತಾನದ ಮರ್ದಾನ್‌ನಲ್ಲಿ ಜನಿಸಿದವರು.
 • ಖಾಲಿದ್ ಕೈಲ್- ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ಜನಿಸಿದವರು.

ಇದನ್ನೂ ಓದಿ | ಟಿ20 ವಿಶ್ವಕಪ್‌ಗೆ ಭಯೋತ್ಪಾದಕ ದಾಳಿ ಬೆದರಿಕೆ; ವೆಸ್ಟ್ ಇಂಡೀಸ್‌ನಲ್ಲಿ ಕಟ್ಟೆಚ್ಚರ, ಐಸಿಸಿ ಪ್ರತಿಕ್ರಿಯೆ

ಟಿ20 ವಿಶ್ವಕಪ್‌ಗೆ ಸಂಬಂಧಿಸಿದ ಇನ್ನಿತರ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point