8 ಮಂದಿ ಡಕೌಟ್, 1 ರನ್, 1 ವೈಡ್, 2 ರನ್​ಗೆ ಆಲೌಟ್​; ಎದುರಾಳಿ ತಂಡಕ್ಕೆ 424 ರನ್​ಗಳ ವಿಶ್ವದಾಖಲೆಯ ಗೆಲುವು
ಕನ್ನಡ ಸುದ್ದಿ  /  ಕ್ರಿಕೆಟ್  /  8 ಮಂದಿ ಡಕೌಟ್, 1 ರನ್, 1 ವೈಡ್, 2 ರನ್​ಗೆ ಆಲೌಟ್​; ಎದುರಾಳಿ ತಂಡಕ್ಕೆ 424 ರನ್​ಗಳ ವಿಶ್ವದಾಖಲೆಯ ಗೆಲುವು

8 ಮಂದಿ ಡಕೌಟ್, 1 ರನ್, 1 ವೈಡ್, 2 ರನ್​ಗೆ ಆಲೌಟ್​; ಎದುರಾಳಿ ತಂಡಕ್ಕೆ 424 ರನ್​ಗಳ ವಿಶ್ವದಾಖಲೆಯ ಗೆಲುವು

ಇಂಗ್ಲೆಂಡ್​ನ ಮಿಡ್ಲ್‌ಸೆಕ್ಸ್ ಕೌಂಟಿ ಕ್ರಿಕೆಟ್ ಲೀಗ್‌ನಲ್ಲಿ ನಾರ್ತ್ ಲಂಡನ್ ಸಿಸಿ ಥರ್ಡ್ XI vs ರಿಚ್ಮಂಡ್ ಸಿಸಿ ಫೋರ್ಥ್ XI ನಡುವಿನ ಪಂದ್ಯದಲ್ಲಿ ಅಚ್ಚರಿಯ ಫಲಿತಾಂಶ ಬಂದಿದೆ.

8 ಮಂದಿ ಡಕೌಟ್, 1 ರನ್, 1 ವೈಡ್, 2 ರನ್​ಗೆ ಆಲೌಟ್​; ಎದುರಾಳಿ ತಂಡಕ್ಕೆ 424 ರನ್​ಗಳ ವಿಶ್ವದಾಖಲೆಯ ಗೆಲುವು
8 ಮಂದಿ ಡಕೌಟ್, 1 ರನ್, 1 ವೈಡ್, 2 ರನ್​ಗೆ ಆಲೌಟ್​; ಎದುರಾಳಿ ತಂಡಕ್ಕೆ 424 ರನ್​ಗಳ ವಿಶ್ವದಾಖಲೆಯ ಗೆಲುವು

ಜಂಟಲ್​​ಮನ್ ಗೇಮ್ ಕ್ರಿಕೆಟ್​ನಲ್ಲಿ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಸಂಬಂಧಿಸಿ ಹತ್ತಾರು ಉದಾಹರಣೆಗಳನ್ನು ನೋಡಿದ್ದೇವೆ. ಇತ್ತೀಚೆಗೆ ತಂಡದ ಎಲ್ಲಾ 10 ಬ್ಯಾಟರ್ಸ್​ ರಿಟೈರ್ಡ್​ ಔಟ್ ಆಗಿದ್ದೂ ಕ್ರಿಕೆಟ್​ ಜಗತ್ತಿನಲ್ಲಿ ಹೊಸ ಸಂಚಲನ ಸೃಷ್ಟಿಸಿತು. ಹೀಗೆ... ಒಂದಾ... ಎರಡಾ.. ಅದೆಷ್ಟೋ... ಅದೇ ರೀತಿ ಮತ್ತೊಂದು ಅಚ್ಚರಿಯ ಫಲಿತಾಂಶ ಬಂದಿದೆ. ಇದು ವಿಚಿತ್ರ ಫಲಿತಾಂಶವೂ ಹೌದು! ನಿಮಗಿದು ಗೊತ್ತಾ ತಂಡವೊಂದು ಕೇವಲ 2 ರನ್​ಗೆ ಆಲೌಟ್​ ಆಗಿದೆ. ಅದರಲ್ಲಿ ಒಂದು ರನ್ ವೈಡ್ ಮೂಲಕ ಬಂದಿರೋದು!!

ಇಂತಹ ಒಂದು ಅಚ್ಚರಿ ಫಲಿತಾಂಶ ಬಂದಿರೋದು ಮಿಡ್ಲ್‌ಸೆಕ್ಸ್ ಕೌಂಟಿ ಕ್ರಿಕೆಟ್ ಲೀಗ್‌ನಲ್ಲಿ. ನಾರ್ತ್ ಲಂಡನ್ ಸಿಸಿ ಥರ್ಡ್ XI vs ರಿಚ್ಮಂಡ್ ಸಿಸಿ ಫೋರ್ಥ್ XI ನಡುವಿನ ಪಂದ್ಯದಲ್ಲಿ ನಡೆದಿದೆ. ಕ್ರಿಕೆಟ್ ಇತಿಹಾಸದಲ್ಲೇ ದಾಖಲಾದ ಅತಿ ಕಡಿಮೆ ಮೊತ್ತ ಇದು. ಈ ಪಂದ್ಯದಲ್ಲಿ 8 ಬ್ಯಾಟ್ಸ್​​ಮನ್​ಗಳು ಡಕೌಟ್​ ಆಗಿರುವುದು ಮತ್ತೊಂದು ಅಚ್ಚರಿ. ಅದು 5.4 ಓವರ್​​​​ಗಳಲ್ಲಿ ರಿಚ್ಮಂಡ್ ತಂಡವು 2 ರನ್​ಗೆ ಆಲೌಟ್​ ಆಯಿತು. ಒಬ್ಬ ಬ್ಯಾಟರ್​ 1 ರನ್ ಗಳಿಸಿದರೆ, ಮತ್ತೊಂದು ರನ್ ವೈಡ್​ನಿಂದ ಬಂದದ್ದು! ಹೀಗಾಗಿ ಎದುರಾಳಿ ತಂಡವು ಬರೋಬ್ಬರಿ 424 ರನ್ನಿಂದ ಗೆದ್ದು ಬೀಗಿತು.

45 ಓವರ್​​ಗೆ 426 ರನ್

ನಾರ್ತ್ ಲಂಡನ್ ತಂಡವು 45 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 426 ರನ್​ಗಳ ಬೃಹತ್ ಮೊತ್ತ ಪೇರಿಸಿತ್ತು. ಡೇನಿಯಲ್ ಸಿಮನ್ಸ್ ಶತಕ ಸಿಡಿಸಿ ಈ ತಂಡದ ಪರ ಗರಿಷ್ಠ ಸ್ಕೋರರ್​ ಆಗಿದ್ದಾರೆ. ಇವರು 20 ಬೌಂಡರಿ, 4 ಸಿಕ್ಸರ್​​​ಗಳ ಸಹಾಯದಿಂದ 140 ರನ್ ಗಳಿಸಿದರು. ಉಳಿದ ಬ್ಯಾಟ್ಸ್‌ಮನ್​​ಗಳು ತಮ್ಮ ಇನ್ನಿಂಗ್ಸ್‌ನಲ್ಲಿ 46 ಬೌಂಡರಿ, 10 ಸಿಕ್ಸರ್‌ ಬಾರಿಸುವ ಮೂಲಕ ಉತ್ತಮ ಕೊಡುಗೆ ನೀಡಿದರು. ಆದರೀಗ 424 ರನ್​ಗಳಿಂದ ಗೆಲುವು ಸಾಧಿಸಿ ವಿಶ್ವದಾಖಲೆಯನ್ನೂ ಹೊಂದಿದೆ. ಇದು ವಿಶ್ವ ಕ್ರಿಕೆಟ್​​ನಲ್ಲಿ ಅತಿ ದೊಡ್ಡ ಅಂತರದ ಗೆಲುವು.

ಆದರೆ ಇದು ಕ್ಲಬ್ ಕ್ರಿಕೆಟ್ ಆಗಿರುವ ಹಿನ್ನೆಲೆ ಅಂತಾರಾಷ್ಟ್ರೀಯ ದಾಖಲೆಗೆ ಒಳಪಡುವುದಿಲ್ಲ. ಆ ಮೂಲಕ ಕೌಂಟಿ ಕ್ರಿಕೆಟ್‌ ಲೀಗ್‌ನಲ್ಲಿ ನಾರ್ಥ್ ಲಂಡನ್ ತಂಡವು ವಿಶ್ವದಾಖಲೆಗೆ ಒಳಗಾದರೆ, ರಿಚ್ಮಂಡ್ ತಂಡವು ಕೆಟ್ಟ ದಾಖಲೆಗೆ ಸಾಕ್ಷಿಯಾಗಿದೆ. ಈ ಪಂದ್ಯಕ್ಕೆ ಸಂಬಂಧಿಸಿದ ಸ್ಕೋರ್​ ಕಾರ್ಡ್​ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ರಿಚ್ಮಂಡ್ ತಂಡದ ಬ್ಯಾಟಿಂಗ್ ಮಾತ್ರವಲ್ಲ, ಬೌಲಿಂಗ್​ ಕೂಡ ಅಷ್ಟೇ ಕಳಪೆಯಾಗಿತ್ತು. ತಂಡದ ಬೌಲರ್​​​ಗಳು 65 ವೈಡ್‌ಗಳು ಮತ್ತು 16 ನೋ-ಬಾಲ್‌ಗಳು ಸೇರಿದಂತೆ 92 ಹೆಚ್ಚುವರಿ ರನ್ ಬಿಟ್ಟುಕೊಟ್ಟರು.

ಇದರ ನಡುವೆಯೂ ಬೌಲರ್​​​ ಅಕಿಲಾ ವನಿಗಬದುಗೆ ಅತ್ಯುತ್ತಮ ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದರು. ಅವರು 6 ರನ್‌ಗಳ ಎಕಾನಮಿಯಲ್ಲಿ ರನ್‌ ಬಿಟ್ಟುಕೊಟ್ಟು 2 ವಿಕೆಟ್‌ ಪಡೆದರು. ಉಳಿದ 6 ಬೌಲರ್‌ಗಳು ಕನಿಷ್ಠ 9.5ಕ್ಕಿಂತ ಹೆಚ್ಚು ಎಕಾನಮಿಯಲ್ಲಿ ರನ್ ಲೀಕ್ ಮಾಡಿದರು. ಇಷ್ಟೊಂದು ರನ್‌ಗಳನ್ನು ಬಿಟ್ಟುಕೊಟ್ಟ ನಂತರ, ರಿಚ್ಮಂಡ್ ಸಿಸಿ ಬ್ಯಾಟ್ಸ್‌ಮನ್‌ಗಳು ಉತ್ತಮ ಪಿಚ್‌ನಲ್ಲಿ ತಪ್ಪುಗಳನ್ನು ಸರಿಪಡಿಸಿಕೊಂಡು ಬ್ಯಾಟಿಂಗ್​ನಲ್ಲಿ ಧೂಳೆಬ್ಬಿಸುವ ಆಶಯದಲ್ಲಿದ್ದರು.

ರನ್ ನೀಡದೆ 5 ವಿಕೆಟ್ ಪಡೆದ ಬೌಲರ್​​

ಆದರೆ ನಾರ್ತ್​ ಲಂಡನ್‌ನ ಆರಂಭಿಕ ಬೌಲರ್‌ಗಳಾದ ಥಾಮಸ್ ಸ್ಪಾವ್ಟನ್ ಮತ್ತು ಮ್ಯಾಥ್ಯೂ ರೋಸನ್ ಅದ್ಭುತ ಸ್ಪೆಲ್‌ನೊಂದಿಗೆ ರಿಚ್ಮಂಡ್ ತಂಡವನ್ನು ಛಿದ್ರಗೊಳಿಸಿದರು. ರೋಸನ್ ಒಂದೇ ಒಂದು ರನ್ ಬಿಟ್ಟುಕೊಡದೆ 5 ವಿಕೆಟ್‌ ಪಡೆದರೆ, ಸ್ಪಾವ್ಟನ್ 3 ವಿಕೆಟ್‌ ಪಡೆದು 2 ರನ್‌ ಬಿಟ್ಟುಕೊಟ್ಟರು. ರಿಚ್ಮಂಡ್ ಸಿಸಿ ತಮ್ಮ ಇನ್ನಿಂಗ್ಸ್‌ನ ಕೇವಲ 5.4 ಓವರ್‌ಗಳಲ್ಲಿ ಕೇವಲ ಎರಡು ರನ್‌ಗಳಿಗೆ ಆಲೌಟ್ ಆಯಿತು.

ನಾರ್ತ್ ಲಂಡನ್ ಸಿಸಿ ಥರ್ಡ್ XI vs ರಿಚ್ಮಂಡ್ ಸಿಸಿ ಫೋರ್ಥ್ XI ನಡುವಿನ ಪಂದ್ಯದ ಸ್ಕೋರ್​​ ಬೋರ್ಡ್.
ನಾರ್ತ್ ಲಂಡನ್ ಸಿಸಿ ಥರ್ಡ್ XI vs ರಿಚ್ಮಂಡ್ ಸಿಸಿ ಫೋರ್ಥ್ XI ನಡುವಿನ ಪಂದ್ಯದ ಸ್ಕೋರ್​​ ಬೋರ್ಡ್.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.