ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟಿ20 ಕಂಬ್ಯಾಕ್‌ ಜಾಣ ನಡೆ ಎಂದ ಎಬಿ ಡಿವಿಲಿಯರ್ಸ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟಿ20 ಕಂಬ್ಯಾಕ್‌ ಜಾಣ ನಡೆ ಎಂದ ಎಬಿ ಡಿವಿಲಿಯರ್ಸ್

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟಿ20 ಕಂಬ್ಯಾಕ್‌ ಜಾಣ ನಡೆ ಎಂದ ಎಬಿ ಡಿವಿಲಿಯರ್ಸ್

  • ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಭಾರತದ ಇಬ್ಬರು ಅನುಭವಿ ಕ್ರಿಕೆಟಿಗರಾದ ರೋಹಿತ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ಮರಳಿದ್ದಾರೆ. ವರ್ಷಗಳ ಬಳಿಕ ಇಬ್ಬರು ಚುಟುಕು ಸ್ವರೂಪದಲ್ಲಿ ಭಾರತ ತಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಬಿಸಿಸಿಐ ನಿರ್ಧಾರಕ್ಕೆ ದಕ್ಷಿಣ ಆಫ್ರಿಕಾ ಮತ್ತು ಆರ್‌ಸಿಬಿ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಖುಷಿಯಾಗಿದ್ದಾರೆ.

ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಅನುಭವಿ ಬ್ಯಾಟರ್‌ಗಳು ಆಡುವುದಕ್ಕೆ ಎಬಿ ಡಿವಿಲಿಯರ್ಸ್ ಬೆಂಬಲಿಸಿದ್ದಾರೆ. ಬರೋಬ್ಬರಿ ಒಂದು ವರ್ಷದ ನಂತರ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯನ್ನು ಟಿ20 ಸ್ವರೂಪಕ್ಕೆ ಮರಳಿ ಕರೆತರುವುದು "ಜಾಣ ನಡೆ" ಎಂದು ಎಬಿಡಿ ಹೇಳಿದ್ದಾರೆ. 
icon

(1 / 8)

ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಅನುಭವಿ ಬ್ಯಾಟರ್‌ಗಳು ಆಡುವುದಕ್ಕೆ ಎಬಿ ಡಿವಿಲಿಯರ್ಸ್ ಬೆಂಬಲಿಸಿದ್ದಾರೆ. ಬರೋಬ್ಬರಿ ಒಂದು ವರ್ಷದ ನಂತರ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯನ್ನು ಟಿ20 ಸ್ವರೂಪಕ್ಕೆ ಮರಳಿ ಕರೆತರುವುದು "ಜಾಣ ನಡೆ" ಎಂದು ಎಬಿಡಿ ಹೇಳಿದ್ದಾರೆ. (AP)

ಸ್ಟಾರ್ ಓಪನರ್ ರೋಹಿತ್ ಶರ್ಮಾ ಮತ್ತು ಬ್ಯಾಟರ್ ವಿರಾಟ್ ಕೊಹ್ಲಿ ಜನವರಿ 11ರಿಂದ ಪ್ರಾರಂಭದ ಮೂರು ಪಂದ್ಯಗಳ ಟಿ20 ಸರಣಿಗಾಗಿ ಆಯ್ಕೆಯಾಗಿದ್ದಾರೆ. ಈ ವರ್ಷ ಮಹತ್ವದ ಟಿ20 ವಿಶ್ವಕಪ್ ನಡೆದಿದ್ದು, ಚುಟುಕು ವಿಶ್ವಕಪ್‌ ಸಮರಕ್ಕೂ ಮುನ್ನ ಹಿರಿಯ ಜೋಡಿಯು ಮೊದಲ ಬಾರಿಗೆ ಭಾರತ ಟಿ20 ಸೆಟಪ್‌ಗೆ ಮರಳಿದ್ದಾರೆ.
icon

(2 / 8)

ಸ್ಟಾರ್ ಓಪನರ್ ರೋಹಿತ್ ಶರ್ಮಾ ಮತ್ತು ಬ್ಯಾಟರ್ ವಿರಾಟ್ ಕೊಹ್ಲಿ ಜನವರಿ 11ರಿಂದ ಪ್ರಾರಂಭದ ಮೂರು ಪಂದ್ಯಗಳ ಟಿ20 ಸರಣಿಗಾಗಿ ಆಯ್ಕೆಯಾಗಿದ್ದಾರೆ. ಈ ವರ್ಷ ಮಹತ್ವದ ಟಿ20 ವಿಶ್ವಕಪ್ ನಡೆದಿದ್ದು, ಚುಟುಕು ವಿಶ್ವಕಪ್‌ ಸಮರಕ್ಕೂ ಮುನ್ನ ಹಿರಿಯ ಜೋಡಿಯು ಮೊದಲ ಬಾರಿಗೆ ಭಾರತ ಟಿ20 ಸೆಟಪ್‌ಗೆ ಮರಳಿದ್ದಾರೆ.(AFP)

ವಿರಾಟ್‌ ಮತ್ತು ರೋಹಿತ್‌ ಅಫ್ಘನ್‌ ಸರಣಿಗೆ ಆಯ್ಕೆಯಾಗಿದ್ದು ನನಗೆ ಆಶ್ಚರ್ಯವಾಗಿಲ್ಲ. ರೋಹಿತ್ ಮತ್ತು ವಿರಾಟ್ ಇಬ್ಬರು ಆಯ್ಕೆಯಾಗಿದ್ದಕ್ಕೂ ನನಗೆ ಸಂತೋಷವಾಗಿದೆ ಎಂದು ಎಬಿಡಿ ಹೇಳಿದ್ದಾರೆ.
icon

(3 / 8)

ವಿರಾಟ್‌ ಮತ್ತು ರೋಹಿತ್‌ ಅಫ್ಘನ್‌ ಸರಣಿಗೆ ಆಯ್ಕೆಯಾಗಿದ್ದು ನನಗೆ ಆಶ್ಚರ್ಯವಾಗಿಲ್ಲ. ರೋಹಿತ್ ಮತ್ತು ವಿರಾಟ್ ಇಬ್ಬರು ಆಯ್ಕೆಯಾಗಿದ್ದಕ್ಕೂ ನನಗೆ ಸಂತೋಷವಾಗಿದೆ ಎಂದು ಎಬಿಡಿ ಹೇಳಿದ್ದಾರೆ.(AFP)

ಅತ್ಯುತ್ತಮ ತಂಡವನ್ನು ವಿಶ್ವಕಪ್‌ನಲ್ಲಿ ಆಡಿಸಲು ದೇಶ ಬಯಸುತ್ತದೆ. ಅನುಭವಿ ಆಟಗಾರರನ್ನು ವಿಶ್ವಕಪ್‌ನಲ್ಲಿ ಆಡುವಂತೆ ಮಾಡುವುದು ಸರಿಯಾದ ಮತ್ತು ಬುದ್ಧಿವಂತ ಕ್ರಮ ಎಂದು ಡಿವಿಲಿಯರ್ಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
icon

(4 / 8)

ಅತ್ಯುತ್ತಮ ತಂಡವನ್ನು ವಿಶ್ವಕಪ್‌ನಲ್ಲಿ ಆಡಿಸಲು ದೇಶ ಬಯಸುತ್ತದೆ. ಅನುಭವಿ ಆಟಗಾರರನ್ನು ವಿಶ್ವಕಪ್‌ನಲ್ಲಿ ಆಡುವಂತೆ ಮಾಡುವುದು ಸರಿಯಾದ ಮತ್ತು ಬುದ್ಧಿವಂತ ಕ್ರಮ ಎಂದು ಡಿವಿಲಿಯರ್ಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.(AFP)

ವಿರಾಟ್ ರಕ್ತದಲ್ಲಿಯೇ ಕ್ರಿಕೆಟ್‌ ಇದೆ. ಅವರು ಉತ್ತಮ ಸಮತೋಲನವನ್ನು ಕಂಡುಕೊಂಡಿದ್ದಾರೆ ಎಂದು ಮಾಜಿ ಬ್ಯಾಟರ್ ಹೇಳಿದರು.
icon

(5 / 8)

ವಿರಾಟ್ ರಕ್ತದಲ್ಲಿಯೇ ಕ್ರಿಕೆಟ್‌ ಇದೆ. ಅವರು ಉತ್ತಮ ಸಮತೋಲನವನ್ನು ಕಂಡುಕೊಂಡಿದ್ದಾರೆ ಎಂದು ಮಾಜಿ ಬ್ಯಾಟರ್ ಹೇಳಿದರು.(PTI)

ರೋಹಿತ್‌ ಮತ್ತು ವಿರಾಟ್‌ ಏಕದಿನ ಮತ್ತು ಟೆಸ್ಟ್ ಪಂದ್ಯಗಳಲ್ಲಿ ನಿರಂತರವಾಗಿ ಆಡುತ್ತಿದ್ದರು. ಆದರೆ, ಟಿ20 ತಂಡದಲ್ಲಿ ಹಲವು ತಿಂಗಳುಗಳಿಂದ ಆಡಿರಲಿಲ್ಲ. ಈ ವರ್ಷದ ಜೂನ್‌ ತಿಂಗಳಲ್ಲಿ ವೆಸ್ಟ್ ಇಂಡೀಸ್ ಮತ್ತು ಯುಎಸ್ಎಯಲ್ಲಿ ಟಿ20 ವಿಶ್ವಕಪ್‌ ನಡೆಯಲಿರುವ ಹಿನ್ನೆಲೆಯಲ್ಲಿ ಚುಟುಕು ಸ್ವರೂಪದ ತಂಡಕ್ಕೆ ಇಬ್ಬರೂ ಮರಳಿದ್ದಾರೆ.
icon

(6 / 8)

ರೋಹಿತ್‌ ಮತ್ತು ವಿರಾಟ್‌ ಏಕದಿನ ಮತ್ತು ಟೆಸ್ಟ್ ಪಂದ್ಯಗಳಲ್ಲಿ ನಿರಂತರವಾಗಿ ಆಡುತ್ತಿದ್ದರು. ಆದರೆ, ಟಿ20 ತಂಡದಲ್ಲಿ ಹಲವು ತಿಂಗಳುಗಳಿಂದ ಆಡಿರಲಿಲ್ಲ. ಈ ವರ್ಷದ ಜೂನ್‌ ತಿಂಗಳಲ್ಲಿ ವೆಸ್ಟ್ ಇಂಡೀಸ್ ಮತ್ತು ಯುಎಸ್ಎಯಲ್ಲಿ ಟಿ20 ವಿಶ್ವಕಪ್‌ ನಡೆಯಲಿರುವ ಹಿನ್ನೆಲೆಯಲ್ಲಿ ಚುಟುಕು ಸ್ವರೂಪದ ತಂಡಕ್ಕೆ ಇಬ್ಬರೂ ಮರಳಿದ್ದಾರೆ.(PTI)

2022ರ ವಿಶ್ವಕಪ್‌ ಬಳಿಕ ಟಿ20 ಪಂದ್ಯಗಳಿಂದ ದೂರ ಉಳಿದಿದ್ದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಚುಟುಕು ಸ್ವರೂಪಕ್ಕೆ ಮರಳಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ರೋಹಿತ್ ಶರ್ಮಾ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ.
icon

(7 / 8)

2022ರ ವಿಶ್ವಕಪ್‌ ಬಳಿಕ ಟಿ20 ಪಂದ್ಯಗಳಿಂದ ದೂರ ಉಳಿದಿದ್ದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಚುಟುಕು ಸ್ವರೂಪಕ್ಕೆ ಮರಳಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ರೋಹಿತ್ ಶರ್ಮಾ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ.(AP)

ಅಫ್ಘನ್‌ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್‌ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್‌ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಸರ್ ಪಟೇಲ್, ರವಿ ಬಿಷ್ಣೋಯ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್ , ಅವೇಶ್ ಖಾನ್, ಮುಖೇಶ್ ಕುಮಾರ್.
icon

(8 / 8)

ಅಫ್ಘನ್‌ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್‌ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್‌ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಸರ್ ಪಟೇಲ್, ರವಿ ಬಿಷ್ಣೋಯ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್ , ಅವೇಶ್ ಖಾನ್, ಮುಖೇಶ್ ಕುಮಾರ್.(ANI)


ಇತರ ಗ್ಯಾಲರಿಗಳು