ಕನ್ನಡ ಸುದ್ದಿ  /  ಕ್ರಿಕೆಟ್  /  ಅಭಿಷೇಕ್ ಶರ್ಮಾ ಔಟ್, ರಿಯಾನ್ ಪರಾಗ್ ಇನ್; ಜಿಂಬಾಬ್ವೆ ವಿರುದ್ಧದ 4ನೇ ಟಿ20ಐಗೆ ಭಾರತ ಸಂಭಾವ್ಯ ಪ್ಲೇಯಿಂಗ್ Xi

ಅಭಿಷೇಕ್ ಶರ್ಮಾ ಔಟ್, ರಿಯಾನ್ ಪರಾಗ್ ಇನ್; ಜಿಂಬಾಬ್ವೆ ವಿರುದ್ಧದ 4ನೇ ಟಿ20ಐಗೆ ಭಾರತ ಸಂಭಾವ್ಯ ಪ್ಲೇಯಿಂಗ್ XI

India playing XI vs Zimbabwe: ಜಿಂಬಾಬ್ವೆ ವಿರುದ್ಧದ ನಾಲ್ಕನೇ ಟಿ20ಐ ಪಂದ್ಯಕ್ಕೆ ಭಾರತ ತಂಡದಲ್ಲಿ ಎರಡು ಬದಲಾವಣೆ ಕಾಣುವ ನಿರೀಕ್ಷೆ ಇದೆ. ಅಭಿಷೇಕ್ ಶರ್ಮಾ ಅವರನ್ನು ಕೈಬಿಡುವ ನಿರೀಕ್ಷೆ ಇದೆ.

ಅಭಿಷೇಕ್ ಶರ್ಮಾ ಔಟ್, ರಿಯಾನ್ ಪರಾಗ್ ಇನ್; ಜಿಂಬಾಬ್ವೆ ವಿರುದ್ಧದ 4ನೇ ಟಿ20ಐಗೆ ಭಾರತ ಸಂಭಾವ್ಯ ಪ್ಲೇಯಿಂಗ್ XI
ಅಭಿಷೇಕ್ ಶರ್ಮಾ ಔಟ್, ರಿಯಾನ್ ಪರಾಗ್ ಇನ್; ಜಿಂಬಾಬ್ವೆ ವಿರುದ್ಧದ 4ನೇ ಟಿ20ಐಗೆ ಭಾರತ ಸಂಭಾವ್ಯ ಪ್ಲೇಯಿಂಗ್ XI

ಜಿಂಬಾಬ್ವೆ ವಿರುದ್ಧದ ಮೊದಲ ಟಿ20ಐ ಪಂದ್ಯದಲ್ಲಿ ಆಘಾತಕಾರಿ ಸೋಲಿನ ನಂತರ ಶುಭ್ಮನ್ ಗಿಲ್ ನೇತೃತ್ವದ ಭಾರತ ತಂಡ (India vs Zimbabwe) ಮುಂದಿನ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿದೆ. ಐದು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದ್ದು, ಉಳಿದ ಎರಡರಲ್ಲಿ ಪಂದ್ಯಗಳಲ್ಲಿ 1 ಪಂದ್ಯ ಗೆದ್ದರೂ ಸಿರೀಸ್ ಕೈವಶ ಮಾಡಿಕೊಳ್ಳಲಿದೆ. ಜುಲೈ 13ರಂದು ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ (Harare Sports Club) ನಡೆಯುವ ಸರಣಿಯ 4ನೇ ಪಂದ್ಯದಲ್ಲಿ ಜಯಿಸಿ ಸರಣಿಗೆ ಮುದ್ರೆಯೊತ್ತುವ ಗುರಿ ಹೊಂದಿದೆ.

ಟ್ರೆಂಡಿಂಗ್​ ಸುದ್ದಿ

ವಿಶ್ವಕಪ್ ತಂಡದ ಭಾಗವಾಗಿದ್ದ ಯಶಸ್ವಿ ಜೈಸ್ವಾಲ್ (Yashasvi Jaiswal), ಶಿವಂ ದುಬೆ (Shivam Dube) ಮತ್ತು ಸಂಜು ಸ್ಯಾಮ್ಸನ್ (Sanju Samson) ಅವರು ಮೊದಲ ಎರಡು ಪಂದ್ಯಗಳಿಗೆ ವಿಶ್ರಾಂತಿ ಪಡೆದಿದ್ದರು. 3ನೇ ಪಂದ್ಯಕ್ಕೆ ಮರಳಿದ ಮೂವರು, ಪ್ಲೇಯಿಂಗ್​ 11ನಲ್ಲೂ ಸ್ಥಾನ ಪಡೆದರು. ತ್ರಿಮೂರ್ತಿಗಳಿಗೆ ರಿಯಾನ್ ಪರಾಗ್, ಧ್ರುವ್ ಜುರೆಲ್, ಸಾಯಿ ಸುದರ್ಶನ್ ಜಾಗ ಬಿಟ್ಟುಕೊಟ್ಟರು. ಆದರೆ ಎರಡನೇ ಪಂದ್ಯದಲ್ಲಿ ಶತಕ ಸಿಡಿಸಿದ ಹೊರತಾಗಿಯೂ 4ನೇ ಪಂದ್ಯದಲ್ಲಿ ಅಭಿಷೇಕ್ ಶರ್ಮಾರನ್ನು ಕೈಬಿಡುವ ಸಾಧ್ಯತೆ ಇದೆ.

ಜೈಸ್ವಾಲ್ ಅಲಭ್ಯತೆಯಲ್ಲಿ ಅಭಿಷೇಕ್ ಆರಂಭಿಕರಾಗಿ ಕಣಕ್ಕಿಳಿದು 2ನೇ ಟಿ20ಐನಲ್ಲಿ ಶತಕ ಚಚ್ಚಿದ್ದರು. ಜೈಸ್ವಾಲ್ ಸ್ಥಾನ ಪಡೆಯುತ್ತಿದ್ದಂತೆ ಅಭಿಷೇಕ್ 3ನೇ ಸ್ಥಾನಕ್ಕೆ ಜಾರಿದ್ದಾರೆ. ಇದೀಗ ಅವರನ್ನೇ ಕೈಬಿಡಲು ಟೀಮ್ ಮ್ಯಾನೇಜ್​ಮೆಂಟ್ ಯೋಚಿಸಿದೆ. ಆತನ ಬದಲಿಗೆ ರಿಯಾನ್ ಪರಾಗ್​ಗೆ ಅವಕಾಶ ಕೊಟ್ಟು ನೋಡಲು ಯೋಜನೆ ಹಾಕಿದೆ. ನಾಲ್ವರು ಆರಂಭಿಕರನ್ನು ಕಣಕ್ಕಿಳಿಸಿದ್ದು ಟೀಕೆಗೆ ಗುರಿಯಾದ ಕಾರಣ ತಂಡದಲ್ಲಿ ಬದಲಾವಣೆಗೆ ಮುಂದಾಗಿದೆ ಎಂದು ವರದಿಯಾಗಿದೆ.

ನಾಲ್ವರು ಆರಂಭಿಕರಿಗೆ ಮಣೆ ಹಾಕಿದ್ದಕ್ಕೆ ಟೀಕೆ

ಮೂರನೇ ಪಂದ್ಯದಲ್ಲಿ ಜೈಸ್ವಾಲ್, ಗಿಲ್ ಇನ್ನಿಂಗ್ಸ್​ ಆರಂಭಿಸಿದರೆ, ಅಭಿಷೇಕ್ ಶರ್ಮಾ ಮತ್ತು ಋತುರಾಜ್ ಗಾಯಕ್ವಾಡ್ ಅವರು 3 ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಈ ನಾಲ್ವರು ಸಹ ಆರಂಭಿಕರು ಎಂಬುದು ವಿಶೇಷ. ಆದರೆ ನಾಲ್ವರು ಆರಂಭಿಕರ ಉಪಸ್ಥಿತಿಯು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಕ್ರಿಕೆಟ್ ವಲಯದಲ್ಲಿ ಅನೇಕರು ಬ್ಯಾಟಿಂಗ್ ಕ್ರಮಾಂಕ ಪ್ರಶ್ನಿಸಿದ್ದಾರೆ. ಆರಂಭಿಕರಿಗೆ ಅವಕಾಶ ನೀಡಿದರೆ ಮಧ್ಯಮ ಕ್ರಮಾಂಕದ ಬ್ಯಾಟರ್​​ಗಳಿಗೆ ಅವಕಾಶ ಸಿಗುವುದು ಯಾವಾಗ ಎಂದು ಕ್ರಿಕೆಟ್ ತಜ್ಞರು ಪ್ರಶ್ನಿಸಿದ್ದಾರೆ.

ಬ್ಯಾಟಿಂಗ್​ ಘಟಕಕ್ಕೆ ಹೆಚ್ಚಿನ ಸಮತೋಲನ ತರಲು ಮ್ಯಾನೇಜ್ಮೆಂಟ್, ಮಧ್ಯ ಕ್ರಮಾಂಕದಲ್ಲಿ ಬದಲಾವಣೆಗೆ ನಿರ್ಧರಿಸಿದೆ. ಅಭಿಷೇಕ್ ಬದಲಿಗೆ ರಿಯಾನ್ ಪರಾಗ್ ಅವಕಾಶ ಪಡೆದುಕೊಳ್ಳಲಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಪರಾಗ್​ರನ್ನೇ ಆರನೇ ಬೌಲರ್​​ ಆಗಿ ಬಳಸಿಕೊಳ್ಳಲು ನಿರ್ಧರಿಸಿದೆ. ಮುಖೇಶ್ ಮೂರನೇ ಟಿ20ಐಗೆ ವಿಶ್ರಾಂತಿ ಪಡೆದಿದ್ದರು. ಆವೇಶ್ ಖಾನ್ ಬದಲಿಗೆ ಮುಕೇಶ್ ತಂಡಕ್ಕೆ ಮರಳುವ ಸಾಧ್ಯತೆ ಇದೆ. ಖಲೀಲ್ ಅಹ್ಮದ್​ ಈ ಪಂದ್ಯದಲ್ಲೂ ಮುಂದುವರೆಯಲಿದ್ದಾರೆ. ಏಳು ಸ್ಪೆಷಲಿಸ್ಟ್ ಬ್ಯಾಟರ್‌ಗಳನ್ನು ಆಡಿಸಲು ಭಾರತ ತಂತ್ರ ರೂಪಿಸುತ್ತಿದೆ. ಮೂರನೇ ವೇಗಿಯನ್ನಾಗಿ ಶಿವಂ ದುಬೆ ಅವರನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ.

ಜಿಂಬಾಬ್ವೆ ವಿರುದ್ಧ 4ನೇ ಟಿ20ಗೆ ಭಾರತದ ಸಂಭಾವ್ಯ XI

ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್ (ನಾಯಕ), ಋತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ/ರಿಯಾನ್ ಪರಾಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಮುಕೇಶ್ ಕುಮಾರ್, ಖಲೀಲ್ ಅಹ್ಮದ್.