ಇಂದಿನಿಂದ ಅಂಡರ್-19 ಏಷ್ಯಾಕಪ್; ಭಾರತ vs ಪಾಕಿಸ್ತಾನ ಪಂದ್ಯ ಯಾವಾಗ? ವೇಳಾಪಟ್ಟಿ, ನೇರಪ್ರಸಾರ ವಿವರ
ಯುಎಇ ಆತಿಥ್ಯದಲ್ಲಿ ಇಂದಿನಿಂದ ಅಂಡರ್-19 ಏಷ್ಯಾಕಪ್ ಆರಂಭವಾಗಿದೆ. ಭಾರತ ತಂಡವು ನವೆಂಬರ್ 30ರಂದು ಅಭಿಯಾನ ಆರಂಭಿಸಲಿದ್ದು, ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆಡಲಿದೆ. ಪಂದ್ಯಾವಳಿಯ ವೇಳಾಪಟ್ಟಿ ಹಾಗೂ ನೇರಪ್ರಸಾರ ವಿವರ ಇಲ್ಲಿದೆ.
ಇಂದಿನಿಂದ (ನವೆಂಬರ್ 29) ಎಸಿಸಿ ಅಂಡರ್ 19 ಏಷ್ಯಾಕಪ್ ಪಂದ್ಯಾವಳಿ ನಡೆಯುತ್ತಿದೆ. ದುಬೈ ಮತ್ತು ಶಾರ್ಜಾದಲ್ಲಿ ಪಂದ್ಯಗಳು ನಡೆಯಲಿದ್ದು, ಏಷ್ಯಾದ ಒಟ್ಟು ಎಂಟು ರಾಷ್ಟ್ರಗಳು ಕಿರಿಯರ ಕ್ರಿಕೆಟ್ ಏಷ್ಯಾಕಪ್‌ಗಾಗಿ ಸೆಣಸಲಿವೆ. ಎಲ್ಲಾ 8 ತಂಡಗಳನ್ನು ತಲಾ ನಾಲ್ಕು ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.
ಬಾಂಗ್ಲಾದೇಶ ತಂಡವು 50 ಓವರ್‌ಗಳ ಸ್ವರೂಪದ ಪಂದ್ಯಾವಳಿಯ ಹಾಲಿ ಚಾಂಪಿಯನ್ ಆಗಿದ್ದು, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ನೇಪಾಳ ತಂಡಗಳೊಂದಿಗೆ A ಗುಂಪಿನಲ್ಲಿದೆ. ಇದೇ ವೇಳೆ ಭಾರತವು ಪಾಕಿಸ್ತಾನ, ಜಪಾನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನೊಂದಿಗೆ B ಗುಂಪಿನಲ್ಲಿದೆ. ಲೀಗ್ ಹಂತದಲ್ಲಿ ಎರಡೂ ಗುಂಪಿನಿಂದ ಅಗ್ರ ಎರಡು ಸ್ಥಾನ ಪಡೆದ ತಂಡಗಳು ಡಿಸೆಂಬರ್ 6ರಂದು ನಡೆಯಲಿರುವ ಸೆಮಿಫೈನಲ್‌ಗೆ ಮುನ್ನಡೆಯಲಿವೆ. ಫೈನಲ್ ಪಂದ್ಯವು ಡಿಸೆಂಬರ್ 8ರಂದು ದುಬೈನಲ್ಲಿ ನಡೆಯಲಿದೆ.
ನಾಳೆ, ಅಂದರೆ ನವೆಂಬರ್ 30ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಪರಸ್ಪರ ಮುಖಾಮುಖಿಯೊಂದಿಗೆ ಅಭಿಯಾನ ಆರಂಭಿಸಲಿವೆ.
ಅಂಡರ್ 19 ಏಷ್ಯಾಕಪ್ ವೇಳಾಪಟ್ಟಿ
1. ಅಫ್ಘಾನಿಸ್ತಾನ vs ಬಾಂಗ್ಲಾದೇಶ -29 ನವೆಂಬರ್ - 10:30 AM -ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣ
2. ಶ್ರೀಲಂಕಾ vs ನೇಪಾಳ - 29 ನವೆಂಬರ್ - 10:30 AM - ಶಾರ್ಜಾ ಕ್ರಿಕೆಟ್ ಸ್ಟೇಡಿಯಂ
3. ಭಾರತ vs ಪಾಕಿಸ್ತಾನ - 30 ನವೆಂಬರ್ - 10:30 AM - ICC ಅಕಾಡೆಮಿ ಮೈದಾನ, ದುಬೈ
4. ಯುಎಇ vs ಜಪಾನ್ - 30 ನವೆಂಬರ್ - 10:30 AM - ಶಾರ್ಜಾ
5. ಬಾಂಗ್ಲಾದೇಶ vs ನೇಪಾಳ - 1 ಡಿಸೆಂಬರ್ - 10:30 AM - ICC ಅಕಾಡೆಮಿ ಮೈದಾನ, ದುಬೈ
6. ಶ್ರೀಲಂಕಾ vs ಅಫ್ಘಾನಿಸ್ತಾನ - 1 ಡಿಸೆಂಬರ್ - 10:30 AM - ಶಾರ್ಜಾ
7. ಪಾಕಿಸ್ತಾನ vs ಯುಎಇ- 2 ಡಿಸೆಂಬರ್ - 10:30 AM - ICC ಅಕಾಡೆಮಿ ಮೈದಾನ, ದುಬೈ
8. ಭಾರತ vs ಜಪಾನ್ - 2 ಡಿಸೆಂಬರ್ - 10:30 AM - ಶಾರ್ಜಾ
9. ಬಾಂಗ್ಲಾದೇಶ vs ಶ್ರೀಲಂಕಾ - 3 ಡಿಸೆಂಬರ್ - 10:30 AM - ICC ಅಕಾಡೆಮಿ ಮೈದಾನ, ದುಬೈ
10. ಅಫ್ಘಾನಿಸ್ತಾನ vs ನೇಪಾಳ - 3 ಡಿಸೆಂಬರ್ - 10:30 AM - ಶಾರ್ಜಾ
11. ಪಾಕಿಸ್ತಾನ vs ಜಪಾನ್ - 4 ಡಿಸೆಂಬರ್ - 10:30 AM - ICC ಅಕಾಡೆಮಿ ಮೈದಾನ, ದುಬೈ
12. ಭಾರತ vs ಯುಎಇ - 4 ಡಿಸೆಂಬರ್ - 10:30 AM - ಶಾರ್ಜಾ ಕ್ರಿಕೆಟ್ ಸ್ಟೇಡಿಯಂ
- ಸೆಮಿಫೈನಲ್ 1 (A1 vs B2) - 6 ಡಿಸೆಂಬರ್ - 10:30 AM - ICC ಅಕಾಡೆಮಿ ಮೈದಾನ, ದುಬೈ
- ಸೆಮಿಫೈನಲ್ 2 (A2 vs B1) - 6 ಡಿಸೆಂಬರ್ - 10:30 AM - ಶಾರ್ಜಾ
- ಫೈನಲ್ - 8 ಡಿಸೆಂಬರ್ - 10:30 AM - ICC ಕ್ರಿಕೆಟ್ ಅಕಾಡೆಮಿ, ದುಬೈ
ಲೈವ್ ಸ್ಟ್ರೀಮಿಂಗ್ ವಿವರ
ಅಂಡರ್ 19 ಪುರುಷರ ಏಷ್ಯಾಕಪ್ 2024 ಪಂದ್ಯಾವಳಿಯ ಎಲ್ಲಾ ಪಂದ್ಯಗಳನ್ನು SonyLIV ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಟಿವಿ ಮೂಲಕ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ.
ಭಾರತ ತಂಡ
ಆಯುಷ್ ಮ್ಹಾತ್ರೆ, ವೈಭವ್ ಸೂರ್ಯವಂಶಿ, ಸಿ ಆಂಡ್ರೆ ಸಿದ್ದಾರ್ಥ್, ಮೊಹಮ್ಮದ್ ಅಮಾನ್ (ನಾಯಕ), ಕಿರಣ್ ಚೋರ್ಮಲೆ (ಉಪನಾಯಕ), ಪ್ರಣವ್ ಪಂತ್, ಹರ್ವಂಶ್ ಸಿಂಗ್ ಪಂಗಾಲಿಯಾ (ವಿಕೆಟ್ ಕೀಪರ್), ಅನುರಾಗ್ ಕಾವ್ಡೆ (ವಿಕೆಟ್ ಕೀಪರ್), ಹಾರ್ದಿಕ್ ರಾಜ್, ಎನಾನ್, ಕೆಪಿ ಕಾರ್ತಿಕೇಯ, ಸಮರ್ಥ್ ನಾಗರಾಜ್, ಯುಧಾಜಿತ್ ಗುಹಾ, ಚೇತನ್ ಶರ್ಮಾ, ನಿಖಿಲ್ ಕುಮಾರ್.