ಕನ್ನಡ ಸುದ್ದಿ  /  Cricket  /  Angry Babar Azam Threatens To Hit Multan Fans For Zimbabar Chants In Pakistan Super Leaguepeshawar Zalmi Watch Video Prs

ಜಿಂಬಾಬರ್.. ಜಿಂಬಾಬರ್ ಎಂದು ಬಾಬರ್​ಗೆ ಗೇಲಿ ಮಾಡಿದ ಪ್ರೇಕ್ಷಕರು; ಪಿತ್ತ ನೆತ್ತಿಗೇರಿ ಬೆದರಿಕೆ ಹಾಕಿದ ಅಜಮ್

Babar Azam : ಪಿಎಸ್​ಎಲ್​ನಲ್ಲಿ ಪ್ರೇಕ್ಷಕರ ಗುಂಪೊಂದು ವಿಡಿಯೋ ಮಾಡಿಕೊಂಡು ಜೋರಾಗಿ ಜಿಂಬಾಬರ್​.. ಜಿಂಬಾಬರ್ ಎಂದು ಕೂಗುತ್ತಾ ಬಾಬರ್ ಅಜಮ್​ಗೆ ಕೀಟಲೇ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಜಿಂಬಾಬರ್ ಎಂದು ಬಾಬರ್​ಗೆ ಗೇಲಿ ಮಾಡಿದ ಪ್ರೇಕ್ಷಕರು; ಪಿತ್ತ‌ ನೆತ್ತಿಗೇರಿ ಬೆದರಿಕೆ ಹಾಕಿದ ಅಜಮ್
ಜಿಂಬಾಬರ್ ಎಂದು ಬಾಬರ್​ಗೆ ಗೇಲಿ ಮಾಡಿದ ಪ್ರೇಕ್ಷಕರು; ಪಿತ್ತ‌ ನೆತ್ತಿಗೇರಿ ಬೆದರಿಕೆ ಹಾಕಿದ ಅಜಮ್

ಪಾಕಿಸ್ತಾನ ಪ್ರೀಮಿಯರ್ ಲೀಗ್​ನಲ್ಲಿ (PSL 2024) ಪಾಕಿಸ್ತಾನ ತಂಡದ ಮಾಜಿ ನಾಯಕ ಬಾಬರ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈಗಾಗಲೇ ಆಡಿರುವ 4 ಪಂದ್ಯಗಳಲ್ಲಿ 54.75ರ ಸರಾಸರಿಯಲ್ಲಿ 219 ರನ್ ಗಳಿಸಿದ್ದಾರೆ. ಪೇಶಾವರ್ ಝಲ್ಮಿ ನಾಯಕನಾಗಿರುವ ಬಾಬರ್​​ 2 ಅರ್ಧಶತಕಗಳನ್ನೂ ಸಿಡಿಸಿದ್ದಾರೆ. ಆದರೆ ತಮ್ಮದೇ ದೇಶದ ಕ್ರಿಕೆಟ್ ಪ್ರೇಕ್ಷಕರು ಬಾಬರ್​ ಅವರನ್ನು ಕೆಣಕಿದ್ದಾರೆ.

ಬಾಬರ್​ಗೆ ಗೇಲಿ ಮಾಡಿದ ಪ್ರೇಕ್ಷಕರು

ಬಾಬರ್ ಅಜಮ್ ಜಿಂಬಾಬ್ವೆಯಂತಹ ಸಣ್ಣ ತಂಡಗಳ ವಿರುದ್ಧ ಮಾತ್ರ ಅದ್ಭುತ ಪ್ರದರ್ಶನ ನೀಡುತ್ತಾರೆ ಎಂಬ ಟ್ಯಾಗ್​ಲೈನ್ ಹೊಂದಿದ್ದಾರೆ. ಹೀಗಾಗಿ ಜಿಂಬಾಬರ್ ಎಂದು ಮೈದಾನದಲ್ಲಿ ಬಾಬರ್​ರನ್ನು ಕುಹಕವಾಡುತ್ತಾರೆ. ಇದೀಗ ಅದೇ ಮತ್ತೊಮ್ಮೆ ಎದುರಿಸಿದ್ದಾರೆ. ಪಿಎಸ್​ಎಲ್ ಪಂದ್ಯದ ವೇಳೆ ಡಗೌಟ್​​ನಲ್ಲಿ ಕೂತಿದ್ದ ಬಾಬರ್​​ಗೆ ಜಿಂಬಾಬರ್.. ಜಿಂಬಾಬರ್ ಎಂದು ಘೋಷಣೆ ಕೂಗುವ ಆತನ ಪಿತ್ಥ ನೆತ್ತಿಗೇರಿಸಿದ್ದಾರೆ.

ಕೋಪಗೊಂಡ ಬಾಬರ್ ಅಜಮ್ ಹೀಗೆ ಕೂಗಿದ ಪೇಕ್ಷಕರಿಗೆ ಹಲ್ಲೆ ಮಾಡುವ ಬೆದರಿಕೆ ಹಾಕಿದ್ದಾರೆ. ಜಿಂಬಾಬರ್ ಎಂದು ಗೇಲಿ ಮಾಡಿದವರನ್ನು ಕರೆದ ಬಾಬರ್​, ನೀರಿನ ಬಾಟಲಿಯನ್ನು ಅವರ ಮೇಲೆ ಎಸೆಯುವುದಾಗಿ ಬೆದರಿಕೆ ಹಾಕುವ ಮೊದಲು ಕೋಪದಿಂದ ಕೆಲವು ಮಾತುಗಳನ್ನು ಬಾಯಿಬಿಟ್ಟರು. ಪಾಕ್ ಮಾಜಿ ನಾಯಕ ಸಿಕ್ಕಾಪಟ್ಟೆ ಕೋಪೋದ್ರಿಕ್ತನಾಗಿದ್ದರು.

ಪೇಶಾವರ್ ಝಲ್ಮಿ ಮತ್ತು ಮುಲ್ತಾನ್ ಸುಲ್ತಾನ್ಸ್ ನಡುವಿನ ಪಿಎಸ್ಎಲ್ 2024 ಪಂದ್ಯದಲ್ಲಿ ಬಾಬರ್ ಟೀಕೆಗೆ ಗುರಿಯಾಗಿದ್ದರು. ಅವರು ಜಿಂಬಾಬ್ವೆಯಂತಹ ತಂಡಗಳ ವಿರುದ್ಧ ಮಾತ್ರ ಪ್ರದರ್ಶನ ನೀಡುತ್ತಾರೆ ಎಂದು ಆಗಾಗ್ಗೆ ಆರೋಪಿಸಲಾಗುತ್ತದೆ. ಪೇಶಾವರ್ ಝಲ್ಮಿ ಮತ್ತು ಮುಲ್ತಾನ್ ಸುಲ್ತಾನ್ಸ್ ನಡುವಿನ ಪಿಎಸ್ಎಲ್ 2024 ಪಂದ್ಯದಲ್ಲಿ ಈ ಘಟನೆ ನಡೆದಿದೆ. ಈ ಹಿಂದಿನಿಂದಲೂ ಅವರನ್ನು ಜಿಂಬಾಬರ್ ಎಂದು ಕರೆಯುತ್ತಿದ್ದಾರೆ. ಅಲ್ಲದೆ, ಈ ವಿಡಿಯೋ ಸಾಕಷ್ಟು ನಗುವನ್ನೂ ತರಿಸುತ್ತದೆ.

ನಕಲಿ ಎನ್ನುತ್ತಿದ್ದಾರೆ ಬಾಬರ್ ಫ್ಯಾನ್ಸ್

ಪೇಶಾವರ್ ಝಲ್ಮಿ ಫ್ರಾಂಚೈಸಿಯ ಪ್ರಸ್ತುತ ನಾಯಕನು ಅಭಿಮಾನಿಗಳು ಅವರನ್ನು 'ಜಿಂಬಾಬರ್' ಹಾಡುಗಳೊಂದಿಗೆ ಕೀಟಲೆ ಮಾಡುವುದನ್ನು ನೋಡಿ ಕೋಪಗೊಂಡಿದ್ದಾರೆ. ಆದಾಗ್ಯೂ, ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲಕ್ಕೆ ಕಾರಣವಾಗಿದ್ದು, ಗುಂಪಿನ ಒಂದು ವಿಭಾಗವು ವಿಡಿಯೋ ನಿಜವೇ ಎಂದು ಪ್ರಶ್ನಿಸಿದೆ. ಇನ್ನೂ ಕೆಲವರು ಸರಿಯಾಗಿ ರೇಗಿಸಿದ್ದಾರೆ ಎಂದು ನಗುವಿನ ಎಮೋಜಿ ಜೊತೆಗೆ ಕಾಮೆಂಟ್ ಮಾಡಿದ್ದಾರೆ.

ವಿಡಿಯೋದಲ್ಲಿನ ಬಾಬರ್‌ನ ಪ್ರತಿಕ್ರಿಯೆಯಿಂದ ಹೆಚ್ಚಿನವರು ಆಘಾತಕ್ಕೊಳಗಾಗಿದ್ದರೆ, ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ವೀಡಿಯೊ ನಕಲಿ ಎಂದು ಹೇಳಿದ್ದಾರೆ. ಗಮನ ಸೆಳೆಯುವ ಪ್ರಯತ್ನದಲ್ಲಿ 'ಜಿಂಬಾಬರ್' ಪಠಣಗಳನ್ನು ಪ್ರತ್ಯೇಕ ಕ್ಲಿಪ್‌ನಿಂದ ತೆಗೆದುಕೊಂಡು ಹೊಸ ವಿಡಿಯೋದಲ್ಲಿ ಎಡಿಟ್ ಮಾಡಲಾಗಿದೆ ಎಂದು ಕೆಲವರು ಹೇಳಿದ್ದಾರೆ. ತಾನು ಕಳಪೆ ಫಾರ್ಮ್​ನಲ್ಲಿದ್ದರೆ ಜಿಂಬಾಬ್ವೆ ವಿರುದ್ಧ ಸ್ಕೋರ್​ ಮಾಡುವ ಮೂಲಕ ಫಾರ್ಮ್​ಗೆ ಮರಳುತ್ತಾರೆ ಎಂದು ಅಭಿಮಾನಿಗಳು ನಂಬುತ್ತಾರೆ.

ಕೊನೆಗೂ ಗೆದ್ದ ಪೇಶಾವರ

ಪಿಎಸ್ಎಲ್ 2024ರಲ್ಲಿ ಸತತ 2 ಪಂದ್ಯಗಳನ್ನು ಸೋತ ಬಳಿಕ ಪೇಶಾವರ ಝಲ್ಮಿ ಇದೀಗ ಸತತ ಎರಡು ಗೆಲುವುಗಳನ್ನು ದಾಖಲಿಸಿದೆ. ಲಾಹೋರ್ ಖಲಂದರ್ಸ್ ವಿರುದ್ಧ ತನ್ನ ಕೊನೆಯ ಪಂದ್ಯ ಆಡಿರುವ ಪೇಶಾವರ 8 ರನ್​ಗಳಿಂದ ಗೆದ್ದಿದೆ. ಈ ಪಂದ್ಯದಲ್ಲಿ ಬಾಬರ್ 36 ಎಸೆತಗಳಲ್ಲಿ 5 ಬೌಂಡರಿ ಸಹಿತ 48 ರನ್ ಗಳಿಸಿದ್ದರು.

ನಾಯಕತ್ವದಿಂದ ಕೆಳಗಿಳಿದಿದ್ದ ಅಜಮ್

ತೀರಾ ಇತ್ತೀಚೆಗೆ, ಪಾಕಿಸ್ತಾನವು ಐಸಿಸಿ ಏಕದಿನ ವರ್ಲ್ಡ್ ಕಪ್ 2023 ರ ಸೆಮಿಫೈನಲ್‌ಗೆ ಕ್ವಾಲಿಫೈ ಆಗಲು ವಿಫಲವಾದ ನಂತರ ಬಾಬರ್ ಅವರು ಎಲ್ಲಾ ಸ್ವರೂಪಗಳಲ್ಲಿ ತಮ್ಮ ನಾಯಕತ್ವ ಕಳೆದುಕೊಂಡರು. ಟೂರ್ನಿಯಲ್ಲಿ ಬಾಬರ್ ಅತ್ಯಂತ ಕಳಪೆ ಪ್ರದರ್ಶನ ನೀಡಿದರು. ಆ ಬಳಿಕ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಶಾನ್ ಮಸೂದ್ ಅವರನ್ನು ನೂತನ ಟೆಸ್ಟ್ ನಾಯಕರನ್ನಾಗಿ ನೇಮಿಸಿದರೆ, ಶಾಹೀನ್ ಅಫ್ರಿದಿಗೆ ವೈಟ್ ಬಾಲ್ ಜವಾಬ್ದಾರಿಯನ್ನು ವಹಿಸಿತು.