ಕನ್ನಡ ಸುದ್ದಿ  /  Cricket  /  Another Dig At Ishan Kishans Focus On Ipl 2024 Sunil Gavaskar Says Some Do Not Have The Ability To Play Test Cricket Prs

ಕೆಲವರಿಗೆ ಟೆಸ್ಟ್ ಕ್ರಿಕೆಟ್ ಆಡುವ ಸಾಮರ್ಥ್ಯವಿಲ್ಲ: ಐಪಿಎಲ್​ಗೆ ಗಮನ ಹರಿಸಿದ ಇಶಾನ್​ ವಿರುದ್ಧ ಸುನಿಲ್ ಗವಾಸ್ಕರ್ ಟೀಕೆ

Sunil Gavaskar: ಟೆಸ್ಟ್ ಕ್ರಿಕೆಟ್ ಆಡಲು ಹಿಂದೇಟು ಹಾಕುತ್ತಿರುವ ಯುವ ಆಟಗಾರರ ವಿರುದ್ಧ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಟೀಕಾ ಪ್ರಕಾರ ನಡೆಸಿದ್ದಾರೆ. ಹೆಸರು ಹೇಳದೆಯೇ ಇಶಾನ್ ಕಿಶನ್, ಶ್ರೇಯಸ್ ಅಯ್ಯರ್​ ಅಂತಹವರ ಚಳಿ ಬಿಡಿಸಿದ್ದಾರೆ.

ಕೆಲವರಿಗೆ ಟೆಸ್ಟ್ ಕ್ರಿಕೆಟ್ ಆಡುವ ಸಾಮರ್ಥ್ಯವಿಲ್ಲ: ಐಪಿಎಲ್​ಗೆ ಗಮನ ಹರಿಸಿದ ಇಶಾನ್​ ವಿರುದ್ಧ ಸುನಿಲ್ ಗವಾಸ್ಕರ್ ಟೀಕೆ
ಕೆಲವರಿಗೆ ಟೆಸ್ಟ್ ಕ್ರಿಕೆಟ್ ಆಡುವ ಸಾಮರ್ಥ್ಯವಿಲ್ಲ: ಐಪಿಎಲ್​ಗೆ ಗಮನ ಹರಿಸಿದ ಇಶಾನ್​ ವಿರುದ್ಧ ಸುನಿಲ್ ಗವಾಸ್ಕರ್ ಟೀಕೆ

ಟೆಸ್ಟ್​ ಕ್ರಿಕೆಟ್​ ಆಡಲು ಆಸಕ್ತಿ ತೋರದ ಕ್ರಿಕೆಟಿಗರನ್ನು ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಟೀಕಿಸಿದ ಬೆನ್ನಲ್ಲೇ ಇದೀಗ ಐಪಿಎಲ್​​ ಕಡೆ ಗಮನಹರಿಸುತ್ತಿರುವ ಯುವ ವಿಕೆಟ್ ​ಕೀಪರ್ ಇಶಾನ್​ ಕಿಶನ್ (Ishan Kishan)​ ವಿರುದ್ಧ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ (Sunil Gavaskar) ಟೀ​ಕಾ ಪ್ರಹಾರ ನಡೆಸಿದ್ದಾರೆ. ಟೆಸ್ಟ್​ ಆಡಲು ಹಿಂದೇಟು ಹಾಕುವ ಆಟಗಾರರ ಮನೋಭಾವ ಗವಾಸ್ಕರ್ ಟೀಕಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ಆಡುವ ಬದ್ಧತೆಯನ್ನು ಪ್ರತಿಪಾದಿಸಿದ್ದಾರೆ.

ಟೆಸ್ಟ್​ ಕ್ರಿಕೆಟ್ ಆಡುವ ಹಸಿವಿನ ಮಹತ್ವವನ್ನು ರೋಹಿತ್ ಶರ್ಮಾ ಒತ್ತಿ ಹೇಳಿದ್ದರು. ಟೆಸ್ಟ್ ಆಡಲು ಉತ್ಸಾಹ ಪ್ರದರ್ಶಿಸುವುದು ಆಟಗಾರರಿಗೆ ಮಾತ್ರ ಆಯ್ಕೆಗೆ ಪರಿಗಣಿಸಲಾಗುತ್ತದೆ ಎಂದು ಭಾರತೀಯ ನಾಯಕ ಹೇಳಿದ್ದರು. ಇದೀಗ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್​​ ಕೂಡ ಇದನ್ನೇ ಹೇಳಿದ್ದಾರೆ. ಟೀಮ್ ಮ್ಯಾನೇಜ್ಮೆಂಟ್ ಮತ್ತು ಬಿಸಿಸಿಐ ಸೂಚನೆಗಳ ಹೊರತಾಗಿ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರಂತಹ ಆಟಗಾರರು ರಣಜಿ ಟ್ರೋಫಿಯನ್ನು ತಪ್ಪಿಸಿಕೊಂಡರು.

ಆದರೆ, ರಣಜಿ ಆಡಲು ಇಬ್ಬರು ನಿರ್ಲಕ್ಷ್ಯ ತೋರಿದರು. ಗಾಯವೆಂದು ಸುಳ್ಳು ಹೇಳಿದರು. ಯುವ ಆಟಗಾರರಾದ ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್, ಆಕಾಶ್ ದೀಪ್ ಅವರಂತಹ ಹೊಸ ಪ್ರತಿಭೆಗಳ ಅದ್ಭುತ ಪ್ರದರ್ಶನದಿಂದ ಇಂಗ್ಲೆಂಡ್ ವಿರುದ್ಧದ ಭಾರತ ಸರಣಿ ಗೆದ್ದುಕೊಂಡಿತು. ಈ ಬೆನ್ನಲ್ಲೇ ಸುನಿಲ್ ಗವಾಸ್ಕರ್​ ಟೆಸ್ಟ್ ಆಡದಿರಲು ನಿರ್ಧರಿಸಿದವರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅವರಿಗೆ ಟೆಸ್ಟ್ ಕ್ರಿಕೆಟ್​ ಆಡುವ ಸಾಮರ್ಥ್ಯ ಇಲ್ಲ ಎಂದಿದ್ದಾರೆ. ಸದ್ಯ ಶ್ರೇಯಸ್ ಅಯ್ಯರ್ ರಣಜಿ ಸೆಮಿಫೈನಲ್ ಆಡಲು ನಿರ್ಧರಿರುವ ಮೂಲಕ ಟೀಕೆಗಳಿಂದ ತಪ್ಪಿಸಿಕೊಂಡಿದ್ದಾರೆ.

ಟೆಸ್ಟ್​ ಕ್ರಿಕೆಟ್​​ ಆಡುವ ಹಸಿವು ಇರುವವರು, ಪ್ರಯತ್ನಿಸಲು ಸಿದ್ಧರಿರುವವರಿಗೆ ಮುಂದೆ ಹೆಚ್ಚಿನ ಅವಕಾಶ ನೀಡಲಾಗುವುದು ಎಂದು ರೋಹಿತ್ ಹೇಳುವುದು ಸಂಪೂರ್ಣ ಸರಿಯಾಗಿದೆ. ಆಯ್ಕೆದಾರರ ವರ್ತನೆ ಹೀಗಿದ್ದರೆ, ಅದು ಭಾರತೀಯ ಕ್ರಿಕೆಟ್​​ಗೆ ಒಳ್ಳೆಯದು. ಟೆಸ್ಟ್ ಕ್ರಿಕೆಟ್ ಆಡಲು ಹಿಂದೇಟು ಹಾಕುವವರಿಗೆ ಆಯ್ಕೆ ಮಾಡುವುದನ್ನು ನಾವು ನೋಡಿದ್ದೇವೆ, ಇದು ಸಂಭವಿಸಬಾರದು ಎಂದು ಸ್ಪೋರ್ಟ್ಸ್ ತಕ್​​ನಲ್ಲಿ ಹೇಳಿದ್ದಾರೆ.

ರೋಹಿತ್ ಹೇಳಿದ್ದು ಸರಿ ಇದೆ ಎಂದ ದಿಗ್ಗಜ

ಕಿಶನ್, ಪಾಂಡ್ಯ ಅಥವಾ ಅಯ್ಯರ್ ಅವರಂತಹ ಆಟಗಾರರ ಹೆಸರು ಹೇಳದೆಯೇ ಗವಾಸ್ಕರ್ ಟೆಸ್ಟ್ ಕ್ರಿಕೆಟ್ ಆಡದಿರಲು ನಿರ್ಧರಿಸಿದವರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಅವರಿಗೆ ಸಾಮರ್ಥ್ಯವಿಲ್ಲ. ರೋಹಿತ್ ಹೇಳಿದಂತೆ ಅವರಿಗೆ ಹಸಿವು ಇಲ್ಲ. ಅವರು ಯಾವ ರೀತಿಯ ದೇಶೀಯ ಕ್ರಿಕೆಟ್ ಆಡಲಿಲ್ಲ? ಇದು ಕೆಂಪು ಚೆಂಡುಗಳನ್ನು ಹೊಂದಿರುವ ದೀರ್ಘ ಸ್ವರೂಪವಾಗಿದೆ. ಆದ್ದರಿಂದ, ನೀವು ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ರಣಜಿ ತೊರೆದು ಐಪಿಎಲ್​ಗೆ ಸಿದ್ಧವಾಗುತ್ತಿರುವ ಆಟಗಾರರಿಗೆ ಟೀಕಿಸಿದ್ದಾರೆ.

ರೋಹಿತ್ ಶರ್ಮಾ ಹೇಳಿದ್ದೇನು?

ನಾಲ್ಕನೇ ಟೆಸ್ಟ್​ ಪಂದ್ಯದ ನಂತರ ಹೆಸರುಗಳನ್ನು ಉಲ್ಲೇಖಿಸದೆ, ಕೆಲವು ಆಟಗಾರರಿಗೆ ಟೆಸ್ಟ್​ ಉತ್ಸಾಹದ ಕೊರತೆಯಿದೆ ಎಂದು ಸೂಚಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ಅತ್ಯಂತ ಕಠಿಣ ಸ್ವರೂಪವಾಗಿದೆ. ನೀವು ಯಶಸ್ಸು ಬಯಸಿದರೆ ಮತ್ತು ಈ ಕಠಿಣ ಸ್ವರೂಪದಲ್ಲಿ ಉತ್ಕೃಷ್ಟರಾಗಲು ಬಯಸಿದರೆ, ನಿಮಗೆ ಆಡುವ ಹಸಿವು ಇರಬೇಕು. ಆ ಹಸಿವು ಇರುವ ಆಟಗಾರರಿಗೆ ಮಾತ್ರ ನಾವು ಅವಕಾಶ ನೀಡುತ್ತೇವೆ ಎಂದು ರಾಂಚಿಯಲ್ಲಿ ನಡೆದ ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ಹೇಳಿದರು. ಕೆಲವರನ್ನು ನೋಡಿದರೆ ಸಾಕು ಯಾರಿಗೆ ಉತ್ಸಾಹದ ಕೊರತೆಯಿದೆ ಎಂದು ನೀವು ಸುಲಭವಾಗಿ ಹೇಳಬಹುದು ಎಂದು ಹೇಳಿದ್ದರು.

ನಿಷ್ಠೆ ತೋರಿಸಬೇಕು ಎಂದ ಗವಾಸ್ಕರ್

ರೋಹಿತ್​​ ಹೇಳಿಕೆಯನ್ನು ಸಮರ್ಥಿಸಿಕೊಂಡ ಗವಾಸ್ಕರ್, ಅವರು ಹೇಳಿದ್ದು ಸಂಪೂರ್ಣವಾಗಿ ಸರಿ. ಟೆಸ್ಟ್ ಆಡಲು ಬಯಸುವವರನ್ನು ನೀವು ನೋಡಿ. ನಾನಿದನ್ನು ವರ್ಷಗಳಿಂದ ಹೇಳುತ್ತಿದ್ದೇನೆ. ಭಾರತೀಯ ಕ್ರಿಕೆಟ್​ನಿಂದಾಗಿ ಆಟಗಾರರು ಹೇಗಿದ್ದಾರೆ, ಅವರ ಜೀವನ ಮತ್ತು ವೃತ್ತಿಜೀವನದ ಹಂತವು ಭಾರತೀಯ ಕ್ರಿಕೆಟ್​ನಿಂದಾಗಿದೆ. ಅವರು ಪಡೆದ ಹಣ, ಖ್ಯಾತಿ ಮತ್ತು ಮನ್ನಣೆಗೆ ಭಾರತೀಯ ಕ್ರಿಕೆಟ್ ಕಾರಣ. ಆದ್ದರಿಂದ ನೀವು ಭಾರತೀಯ ಕ್ರಿಕೆಟ್​​ಗೆ ಸ್ವಲ್ಪ ನಿಷ್ಠೆಯನ್ನು ತೋರಿಸಬೇಕು ಎಂದು ಹೇಳಿದ್ದಾರೆ.

IPL_Entry_Point