ಅಕಾಯ್ ಜನಿಸಿದ ನಂತರ ಮೊದಲ ಬಾರಿಗೆ ಮೈದಾನಕ್ಕೆ ಬಂದ ಅನುಷ್ಕಾ; ಪತಿ ಕೊಹ್ಲಿಯ ಮಿಂಚಿನ ರನೌಟ್, ಸಿಕ್ಸರ್ ಕಂಡು ಫುಲ್ ಖುಷ್
ಕನ್ನಡ ಸುದ್ದಿ  /  ಕ್ರಿಕೆಟ್  /  ಅಕಾಯ್ ಜನಿಸಿದ ನಂತರ ಮೊದಲ ಬಾರಿಗೆ ಮೈದಾನಕ್ಕೆ ಬಂದ ಅನುಷ್ಕಾ; ಪತಿ ಕೊಹ್ಲಿಯ ಮಿಂಚಿನ ರನೌಟ್, ಸಿಕ್ಸರ್ ಕಂಡು ಫುಲ್ ಖುಷ್

ಅಕಾಯ್ ಜನಿಸಿದ ನಂತರ ಮೊದಲ ಬಾರಿಗೆ ಮೈದಾನಕ್ಕೆ ಬಂದ ಅನುಷ್ಕಾ; ಪತಿ ಕೊಹ್ಲಿಯ ಮಿಂಚಿನ ರನೌಟ್, ಸಿಕ್ಸರ್ ಕಂಡು ಫುಲ್ ಖುಷ್

Anushka Sharma: ಪುತ್ರ ಅಕಾಯ್ ಜನಿಸಿದ ನಂತರ ಇದೇ ಮೊದಲ ಬಾರಿಗೆ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅವರ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿವೆ.

ಅಕಾಯ್ ಜನಿಸಿದ ನಂತರ ಮೊದಲ ಬಾರಿಗೆ ಮೈದಾನಕ್ಕೆ ಬಂದ ಅನುಷ್ಕಾ; ಪತಿ ಕೊಹ್ಲಿಯ ಮಿಂಚಿನ ರನೌಟ್, ಸಿಕ್ಸರ್ ಕಂಡು ಫುಲ್ ಖುಷ್
ಅಕಾಯ್ ಜನಿಸಿದ ನಂತರ ಮೊದಲ ಬಾರಿಗೆ ಮೈದಾನಕ್ಕೆ ಬಂದ ಅನುಷ್ಕಾ; ಪತಿ ಕೊಹ್ಲಿಯ ಮಿಂಚಿನ ರನೌಟ್, ಸಿಕ್ಸರ್ ಕಂಡು ಫುಲ್ ಖುಷ್

ಮಗ ಅಕಾಯ್ (Akaay) ಹುಟ್ಟಿದ ನಂತರ ಮೊದಲ ಬಾರಿಗೆ ಸೂಪರ್​ಸ್ಟಾರ್ ಬ್ಯಾಟರ್​ ವಿರಾಟ್ ಕೊಹ್ಲಿ (Virat Kohli) ಪತ್ನಿ ಅನುಷ್ಕಾ ಶರ್ಮಾ (Anushka Sharma) ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ (RCB vs GT) ಐಪಿಎಲ್​ (IPL 2024) ಪಂದ್ಯದ ಸಂದರ್ಭದಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಅನುಷ್ಕಾ ಶರ್ಮಾ, ತನ್ನ ಪತಿ ಕೊಹ್ಲಿ ಮತ್ತು ಆರ್​ಸಿಬಿ ತಂಡಕ್ಕೆ ಚಿಯರ್​ ಮಾಡಿದ್ದು, ಗಮನ ಸೆಳೆಯಿತು.

ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಕುಳಿತಿದ್ದ ಅನುಷ್ಕಾ ಆರ್​ಸಿಬಿ ತಂಡದ ಪರ ಬೌಲರ್​ಗಳು ನೀಡಿದ ಅತ್ಯುತ್ತಮ ಪ್ರದರ್ಶನವನ್ನು ಸಖತ್ ಎಂಜಾಯ್ ಮಾಡಿದರು. ಅಲ್ಲದೆ, ವಿರಾಟ್ ಕೊಹ್ಲಿ ಬ್ಯಾಟಿಂಗ್ ಕಣ್ತುಂಬಿಕೊಂಡ ಅನುಷ್ಕಾ, ಹಲವು ತಿಂಗಳ ನಂತರ ಗಂಡನ ​ ಆಟವನ್ನು ನೋಡಿ ಖುಷಿಪಟ್ಟರು. ಅನುಷ್ಕಾ ಅವರು ಕಾಣಿಸಿಕೊಂಡ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಚಪ್ಪಾಳೆ ತಟ್ಟುವ ಮೂಲಕ ಆರ್​ಸಿಬಿಯನ್ನು ಬೆಂಬಲಿಸಿದರು.

ಅನುಷ್ಕಾ ಶರ್ಮಾ ಅವರೊಂದಿಗೆ ಭಾರತ ಮಹಿಳಾ ಕ್ರಿಕೆಟ್​​ ತಂಡದ ಆಟಗಾರ್ತಿಯರಾದ ಹರ್ಲೀನ್ ಡಿಯೋಲ್ ಮತ್ತು ಜೆಮೈಮಾ ರೋಡ್ರಿಗಸ್ ಅವರು ಸಹ ಪಂದ್ಯವನ್ನು ಕಣ್ತುಂಬಿಕೊಂಡರು. ಅನುಷ್ಕಾ ಮುಂಭಾಗ ಕೂತಿದ್ದರೆ, ಆಟಗಾರ್ತಿಯರು ಹಿಂಬದಿಯಲ್ಲಿದ್ದರು. ಅವರ ಫೋಟೋಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಪಂದ್ಯವನ್ನು ಸಖತ್ ಸಂಜಾಯ್ ಮಾಡಿದ ಅನುಷ್ಕಾ, ಕೊಹ್ಲಿ ಅವರ ಸೂಪರ್​ಮ್ಯಾನ್ ರನೌಟ್ ಮತ್ತು ಬ್ಯಾಟಿಂಗ್​ ಐಕಾನಿಕ್ ಸಿಕ್ಸ್ ಕಂಡು ಫುಲ್ ಖುಷ್ ಆದರು.

ಬರ್ತ್​ಡೇ ಪಾರ್ಟಿ ಆಯೋಜನೆ

ಮೇ 1ರಂದು 36ನೇ ವರ್ಷಕ್ಕೆ ಕಾಲಿಟ್ಟ ಅನುಷ್ಕಾ ಶರ್ಮಾ, ಇತ್ತೀಚೆಗೆ ಗಂಡ ವಿರಾಟ್ ಕೊಹ್ಲಿ ಹಾಗೂ ಆರ್​​ಸಿಬಿ ಆಟಗಾರರೊಂದಿಗೆ ತನ್ನ ಬರ್ತ್​ಡೇ ಆಚರಿಸಿಕೊಂಡಿದ್ದರು. ಅನುಷ್ಕಾ ಕಳೆದೊಂದು ವಾರದಿಂದ ಬೆಂಗಳೂರಿನಲ್ಲೇ ಇದ್ದಾರೆ. ಬರ್ತ್​ಡೇ ಪಾರ್ಟಿಯಲ್ಲಿ ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್​ವೆಲ್ ಸೇರಿದಂತೆ ಹಲವು ಭಾಗಿಯಾಗಿದ್ದರು. ಏಕದಿನ ವಿಶ್ವಕಪ್​​​ನಲ್ಲಿ ಭಾರತ ತಂಡಕ್ಕೆ ಮತ್ತು ವಿರಾಟ್ ಕೊಹ್ಲಿಗೆ ಚಿಯರ್ ಮಾಡಲು ಬಂದಿದ್ದ ಅನುಷ್ಕಾ, ಆ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

ವಿರಾಟ್ ತನ್ನ ಪತ್ನಿ ಅನುಷ್ಕಾ ಜನ್ಮದಿನದಂದು ಕ್ಯೂಟ್​ ಆಗಿ ವಿಶ್ ಮಾಡಿದ್ದರು. ‘ನಾನು ನಿನ್ನನ್ನು ಹುಡುಕದೆ ಇದ್ದರೆ ನಾನು ಸಂಪೂರ್ಣವಾಗಿ ಕಳೆದುಹೋಗುತ್ತಿದ್ದೆ. ಹ್ಯಾಪಿ ಬರ್ತ್​ಡೇ ಮೈ ಲವ್. ನೀನು ನನ್ನ ಜಗತ್ತಿಗೆ ಬೆಳಕು. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ’ ಎಂದು ಲವ್​ ಎಮೋಜಿ ಹಾಕಿದ್ದಾರೆ. ಈ ಪೋಸ್ಟ್​​ ಸಖತ್ ವೈರಲ್ ಆಗಿತ್ತು. ಫಾಫ್ ಡು ಪ್ಲೆಸಿಸ್ ಪತ್ನಿಯ ಜನ್ಮದಿನವೂ ಮೇ 1ರಂದೇ ಇತ್ತು. ಹಾಗಾಗಿ ಕೊಹ್ಲಿ ಮತ್ತು ಫಾಫ್ ಒಟ್ಟಿಗೆ ಪಾರ್ಟಿ ಆಯೋಜಿಸಿದ್ದರು ಎಂದು ಹೇಳಲಾಗಿದೆ.

ಫೆಬ್ರವರಿ ಪುತ್ರ ಅಕಾಯ್ ಜನನ

ಏಕದಿನ ವಿಶ್ವಕಪ್​ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಅನುಷ್ಕಾ ಶರ್ಮಾ, ಫೆಬ್ರವರಿ 15ರಂದು ಪುತ್ರ ಅಕಾಯ್​ಗೆ ಜನ್ಮ ನೀಡಿದರು. ಲಂಡನ್​​ನ ಆಸ್ಪ್ರತ್ರೆಯೊಂದರಲ್ಲಿ ಅಕಾಯ್​ಗೆ ಜನನ ನೀಡಿದ ಅನುಷ್ಕಾ, ಅಲ್ಲಿಯೇ ತಿಂಗಳುಗಳ ಕಾಲ ನೆಲೆಸಿದ್ದರು. ವಿರಾಟ್ ಕೊಹ್ಲಿ ಸಹ ಇಂಗ್ಲೆಂಡ್ ವಿರುದ್ಧದ 5 ಐದು ಪಂದ್ಯಗಳ ಟೆಸ್ಟ್​ ಸರಣಿಯನ್ನು ತಪ್ಪಿಸಿಕೊಂಡಿದ್ದರು. ಆ ಬಳಿಕ ಅವರು ನೇರವಾಗಿ ಐಪಿಎಲ್​​ನಲ್ಲಿ ಭಾಗವಹಿಸಿದರು. ಐಪಿಎಲ್​ ಪ್ರಾರಂಭಕ್ಕೆ ನಾಲ್ಕೈದು ದಿನಗಳಿದ್ದ ಸಮಯದಲ್ಲಿ ಆರ್​​ಸಿಬಿ ಕ್ಯಾಂಪ್ ಸೇರಿಕೊಂಡರು.

Whats_app_banner