ಕನ್ನಡ ಸುದ್ದಿ  /  ಕ್ರಿಕೆಟ್  /  ಆರ್​ಸಿಬಿ ಆಟಗಾರ್ತಿಯರ ಅಬ್ಬರ; ಸೌತ್​ ಆಫ್ರಿಕಾ ವಿರುದ್ಧ ಮೊದಲ ಏಕದಿನ ಗೆದ್ದ ಭಾರತೀಯ ಮಹಿಳಾ ತಂಡ

ಆರ್​ಸಿಬಿ ಆಟಗಾರ್ತಿಯರ ಅಬ್ಬರ; ಸೌತ್​ ಆಫ್ರಿಕಾ ವಿರುದ್ಧ ಮೊದಲ ಏಕದಿನ ಗೆದ್ದ ಭಾರತೀಯ ಮಹಿಳಾ ತಂಡ

India Women vs South Africa Women : ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ 143 ರನ್​​ಗಳ ಭರ್ಜರಿ ಗೆಲುವು ಸಾಧಿಸಿತು.

ಆರ್​ಸಿಬಿ ಆಟಗಾರ್ತಿಯರ ಅಬ್ಬರ; ಸೌತ್​ ಆಫ್ರಿಕಾ ವಿರುದ್ಧ ಮೊದಲ ಏಕದಿನ ಗೆದ್ದ ಭಾರತೀಯ ಮಹಿಳಾ ತಂಡ
ಆರ್​ಸಿಬಿ ಆಟಗಾರ್ತಿಯರ ಅಬ್ಬರ; ಸೌತ್​ ಆಫ್ರಿಕಾ ವಿರುದ್ಧ ಮೊದಲ ಏಕದಿನ ಗೆದ್ದ ಭಾರತೀಯ ಮಹಿಳಾ ತಂಡ (PTI)

ಆರ್​​ಸಿಬಿ ಆಟಗಾರ್ತಿಯರಾದ ಸ್ಮೃತಿ ಮಂಧಾನ ಶತಕ (117) ಮತ್ತು ಆಶಾ ಶೋಭನಾ (4/21) ಅವರ ಭರ್ಜರಿ ಬೌಲಿಂಗ್ ಪ್ರದರ್ಶನದ ಕಾರಣ ಸೌತ್​ ಆಫ್ರಿಕಾ ತಂಡವನ್ನು ಭಾರತೀಯ ಕ್ರಿಕೆಟ್ ತಂಡವನ್ನು ಮಣಿಸಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮೊದಲ ಒಡಿಐ ಪಂದ್ಯದಲ್ಲಿ 143 ರನ್​ಗಳಿಂದ ಗೆದ್ದು ಬೀಗಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-0ರಲ್ಲಿ ಮುನ್ನಡೆ ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ, ಸ್ಮೃತಿ ಮಂಧಾನ ಅವರ ಭರ್ಜರಿ ಬ್ಯಾಟಿಂಗ್ ಸಹಾಯದಿಂದ ತನ್ನ ಪಾಲಿನ 50 ಓವರ್​​​ಗಳಲ್ಲಿ 8 ವಿಕೆಟ್​​ ನಷ್ಟಕ್ಕೆ 265 ರನ್​ ಗಳಿಸಿತು. ಆ ಬಳಿಕ ಅಯಾಬೊಂಗ ಕಾಕಾ ಅವರು 3 ವಿಕೆಟ್ ಉರುಳಿಸಿದರು. ಈ ಗುರಿ ಬೆನ್ನಟ್ಟಿದ ಸೌತ್ ಆಫ್ರಿಕಾ ತಂಡವು ಆಶಾ ಶೋಭನಾ ಅವರ ದಾಳಿಗೆ ತತ್ತರಿಸಿತು. ಕೇವಲ 37.4 ಓವರ್​​​ಗಳಲ್ಲಿ 122 ರನ್​ಗಳಿಗೆ ಆಲೌಟ್ ಆಯಿತು.

ಆಶಾ ಶೋಭನಾ ಶಿಸ್ತಿನ ದಾಳಿ

266 ರನ್​ಗಳ ಗುರಿ ಹಿಂಬಾಲಿಸಿದ ದಕ್ಷಿಣ ಆಫ್ರಿಕಾ, ತೀರಾ ಕಳಪೆ ಪ್ರದರ್ಶನ ನೀಡಿತು. ಲಾರಾ ವೊಲ್ವಾರ್ಡ್ಟ್ 4 ರನ್, ತಜ್ಮಿನ್ ಬ್ರಿಟ್ಸ್ 18 ರನ್, ಅನ್ನೆಕೆ ಬಾಷ್ 5 ರನ್ ಗಳಿಸಿ ಬೇಗನೇ ಔಟಾದರು. ಆ ಬಳಿಕ ಸುನಿ ಲೂಸ್ 33 ಮತ್ತು ಮರಿಜಾನ್ ಕಾಪ್ 24 ರನ್ ಗಳಿಸಿ ತಂಡಕ್ಕೆ ಚೇತರಿಕೆ ನೀಡಲು ಯತ್ನಿಸಿದರು. ಆದರೆ, ಈ ಇಬ್ಬರಿಗೂ ಆಶಾ ಶೋಭನಾ ಬ್ರೇಕ್ ನೀಡಿದರು. ಅನ್ನೇರಿ ಡೆರ್ಕ್ಸೆನ್ 1, ನೊಂದುಮಿಸೋ ಶಂಗಾಸೆ 8 ರನ್​ ಮತ್ತು ಶಿನಾಲೊ ಜಫ್ನಾ 27 ರನ್ ಗಳಿಸಿದರು.

ಟ್ರೆಂಡಿಂಗ್​ ಸುದ್ದಿ

ಮಸಾಬಟಾ ಕ್ಲಾಸ್ 1, ನಾನ್ಕುಲುಲೇಕೋ ಮ್ಲಾಬಾ 0, ಅಯಬೊಂಗ ಖಾಕಾ ಶೂನ್ಯಕ್ಕೆ ಔಟಾದರು. ಆಶಾ ಶೋಭನಾ 8.4 ಓವರ್​​​ಗಳಲ್ಲಿ 21 ರನ್ ಬಿಟ್ಟುಕೊಟ್ಟು 4 ವಿಕೆಟ್ ಉರುಳಿಸಿದರೆ, ದೀಪ್ತಿ ಶರ್ಮಾ 2 ವಿಕೆಟ್, ರಾಧಾ ಯಾದವ್, ಪೂಜಾ ವಸ್ತ್ರಾಕರ್ ಮತ್ತು ರೇಣುಕಾ ಸಿಂಗ್ ಠಾಕೂರ್ ತಲಾ ಒಂದೊಂದು ವಿಕೆಟ್ ಪಡೆದರು. ಇದರೊಂದಿಗೆ ಅಲ್ಪಮೊತ್ತಕ್ಕೆ ಆಫ್ರಿಕಾ ಕುಸಿತು. ಅಲ್ಲದೆ, 143 ರನ್​ಗಳಿಂದ ಮಣಿಸಿತು.

ಸ್ಮೃತಿ ಮಂಧಾನ ಏಕಾಂಗಿ ಹೋರಾಟ

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡದ ಆರಂಭಿಕ ವಿಘ್ನ ಎದುರಿಸಿತು. ಶಫಾಲಿ ವರ್ಮಾ 7 ರನ್ ಗಳಿಸಿ ಔಟಾದರೆ, ದಯಾಲನ್ ಹೇಮಲತಾ 12 ರನ್​ ಗಳಿಸಿ ಪೆವಿಲಿಯನ್ ಸೇರಿದರು. ಹರ್ಮನ್​ಪ್ರೀತ್ ಕೌರ್ (10) ಕೂಡ ಹೆಚ್ಚು ಹೊತ್ತು ಕ್ರೀಸ್​​ನಲ್ಲಿ ನಿಲ್ಲಲಿಲ್ಲ. ಜೆಮಿಮಾ ರೋಡ್ರಿಗಸ್ 17 ರನ್ ಗಳಿಸಿದರೆ, ರಿಚಾ ಘೋಷ್ 31 ರನ್ ಗಳಿಸಿದರು. ಆದರೆ ಸ್ಮೃತಿ ಮಂಧಾನ ಮಾತ್ರ ಏಕಾಂಗಿ ಹೋರಾಟ ನಡೆಸಿದರು.

ದೀಪ್ತಿ ಶರ್ಮಾ ಅವರೊಂದಿಗೆ ಕೂಡಿ 6ನೇ ವಿಕೆಟ್​ಗೆ ಅಮೋಘ 81 ರನ್​ಗಳ ಪಾಲುದಾರಿಕೆ ಒದಗಿಸಿದರು. ಆದರೆ ದೀಪ್ತಿ ಅವರು 37 ರನ್ ಸಿಡಿಸಿ ಔಟಾದರು. ಇದರ ನಡುವೆ ಮಂಧಾನ ತಮ್ಮ ವೃತ್ತಿಜೀವನದ ಆರನೇ ಶತಕವನ್ನೂ ಪೂರೈಸಿದರು. 116ನೇ ಎಸೆತದಲ್ಲಿ ನೂರರ ಗಡಿ ದಾಟಿದ ಸ್ಮೃತಿ, ಹಲವು ದಾಖಲೆ ನಿರ್ಮಿಸಿದರು. ಪೂಜಾ ವಸ್ತ್ರಾಕರ್​ ಸಹ ಕೊನೆಯಲ್ಲಿ ಉಪಯುಕ್ತ 31 ರನ್​​ಗಳ ಕಾಣಿಕೆ ನೀಡಿದರು.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ