ಕನ್ನಡ ಸುದ್ದಿ  /  Cricket  /  Ashwini Puneeth Rajkumar Hints At Renaming Rcb To Royal Challengers Bengaluru Before Rcb Unbox Event In Chinnaswamy Prs

Bangalore ಅಲ್ಲ, Bengaluru; ಜನ್ಮದಿನವೇ ಆರ್​ಸಿಬಿ ಹೆಸರು ಬದಲಾವಣೆ ಖಚಿತಪಡಿಸಿದ ಅಶ್ವಿನಿ ಪುನೀತ್ ರಾಜ್​ಕುಮಾರ್​

RCB Unbox Event: ದಿವಂತರ ಪುನೀತ್ ರಾಜ್​ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಸಹ ಆರ್​ಸಿಬಿ ಹೆಸರು ಬದಲಾವಣೆ ಕುರಿತ ಪ್ರೊಮೋದಲ್ಲಿ ಕಾಣಿಸಿಕೊಂಡಿದ್ದಾರೆ.

ಜನ್ಮದಿನವೇ ಆರ್​ಸಿಬಿ ಹೆಸರು ಬದಲಾವಣೆ ಖಚಿತಪಡಿಸಿದ ಅಶ್ವಿನಿ ಪುನೀತ್ ರಾಜ್​ಕುಮಾರ್​
ಜನ್ಮದಿನವೇ ಆರ್​ಸಿಬಿ ಹೆಸರು ಬದಲಾವಣೆ ಖಚಿತಪಡಿಸಿದ ಅಶ್ವಿನಿ ಪುನೀತ್ ರಾಜ್​ಕುಮಾರ್​

17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್​​ ಲೀಗ್ (IPL 2024)​​ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಆದರೆ ಅದಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಹೆಸರು ಬದಲಾವಣೆ ಸುದ್ದಿ ಜೋರಾಗಿದೆ. 'ಆರ್​ಸಿಬಿ ಅನ್​ಬಾಕ್​ ಈವೆಂಟ್' ಮಾರ್ಚ್ 19ರಂದು ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದ್ದು, ಅದ್ಧೂರಿ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಹೆಸರು ಬದಲಾವಣೆ ಕುರಿತು ಸುಳಿವು ನೀಡುತ್ತಿರುವ ಪ್ರೊಮೋಗಳ ವಿಡಿಯೋಗಳನ್ನು ಹಂಚಿಕೊಂಡಿರುವ ಆರ್​ಸಿಬಿ, ಈಗ ಮತ್ತೊಂದು ಪ್ರೊಮೋ ಬಿಡುಗಡೆ ಮಾಡಿದೆ. ಈಗಾಗಲೇ ಕಾಂತಾರ ಸಿನಿಮಾದ ಶಿವನ ಅವತಾರದಲ್ಲಿ ರಿಷಬ್ ಶೆಟ್ಟಿ ಆರ್​​ಸಿಬಿ ಪ್ರೊಮೋದಲ್ಲಿ ಕಾಣಿಸಿದ್ದಾರೆ. ಇದೀಗ ದಿವಂತರ ಪುನೀತ್ ರಾಜ್​ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಸಹ ಆರ್​ಸಿಬಿ ಹೆಸರು ಬದಲಾವಣೆ ಕುರಿತ ಪ್ರೊಮೋದಲ್ಲಿ ಕಾಣಿಸಿಕೊಂಡಿದ್ದಾರೆ.

ಆರ್​​ಸಿಬಿ ಬಿಡುಗಡೆ ಮಾಡಿರುವ ಪ್ರೊಮೋದಲ್ಲಿ ಅಶ್ವಿನಿ ಪುನೀತ್ ರಾಜ್​ಕುಮಾರ್ ತಮ್ಮ ಲ್ಯಾಪ್​ಟಾಪ್ ಪಾಸ್​ವರ್ಡ್ ಬದಲಿಸುವ ಮೂಲಕ ಸುಳಿವು ನೀಡಿದ್ದಾರೆ. ಡಾ.ರಾಜ್​ಕುಮಾರ್​ ಚಿತ್ರದೊಂದಿಗೆ ಈ ವಿಡಿಯೋ ಪ್ರಾರಂಭವಾಗಲಿದೆ. ಪುನೀತ್ ಅವ​ರ ಪುತ್ಥಳಿಯೂ ಇದರಲ್ಲಿದೆ. ನಂತರ ಅಶ್ವಿನಿ ಅವರು ಲ್ಯಾಪ್​ಟಾಪ್​ನಲ್ಲಿ ‘Royal Challengers Bangalore ಎಂಬ ಪಾಸ್​ವರ್ಡ್ ಟೈಪಿಸಿ ಎಂಟರ್​ ಒತ್ತುತ್ತಾರೆ.

ಆದರೆ, ಹೊಸ ಪಾಸ್​ವರ್ಡ್​ನಲ್ಲಿ ಹಳೆಯ ಪಾಸ್​​ವರ್ಡ್ ಆಗಿ ಬಳಸಲು ಸಾಧ್ಯವಿಲ್ಲ ಎಂದು ತೋರಿಸುತ್ತದೆ. ತಕ್ಷಣ ಅಶ್ವಿನ್ ಅವರು Bangalore ಅನ್ನು ಡಿಲೀಟ್ ಮಾಡಿ ಹೊಸ ಪಾಸ್​ವರ್ಡ್ ಸೆಟ್ ಮಾಡುತ್ತಾರೆ. ಆದರೆ ಹೊಸ ಪಾಸ್​ವರ್ಡ್ ನಮಗೆ ತೋರಿಸುವುದಿಲ್ಲ. ಇದರ ಬೆನ್ನಲ್ಲೇ ಅರ್ಥ ಆಯ್ತಾ ಎಂದು ಕೇಳಿದ್ದಾರೆ. ಹಾಗಾಗಿ ಮಾರ್ಚ್ 19ರಂದು ನಡೆಯುವ ಅನ್​ಬಾಕ್ ಈವೆಂಟ್​ನಲ್ಲಿ Royal Challengers Bangalore (‘ರಾಯಲ್ ಚಾಲೆಂಜರ್ಸ್ ಬ್ಯಾಂಗಲೂರ್’) ಬದಲಿಗೆ Royal Challengers Bengaluru (‘ರಾಯಲ್ ಚಾಲೆಂಜರ್ಸ್ ಬೆಂಗಳೂರು’) ಎಂದು ಹೆಸರು ಬದಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಮಾರ್ಚ್​ 22ರಿಂದ ಇಂಡಿಯನ್ ಪ್ರೀಮಿಯರ್​ ಲೀಗ್​ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್​ ತಂಡಗಳು ಸೆಣಸಾಟ ನಡೆಸಲಿವೆ. ಕಳೆದ ಬಾರಿ ನಡೆದ ಇದೇ ಕಾರ್ಯಕ್ರಮದಲ್ಲಿ ಎಬಿ ಡಿವಿಲಿಯರ್ಸ್ ಮತ್ತು ಕ್ರೀಸ್​ ಗೇಲ್ ಅವರ ಜೆರ್ಸಿ ಸಂಖ್ಯೆಗೆ ಶಾಶ್ವತ ವಿದಾಯ ಹೇಳಲಾಗಿತ್ತು. ಅಂದಿನ ಕಾರ್ಯಕ್ರಮಕ್ಕೆ ಇಡೀ ಮೈದಾನವೇ ತುಂಬಿ ತುಳುಕಿತ್ತು.

ಆರ್​​ಸಿಬಿ ತಂಡ

ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟೀ, ಅನೂರಾವತ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್​), ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಕರ್ಣ್ ಶರ್ಮಾ, ಮಹಿಪಾಲ್ ಲೊಮ್ರರ್, ಮನೋಜ್ ಭಾಂಡಗೆ, ವಿಜಯ್‌ಕುಮಾರ್ ವೈಶಾಕ್, ಮಯಾಂಕ್ ಡಾಗರ್, ಆಕಾಶ್ ದೀಪ್, ರೀಸ್ ಟೋಪ್ಲಿ, ಅಲ್ಜಾರಿ ಜೋಸೆಫ್, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮರೂನ್ ಗ್ರೀನ್, ಮೊಹಮ್ಮದ್ ಸಿರಾಜ್, ಯಶ್ ದಯಾಳ್, ಸ್ವಪ್ನಿಲ್ ಸಿಂಗ್, ಲಾಕಿ ಫರ್ಗುಸನ್, ಸೌರವ್ ಚೌಹಾನ್, ಟಾಮ್ ಕರನ್.

ಆರ್​​ಸಿಬಿಯ ಮೊದಲೈದು ಪಂದ್ಯಗಳ ವೇಳಾಪಟ್ಟಿ

ಚೆನ್ನೈ ಸೂಪರ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು - ಮಾರ್ಚ್ 22 ಚೆನ್ನೈ, ಸಂಜೆ 7:30ಕ್ಕೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್ - ಮಾರ್ಚ್ 25, ಬೆಂಗಳೂರು, ಸಂಜೆ 7:30ಕ್ಕೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತ್ತಾ ನೈಟ್​ ರೈಡರ್ಸ್ - ಮಾರ್ಚ್ 29, ಬೆಂಗಳೂರು, ಸಂಜೆ 7:30ಕ್ಕೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಲಕ್ನೋ ಸೂಪರ್ ಜೈಂಟ್ಸ್ - ಏಪ್ರಿಲ್ 2, ಬೆಂಗಳೂರು, ಸಂಜೆ 7:30ಕ್ಕೆ

ರಾಜಸ್ಥಾನ್ ರಾಯಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು - ಏಪ್ರಿಲ್ 6, ಜೈಪುರ, ಸಂಜೆ 7:30ಕ್ಕೆ