ಏಷ್ಯಾಕಪ್ 2023 ಉದ್ಘಾಟನಾ ಸಮಾರಂಭದ ಲೈವ್ ಸ್ಟ್ರೀಮಿಂಗ್: ಅದ್ಧೂರಿ ಕಾರ್ಯಕ್ರಮ ಹೀಗೆ ವೀಕ್ಷಿಸಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಏಷ್ಯಾಕಪ್ 2023 ಉದ್ಘಾಟನಾ ಸಮಾರಂಭದ ಲೈವ್ ಸ್ಟ್ರೀಮಿಂಗ್: ಅದ್ಧೂರಿ ಕಾರ್ಯಕ್ರಮ ಹೀಗೆ ವೀಕ್ಷಿಸಿ

ಏಷ್ಯಾಕಪ್ 2023 ಉದ್ಘಾಟನಾ ಸಮಾರಂಭದ ಲೈವ್ ಸ್ಟ್ರೀಮಿಂಗ್: ಅದ್ಧೂರಿ ಕಾರ್ಯಕ್ರಮ ಹೀಗೆ ವೀಕ್ಷಿಸಿ

Asia Cup 2023: ಏಷ್ಯಾಕಪ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭವು‌ ಪಾಕಿಸ್ತಾನದ ಮುಲ್ತಾನ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಅದ್ಧೂರಿ ಕಾರ್ಯಕ್ರಮದ ಲೈವ್‌ ಸ್ಟ್ರೀಮಿಂಗ್‌ ವಿವರ ಹೀಗಿದೆ.

ಏಷ್ಯಾಕಪ್‌ ಉದ್ಘಾಟನಾ ಸಮಾರಂಭ ಲೈವ್‌ ಸ್ಟ್ರೀಮಿಂಗ್
ಏಷ್ಯಾಕಪ್‌ ಉದ್ಘಾಟನಾ ಸಮಾರಂಭ ಲೈವ್‌ ಸ್ಟ್ರೀಮಿಂಗ್

ಏಷ್ಯಾಕಪ್ (Asia Cup 2023) ಕ್ರಿಕೆಟ್‌ ಟೂರ್ನಿಗೆ ಇಂದು (ಬುಧವಾರ, ಆಗಸ್ಟ್ 30) ಚಾಲನೆ ಸಿಕ್ಕಿದೆ. ಪಂದ್ಯಾವಳಿಯ ಉದ್ಘಾಟನಾ ಸಮಾರಂಭವು ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಮೊದಲ ಪಂದ್ಯವು ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದ್ದು, ಈ ಪಂದ್ಯದ ಆರಂಭಕ್ಕೂ ಮುನ್ನ ಉದ್ಘಾಟನಾ ಸಮಾರಂಭ ನಡೆಯುತ್ತಿದೆ. ಮಧ್ಯಾಹ್ನ 2.30ಕ್ಕೆ ಟಾಸ್‌ ಪ್ರಕ್ರಿಯೆ ನಡೆದಿದ್ದು, ಅದರ ಬೆನ್ನಲ್ಲೇ ಅದ್ಧೂರಿ ಉದ್ಘಾಟನಾ ಕಾರ್ಯಕ್ರಮ ನಡೆಯುತ್ತಿದೆ. ಇಲ್ಲಿ ಪ್ರಸಿದ್ಧ ಸಂಗೀತ ಕಲಾವಿದರು ಭಾಗವಹಿಸುತ್ತಿದ್ದಾರೆ.

ಏಷ್ಯಾಕಪ್ 2023 ರ ಉದ್ಘಾಟನಾ ಸಮಾರಂಭದ ಲೈವ್ ಸ್ಟ್ರೀಮಿಂಗ್ ವಿವರ

ಏಷ್ಯಾಕಪ್ 2023ರ ಉದ್ಘಾಟನಾ ಸಮಾರಂಭ ಯಾವಾಗ ನಡೆಯಲಿದೆ?

ಏಷ್ಯಾಕಪ್ 2023ರ ಉದ್ಘಾಟನಾ ಸಮಾರಂಭವು ಆಗಸ್ಟ್ 30ರ ಬುಧವಾರದಂದು ನಡೆಯಲಿದೆ. ಪಾಕಿಸ್ತಾನ ಹಾಗೂ ನೇಪಾಳ ನಡುವಿನ ಮೊದಲ ಪಂದ್ಯಕ್ಕೂ ಮೊದಲು ಸಮಾರಂಭ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ಟಾಸ್‌ ಪ್ರಕ್ರಿಯೆ ಬಳಿಕ ಕಾರ್ಯಕ್ರಮ ನಡೆಯುತ್ತಿದೆ.

ಏಷ್ಯಾಕಪ್ 2023ರ ಉದ್ಘಾಟನಾ ಸಮಾರಂಭ ಎಲ್ಲಿ ನಡೆಯಲಿದೆ?

ಏಷ್ಯಾಕಪ್ 2023ರ ಉದ್ಘಾಟನಾ ಸಮಾರಂಭವು ಪಾಕಿಸ್ತಾನದ ಮುಲ್ತಾನ್‌ನಲ್ಲಿರುವ ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಟಾಸ್‌ ಪ್ರಕ್ರಿಯೆ ಬಳಿಕ ಉದ್ಘಾಟನಾ ಸಮಾರಂಭ ನಡೆಯುತ್ತಿದೆ.

ಏಷ್ಯಾಕಪ್ 2023ರ ಉದ್ಘಾಟನಾ ಸಮಾರಂಭದಲ್ಲಿ ಏನೆಲ್ಲಾ ಕಾರ್ಯಕ್ರಮಗಳಿರಲಿವೆ?

ಏಷ್ಯಾಕಪ್ 2023ರ ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಗಾಯಕ ಎಆರ್ ರೆಹಮಾನ್ ಮತ್ತು ಅತಿಫ್ ಅಸ್ಲಾಂ ಅವರಂತಹ ಹೆಸರಾಂತ ಕಲಾವಿದರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸಂಗೀತ ಮಾಂತ್ರಿಕರ ಸಂಗೀತ ಕಾರ್ಯಕ್ರಮ ಅಭಿಮಾನಿಗಳನ್ನು ರಂಜಿಸಲಿದೆ. ಸಾಂಪ್ರದಾಯಿಕ ಏಷ್ಯನ್ ಸಂಗೀತ, ನೃತ್ಯ ಪ್ರದರ್ಶನಗಳು ಮತ್ತು ಸುಡುಮದ್ದು ಪ್ರದರ್ಶನ ಕೂಡಾ ಇರಲಿವೆ.

ಏಷ್ಯಾಕಪ್ 2023ರ ಉದ್ಘಾಟನಾ ಸಮಾರಂಭದ ನೇರಪ್ರಸಾರವನ್ನು ಭಾರತದಲ್ಲಿ ಹೇಗೆ ವೀಕ್ಷಿಸಬಹುದು?

ಏಷ್ಯಾಕಪ್ 2023ರ ಉದ್ಘಾಟನಾ ಸಮಾರಂಭವನ್ನು ಸ್ಟಾರ್ ಸ್ಪೋರ್ಟ್ಸ್ ಮೂಲಕ ಭಾರತದಲ್ಲಿ ದೂರದರ್ಶನದಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಇದೇ ವೇಳೆ ಹಾಟ್‌ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮಿಂಗ್‌ಗೆ ಲಭ್ಯವಿರುತ್ತದೆ. ಮೊಬೈಲ್‌ ಮೂಲಕ ಹಾಟ್‌ಸ್ಟಾರ್‌ನಲ್ಲಿ ಕಾರ್ಯಕ್ರಮ ವೀಕ್ಷಿಸಬಹುದು.

ಏಷ್ಯಾಕಪ್ 2023ರಲ್ಲಿ ಭಾಗವಹಿಸುತ್ತಿರುವ ರಾಷ್ಟ್ರಗಳು

ಪ್ರಸಕ್ತ ಆವೃತ್ತಿಯ ಏಷ್ಯಾಕಪ್‌ನಲ್ಲಿ ಎರಡು ಗುಂಪಿಗಳನ್ನು ರಚಿಸಲಾಗಿದೆ. ಗ್ರೂಪ್ ಎನಲ್ಲಿ ಭಾರತ, ನೇಪಾಳ ಮತ್ತು ಪಾಕಿಸ್ತಾನ ತಂಡಗಳಿವೆ. ಬಿ ಗುಂಪಿನಲ್ಲಿ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡಗಳು ಸ್ಥಾನ ಪಡೆದಿವೆ.

Whats_app_banner