Asia Cup 2023 PAK vs NEP: ಪಾಕಿಸ್ತಾನ vs ನೇಪಾಳ ಏಷ್ಯಾಕಪ್ ಪಂದ್ಯದ ಹೈಲೈಟ್ಸ್
ಕನ್ನಡ ಸುದ್ದಿ  /  ಕ್ರಿಕೆಟ್  /  Asia Cup 2023 Pak Vs Nep: ಪಾಕಿಸ್ತಾನ Vs ನೇಪಾಳ ಏಷ್ಯಾಕಪ್ ಪಂದ್ಯದ ಹೈಲೈಟ್ಸ್

ಪಾಕಿಸ್ತಾನಕ್ಕೆ ಭರ್ಜರಿ ಜಯ

Asia Cup 2023 PAK vs NEP: ಪಾಕಿಸ್ತಾನ vs ನೇಪಾಳ ಏಷ್ಯಾಕಪ್ ಪಂದ್ಯದ ಹೈಲೈಟ್ಸ್

05:20 PM ISTAug 30, 2023 02:32 PM Jayaraj
  • twitter
  • Share on Facebook
05:20 PM IST

Asia Cup 2023 Live Updates: ಏಷ್ಯಾಕಪ್‌ 2023ರ ಉದ್ಘಾಟನಾ ಪಂದ್ಯದಲ್ಲಿ‌ ಆತಿಥೇಯ ಪಾಕಿಸ್ತಾನ ಮತ್ತು ನೇಪಾಳ ತಂಡಗಳು ಮುಖಾಮುಖಿಯಾಗುತ್ತಿವೆ. ಕನ್ನಡದಲ್ಲಿ ಈ ಪಂದ್ಯದ ಲೈವ್‌ ಸ್ಕೋರ್‌ ಹಾಗೂ ಲೈವ್‌ ಅಪ್ಡೇಟ್‌ಗಳನ್ನು ಇಲ್ಲಿ ಓದಿ.

Wed, 30 Aug 202304:56 PM IST

238 ರನ್‌ಗಳಿಂದ ಗೆದ್ದ ಪಾಕಿಸ್ತಾನ; ಬಾಬರ್‌ ಅಜಾಮ್‌ ಪಂದ್ಯಶ್ರೇಷ್ಠ

ಏಷ್ಯಾಕಪ್‌ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ತಂಡವು ಭರ್ಜರಿ ಜಯ ಸಾಧಿಸಿದೆ. ನಾಯಕ ಬಾಬರ್ ಮತ್ತು ಇಫ್ತಿಕರ್ ಅಹ್ಮದ್ ಸ್ಫೋಟಕ ಶತಕ ಹಾಗೂ ಬೌಲರ್‌ಗಳ ಮಾರಕ ದಾಳಿಯ ನೆರವಿನಿಂದ ನೇಪಾಳ (Nepal) ವಿರುದ್ಧ ಭರ್ಜರಿ 238 ರನ್‌ಗಳ ಅಂತರದಿಂದ ಗೆದ್ದು ಬೀಗಿದೆ.  ಪಾಕ್‌ ಪರ ನಾಯಕ ಬಾಬರ್ ಅಜಮ್ 131 ಎಸೆತಗಳಿಂದ 14 ಬೌಂಡರಿ ಹಾಗೂ 4 ಅಮೋಘ ಸಿಕ್ಸರ್‌ಗಳ ನೆರವಿನಿಂದ 154 ರನ್ ಸಿಡಿಸಿದರೆ, ಇಫ್ತಿಕರ್ 71 ಎಸೆತಗಳಿಂದ 11 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್ ಸೇರಿ 109 ರನ್ ಗಳಿಸಿ ಅಜೇಯರಾಗಿ ಉಳಿದರು. ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ನಾಯಕ ಬಾಬರ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಚೊಚ್ಚಲ ಏಷ್ಯಾಕಪ್‌ ಪಂದ್ಯದಲ್ಲಿ ಸೋತರೂ, ಕ್ರಿಕೆಟ್‌ ಶಿಶು ನೇಪಾಳದ ಪ್ರದರ್ಶನ ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಯ್ತು. ಇಲ್ಲಿಗೆ ಇಂದಿನ ಪಂದ್ಯದ ಲೈವ್‌ ಅಪ್ಡೇಟ್‌ ಮುಕ್ತಾಯವಾಯ್ತು. ಪಂದ್ಯದ ಸಂಪೂರ್ಣ ವರದಿ ಹಾಗೂ ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ.

Wed, 30 Aug 202304:10 PM IST

ಗೆಲುವಿನೊಂದಿಗೆ ಏಷ್ಯಾಕಪ್ ಅಭಿಯಾನ ಆರಂಭಿಸಿದ ಪಾಕ್

ಪಾಕಿಸ್ತಾನಕ್ಕೆ ಭರ್ಜರಿ ಗೆಲುವು

Wed, 30 Aug 202304:00 PM IST

ಏಷ್ಯಾಕಪ್‌ ಉದ್ಘಾಟನಾ ಪಂದ್ಯದಲ್ಲಿ ಬಾಬರ್‌ ಪಡೆ ಜಯಭೇರಿ

23.4 ಓವರ್‌ಗಳಲ್ಲಿ 104 ರನ್‌ ಗಳಿಸಿ ನೇಪಾಳ ಸರ್ವಪತನ

238 ರನ್‌ ಅಂತರದಿಂದ ಗೆದ್ದ ಪಾಕಿಸ್ತಾನ

ಏಷ್ಯಾಕಪ್‌ ಉದ್ಘಾಟನಾ ಪಂದ್ಯದಲ್ಲಿ ಬಾಬರ್‌ ಪಡೆ ಜಯಭೇರಿ

ನಾಲ್ಕು ವಿಕೆಟ್ ಕಬಳಿಸಿದ ಶದಾಬ್‌ ಖಾನ್

Wed, 30 Aug 202303:40 PM IST

ನೇಪಾಳ: 90/6

21 ಓವರ್‌ಗಳ ಬಳಿಕ ನೇಪಾಳ: 90/6

ದಿಪೇಂದ್ರ ಸಿಂಗ್‌ ವಿಕೆಟ್‌ ಕಬಳಿಸಿದ ನವಾಜ್‌

ಇನ್ನೂ 252 ರನ್‌ ದೂರದಲ್ಲಿ ನೇಪಾಳ

Wed, 30 Aug 202303:29 PM IST

ನೇಪಾಳ 85/5 ರನ್

ಐದು ವಿಕೆಟ್‌ ಕಳೆದುಕೊಂಡ ನೇಪಾಳ

ಪಾಕಿಸ್ತಾನ ಬೌಲರ್‌ಗಳ ಕರಾರುವಕ್‌ ದಾಳಿ

18.4 ಓವರ್‌ ಬಳಿಕ ನೇಪಾಳ 85/5 ರನ್.

Wed, 30 Aug 202303:12 PM IST

15 ಓವರ್‌ಗಳ ಬಳಿಕ ನೇಪಾಳ 76/4

15 ಓವರ್‌ಗಳ ಬಳಿಕ ನೇಪಾಳ 76/4

ನಾಲ್ಕು ಪ್ರಮುಖ ವಿಕೆಟ್‌ ಕಳೆದುಕೊಂಡ ಕ್ರಿಕೆಟ್‌ ಶಿಶುಗಳು

ಗೆಲುವಿಗೆ ಇನ್ನೂ ಬೇಕು 267 ರನ್‌

26 ರನ್‌ ಗಳಿಸಿ ರೌಫ್‌ಗೆ ವಿಕೆಟ್‌ ಒಪ್ಪಿಸಿದ ಆರಿಫ್

Wed, 30 Aug 202302:47 PM IST

10 ಓವರ್‌ಗಳ ಬಳಿಕ ನೇಪಾಳ 47-3

10 ಓವರ್‌ಗಳ ಬಳಿಕ ನೇಪಾಳ 47-3

ಪವರ್‌ಪ್ಲೇ ಅಂತ್ಯ

Wed, 30 Aug 202302:21 PM IST

5 ಓವರ್‌ ಅಂತ್ಯಕ್ಕೆ ನೇಪಾಳ : 26/3 ರನ್

5 ಓವರ್‌ ಅಂತ್ಯಕ್ಕೆ ನೇಪಾಳ : 26/3 ರನ್ 

ನಿಧಾನಗತಿಯ ಆರಂಭ ಪಡೆದ ನೇಪಾಳ

ಪಾಕಿಸ್ತಾನ ಬೌಲರ್‌ಗಳು ಮೇಲುಗೈ

Wed, 30 Aug 202302:01 PM IST

ಮೂರು ವಿಕೆಟ್‌ ಕಳೆದುಕೊಂಡು ನೇಪಾಳ

ಆರಂಭದಲ್ಲೇ ಮೂರು ವಿಕೆಟ್‌ ಕಳೆದುಕೊಂಡು ನೇಪಾಳ

ಮೊದಲ ಓವರ್‌ನಲ್ಲೇ ಎರಡು ವಿಕೆಟ್‌ ಕಬಳಿಸಿದ ಅಫ್ರಿದಿ

ಎರಡನೇ ಓವರ್‌ನಲ್ಲಿ ನಸೀಂ ಶಾ ಮ್ಯಾಜಿಕ್‌

1.4 ಓವರ್‌ಗಳಲ್ಲಿ ನೇಪಾಳ 14/3 

Wed, 30 Aug 202301:26 PM IST

ನೇಪಾಳ ಗೆಲುವಿಗೆ ಭರ್ಜರಿ 343 ರನ್‌ ಗುರಿ

ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ ಕಳೆದುಕೊಂಡು 342 ರನ್ ಕಲೆ ಹಾಕಿದ ಪಾಕಿಸ್ತಾನ‌

ನೇಪಾಳ ಗೆಲುವಿಗೆ ಭರ್ಜರಿ 343 ರನ್‌ ಗುರಿ

ಬಾಬರ್‌ ಅಜಾಮ್‌ ಮತ್ತು ಇಫ್ತಿಕರ್‌ ಶತಕದಾಟ

ಉಭಯ ಆಟಗಾರರಿಂದ ದ್ವಿಶತಕದ (214) ಜೊತೆಯಾಟ

ಕೊನೆಯ ಓವರ್‌ನಲ್ಲಿ 151 ರನ್‌ ಸಿಡಿಸಿ ಔಟಾದ ಬಾಬರ್

ಕೊನೆಯ ಹತ್ತೊ ಓವರ್‌ಗಳಲ್ಲಿ ಅಬ್ಬರಿಸಿದ ಪಾಕಿಸ್ತಾನ

ಉತ್ತಮ ಆರಂಭದ ಹೊರತಾಗಿಯೂ ಪಾಕ್‌ ಕಟ್ಟಿಹಾಕುವಲ್ಲಿ ಎಡವಿದ ನೇಪಾಳ

Wed, 30 Aug 202301:19 PM IST

ಬಾಬರ್‌ ಅಜಾಮ್‌ 151 ರನ್‌ ಸಿಡಿಸಿ ಔಟ್

151 ರನ್‌ ಸಿಡಿಸಿ ಪಾಕ್‌ ನಾಯಕ ಔಟ್‌

ಕೊನೆಯ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿದ ಬಾಬರ್

Wed, 30 Aug 202301:15 PM IST

ಚೊಚ್ಚಲ ಏಕದಿನ ಶತಕ ಸಿಡಿಸಿದ ಇಫ್ತಿಕರ್‌ ಅಹ್ಮದ್‌

ಚೊಚ್ಚಲ ಏಕದಿನ ಶತಕ ಸಿಡಿಸಿದ ಇಫ್ತಿಕರ್‌ ಅಹ್ಮದ್‌

ಕೇವಲ 67 ಎಸೆತಗಳಲ್ಲಿ ವೇಗದ ಸೆಂಚುರಿ

ಇಫ್ತಿಕರ್‌ ಹಾಗೂ ಬಾಬರ್‌ ಜೊತೆಗೂಡಿ ದ್ವಿಶತಕದ ಜೊತೆಯಾಟ

Wed, 30 Aug 202301:02 PM IST

300ರ ಗಡಿದಾಟಿದ ಪಾಕಿಸ್ತಾನ

47 ಓವರ್‌ಗಳಲ್ಲಿ 301 ರನ್‌ ಕಲೆಹಾಕಿದ ಪಾಕಿಸ್ತಾನ

ನಾಯಕ ಬಾಬರ್‌ ಹಾಗೂ ಇಫ್ತಿಕರ್‌ ಅಮೋಘ ಜೊತೆಯಾಟ

ಕೊನೆಯ ಐದು ಓವರ್‌ಗಳಲ್ಲಿ ಹರಿದು ಬಂತು 73 ರನ್‌ಗಳು

Wed, 30 Aug 202312:52 PM IST

45 ಓವರ್‌ಗಳ ಬಳಿಕ 275/4 ರನ್‌

ಒಂದೇ ಓವರ್‌ನಲ್ಲಿ 20 ರನ್‌ ಕಲೆ ಹಾಕಿದ ಪಾಕಿಸ್ತಾನ

45 ಓವರ್‌ಗಳ ಬಳಿಕ 275/4 ರನ್‌

300ರ ಗಡಿಯತ್ತ ಬಾಬರ್‌ ಅಜಾಮ್‌ ಪಡೆ

Wed, 30 Aug 202312:43 PM IST

ಆಕರ್ಷಕ ಶತಕ ಸಿಡಿಸಿದ ಬಾಬರ್ ಅಜಾಮ್

ಆಕರ್ಷಕ ಶತಕ ಸಿಡಿಸಿದ ಬಾಬರ್ ಅಜಾಮ್

ಏಷ್ಯಾಕಪ್ ಮೊದಲ ಪಂದ್ಯದಲ್ಲೇ ಅಬ್ಬರಿಸಿದ ಪಾಕ್ ನಾಯಕ

ತಂಡವನ್ನು 200 ರನ್‌ ಗಡಿ ದಾಟಿಸಿದ ನಾಯಕ

ಬಾಬರ್‌ಗೆ ಅಫ್ತಿಕರ್‌ ಅಹ್ಮದ್‌ ಸಾಥ್

ಅರ್ಧಶತಕ ಸಿಡಿಸಿದ ಇಫ್ತಿಕರ್

ಬಾಬರ್ ಅಜಾಮ್ ಮತ್ತು ಇಫ್ತಿಕರ್‌ ಶತಕದ ಜೊತೆಯಾಟ

Wed, 30 Aug 202311:55 AM IST

ಕ್ರೀಸ್‌ಕಚ್ಚಿ ಆಡುತ್ತಿರುವ ನಾಯಕ

  • 33 ಓವರ್‌ಗಳ ಬಳಿಕ ಪಾಕಿಸ್ತಾನ 157/4 
  • ಕ್ರೀಸ್‌ಕಚ್ಚಿ ಆಡುತ್ತಿರುವ ನಾಯಕ 
  • ಬಾ‌ಬರ್‌ಗೆ ಇಫ್ತಿಕರ್‌ ಅಹ್ಮದ್‌ ಸಾಥ್‌
  • 31 ಎಸೆತಗಳಲ್ಲಿ 33 ರನ್‌ಗಳ ಜೊತೆಯಾಟ

Wed, 30 Aug 202311:36 AM IST

ಬಾಬರ್‌ ಅಜಾಮ್‌ ಅರ್ಧಶತಕ

  • ಪಾಕಿಸ್ತಾನ ನಾಯಕ ಬಾಬರ್‌ ಅರ್ಧಶತಕ
  • ಏಷ್ಯಾಕಪ್‌ 2023ರ ಮೊದಲ ಹಾಫ್‌ ಸೆಂಚುರಿ ದಾಖಲಿಸಿದ ಬಾಬರ್‌
  • ಪ್ರಸಕ್ತ ವರ್ಷ ಆಡಿದ 12 ಏಕದಿನ ಪಂದ್ಯಗಳಲ್ಲಿ 8ನೇ ಅರ್ಧಶತಕ ಸಿಡಿಸಿದ ಬಾಬರ್‌ ಅಜಾಮ್

Wed, 30 Aug 202311:30 AM IST

ಪಾಕಿಸ್ತಾನದ ನಾಲ್ಕನೇ ವಿಕೆಟ್‌ ಪತನ

5(14) ರನ್‌ ಗಳಿಸಿ ಅಘಾ ಸಲ್ಮಾನ್‌ ಔಟ್‌

ಅದ್ಭುತ ಕ್ಯಾಚ್‌ ಹಿಡಿದು ಸಲ್ಮಾನ್‌ ವಿಕೆಟ್‌ ಪಡೆದ ಭುರ್ಟೆಲ್

27.5 ಓವರ್‌ ಬಳಿಕ ಪಾಕಿಸ್ತಾನ 124/4

Wed, 30 Aug 202311:20 AM IST

25 ಓವರ್‌ಗಳ ಬಳಿಕ 3 ವಿಕೆಟ್‌ ನಷ್ಟಕ್ಕೆ 116 ರನ್‌ ಗಳಿಸಿದ ಪಾಕಿಸ್ತಾನ

  • 44 ರನ್‌ ಸಿಡಿಸಿ ರಿಜ್ವಾನ್‌ ರನೌಟ್‌
  • ರನ್‌ ಗಳಿಸುವಾಗ ಚೆಂಡು ವಿಕೆಟ್‌ಗೆ ಬಡಿಯುವುದರತ್ತ ಗಮನ ಹರಿಸದ ರಿಜ್ವಾನ್.‌ 
  • ಬ್ಯಾಟ್‌ ಸ್ಟಂಪ್ಸ್‌ ಬಳಿಯ ಗೆರೆ ದಾಟುವ ಮುನ್ನ ವಿಕೆಟ್‌ಗೆ ಚೆಂಡು ಬಡಿದು ರನೌಟ್‌ ಆದ ಬ್ಯಾಟರ್.‌
  • ಪಾಕಿಸ್ತಾನದ ಮೂರು ವಿಕೆಟ್‌ ಪತನ.
  • ಕೊನೆಯ ಎರಡು ವಿಕೆಟ್‌ಗಳನ್ನು ರನೌಟ್‌ ಮೂಲಕ ಕಳೆದುಕೊಂಡ ಪಾಕಿಸ್ತಾನ
  • 25 ಓವರ್‌ಗಳ ಬಳಿಕ 3 ವಿಕೆಟ್‌ ನಷ್ಟಕ್ಕೆ 116 ರನ್‌ ಗಳಿಸಿದ ಪಾಕಿಸ್ತಾನ

Wed, 30 Aug 202311:03 AM IST

ಬಾಬರ್‌ ಮತ್ತು ರಿಜ್ವಾನ್‌ ಅರ್ಧಶತಕದ ಜೊತೆಯಾಟ

  • 20 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 91 ರನ್‌ ಸಿಡಿಸಿದ ಪಾಕಿಸ್ತಾನ
  • ಬಾಬರ್‌ ಮತ್ತು ರಿಜ್ವಾನ್‌ ಅರ್ಧಶತಕದ ಜೊತೆಯಾಟ
  • 85 ಎಸೆತಗಳಲ್ಲಿ 66 ರನ್‌ ಕಲೆ ಹಾಕಿದ ಬಾಬರ್‌ ಮತ್ತು ರಿಜ್ವಾನ್‌

Wed, 30 Aug 202310:46 AM IST

ಪಾಕಿಸ್ತಾನ 66/2

  • 14 ಓವರ್‌ಗಳ ಬಳಿಕ ಪಾಕಿಸ್ತಾನ 66/2
  • ಬ್ಯಾಟ್‌ ಬೀಸುತ್ತಿರುವ ಬಾಬರ್‌ ಮತ್ತು ರಿಜ್ವಾನ್

Wed, 30 Aug 202310:29 AM IST

ಪವರ್‌ಪ್ಲೇನಲ್ಲಿ 44 ರನ್‌ ಕಲೆ ಹಾಕಿದ ಪಾಕಿಸ್ತಾನ

  • ಹತ್ತು ಓವರ್‌ಗಳ ಪವರ್‌ಪ್ಲೇ ಬಳಿಕ ಪಾಕಿಸ್ತಾನ : 44/2
  • ನಿಧಾನಗತಿಯಲ್ಲಿ ಬ್ಯಾಟ್‌ ಬೀಸುತ್ತಿರುವ ಬಾಬರ್‌ ಮತ್ತು ರಿಜ್ವಾನ್

Wed, 30 Aug 202310:07 AM IST

ಪಾಕಿಸ್ತಾನದ ಇಬ್ಬರೂ ಆರಂಭಿಕರ ವಿಕೆಟ್‌ ಕಬಳಿಸಿದ ನೇಪಾಳ

ಫಕರ್‌ ಬೆನ್ನಲ್ಲೇ ಇಮಾಮ್‌ ಉಲ್‌ ಹಕ್‌ ಔಟ್‌. ಡೈರೆಕ್ಟ್‌ ಹಿಟ್‌ಗೆ ರನೌಟ್‌ ಆದ ಇಮಾಮ್‌. ನಾಯಕ ರೋಹಿತ್ ಪೌಡೆಲ್ ಎಸೆದ ಡೈರೆಕ್ಟ್‌ ಹಿಟ್‌ಗೆ ಇಮಾಮ್‌ ವಿಕೆಟ್‌ ಕಳೆದುಕೊಂಡಿದ್ದಾರೆ. ಇದೀಗ ಪಾಕಿಸ್ತಾನ ಪ್ರತಿಭಾನ್ವಿತ ಜೋಡಿಯಾದ ಬಾಬರ್‌ ಹಾಗೂ ರಿಜ್ವಾನ್‌ ಕ್ರೀಸ್‌ನಲ್ಲಿದ್ದಾರೆ.

Wed, 30 Aug 202310:03 AM IST

ಮೊದಲ ವಿಕೆಟ್‌ ಕಳೆದುಕೊಂಡ ಪಾಕಿಸ್ತಾನ

ಫಖರ್ ಜಮಾನ್ 14(20) ರನ್‌ ಗಳಿಸಿ ಔಟಾಗಿದ್ದಾರೆ. ಕರಣ್ ಕೆಸಿ ಎಸೆತದಲ್ಲಿ ವಿಕೆಟ್‌ ಕೀಪರ್‌ ಆಸಿಫ್ ಶೇಖ್  ಚಂಗನೆ ಹಾರಿ ಕ್ಯಾಚ್‌ ಹಿಡಿದು ಮೊದಲನೆ ವಿಕೆಟ್‌ ಪಡೆದಿದ್ದಾರೆ.  6 ಓವರ್‌ಗಳ ಬಳಿಕ ಪಾಕಿಸ್ತಾನ 1 ವಿಕೆಟ್‌ ಕಳೆದುಕೊಂಡು 25 ರನ್‌ ಕಲೆ ಹಾಕಿದೆ. ನಾಯಕ ಬಾಬರ್‌ ಅಜಾಮ್‌ ಮೂರನೇ ಕ್ರಮಾಂಕದಲ್ಲಿ ಪಿಚ್‌ಗೆ ಬಂದಿದ್ದಾರೆ. 

Wed, 30 Aug 202309:48 AM IST

ನೇಪಾಳದಿಂದ ಉತ್ತಮ ಬೌಲಿಂಗ್

ಮೂರು ಓವರ್‌ಗಳ ಬಳಿಕ ಪಾಕಿಸ್ತಾನ: 11/0

ಇನ್ನಿಂಗ್ಸ್‌ನ ಮೊದಲ ಎಸೆತಕ್ಕೆ ಬೌಂಡರಿ ಸಿಡಿಸಿದ ಫಕರ್‌ ಜಮಾನ್.‌

ಆ ಬಳಿಕ ಪಾಕಿಸ್ತಾನದಿಂದ ನಿಧಾನಗತಿಯ ಬ್ಯಾಟಿಂಗ್‌

ನೇಪಾಳ ಬೌಲರ್‌ಗಳಿಂದ ಉತ್ತಮ ಕ್ರಿಕೆಟ್‌ ಆಟದ ಪ್ರದರ್ಶನ

Wed, 30 Aug 202309:47 AM IST

ದೇಶದ ಎಲ್ಲರೂ ಖುಷಿಯಾಗಿದ್ದಾರೆ: ನೇಪಾಳ ನಾಯಕ

“ದೇಶದ ಎಲ್ಲರೂ ತುಂಬಾ ಸಂತೋಷವಾಗಿದ್ದಾರೆ. ಏಷ್ಯಾಕಪ್‌ನಲ್ಲಿ ಇದು ನಮ್ಮ ತಂಡದ ಮೊದಲ ಪಂದ್ಯ. ನೇಪಾಳದ ಪ್ರತಿಯೊಬ್ಬರೂ ಈ ಪಂದ್ಯಕ್ಕಾಗಿ ಉತ್ಸುಕರಾಗಿದ್ದಾರೆ. ಮೈದಾನವು ಬಹುತೇಕ ನೇಪಾಳಕ್ಕೆ ಹೋಲುತ್ತವೆ. ಹೀಗಾಗಿ ಈ ಪಿಚ್ ಬ್ಯಾಟ್ ಬೀಸಲು ಸೂಕ್ತವಿರುವಂತೆ ಕಾಣುತ್ತದೆ" ಎಂದು ನೇಪಾಳ ತಂಡದ ನಾಯಕ ರೋಹಿತ್ ಪೌಡೆಲ್ ಟಾಸ್ ವೇಳೆ ಹೇಳಿದ್ದಾರೆ.

Wed, 30 Aug 202309:25 AM IST

ನೇಪಾಳ ಆಡುವ ಬಳಗ

ಕುಶಾಲ್ ಭುರ್ಟೆಲ್, ಆಸಿಫ್ ಶೇಖ್ (ವಿಕೆಟ್ ಕೀಪರ್), ರೋಹಿತ್ ಪೌಡೆಲ್ (ನಾಯಕ), ಆರಿಫ್ ಶೇಖ್, ಕುಶಾಲ್ ಮಲ್ಲಾ, ದೀಪೇಂದ್ರ ಸಿಂಗ್ ಐರಿ, ಗುಲ್ಸನ್ ಝಾ, ಸೋಂಪಾಲ್ ಕಾಮಿ, ಕರಣ್ ಕೆಸಿ, ಸಂದೀಪ್ ಲಮಿಚಾನೆ, ಲಲಿತ್ ರಾಜಬನ್ಶಿ.

Wed, 30 Aug 202309:02 AM IST

ಟಾಸ್‌ ಗೆದ್ದ ಪಾಕಿಸ್ತಾನ ಬ್ಯಾಟಿಂಗ್‌ ಆಯ್ಕೆ

ಏಷ್ಯಾಕಪ್‌ ಉದ್ಘಾಟನಾ ಪಂದ್ಯದಲ್ಲಿ ಟಾಸ್‌ ಗೆದ್ದ ಪಾಕಿಸ್ತಾನ ತಂಡವು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ. 

Wed, 30 Aug 202308:54 AM IST

ನೇಪಾಳದ ಈ ಸ್ಪಿನ್ನರ್ ಎದುರಿಸುವುದು ಪಾಕಿಸ್ತಾನಕ್ಕೆ ಅಷ್ಟು ಸುಲಭವಲ್ಲ

23 ವರ್ಷದ ಸಂದೀಪ್ ಲಮಿಚಾನೆ ಏಕದಿನ ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಮತ್ತೊಂದೆಡೆ ಸ್ಪಿನ್ನರ್‌ಗಳ ಎದುರು ಪಾಕಿಸ್ತಾನದ ಆಟ ತುಂಬಾ ದುರ್ಬಲವಾದಂತೆ ಕಾಣುತ್ತಿದೆ. ಇತ್ತೀಚೆಗಷ್ಟೇ ನಡೆದ ಅಫ್ಘಾನಿಸ್ತಾನ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಸ್ಪಿನ್ನರ್‌ಗಳ ಮುಂದೆ ಪಾಕಿಸ್ತಾನದ ಬ್ಯಾಟರ್‌ಗಳು ಪತರಗುಟ್ಟಿ ಹೋಗಿದ್ದರು. ಅವರ ಬ್ಯಾಟಿಂಗ್ ತೀರಾ ಕೆಟ್ಟದಾಗಿತ್ತು. ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Wed, 30 Aug 202308:50 AM IST

ಪಾಕಿಸ್ತಾನದ ಬಲಿಷ್ಠ ಆಡುವ ಬಳಗ

ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್, ಸಲ್ಮಾನ್ ಅಲಿ ಅಘಾ, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ನಸೀಮ್ ಶಾ

Wed, 30 Aug 202308:39 AM IST

ಹವಾಮಾನ ವರದಿ

ಪಂದ್ಯವು ಮುಲ್ತಾನ್‌ನಲ್ಲಿ ನಡೆಯುತ್ತಿದ್ದು, ಮಧ್ಯಾಹ್ನ ಬಿಸಿಲು ಹೆಚ್ಚಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಮೊದಲಾರ್ಧದಲ್ಲಿ ತಾಪಮಾನವು ಸರಾಸರಿ 40 ಡಿಗ್ರಿಯಷ್ಟಿರಲಿದೆ. ಪಂದ್ಯಕ್ಕೆ ಮಳೆಯ ಆತಂಕ ಇಲ್ಲ. 

Wed, 30 Aug 202308:37 AM IST

ಐಸಿಸಿ ಶ್ರೇಯಾಂಕ

ಇತ್ತೀಚೆಗಷ್ಟೇ ಶ್ರೀಲಂಕಾದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯನ್ನು ಪಾಕಿಸ್ತಾನ 3-0 ಅಂತರದಲ್ಲಿ ಗೆದ್ದುಕೊಂಡಿತ್ತು. ಆ ಬಳಿಕ ಬಾಬರ್‌ ಅಜಾಮ್‌ ಪಡೆ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನಕ್ಕೆ ಲಗ್ಗೆ ಹಾಕಿದೆ.

ಮತ್ತೊಂದೆಡೆ ನೇಪಾಳ ತಂಡವು ಐಸಿಸಿ ಶ್ರೇಯಾಂಕದಲ್ಲಿ 15ನೇ ಸ್ಥಾನದಲ್ಲಿದೆ.

Wed, 30 Aug 202308:36 AM IST

ಮುಖಾಮುಖಿ ದಾಖಲೆ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಹಾಗೂ ನೇಪಾಳ ತಂಡಗಳ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ. ಉಭಯ ತಂಡಗಳು ಇದುವರೆಗೂ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮುಖಾಮುಖಿಯಾಗಿಲ್ಲ.

Wed, 30 Aug 202308:42 AM IST

ತಂಡಗಳು

ನೇಪಾಳ ಸಂಪೂರ್ಣ ತಂಡ: ಕುಶಾಲ್ ಭುರ್ಟೆಲ್, ಆಸಿಫ್ ಶೇಖ್(ವಿಕೆಟ್‌ ಕೀಪರ್), ಭೀಮ್ ಶರ್ಕಿ, ರೋಹಿತ್ ಪೌಡೆಲ್‌ (ನಾಯಕ), ಕುಶಾಲ್ ಮಲ್ಲಾ, ದೀಪೇಂದ್ರ ಸಿಂಗ್ ಐರಿ, ಗುಲ್ಸನ್ ಝಾ, ಸೋಂಪಾಲ್ ಕಾಮಿ, ಕರಣ್ ಕೆಸಿ, ಸಂದೀಪ್ ಲಾಮಿಚಾನೆ, ಲಲಿತ್ ರಾಜ್‌ಬನ್ಶಿ, ಸಂದೀಪ್ ಜೋರಾ, ಪ್ರತಿಸ್ ಜಿಸಿ, ಅರ್ಜುನ್ ಸೌದ್ , ಮೌಸಮ್ ಧಾಕಲ್, ಕಿಶೋರ್ ಮಹತೋ, ಆರಿಫ್ ಶೇಖ್.

ಪಾಕಿಸ್ತಾನ ತಂಡ: ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಮ್(ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್‌ ಕೀಪರ್), ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ನಸೀಮ್ ಶಾ, ಮೊಹಮ್ಮದ್ ಹ್ಯಾರಿಸ್, ಮೊಹಮ್ಮದ್ ವಾಸಿಂ ಜೂನಿಯರ್, ಸೌದ್ ಶಕೀಲ್, ಅಬ್ದುಲ್ಲಾ ಶಫೀಕ್, ಉಸಾಮಾ ಮಿರ್.

Wed, 30 Aug 202308:42 AM IST

ಪಾಕಿಸ್ತಾನ vs ನೇಪಾಳ ಪಂದ್ಯಗಳ ಲೈವ್‌ ಅಪ್ಡೇಟ್

ಏಷ್ಯಾಕಪ್‌ 2023ರ ಆವೃತ್ತಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನೇಪಾಳ ತಂಡಗಳು ಮುಖಾಮುಖಿಯಾಗುತ್ತಿವೆ. ಪಾಕಿಸ್ತಾನದ ಮುಲ್ತಾನ್‌ನಲ್ಲಿ ನಡೆಯುವ ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3:30ಕ್ಕೆ ಪ್ರಾರಂಭವಾಗುತ್ತಿದೆ. 3 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದ್ದು, ಆ ಬಳಿಕ ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಪಂದ್ಯದ ಲೈವ್‌ ಅಪ್ಡೇಟ್‌ಗೆ ನಿಮಗೆಲ್ಲಾ ಸ್ವಾಗತ.

ಹಂಚಿಕೊಳ್ಳಲು ಲೇಖನಗಳು

  • twitter