Aaqib Javed: ರೋಹಿತ್-ಕೊಹ್ಲಿಯೇ ಇರಲಿ, ಸಾವಿರ ಮಂದಿ ಸಾವಿರ ಮಾತಾಡಲಿ, ಈ ಬಾರಿ ಗೆಲ್ಲೋದು ನಾವೇ; ಭಾರತಕ್ಕೆ ಸವಾಲು ಹಾಕಿದ ಪಾಕಿಸ್ತಾನದ ಅಕಿಬ್
ಕನ್ನಡ ಸುದ್ದಿ  /  ಕ್ರಿಕೆಟ್  /  Aaqib Javed: ರೋಹಿತ್-ಕೊಹ್ಲಿಯೇ ಇರಲಿ, ಸಾವಿರ ಮಂದಿ ಸಾವಿರ ಮಾತಾಡಲಿ, ಈ ಬಾರಿ ಗೆಲ್ಲೋದು ನಾವೇ; ಭಾರತಕ್ಕೆ ಸವಾಲು ಹಾಕಿದ ಪಾಕಿಸ್ತಾನದ ಅಕಿಬ್

Aaqib Javed: ರೋಹಿತ್-ಕೊಹ್ಲಿಯೇ ಇರಲಿ, ಸಾವಿರ ಮಂದಿ ಸಾವಿರ ಮಾತಾಡಲಿ, ಈ ಬಾರಿ ಗೆಲ್ಲೋದು ನಾವೇ; ಭಾರತಕ್ಕೆ ಸವಾಲು ಹಾಕಿದ ಪಾಕಿಸ್ತಾನದ ಅಕಿಬ್

Aaqib Javed: ಭಾರತ ತಂಡಕ್ಕೆ ಹೋಲಿಸಿದರೆ ಪಾಕಿಸ್ತಾನ ತಂಡ ತುಂಬಾ ಸಮತೋಲಿತವಾಗಿ ಕಾಣುತ್ತದೆ. ಈ ಬಾರಿ ಭಾರತದೆದುರು ಗೆಲ್ಲುವುದು ಖಚಿತ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಕಿಬ್ ಖಾನ್ ಭವಿಷ್ಯ ನುಡಿದಿದ್ದಾರೆ.

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಕಿಬ್ ಖಾನ್.
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಕಿಬ್ ಖಾನ್.

ಅಕ್ಟೋಬರ್ 14ರಂದು ಅಹ್ಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸುಮಾರು 1.30 ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರ ನಡುವೆ ಕಾದಾಟ ನಡೆಸಲು ಭಾರತ-ಪಾಕಿಸ್ತಾನ ತಂಡಗಳು (India vs Pakistan) ಸನ್ನದ್ಧವಾಗುತ್ತಿವೆ. ಏಕದಿನ ವಿಶ್ವಕಪ್ ಸೋತರೂ (ODI World Cup 2023) ಪರವಾಗಿಲ್ಲ ಈ ಪ್ರತಿಷ್ಠೆಯ ಕದನದಲ್ಲಿ ಗೆದ್ದು ಬೀಗಬೇಕು ಎನ್ನುವುದು ಉಭಯ ತಂಡಗಳ ಮಂತ್ರ. ವಿಶ್ವದ ಅತಿ ದೊಡ್ಡ ಕಾಳಗದಲ್ಲಿ ಗೆಲ್ಲುವುದ್ಯಾರು ಎಂಬ ಲೆಕ್ಕಾಚಾರ ಜೋರಾಗಿದೆ.

ಪಾಕಿಸ್ತಾನ ಸಮತೋಲಿತ ತಂಡ

ಏಕದಿನ ವಿಶ್ವಕಪ್​ ಟೂರ್ನಿಗೂ ಮೊದಲು ಏಷ್ಯಾ ಕಪ್ 2023 (Asia Cup 2023) ಟೂರ್ನಿಯ ಭಾಗವಾಗಿ ಸೆಪ್ಟೆಂಬರ್ 2 ರಂದು ಭಾರತ vs ಪಾಕಿಸ್ತಾನ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನವೇ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಅಕಿಬ್ ಜಾವೇದ್ (Aaqib Javed), ಅಚ್ಚರಿ ಹೇಳಿಕೆ ನೀಡಿದ್ದಾರೆ. ಭಾರತ ತಂಡಕ್ಕೆ ಹೋಲಿಸಿದರೆ ಪಾಕಿಸ್ತಾನ ತಂಡ ತುಂಬಾ ಸಮತೋಲಿತವಾಗಿ ಕಾಣುತ್ತದೆ. ಈ ಬಾರಿ ಭಾರತದೆದುರು ಗೆಲ್ಲುವುದು ಖಚಿತ ಎಂದಿದ್ದಾರೆ.

ವ್ಯಂಗ್ಯವಾಡಿದ ಅಕಿಬ್ ಜಾವೆದ್

ಪಾಕಿಸ್ತಾನ ಆಟಗಾರರ ವಯಸ್ಸಿನ ಅಂತರ ತುಂಬಾ ಚೆನ್ನಾಗಿದೆ. ಆದರೆ, ತಂಡದಲ್ಲಿ ಹಾಗಿಲ್ಲ. ಬಹುತೇಕ ದೊಡ್ಡ ಆಟಗಾರರನ್ನೇ ಹೊಂದಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಸೇರಿ ಅನೇಕ ಅನುಭವಿ ಆಟಗಾರರನ್ನು ಹೊಂದಿದೆ. ಸಾವಿರ ಮಂದಿ ಸಾವಿರ ಮಾತಾಡಲಿ, ಈ ಬಾರಿ ಗೆಲ್ಲವುದು ನಾವೇ. ಏಕೆಂದರೆ ಭಾರತ ತಂಡದಲ್ಲಿ ಕೆಲವರು ಫಿಟ್​ ಆಗಿಯೇ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಭಾರತ ತಂಡ ಸಂಯೋಜನೆಗೆ ಪರದಾಟ

ಅದಿರಲಿ ತಂಡದ ಇನ್ನೂ ಕೆಲವರು ಫಾರ್ಮ್​​ನಲ್ಲಿಯೇ ಇಲ್ಲವೇ ಇಲ್ಲ. ಸತತ ವೈಫಲ್ಯ ಅನುಭವಿಸುತ್ತಿದ್ದಾರೆ. ಅದಲ್ಲದೆ, ಟೀಮ್​ ಕಾಂಬಿನೇಷನ್​ ಸಿದ್ಧಪಡಿಸಲು ಪರದಾಟ ನಡೆಸುತ್ತಿದೆ. ಹಾಗಾಗಿ ಭಾರತದ ವಿರುದ್ಧ ಗೆಲ್ಲೋಕೆ ಪಾಕಿಸ್ತಾನಕ್ಕೆ ಇದೊಂದು ಸದಾವಕಾಶ. ಈ ಅವಕಾಶವನ್ನು ಯಾವುದೇ ಕಾರಣಕ್ಕೂ ದುರುಪಯೋಗ ಮಾಡಿಕೊಳ್ಳಬಾರದು ಎಂದು ಪಾಕಿಸ್ತಾನ ತಂಡಕ್ಕೆ ಅಕಿಬ್ ಜಾವೇದ್ ಸಲಹೆ ನೀಡಿದ್ದಾರೆ.

ಜಮಾನ್​​ ಖಾನ್​ ಡೆತ್​ ಓವರ್​ ಸ್ಪೆಷಲಿಸ್ಟ್

ವೈಟ್​ ಬಾಲ್ ಕ್ರಿಕೆಟ್​ನಲ್ಲಿ ಜಮಾನ್ ಖಾನ್ ಅದ್ಭುತ ಕೌಶಲ ಹೊಂದಿದ್ದಾರೆ. ಇದು ಪಾಕ್​ ತಂಡಕ್ಕೆ ಉತ್ತಮವಾಗಿ ಉಪಯೋಗವಾಗುತ್ತದೆ. ಕೆನಡಾ ಟಿ20 ಲೀಗ್​​ನಲ್ಲಿ ಆತನ ಬೌಲಿಂಗ್​​​​ ಕಂಡು ಆಶ್ಚರ್ಯಚಕಿತನಾಗಿದ್ದೆ. ಅಷ್ಟು ಬೊಂಬಾಟ್ ಆಗಿದೆ. ನನ್ನ ಪ್ರಕಾರ ಜಮಾನ್ ಖಾನ್, ಇದೀಗ ಇರುವ ಅತ್ಯುತ್ತಮ ಡೆತ್ ಬೌಲರ್‌ಗಳಲ್ಲಿ ಒಬ್ಬರು ಎಂದು ತಮ್ಮ ದೇಶದ ಆಟಗಾರನನ್ನು ಹಾಡಿ ಹೊಗಳಿದರು.

ಅದ್ಭುತಗಳನ್ನೇ ಸೃಷ್ಟಿಸಲಿದ್ದಾರೆ ಈ ಮೂವರು

ಶಾಹೀನ್ ಶಾ ಅಫ್ರಿದಿ, ಹ್ಯಾರಿಸ್ ರೌಫ್ ಮತ್ತು ಜಮಾನ್ ಅವರು ಏಕದಿನ ವಿಶ್ವಕಪ್‌ನಲ್ಲಿ ಒಟ್ಟಿಗೆ ಆಡಿದರೆ ಕೆಲವು ಅದ್ಭುತಗಳನ್ನು ಸೃಷ್ಟಿಸಲಿದ್ದಾರೆ. ಈ ಮೂವರ ನಂತರ ನಸೀಮ್ ಶಾ ಕೂಡ ತಂಡಕ್ಕೆ ಉಪಯುಕ್ತ' ಎಂದು ಪಾಕಿಸ್ತಾನದ ಮಾಜಿ ವೇಗಿ ಅಕಿಬ್ ಜಾವೇದ್ ಪ್ರತಿಕ್ರಿಯಿಸಿದ್ದಾರೆ. ಇಮ್ರಾನ್ ಖಾನ್ ನಾಯಕತ್ವದಲ್ಲಿ 1992ರ ಏಕದಿನ ವಿಶ್ವಕಪ್ ಗೆದ್ದ ಪಾಕಿಸ್ತಾನ ತಂಡದ ಸದಸ್ಯರಾಗಿದ್ದ ಅಕಿಬ್ ಜಾವೇದ್, ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ತಂಡವೊಂದಕ್ಕೆ ಬೌಲಿಂಗ್ ಕೋಚ್ ಆಗಿಯೂ ಕೆಲಸ ಮಾಡಿದ್ದಾರೆ.

ಅಕಿಬ್ ಜಾವೆದ್ ಪಾಕಿಸ್ತಾನದ ಪರ 163 ಏಕದಿನ ಪಂದ್ಯಗಳಲ್ಲಿ 182 ವಿಕೆಟ್​ ಉರುಳಿಸಿದ್ದಾರೆ. ಕೇವಲ 22 ಟೆಸ್ಟ್​ ಪಂದ್ಯಗಳಲ್ಲಿ 54 ವಿಕೆಟ್​ ಕಬಳಿಸಿದ ಸಾಧನೆ ಮಾಡಿದ್ದಾರೆ. 10 ವರ್ಷಗಳ ಕಾಲ ಪಾಕಿಸ್ತಾನ ತಂಡದ ಸೇವೆ ಸಲ್ಲಿಸಿದ್ದಾರೆ.

Whats_app_banner