Asia cup Teams: ಏಷ್ಯಾ ಕಪ್‌ಗೆ ಘೋಷಣೆ ಮಾಡಿರುವ ಭಾರತ, ಪಾಕಿಸ್ತಾನ ಸೇರಿ 6 ತಂಡಗಳ ಲಿಸ್ಟ್
ಆಗಸ್ಟ್ 30 ರಿಂದ ಏಷ್ಯಾ ಕಪ್ ಆರಂಭವಾಗಿಲಿದ್ದು, ಸೆಪ್ಟೆಂಬರ್ 17 ರವರೆಗೆ ನಡೆಯಲಿದೆ. ಈ ಟೂರ್ನಿಯಲ್ಲಿ ಭಾಗವಹಿಸಲಿರುವ ಒಟ್ಟು 6 ತಂಡಗಳನ್ನು ಪ್ರಕಟಿಸಲಾಗಿದ್ದು, ಆ ಪಟ್ಟಿ ಇಲ್ಲಿದೆ.
ನಾಡಿದ್ದು (ಆಗಸ್ಟ್ 30, ಬುಧವಾರ)ನಿಂದ ಏಷ್ಯಕಪ್ 2023 (Asia Cup 2023) ಆರಂಭವಾಗುತ್ತಿದೆ. ಈ ಟೂರ್ನಿಯ ಮೊದಲ ಪಂದ್ಯ ಪಾಕಿಸ್ತಾನ (Pakistan) ಮತ್ತು ನೇಪಾಳ (Nepal) ನಡುವೆ ಮುಲ್ತಾನ್‌ನಲ್ಲಿ ನಡೆಯಲಿದ್ದು, ಫೈನಲ್ ಪಂದ್ಯ ಸೆಪ್ಟೆಂಬರ್ 17 ರಂದು ಕೊಲಂಬೊದಲ್ಲಿ ಜರುಗಲಿದೆ.
ಏಷ್ಯಾಕಪ್‌ನಲ್ಲಿ ಒಟ್ಟು 6 ತಂಡಗಳು ಭಾಗವಹಿಸಲಿವೆ. ಭಾರತ (India), ಪಾಕಿಸ್ತಾನ, ಬಾಂಗ್ಲಾದೇಶ (Bangladesh), ನೇಪಾಳ ಮತ್ತು ಅಫ್ಘಾನಿಸ್ತಾನ (Afghanistan) ಮಾತ್ರ ತಮ್ಮ ತಂಡಗಳನ್ನು ಪ್ರಕಟಿಸಿದ್ದವು. ಇದೀಗ ಶ್ರೀಲಂಕಾ (Srilanka) ಕೂಡ ಅಧಿಕೃತವಾಗಿ ತಂಡವನ್ನು ಘೋಷಿಸಿದೆ. ಆದರೆ ಇಲ್ಲಿನ ಕ್ರೀಡಾ ಸಚಿವಾಲಯದಿಂದ ಇನ್ನೂ ಅನುಮೋದನೆ ಪಡೆದಿಲ್ಲ.
ಏಷ್ಯಾಕಪ್‌ಗಾಗಿ ಘೋಷಣೆಯಾಗಿರುವ 6 ತಂಡ ವಿವರ
ಬಾಂಗ್ಲಾದೇಶ ತಂಡ: ಶಕೀಬ್ ಅಲ್ ಹಸನ್ (ನಾಯಕ), ಲಿಟನ್ ದಾಸ್, ತಂಜೀದ್ ತಮೀಮ್, ನಜ್ಮುಲ್ ಹುಸೇನ್ ಶಾಂಟೊ, ತೌಹೀದ್ ಹೃದಯೋಯ್, ಮುಶ್ಬೀಕರ್ ರಹೀಮ್, ಮೆಹದಿ ಹಸನ್ ಮಿರಾಜ್, ತಸ್ಕಿನ್ ಅಹ್ಮದ್, ಮುಸ್ತಫಿಜುರ್ ರೆಹಮಾನ್, ಹಸನ್ ಮಹಮೂದ್, ನಸೀಮ್ ಹುಮದ್, ನಸೀಮ್ ಮೆಹದಿಸ್ ಹುಸೇನ್, ಅಫೀಫ್ ಹುಸೇನ್, ಶೋರ್ಫುಲ್ ಇಸ್ಲಾಂ, ಅಬ್ದೋತ್ ಹುಸೇನ್, ನಯೀಮ್ ಶೇಖ್.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ (ಉಪ ನಾಯಕ) ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ಪಾಕಿಸ್ತಾನ ತಂಡ: ಅಬ್ದುಲ್ಲಾ ಶಫೀಕ್, ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾಯಕ) ಸಲ್ಮಾನ್ ಅಲಿ ಅಘಾ, ಇಫ್ತಿಕರ್ ಅಹ್ಮದ್, ತಯ್ಯಬ್ ತಾಹೀರ್, ಸೌದ್ ಶಕೀಲ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ಹ್ಯಾರಿಸ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಉಸಾಮಾ ಮೀರ್, ಫಹೀಮ್ ಅಶ್ರಫ್, ಹ್ಯಾರಿಸ್ ರವೂಫ್, ಮೊಹಮ್ಮದ್ ವಾಸಿಂ, ನಸೀಮ್ ಶಾ ಮತ್ತು ಶಾಹೀನ್ ಅಫ್ರಿದಿ.
ಅಘ್ಘಾನಿಸ್ತಾನ ತಂಡ: ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್, ರಿಯಾಜ್ ಹಸನ್, ರಹಮತ್ ಷಾ, ಹಶ್ಮತುಲ್ಲಾ ಶಾಹಿದ್ (ನಾಯಕ), ನಜಿಬುಲಾ ಜರ್ದಾನ್, ರಶೀದ್ ಖಾನ್, ಇಕ್ರಮ್ ಅಲಿಖಾನ್, ಕರೀಮ್ ಜನತ್, ಗುಲ್ಬುದ್ದೀನ್ ನೈಬ್, ಮೊಹಮ್ಮದ್ ನಹಿ, ಫಜೀಫ್ ನಹಿ, ಫಜೀಬ ಝುರ್, ಶರಫುದ್ದೀನ್, ನೂರ್ ಅಹ್ಮದ್, ಅದ್ಬುಲ್ ರೆಹಮಾನ್, ಮೊಹಮ್ಮದ್ ಸಲೀಂ.
ನೇಪಾಳ ತಂಡ: ರೋಹಿತ್ ಕುಮಾರ್ ಪೌಡೆಲ್ (ನಾಯಕ) ಮೊಹಮ್ಮದ್ ಆಸಿಫ್ ಶೇಖ್, ಕುಶಾಲ್ ಭುರ್ಟೆಲ್, ಲಲಿತ್ ನಾರಾಯಣ್ ರಾಜಬಂಶಿ, ಭೀಮ್ ಸರಕಿ, ಕುಶಾಲ್ ಮಲ್ಲಾ, ದೀಪೇಂದ್ರ ಸಿಂಗ್ ಐರೆ, ಸಂದೀಪ್ ಲಮಿಚಾನೆ, ಕರಣ್ ಕೆಸಿ, ಗುಲ್ಶನ್ ಕುಮಾರ್ ಝಾ, ಆರಿಫ್ ಶೇಖ್, ಸೋಂಪಾಲ್ ಕಾಮಿ ಪ್ರತಿಸ್ ಜಿಸಿ, ಕಿಶೋರ್ ಮಹತೋ, ಸಂದೀಪ್ ಜೋರಾ, ಅರ್ಜುನ್ ಸೌದ್ ಮತ್ತು ಶ್ಯಾಮ್ ಧಕ್ಕಲ್.
ಶ್ರೀಲಂಕಾ ತಂಡ: ಅಲ್ಲಿನ ಕ್ರೀಡಾ ಸಚಿವಾಲಯದಿಂದ ಅನುಮೋದನೆ ಪಡೆಯಬೇಕಿರುವ ತಂಡ: ದಸುನ್ ಶನಕ (ನಾಯಕ), ಪಾತುಮ್ ನಿಸಾಂಕ, ದಿಮುತ್ ಕರುಣಾರತ್ನೆ, ಕುಶಾಲ್ ಪೆರೇರಾ, ಕುಶಾಲ್ ಮೆಂಡಿಸ್, ಚರಿತ್ ಅಸಲಂಕಾ, ಸದಿರ ಸಮರವಿಕ್ರಮ, ಧನಂಜಯ್ ಡಿ ಸಿಲ್ವಾ, ದುಶನ್ ಹೇಮಂತ್, ಮಹಿಮಾ, ದುಶನ್, ಕಸೂರನ್ ರಜಿತ, ದಿಲ್ಶನ್ ಮಧುಶಂಕ, ಮತಿಶ ಪತಿರಣ.
ಸೆಪ್ಟೆಂಬರ್ 17ಕ್ಕೆ ಏಷ್ಯಾ ಕಪ್ ಮುಗಿಯುತ್ತಿದ್ದಂತೆ ಅಕ್ಟೋಬರ್ 5 ರಿಂದ ಐಸಿಸಿ ಪುರುಷರ ವಿಶ್ವಕಪ್ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗಲಿವೆ.