Sai Kishore: ರಾಷ್ಟ್ರಗೀತೆ ವೇಳೆ ಕಣ್ಣೀರು ಹಾಕಿದ ಸಾಯಿ ಕಿಶೋರ್; ಏಷ್ಯನ್ ಗೇಮ್ಸ್ ಟಿ20 ಕ್ರಿಕೆಟ್ ಪಂದ್ಯದಲ್ಲಿ ಭಾವುಕ ಕ್ಷಣ; ವಿಡಿಯೊ
ಏಷ್ಯನ್ ಗೇಮ್ಸ್ ಕ್ರಿಕೆಟ್ ಪಂದ್ಯದ ವೇಳೆ ರಾಷ್ಟ್ರಗೀತೆ ಹಾಕುತ್ತಿದ್ದಂತೆ ಟೀಂ ಇಂಡಿಯಾದ ಸಾಯಿ ಕಿಶೋರ್ ಕಣ್ಣೀರು ಹಾಕಿದ್ದಾರೆ. ಯುವ ಕ್ರಿಕೆಟರ್ ಭಾವುಕ ಕ್ಷಣದ ವಿಡಿಯೊ ಇಲ್ಲಿದೆ.

ಹ್ಯಾಂಗ್‌ಝೌ (ಚೀನಾ): ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತವನ್ನು (India) ಪ್ರತಿನಿಧಿಸಬೇಕೆಂದು ಅದೆಷ್ಟೋ ಮಂದಿ ಕನಸು ಕಾಣುತ್ತಾರೆ. ಇನ್ನ ಕ್ರಿಕೆಟ್‌ನಲ್ಲಿಂತೂ (Cricket) ದೇಶದ ಪರವಾಡಿ ಆಡಬೇಕೆಂಬುದು ಅದೆಷ್ಟೋ ಯುವಕರ ಕನಸಾಗಿರುತ್ತದೆ. ಆ ಕನಸು ನನಸಾಗುವಾಗ ಆಗುವ ಆನಂದಕ್ಕೆ ಪಾರವೇ ಇರುವುದಿಲ್ಲ. ಏಷ್ಯನ್ ಗೇಮ್ಸ್‌ನಲ್ಲಿ (Asian Games 2023) ಇವತ್ತು (ಅಕ್ಟೋಬರ್ 3, ಮಂಗಳವಾರ) ಆಗಿದ್ದು ಇದೇ.
ಟ್ರೆಂಡಿಂಗ್ ಸುದ್ದಿ
ಏಷ್ಯನ್ ಗೇಮ್ಸ್ ಟಿ20 ಕ್ರಿಕೆಟ್‌ನಲ್ಲಿ ನೇಪಾಳ ವಿರುದ್ಧದ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಮೊಳಗುತ್ತಿದ್ದಂತೆ ಯುವ ಕ್ರಿಕೆಟಿಗ ಸಾಯಿ ಕಿಶೋರ್ ಭಾವುಕರಾಗಿದ್ದಾರೆ. ರಾಷ್ಟ್ರಗೀತೆ ವೇಳೆ ಸಾಯಿ ಕಿಶೋರ್ ಕಾಣ್ಣೀರು ಹಾಕುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಾಷ್ಟ್ರಗೀತೆ ವೇಳೆ ಅತ್ಯಂತ ಭಾವುಕ ಕ್ಷಣ
ಕಿಶೋರ್ ಅವರ ಎಮೋಷನಲ್ ವಿಡಿಯೊವನ್ನು ನೋಡಿದ ನೆಟ್ಟಿಗರು, ಸಾಯಿ ಕಿಶೋರ್ ತನ್ನ ದೇಶದ ಪರ ಮೊದಲ ಬಾರಿಗೆ ಆಡುವ ಅವಕಾಶವನ್ನು ಪಡೆದಾಗ ಆಟಗಾರನು ಎಷ್ಟು ಭಾವುಕನಾಗುತ್ತಾನೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು ಎಂದಿದ್ದಾರೆ.
ಕಿಶೋರ್ ಅವರ ವಿಡಿಯೊ ನೋಡಿದ ಕೆಲ ಕ್ರಿಕೆಟಿಗರು ಕೂಡ ಸ್ಪಂದಿಸಿದ್ದಾರೆ. ಟೀಂ ಇಂಡಿಯಾದ ವಿಕೆಟ್ ಕೀರಪ್ ದಿನೇಶ್ ಕಾರ್ತಿಕ್, ಸಾಯಿ ಕಿಶೋರ್ ಈ ಮಟ್ಟಕ್ಕೆ ತಲುಪಲು ನಡೆಸಿದ ಹೋರಾಟವನ್ನು ನೆನಪಿಸಿಕೊಂಡಿದ್ದಾರೆ. ತುಂಬಾ ಸಂತೋಷ. ಬೆಳಗ್ಗೆ ಎದ್ದಾಗ ಅಂತಿಮ ತಂಡದಲ್ಲಿ ಅವರು ಹೆಸರು ನೋಡಿ ಭಾವುಕನಾದೆ. ಕೆಲವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ನಿರೀಕ್ಷಿಸುತ್ತೇವೆ ಎಂದಿದ್ದಾರೆ.
ತಮ್ಮದೇ ಆತ ರೀತಿಯಲ್ಲಿ ಕಷ್ಟಪಟ್ಟು ಕೆಲಸ ಮಾಡುವವರಿಗೆ ದೇವರು ಪ್ರತಿಫಲ ನೀಡುತ್ತಾನೆ. ಸಾಯಿ ಕಿಶೋರ್ ಎಂಬ ಈ ಅದ್ಭುತ ಆಟಗಾರ ದೇಶೀಯ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಮೆರೆದರು. ಅವರು ಸೂಪರ್ ಸ್ಟಾರ್ ಆಗಿದ್ದಾರೆ ಎಂದು ಹೇಳಿದ್ದಾರೆ.
ಕಿಶೋರ್ ಯಾವಾಗಲೂ ನನ್ನ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುತ್ತಾರೆ-ಕಾರ್ತಿಕ್
ಕಿಶೋರ್ ಯಾವಾಗಲೂ ನನ್ನ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುತ್ತಾರೆ. ಅವರ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿರುವ ರೀತಿ ಅದ್ಭುತವಾಗಿದೆ. ಆಟದಲ್ಲಿ ಈತ ಸಾಕಷ್ಟು ಸುಧಾರಿಸಿದ್ದಾರೆ. ನಾನು ಅವರ ಬಗ್ಗೆ ಮಾತನಾಡುತ್ತಲೇ ಇರುತ್ತೇನೆ. ಒಟ್ಟಿನಲ್ಲಿ ಭಾರತೀಯ ಕ್ರಿಕೆಟಿಗನಾಗಿರುವುದಕ್ಕೆ ತುಂಬಾ ಸಂತೋಷವಾಗಿದೆ ಎಂದು ಕಾರ್ತಿಕ್ ಟ್ವೀಟ್ ಮಾಡಿದ್ದಾರೆ.
ನೇಪಾಳ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ 23 ರನ್‌ಗಳಿಂದ ಗೆದ್ದು ಏಷ್ಯನ್ ಗೇಮ್ಸ್ ಟಿ20 ಕ್ರಿಕೆಟ್‌ನಲ್ಲಿ ಸೆಮಿ ಫೈನಲ್ ತಲುಪಿದೆ. ಈ ಪಂದ್ಯದಲ್ಲಿ ಸಾಯಿ ಕಿಶೋರ್‌ಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಗದಿದ್ದರೂ ತಮ್ಮ ಸ್ಪಿನ್ ಬೌಲಿಂಗ್‌ನಲ್ಲಿ ಗಮನ ಸೆಳೆದಿದ್ದಾರೆ. ಕಿಶೋರ್ 4 ಓವರ್‌ಗಳಲ್ಲಿ 25 ರನ್ 1 ವಿಕೆಟ್ ಪಡೆದರು. ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಬ್ಯಾಟಿಂಗ್‌ನಲ್ಲಿ ರಿಂಕು ಸಿಂಗ್ ಮಿಂಚಿದರೆ ಬೌಲಿಂಗ್‌ನಲ್ಲಿ ಅವೇಶ್ ಖಾನ್, ರವಿ ಬಿಷ್ಣೋಯ್ ತಲಾ 3 ವಿಕೆಟ್ ಪಡೆದು ನೇಪಾಳವನ್ನು 179 ರನ್‌ಗಳಿಗೆ ಕಟ್ಟಿ ಹಾಕಿದರು.
ಸಂಬಂಧಿತ ಲೇಖನ